1992ಕ್ಕಾಗಿ ದೇವಪ್ರಭುತ್ವ ಶುಶ್ರೂಷೆ ಶಾಲಾ ಶೆಡ್ಯೂಲ್
ಸೂಚನೆಗಳು
1992ರ ದೇವಪ್ರಭುತ್ವ ಶುಶ್ರೂಷೆ ಶಾಲೆಯನ್ನು ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಪಠ್ಯ ಪುಸ್ತಕಗಳು: ದ ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದಿ ಹೋಲಿ ಸ್ಕ್ರಿಪ್ಚರ್ಸ್ [bi12], ಆಲ್ ಸ್ಕ್ರಿಪ್ಚರ್ಸ್ ಇನ್ಸ್ಪಾಯರ್ಡ್ ಆಫ್ ಗಾಡ್ ಎಂಡ್ ಬೆನಿಫೀಶಿಯಲ್ (1983ರ ಆವೃತಿ) [si], ಥಿಯೊಕ್ರಾಟಿಕ್ ಮಿನಿಷ್ಟ್ರಿ ಸ್ಕೂಲ್ ಗೈಡ್ ಬುಕ್ [sg], ದ ಗ್ರೇಟೆಸ್ಟ್ ಮ್ಯಾನ್ ಹು ಎವರ್ ಲಿವ್ಡ್ [gt], ಬೈಬಲ್ ಟಾಪಿಕ್ಸ್ ಫಾರ್ ಡಿಸ್ಕಶನ್ [td], ಮತ್ತು ಯುವರ್ ಯೂಥ್—ಗೆಟ್ಟಿಂಗ್ ದ ಬೆಸ್ಟ್ ಆಫ್ ಇಟ್ [yy], ಎಂಬೀ ಪುಸ್ತಕಗಳು ನೇಮಕಗಳಿಗೆ ಆಧಾರವಾಗಿವೆ.
ಶಾಲೆಯು ಸಂಗೀತ ಮತ್ತು ಪ್ರಾರ್ಥನೆ ಹಾಗೂ ಸ್ವಾಗತ ಹೇಳಿಕೆಯಿಂದ ಆರಂಭಗೊಂಡು, ಈ ಕೆಳಗಿನಂತೆ ಮುಂದರಿಯುವುದು:
ನೇಮಕ ನಂಬ್ರ 1: 15 ನಿಮಿಷ. ಇದು ಹಿರಿಯನಿಂದ ಅಥವಾ ನುರಿತ ಶುಶ್ರೂಷೆ ಸೇವಕನಿಂದ ನಿರ್ವಹಿಸಲ್ಪಡಬೇಕು. ಈ ಭಾಷಣದ ವಿಷಯಗಳು, “ಆಲ್ ಸ್ಕ್ರಿಪ್ಚರ್ಸ್ ಇನ್ಸ್ಪಾಯರ್ಡ್ ಆಫ್ ಗಾಡ್ ಎಂಡ್ ಬೆನಿಫೀಶಿಯಲ್” ಅಥವಾ ಥಿಯೊಕ್ರಾಟಿಕ್ ಮಿನಿಷ್ಟ್ರಿ ಸ್ಕೂಲ್ ಗೈಡ್ ಬುಕ್ ಸಮಾಚಾರದಲ್ಲಿ ಆಧರಿಸಿವೆ. ಈ ನೇಮಕವನ್ನು 10-12 ನಿಮಿಷಗಳ ಉಪದೇಶ ಭಾಷಣವಾಗಿ ಕೊಟ್ಟ ಮೇಲೆ, ಅನಂತರದ 3-5 ನಿಮಿಷಗಳನ್ನು, ಆ ಭಾಗದ ಕೆಳಗೆ ಕೊಡಲ್ಪಟ್ಟ ಛಾಪಿತ ಪ್ರಶ್ನೆಗಳ ಮೌಖಿಕ ಪುನರ್ವಿಮರ್ಶೆಗಾಗಿ ಬಳಸಬೇಕು. ಇದರ ಉದ್ದೇಶ ಕೇವಲ ವಿಷಯವನ್ನು ಆವರಿಸುವದಲ್ಲ ಬದಲಾಗಿ, ಚರ್ಚಿಸುವ ವಿಷಯದ ವ್ಯಾವಹಾರಿಕ ಮೂಲ್ಯತೆಗೆ ಗಮನವನ್ನು ಕೇಂದ್ರೀಕರಿಸುವುದು ಮತ್ತು ಸಭೆಗೆ ಅತ್ಯಂತ ಸಹಾಯಕಾರಿಯಾದದ್ದನ್ನು ಎತ್ತಿಹೇಳುವದೇ. ಎಲ್ಲಿ ಅಗತ್ಯವೂ ಅಲ್ಲಿ ಮುಖ್ಯ ವಿಷಯ (theme)ವನ್ನು ಆರಿಸಿಕೊಳ್ಳಬೇಕು. ಈ ಸಮಾಚಾರದಿಂದ ಪ್ರಯೋಜನ ಹೊಂದುವಂತೆ, ಎಲ್ಲರನ್ನು, ಜಾಗ್ರತೆಯ ಪೂರ್ವ ತಯಾರಿ ಮಾಡುವಂತೆ ಉತ್ತೇಜಿಸಲಾಗುತ್ತದೆ.
ಈ ಭಾಷಣಕ್ಕೆ ನೇಮಿತರಾದ ಸಹೋದರರು ಸೀಮಿತ ಸಮಯದೊಳಗೆ ಅದನ್ನು ಮುಗಿಸಲು ಜಾಗ್ರತೆ ವಹಿಸಬೇಕು. ಬೇಕಾದಲ್ಲಿ ಖಾಸಗೀ ಸಲಹೆಯನ್ನು ನೀಡಸಾಧ್ಯವಿದೆ.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 6 ನಿಮಿಷ. ಇದು ಶಾಲಾ ಮೇಲ್ವಿಚಾರಕನಿಂದ ಅಥವಾ ಅವನಿಂದ ನೇಮಿತನಾದ ಇನ್ನೊಬ್ಬ ಹಿರಿಯ ಅಥವಾ ಶುಶ್ರೂಷೆ ಸೇವಕನಿಂದ ನಿರ್ವಹಿಸಲ್ಪಡುವುದು. ಇದು ನೇಮಿತ ವಾಚನದ ಕೇವಲ ಸಾರಾಂಶವಾಗಿರಬಾರದು. ನೇಮಿತ ಅಧ್ಯಾಯಗಳ ಸಂಕ್ಷಿಪ್ತ ಹೊರನೋಟವನ್ನು ಕೊಟ್ಟಾದ ಮೇಲೆ, ಆ ಸಮಾಚಾರ ಹೇಗೆ ಮತ್ತು ಏಕೆ ನಮಗೆ ಬೆಲೆಯುಳ್ಳದೆಂದು ಸಭಿಕರು ಗಣ್ಯಮಾಡುವಂತೆ ಸಹಾಯ ಮಾಡಿರಿ. ಹೆಚ್ಚಿನ ಮುಖ್ಯಾಂಶ ವಿವರಗಳಿಗಾಗಿ ಕಾವಲಿನಬುರುಜು ಸಂಚಿಕೆಗಳನ್ನು ಪರಿಶೀಲಿಸಿರಿ. ಅನಂತರ, ವಿದ್ಯಾರ್ಥಿಗಳನ್ನು ಅವರ ಬೇರೆ ಬೇರೆ ವರ್ಗಗಳಿಗೆ ಶಾಲಾ ಮೇಲ್ವಿಚಾರಕನು ಕಳುಹಿಸುವನು.
2ನೇ ಭಾಷಣ: 5 ನಿಮಿಷ. ಇದು ಸಹೋದರನಿಂದ ಕೊಡಲ್ಪಡುವ ನೇಮಿತ ಬೈಬಲ್ ವಾಚನ. ಇದು ಮುಖ್ಯ ಶಾಲೆಯಲ್ಲಿ ಹಾಗೂ ಶಾಖಾ ಗುಂಪುಗಳಲ್ಲಿ ಅನ್ವಯಿಸುವುದು. ಈ ವಾಚನ ನೇಮಕವು ಸಾಕಷ್ಟು ಚಿಕ್ಕದಾಗಿರುವುದರಿಂದ ವಿದ್ಯಾರ್ಥಿಯು, ಆರಂಭದ ಮತ್ತು ಸಮಾಪ್ತಿಯ ಹೇಳಿಕೆಗಳಲ್ಲಿ ಹಾಗೂ ನಡುನಡುವೆ ಸಂಕ್ಷಿಪ್ತ ವಿವರಣೆಗಳನ್ನು ಕೊಡಸಾಧ್ಯವಿದೆ. ಚಾರಿತ್ರಿಕ ಹಿನ್ನೆಲೆ, ಪ್ರವಾದನೆ ಯಾ ಬೋಧನೆಯ ಅರ್ಥವಿವರಣೆ ಹಾಗೂ ತತ್ವಗಳ ಅನ್ವಯಗಳನ್ನು ಒಳಗೂಡಿಸಬಹುದು. ಎಲ್ಲಾ ನೇಮಿತ ವಚನಗಳು ಓದಲ್ಪಡಬೇಕು.
3ನೇ ಭಾಷಣ: 5 ನಿಮಿಷ. ಈ ಭಾಷಣವು ಸಹೋದರಿಯರಿಗೆ ನೇಮಿಸಲ್ಪಡುವುದು. ಈ ಭಾಷಣದ ವಿಷಯವು, ದ ಗ್ರೇಟೆಸ್ಟ್ ಮ್ಯಾನ್ ಹು ಎವರ್ ಲಿವ್ಡ್ ಪುಸ್ತಕದಲ್ಲಿ ಆಧರಿಸಿದೆ. ನೇಮಿತ ವಿದ್ಯಾರ್ಥಿನಿಗೆ ಓದು ಗೊತ್ತಿರಬೇಕು. ಭಾಷಣವನ್ನು ವಿದ್ಯಾರ್ಥಿನಿಯು ನಿಂತು ಯಾ ಕೂತು ಕೊಡಬಹುದು. ಒಬ್ಬ ಸಹಾಯಕಿಯನ್ನು ಶಾಲಾ ಮೇಲ್ವಿಚಾರಕನು ನೇಮಿಸುತ್ತಾನೆ ಆದರೆ, ಹೆಚ್ಚು ಮಂದಿಯನ್ನು ಉಪಯೋಗಿಸಬಹುದು. ದೃಶ್ಯದಲ್ಲಿ ಕ್ಷೇತ್ರಸೇವೆ ಅಥವಾ ಅವಿಧಿ ಸಾಕ್ಷಿಯ ಅಭಿನಯವಿದ್ದರೆ ಉತ್ತಮ. ಭಾಷಕಿಯು ತಾನೇ ಸಂಭಾಷಣೆ ಪ್ರಾರಂಭಿಸಬಹುದು ಯಾ ಅವಳ ಸಹಾಯಕರು ಅದನ್ನು ಮಾಡಬಹುದು. ಮುಖ್ಯ ಗಮನವನ್ನು ದೃಶ್ಯಕ್ಕಲ್ಲ, ವಿಷಯಕ್ಕೆ ಕೊಡಬೇಕು. ವಿದ್ಯಾರ್ಥಿನಿ ನೇಮಿತ ಮುಖ್ಯವಿಷಯವನ್ನೇ ಉಪಯೋಗಿಸಬೇಕು.
4ನೇ ಭಾಷಣ: 5 ನಿಮಿಷ. ಸಹೋದರನಿಗೆ ಅಥವಾ ಸಹೋದರಿಗೆ ನೇಮಿಸಲ್ಪಡುತ್ತದೆ. ಈ ಭಾಷಣದ ವಿಷಯವು, ಬೈಬಲ್ ಟಾಪಿಕ್ಸ್ ಫಾರ್ ಡಿಸ್ಕಶನ್ ಮತ್ತು ಯುವರ್ ಯೂಥ್ ಗೆಟ್ಟಿಂಗ್ ದ ಬೆಸ್ಟ್ ಔಟ್ ಆಫ್ ಇಟ್ ಪುಸ್ತಕದ ನಡುವೆ ಪರ್ಯಾಯವಾಗಿ ಬರುವದು, ಈ ಎರಡನೆಯದ್ದನ್ನು ಮುಖ್ಯವಾಗಿ, ಎಳೆಯರಿಗೆ ಮತ್ತು ಹೊಸ ವಿದ್ಯಾರ್ಥಿಗಳಿಗೆ ನೇಮಿಸಲಾಗುವದು. ನೇಮಿತ ವಿದ್ಯಾರ್ಥಿಗೆ ಓದು ಗೊತ್ತಿರಬೇಕು. ಸಹೋದರನಿಗೆ ನೇಮಿತವಾದಾಗಲ್ಲೆಲ್ಲಾ, ಇದನ್ನು ಇಡೀ ಸಭೆಗೆ ಭಾಷಣವಾಗಿ ನೀಡಬೇಕು. ಸಹೋದರನು ತನ್ನ ಭಾಷಣವನ್ನು ರಾಜ್ಯ ಸಭಾಗೃಹದ ಸಭಿಕರನ್ನು ಮನಸ್ಸಲ್ಲಿಟ್ಟು ತಯಾರಿಸುವುದಾದರೆ, ಕೇಳುವವರಿಗೆ ಅದು ಬೋಧಪ್ರದವೂ ಪ್ರಯೋಜನಕಾರಿಯೂ ಆಗಿರುವುದು. ಆದರೂ, ಸಮಾಚಾರವು ಇನ್ನೊಂದು ವ್ಯಾವಹಾರ್ಯ ಮತ್ತು ಯುಕ್ತವಾದ ಸಭಿಕ-ರೂಪದ ದೃಶ್ಯಕ್ಕೆ ಸರಿಯಾಗಿ ಒಪ್ಪುತ್ತದಾದರೆ, ಸಹೋದರನು ಅದಕ್ಕನುಸಾರ ಭಾಷಣವನ್ನು ವಿಕಸಿಸಬಹುದು. ಶೆಡ್ಯೂಲಲ್ಲಿ ಕೊಡಲ್ಪಟ್ಟ ಮುಖ್ಯವಿಷಯವನ್ನೇ ವಿದ್ಯಾರ್ಥಿಯು ಉಪಯೋಗಿಸಬೇಕು.
ಸಹೋದರಿಗೆ ನೇಮಿಸಲ್ಪಟ್ಟಾಗ, ವಿಷಯವು ಮೂರನೇ ಭಾಷಣದ ಹೊರಮೇರೆಯ ಪ್ರಕಾರ ನೀಡಲ್ಪಡಬೇಕು
ಸೂಚನೆ ಮತ್ತು ಹೇಳಿಕೆಗಳು: ಪ್ರತಿಯೊಂದು ವಿದ್ಯಾರ್ಥಿ ಭಾಷಣದ ನಂತರ ಶಾಲಾ ಮೇಲ್ವಿಚಾರಕನು ವಿಶಿಷ್ಠ ಸೂಚನೆಯನ್ನು ಕೊಡುವನು, ಇದಕ್ಕಾಗಿ ಸ್ಕೂಲ್ ಕೌನ್ಸಿಲ್ ಸ್ಲಿಪ್ನಲ್ಲಿರುವ ಪ್ರಗತಿಪರ ಸೂಚನಾ ಏರ್ಪಾಡನ್ನೇ ಅನುಸರಿಸುವ ಅಗತ್ಯವಿಲ್ಲ. ಬದಲಿಗೆ, ವಿದ್ಯಾರ್ಥಿಗೆ ಎಲ್ಲಿ ಪ್ರಗತಿ ಮಾಡುವ ಅಗತ್ಯವಿದೆಯೋ ಆ ಕ್ಷೇತ್ರಕ್ಕೆ ಗಮನವನ್ನು ಕೇಂದ್ರೀಕರಿಸಬೇಕು. ವಿದ್ಯಾರ್ಥಿ ಭಾಷಕನು ಕೇವಲ “G”ಗೆ ಪಾತ್ರನಿದ್ದರೆ ಮತ್ತು ಅಲ್ಲಿ ಬೇರೆ ಯಾವ ಭಾಷಣ ಗುಣಗಳು “I” ಅಥವಾ “W” ಎಂದು ಗುರುತು ಮಾಡಲ್ಪಟ್ಟಿಲ್ಲವಾದರೆ, ವಿದ್ಯಾರ್ಥಿಯು ಕಾರ್ಯನಡಿಸುವ ಮುಂದಣ ಭಾಷಣ-ಗುಣದ ಮುಂದೆ ಸಾಮಾನ್ಯವಾಗಿ ಕಂಡುಬರುವ “G” “I” ಅಥವಾ “W” ಚೌಕಟ್ಟನ್ನು ಸೂಚನೆಗಾರನು ವೃತ್ತದಿಂದ ಗುರುತಿಸಬೇಕು. ಇದರ ಕುರಿತು ಅವನು ಆ ಸಂಜೆಯೇ ವಿದ್ಯಾರ್ಥಿಗೆ ತಿಳಿಸುವನು, ಹಾಗೂ ಆ ಭಾಷಣದ ಗುಣವನ್ನು ವಿದ್ಯಾರ್ಥಿಯ ಮುಂದಿನ ಮಿನಿಷ್ಟ್ರಿ ಸ್ಕೂಲ್ ಎಸೈನ್ಮೆಂಟ್ (S-89) ಸ್ಲಿಪ್ನಲ್ಲೂ ತೋರಿಸುವನು. ಭಾಷಣ ಕೊಡುವವರು ಹೋಲಿನ ಎದುರಲ್ಲಿ ಕೂತಿರಬೇಕು. ಇದು ಸಮಯವನ್ನು ಉಳಿಸುವುದು ಮತ್ತು ಪ್ರತಿ ವಿದ್ಯಾರ್ಥಿಗೆ ನೇರವಾಗಿ ತನ್ನ ಸೂಚನೆ ಕೊಡುವರೇ ಶಾಲಾ ಮೇಲ್ವಿಚಾರಕನು ಶಕ್ತನಾಗುವನು. ಸೂಚನೆ ಕೊಟ್ಟಾದ ಮೇಲೆ ಸಮಯ ಉಳಿದರೆ, ವಿದ್ಯಾರ್ಥಿಗಳಿಂದ ಆವರಿಸಲ್ಪಡದೇ ಇದ್ದ ಯಾವುದೇ ಮಾಹಿತಿ ಯಾ ವ್ಯಾವಹಾರಿಕ ಅಂಶಗಳನ್ನು ಸೂಚನೆಗಾರನು ತಿಳಿಸಸಾಧ್ಯವಿದೆ. ಪ್ರತಿ ವಿದ್ಯಾರ್ಥಿ ಭಾಷಣದ ನಂತರ ಕೊಡಲಾಗುವ ಸೂಚನೆ ಮತ್ತು ಹೇಳಿಕೆಗಳಿಗೆ ಎರಡು ನಿಮಿಷಕ್ಕಿಂತ ಹೆಚ್ಚು ಸಮಯ ತಕ್ಕೊಳ್ಳದಂತೆ ಶಾಲಾ ಮೇಲ್ವಿಚಾರಕನು ಜಾಗ್ರತೆ ವಹಿಸಬೇಕು. ಬೈಬಲ್ ಮುಖ್ಯಾಂಶ ಭಾಷಣವು ಅಪೇಕ್ಷಿತ ಬಿಂದುವನ್ನು ಮುಟ್ಟದಿದ್ದರೆ, ಖಾಸಗೀ ಸೂಚನೆ ನೀಡಬಹುದು.
ಭಾಷಣಗಳನ್ನು ತಯಾರಿಸುವುದು: 1ನೇ ನೇಮಕವನ್ನು ಮಾಡುವ ಸಹೋದರರು ಬೇಕಾದಲ್ಲಿ ಒಂದು ಮುಖ್ಯವಿಷಯ (ಥೀಮ್)ನ್ನು ಆರಿಸಿಕೊಳ್ಳಬೇಕು. 2ನೇ ಭಾಷಣಕ್ಕೆ ನೇಮಿತರಾದ ವಿದ್ಯಾರ್ಥಿಗಳು ಸಹಾ ಸಮಾಚಾರವನ್ನು ಚೆನ್ನಾಗಿ ಆವರಿಸ ಶಕ್ತವಾದ ಒಂದು ಮುಖ್ಯವಿಷಯವನ್ನು ಆರಿಸಿಕೊಳ್ಳಬೇಕು. ಮೂರನೇ ಮತ್ತು ನಾಲ್ಕನೇ ಭಾಷಣಕ್ಕೆ ನೇಮಿತರಾದ ವಿದ್ಯಾರ್ಥಿಗಳು ಶೆಡ್ಯೂಲಲ್ಲಿ ತಿಳಿಸಿದ ಮುಖ್ಯವಿಷಯವನ್ನೇ ಉಪಯೋಗಿಸಬೇಕು. ಭಾಷಣಕ್ಕೆ ಮುಂಚೆ ವಿದ್ಯಾರ್ಥಿಗಳು ತಾವು ಕೆಲಸಮಾಡುವ ಭಾಷಣ ಗುಣದ ಕುರಿತು ಸ್ಕೂಲ್ ಗೈಡ್ಬುಕ್ನಿಂದ ಓದಿಕೊಳ್ಳಬಹುದು.
ಸಮಯ: ಯಾವ ಭಾಷಣವಾದರೂ ವೇಳೆ ಮೀರಬಾರದು. ಸೂಚನೆಗಾರನ ಸೂಚನೆ ಮತ್ತು ಹೇಳಿಕೆಗಳು ಸಹಾ. 2-4ನೇ ಭಾಷಣಗಳು ವೇಳೆ ಮೀರುವಾಗ, ಅವನ್ನು ಜಾಣ್ಮೆಯಿಂದ ನಿಲ್ಲಿಸ ಸಾಧ್ಯವಿದೆ. “ಸಾಪ್ಟ್ ಸಿಗ್ನಲ್” ಕೊಡಲು ನೇಮಿತನಾದವನು ತಕ್ಕ ಸಮಯದಲ್ಲಿ ಅದನ್ನು ಕೊಡಬೇಕು. 1ನೇ ನೇಮಕವನ್ನು ಮಾಡುವ ಸಹೋದರರು ವೇಳೆ ಮೀರುವಾಗ, ಖಾಸಗೀ ಸೂಚನೆ ನೀಡಲ್ಪಡುವದು. ಎಲ್ಲರೂ ತಮ್ಮ ಸಮಯವನ್ನು ಜಾಗ್ರತೆಯಿಂದ ಗಮನಿಸಬೇಕು. ಸಂಗೀತ ಮತ್ತು ಪ್ರಾರ್ಥನೆಯನ್ನು ಬಿಟ್ಟು, ಇಡೀ ಕಾರ್ಯಕ್ರಮದ ಒಟ್ಟು ಸಮಯ 45 ನಿಮಿಷ.
ಲಿಖಿತ ಪುನರ್ವಿಮರ್ಶೆ: ನಿಯತಕಾಲದಲ್ಲಿ ಒಂದು ಲಿಖಿತ ಪುನರ್ವಿಮರ್ಶೆಯನ್ನು ಕೊಡಲಾಗುವದು. ಇದಕ್ಕೆ ತಯಾರಿಸುವಾಗ, ನೇಮಿತ ಸಮಾಚಾರವನ್ನು ಪುನರ್ವಿಮರ್ಶಿಸಿರಿ ಮತ್ತು ಬೈಬಲ್ ವಾಚನ ಶೆಡ್ಯೂಲನ್ನು ಓದಿ ಮುಗಿಸಿರಿ. 25 ನಿಮಿಷಗಳ ಈ ಪುನರ್ವಿಮರ್ಶೆಯಲ್ಲಿ ಕೇವಲ ಬೈಬಲನ್ನು ಮಾತ್ರ ಉಪಯೋಗಿಸಬಹುದು. ಉಳಿದ ಸಮಯವನ್ನು ಪ್ರಶ್ನೋತ್ತರ ಚರ್ಚೆಗೆ ಮೀಸಲಾಗಿಡಿರಿ. ಪ್ರತಿ ವಿದ್ಯಾರ್ಥಿಯು ತನ್ನ ಸ್ವಂತ ಹಾಳೆಯನ್ನು ತಿದ್ದುವನು. ಶಾಲಾ ಮೇಲ್ವಿಚಾರಕನು ಉತ್ತರಗಳನ್ನು ಓದಿಹೇಳಿ, ಹೆಚ್ಚು ಕಷ್ಟದ ಪ್ರಶ್ನೆಗಳಿಗೆ ಗಮನಕೊಡುವನು ಮತ್ತು ಉತ್ತರಗಳು ಎಲ್ಲರಿಗೂ ಸ್ಪಷ್ಟವಾಗುವಂತೆ ಸಹಾಯ ಮಾಡುವನು. ಸ್ಥಳೀಕ ಪರಿಸ್ಥಿತಿಗಳ ಯಾವುದೇ ಕಾರಣವು ಅಗತ್ಯಗೊಳಿಸಿದಲ್ಲಿ, ಲಿಖಿತ ಪುನರ್ವಿಮರ್ಶೆಯನ್ನು ಶೆಡ್ಯೂಲಲ್ಲಿ ತೋರಿಸಿದ್ದಕ್ಕಿಂತ ಒಂದು ವಾರ ಮುಂದೆ ಹಾಕಬಹುದು.
ದೊಡ್ಡ ಮತ್ತು ಚಿಕ್ಕ ಸಭೆಗಳು: 50ಕ್ಕೆ ಯಾ ಅದಕ್ಕೆ ಮಿಕ್ಕಿದ ವಿದ್ಯಾರ್ಥಿಗಳಿರುವ ಸಭೆಗಳು ನೇಮಿತ ಭಾಷಣಗಳನ್ನು ಅಧಿಕ ಗುಂಪುಗಳಿಗೆ ಕೊಟ್ಟು, ಬೇರೆ ಸೂಚಕರ ಮುಂದೆ ಅವರದನ್ನು ನೀಡುವಂತೆ ಏರ್ಪಡಿಸಬಹುದು. ಕ್ರೈಸ್ತ ತತ್ವಗಳಿಗನುಸಾರ ಜೀವನ ನಡಿಸುವ ಸ್ನಾತರಲ್ಲದ ವ್ಯಕ್ತಿಗಳು ಸಹಾ ಈ ಶಾಲೆಗೆ ಸೇರಿ, ನೇಮಕಗಳನ್ನು ಪಡೆಯ ಸಾಧ್ಯವಿದೆ.
ಗೈರುಹಾಜರಿಗಳು: ಸಭೆಯಲ್ಲಿರುವವರೆಲ್ಲರೂ ಪ್ರತೀ ವಾರ ಈ ಕಾರ್ಯಕ್ರಮಕ್ಕೆ ಹಾಜರಾಗಲು ಪ್ರಯತ್ನಿಸುವ ಮೂಲಕ, ನೇಮಕಗಳನ್ನು ಚೆನ್ನಾಗಿ ತಯಾರಿಸುವ ಮೂಲಕ ಮತ್ತು ಪ್ರಶ್ನೋತ್ತರಗಳಲ್ಲಿ ಪಾಲಿಗರಾಗುವ ಮೂಲಕ ಈ ಶಾಲೆಗೆ ಗಣ್ಯತೆ ತೋರಿಸ ಸಾಧ್ಯವಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ನೇಮಕಗಳನ್ನು ಮನಃಪೂರ್ವಕತೆಯಿಂದ ತಕ್ಕೊಳ್ಳುವರೆಂದು ನಿರೀಕ್ಷಿಸಲಾಗುತ್ತದೆ. ನೇಮಿತ ವಿದ್ಯಾರ್ಥಿಯು ಗೈರುಹಾಜರಾದರೆ, ಬೇರೊಬ್ಬನು ವಾಲಂಟಿಯರಾಗಿ, ತನ್ನಿಂದ ಶಕ್ತವಾದ ಯಾವುವೇ ಅನ್ವಯಗಳನ್ನು ಆ ಕೊಂಚ ಸಮಯದೊಳಗೆ ಮಾಡುವಂತೆ ಪ್ರಯತ್ನಿಸುವನು. ಅಥವಾ, ಶಾಲಾ ಮೇಲ್ವಿಚಾರಕನು ತಕ್ಕದಾದ ಸಭಾ ಭಾಗವಹಿಸುವಿಕೆಯೊಂದಿಗೆ ವಿಷಯವನ್ನು ಅವರಿಸಬಹುದು.
ಕಾರ್ಯತಖ್ತೆ
ಮಾರ್ಚ್ 2 ಬೈಬಲ್ ವಾಚನ: ಯಾಜಕಕಾಂಡ 1-4
ಸಂಗೀತ 46 (20)
ನಂ. 1: ಯಾಜಕಕಾಂಡಕ್ಕೆ ಪೀಠಿಕೆ—ಭಾಗ 1 (si ಪುಟ 25-6 ಪಾರಾ. 1-5)
ನಂ. 2: ಯಾಜಕಕಾಂಡ 1:1-13
ನಂ. 3: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನನ್ನು ಗುರುತಿಸುವುದು (gt ಪೀಠಿಕೆ ಪಾರಾ. 1-4)
ನಂ. 4: ಶಿಕ್ಷೆಗೆ ನೀವು ಹೇಗೆ ಪ್ರತಿಕ್ರಿಯೆ ತೋರಿಸುವಿರಿ? (yy ಅಧ್ಯಾ. 13 ಪಾರಾ. 10-17)
ಮಾರ್ಚ್ 9 ಬೈಬಲ್ ವಾಚನ: ಯಾಜಕಕಾಂಡ 5-7
ಸಂಗೀತ 205 (118)
ನಂ. 1: ಯಾಜಕಕಾಂಡಕ್ಕೆ ಪೀಠಿಕೆ—ಭಾಗ 2 (si ಪುಟ 26 ಪಾರಾ. 6-10)
ನಂ. 2: ಯಾಜಕಕಾಂಡ 5:1-13
ನಂ. 3: ಯೇಸು ನಿಜವಾಗಿ ಜೀವಿಸಿದ್ದನೋ? (gt ಪೀಠಿಕೆ ಪಾರಾ. 5-11)
ನಂ. 4: ದೇವರ ಪವಿತ್ರಾತ್ಮವು ಆತನ ಕ್ರಿಯಾಶೀಲ ಶಕ್ತಿಯಾಗಿದೆ (td 58ಇ)
ಮಾರ್ಚ್ 16 ಬೈಬಲ್ ವಾಚನ: ಯಾಜಕಕಾಂಡ 8-10
ಸಂಗೀತ 111 (104)
ನಂ. 1: sg ಪುಟ 5-7 ಪಾರಾ. 1-9
ನಂ. 2: ಯಾಜಕಕಾಂಡ 10:1-11
ನಂ. 3: ನಿಜವಾಗಿಯೂ ಯೇಸು ಯಾರು? (gt ಪೀಠಿಕೆ ಪಾರಾ. 12-15)
ನಂ. 4: ಮದ್ಯಸಾರ ಮತ್ತು ಅದು ಜನರನ್ನು ಪ್ರಭಾವಿಸುವ ವಿಧ (yy ಅಧ್ಯಾ. 14 ಪಾರಾ. 1-11)
ಮಾರ್ಚ್ 23 ಬೈಬಲ್ ವಾಚನ: ಯಾಜಕಕಾಂಡ 11-13
ಸಂಗೀತ 224 (106)
ನಂ. 1: sg ಪುಟ 7-9 ಪಾರಾ. 10-16
ನಂ. 2: ಯಾಜಕಕಾಂಡ 11:1-12, 46, 47
ನಂ. 3 ಯೇಸುವನ್ನು ಅತ್ಯಂತ ಮಹಾನ್ ಪುರುಷನನ್ನಾಗಿ ಮಾಡಿದ್ದು ಯಾವುದು? (gt ಪೀಠಿಕೆ ಪಾರಾ. 16-19)
ನಂ. 4: ಲೋಕ ಸಂಕಟದಿಂದ ಬಿಡುಗಡೆ—ಹೇಗೆ? (td 59ಎ)
ಮಾರ್ಚ್ 30 1 ಬೈಬಲ್ ವಾಚನ: ಯಾಜಕಕಾಂಡ 14, 15
ಸಂಗೀತ 105 (46)
ನಂ. 1. sg ಪುಟ 9-11 ಪಾರಾ. 1-12
ನಂ. 2: ಯಾಜಕಕಾಂಡ 14:1-13
ನಂ. 3: ಏಕೆ ಯೇಸುವಿನ ಕುರಿತು ಕಲಿಯಬೇಕು ಮತ್ತು ಹೇಗೆ ನಾವು ಕಲಿಯಬಹುದು? (gt ಪೀಠಿಕೆ ಪಾರಾ. 20-23)
ನಂ. 4: ಮದ್ಯಸಾರದ ಪಾನಗಳನ್ನು ನೀವು ಕುಡಿಯಬೇಕೋ? (yy ಅಧ್ಯಾ. 14 ಪಾರಾ. 12-24)
ಎಪ್ರಿಲ್ 6 ಬೈಬಲ್ ವಾಚನ: ಯಾಜಕಕಾಂಡ 16-18
ಸಂಗೀತ 180 (100)
ನಂ. 1: sg ಪುಟ 12-13 ಪಾರಾ. 13-20
ನಂ. 2: ಯಾಜಕಕಾಂಡ 16:1-14
ನಂ. 3: ಗಾಬ್ರಿಯೇಲನು ಜಕರೀಯ ಮತ್ತು ಮರಿಯಳಿಗೆ ಗೋಚರಿಸುತ್ತಾನೆ (gt ಅಧ್ಯಾ. 1)
ನಂ. 4: ಲೋಕ ಸಂಕಟದ ಅರ್ಥವೇನು? (td 59ಬಿ)
ಎಪ್ರಿಲ್ 13 ಬೈಬಲ್ ವಾಚನ: ಯಾಜಕಕಾಂಡ 19-21
ಸಂಗೀತ 170 (95)
ನಂ. 1: sg ಪುಟ 14-17 ಪಾರಾ. 1-10
ನಂ. 2: ಯಾಜಕಕಾಂಡ 19:1-15
ನಂ. 3: ಯೇಸು ಜನನಕ್ಕೆ ಮುಂಚೆ ಗೌರವಿಸಲ್ಪಟ್ಟನು (gt ಅಧ್ಯಾ. 2)
ನಂ. 4: ಅಮಲೌಷಧ—ಇವಕ್ಕೆ ಒಂದು ಸ್ಥಳವಿದೆಯೇ? (yy ಅಧ್ಯಾ. 15 ಪಾರಾ. 1-12)
ಎಪ್ರಿಲ್ 20 ಬೈಬಲ್ ವಾಚನ: ಯಾಜಕಕಾಂಡ 22-24
ಸಂಗೀತ 64 (35)
ನಂ. 1: ಯಾಜಕಕಾಂಡ—ಯಾಕೆ ಉಪಯುಕ್ತವಾಗಿದೆ—ಭಾಗ 1 (si 29 ಪಾರಾ. 28-35)
ನಂ. 2: ಯಾಜಕಕಾಂಡ 23:1-14
ನಂ. 3: ಯೋಹಾನನ ಜನನ (gt ಅಧ್ಯಾ. 3)
ನಂ. 4: ಲೋಕ ಸಂಕಟಕ್ಕೆ ಯಾರು ಜವಾಬ್ದಾರನು? (td 59ಸಿ)
ಎಪ್ರಿಲ್ 27 ಬೈಬಲ್ ವಾಚನ: ಯಾಜಕಕಾಂಡ 25-27
ಸಂಗೀತ 7 (31)
ನಂ. 1: ಯಾಜಕಕಾಂಡ—ಯಾಕೆ ಉಪಯುಕ್ತವಾಗಿದೆ—ಭಾಗ 2 (si ಪುಟ 29-30 ಪಾರಾ. 36-39)
ನಂ. 2: ಯಾಜಕಕಾಂಡ 25:1-12
ನಂ. 3: ಯೊಸೇಫನು ಗರ್ಭಿಣಿ ಮರಿಯಳನ್ನು ಮದುವೆಯಾಗುತ್ತಾನೆ (gt ಅಧ್ಯಾ. 4)
ನಂ. 4: ಅಮಲೌಷಧದ ಕುರಿತು ನಿಮಗೇನು ತಿಳಿದಿರಬೇಕು (yy ಅಧ್ಯಾ. 15 ಪಾರಾ. 13-17)
ಮೇ 4 ಬೈಬಲ್ ವಾಚನ: ಅರಣ್ಯಕಾಂಡ 1-3
ಸಂಗೀತ 172 (92)
ನಂ. 1: ಅರಣ್ಯಕಾಂಡಕ್ಕೆ ಪೀಠಿಕೆ—ಭಾಗ 1 (si ಪುಟ 30-1 ಪಾರಾ. 1-6)
ನಂ. 2: ಅರಣ್ಯಕಾಂಡ 3:38-51
ನಂ. 3: ಯೇಸುವಿನ ಜನನ—ಎಲ್ಲಿ ಮತ್ತು ಯಾವಾಗ? (gt ಅಧ್ಯಾ. 5)
ನಂ. 4: ದೇವರು ದುಷ್ಟತನಕ್ಕೆ ಅನುಮತಿ ಕೊಡುವದೇಕೆ? (td 59ಡಿ)
ಮೇ 11 ಬೈಬಲ್ ವಾಚನ: ಅರಣ್ಯಕಾಂಡ 4-6
ಸಂಗೀತ 128 (58)
ನಂ. 1: ಅರಣ್ಯಕಾಂಡಕ್ಕೆ ಪೀಠಿಕೆ—ಭಾಗ 2 (si ಪುಟ 31 ಪಾರಾ. 7-10)
ನಂ. 2: ಅರಣ್ಯಕಾಂಡ 6:1-12
ನಂ. 3: ವಾಗ್ದತ್ತ ಮಗುವು (gt ಅಧ್ಯಾ. 6)
ನಂ. 4: ತಂಬಾಕು ಅಥವಾ ಮಾರಿವಾನ ಉಪಯೋಗಿಸುವ ವಿಷಯದಲ್ಲೀನು? (yy ಅಧ್ಯಾ. 15 ಪಾರಾ. 18-25)
ಮೇ 18 ಬೈಬಲ್ ವಾಚನ: ಅರಣ್ಯಕಾಂಡ 7-9
ಸಂಗೀತ 106 (55)
ನಂ. 1: sg ಪುಟ 17-19 ಪಾರಾ. 11-17
ನಂ. 2: ಅರಣ್ಯಕಾಂಡ 8:14-26
ನಂ. 3: ಯೇಸು ಮತ್ತು ಜ್ಯೋತಿಷ್ಯರು (gt ಅಧ್ಯಾ. 7)
ನಂ. 4: ಈ ದೀರ್ಘಾವಧಿಯ ಅಂತ್ಯಕಾಲ ದಯೆಯ ಒದಗಿಸುವಿಕೆಯು (td 59ಇ)
ಮೇ 25 ಬೈಬಲ್ ವಾಚನ: ಅರಣ್ಯಕಾಂಡ 10-12
ಸಂಗೀತ 45 (77)
ನಂ. 1: sg ಪುಟ 19-21 ಪಾರಾ. 1-9
ನಂ. 2: ಅರಣ್ಯಕಾಂಡ 12:1-16
ನಂ. 3: ಪೀಡಕನಿಂದ ಪಾರಾದದ್ದು (gt ಅಧ್ಯಾ. 8)
ನಂ. 4: ಕ್ರೀಡೆ ಮತ್ತು ಮನೋರಂಜನೆಯಲ್ಲಿ ಸಮತೆಯ ನೋಟವೇನು? (yy ಅಧ್ಯಾ. 16 ಪಾರಾ. 1-8, 17-19)
ಜೂನ್ 1 ಬೈಬಲ್ ವಾಚನ: ಅರಣ್ಯಕಾಂಡ 13-15
ಸಂಗೀತ 124 (75)
ನಂ. 1: sg ಪುಟ 21-4 ಪಾರಾ. 10-20
ನಂ. 2: ಅರಣ್ಯಕಾಂಡ 14:1-12
ನಂ. 3: ಯೇಸುವಿನ ಬಾಲ್ಯದ ಕುಟುಂಬ ಜೀವನ (gt ಅಧ್ಯಾ. 9)
ನಂ. 4: ಲೋಕ ಸಂಕಟಕ್ಕೆ ಪರಿಹಾರ ದೇವರಲ್ಲಿದೆ, ಮನುಷ್ಯರಲ್ಲಲ್ಲ (td 59ಎಫ್)
ಜೂನ್ 8 ಬೈಬಲ್ ವಾಚನ: ಅರಣ್ಯಕಾಂಡ 16-19
ಸಂಗೀತ 151 (25)
ನಂ. 1: sg ಪುಟ 24-6 ಪಾರಾ. 1-11
ನಂ. 2: ಅರಣ್ಯಕಾಂಡ 17:1-13
ನಂ. 3: ಹನ್ನೆರಡು ವಯಸ್ಸಿನವನಿದ್ದಾಗ ಯೆರೂಸಲೇಮಿನಲ್ಲಿ (gt ಅಧ್ಯಾ. 10)
ನಂ. 4: ಚಲನ ಚಿತ್ರ ಮತ್ತು ಟೀವೀ ನೋಡುವಾಗ ನಾವು ಆಯ್ದುಕೊಳ್ಳಬೇಕು ಏಕೆ? (yy ಅಧ್ಯಾ. 16 ಪಾರಾ. 9-16)
ಜೂನ್ 15 ಬೈಬಲ್ ವಾಚನ: ಅರಣ್ಯಕಾಂಡ 20-22
ಸಂಗೀತ 138 (71)
ನಂ. 1: sg ಪುಟ 27-9 ಪಾರಾ. 12-20
ನಂ. 2: ಅರಣ್ಯಕಾಂಡ 20:1-13
ನಂ. 3: ಯೋಹಾನನು ಯೇಸುವಿಗಾಗಿ ದಾರಿ ತಯಾರಿಸುತ್ತಾನೆ (gt ಅಧ್ಯಾ. 11)
ನಂ. 4: ದುಷ್ಟರ ಸಮೃದ್ಧಯು ಕೇವಲ ತಾತ್ಕಾಲಿಕ (td 59ಜಿ)
ಜೂನ್ 22 ಲಿಖಿತ ಪುನರ್ವಿಮರ್ಶೆ. ಯಾಜಕಕಾಂಡ 1ರಿಂದ ಅರಣ್ಯಕಾಂಡ 22 ಸಂಪೂರ್ಣ
ಸಂಗೀತ 217 (49)
ಜೂನ್ 29 ಬೈಬಲ್ ವಾಚನ: ಅರಣ್ಯಕಾಂಡ 23-26
ಸಂಗೀತ 112 (59)
ನಂ. 1: sg ಪುಟ 29-31 ಪಾರಾ. 1-7
ನಂ. 2: ಅರಣ್ಯಕಾಂಡ 25:1-13
ನಂ. 3: ಯೇಸು ಸ್ನಾನಿತನಾದಾಗ ಏನು ಸಂಭವಿಸುತ್ತದೆ (gt ಅಧ್ಯಾ. 12)
ನಂ. 4: ಸಂಗೀತ ಮತ್ತು ನಾಟ್ಯವನ್ನು ಆರಿಸುವಲ್ಲಿ ಏಕೆ ಜಾಗ್ರತೆ ವಹಿಸಬೇಕು (yy ಅಧ್ಯಾ. 17 ಪಾರಾ. 1-16)
ಜುಲೈ 6 ಬೈಬಲ್ ವಾಚನ: ಅರಣ್ಯಕಾಂಡ 27-30
ಸಂಗೀತ 132 (70)
ನಂ. 1: sg ಪುಟ 31-3 ಪಾರಾ. 8-15
ನಂ. 2: ಅರಣ್ಯಕಾಂಡ 30:1-16
ನಂ. 3: ಯೇಸುವಿನ ಶೋಧನೆಗಳಿಂದ ಕಲಿಯುವದು (gt ಅಧ್ಯಾ. 13)
ನಂ. 4: ಒಂದು ಪರಿಪೂರ್ಣ ವಿಶ್ವದಲ್ಲಿ ದುಷ್ಟತ್ವ ಪ್ರಾರಂಭಿಸಿದ್ದು ಹೇಗೆ (td 59ಎಚ್)
ಜುಲೈ 13 ಬೈಬಲ್ ವಾಚನ: ಅರಣ್ಯಕಾಂಡ 31, 32
ಸಂಗೀತ 222 (119)
ನಂ. 1: ಅರಣ್ಯಕಾಂಡ—ಯಾಕೆ ಉಪಯುಕ್ತವಾಗಿದೆ—ಭಾಗ 1 (si ಪುಟ 34-5 ಪಾರಾ. 32-34)
ನಂ. 2: ಅರಣ್ಯಕಾಂಡ 31:1-12
ನಂ. 3: ಯೇಸುವಿನ ಮೊದಲನೆಯ ಶಿಷ್ಯರು (gt ಅಧ್ಯಾ. 14)
ನಂ. 4: ಸಂಗೀತ ಮತ್ತು ನಾಟ್ಯದ ನಿಮ್ಮ ಆಯ್ಕೆಯು ನಿಮ್ಮ ಕುರಿತು ಏನನ್ನುತ್ತದೆ (yy ಅಧ್ಯಾ. 17 ಪಾರಾ. 17-25)
ಜುಲೈ 20 ಬೈಬಲ್ ವಾಚನ: ಅರಣ್ಯಕಾಂಡ 33-36
ಸಂಗೀತ 160 (72)
ನಂ. 1: ಅರಣ್ಯಕಾಂಡ—ಯಾಕೆ ಉಪಯುಕ್ತವಾಗಿದೆ—ಭಾಗ 2 (si ಪುಟ 35 ಪಾರಾ. 35-38)
ನಂ. 2: ಅರಣ್ಯಕಾಂಡ 35:9-25
ನಂ. 3: ಯೇಸುವಿನ ಮೊದಲನೆಯ ಅದ್ಭುತ (gt ಅಧ್ಯಾ. 15)
ನಂ. 4: ನೀವೀಗ ಒಂದು ನಿರ್ಣಯವನ್ನು ಮಾಡಲೇ ಬೇಕು (td 59ಐ)
ಜುಲೈ 27 ಬೈಬಲ್ ವಾಚನ: ಧರ್ಮೋಪದೇಶಕಾಂಡ 1-3
ಸಂಗೀತ 187 (93)
ನಂ. 1: ಧರ್ಮೋಪದೇಶಕಾಂಡಕ್ಕೆ ಪೀಠಿಕೆ—ಭಾಗ 1 (si ಪುಟ 36 ಪಾರಾ. 1-6)
ನಂ. 2: ಧರ್ಮೋಪದೇಶಕಾಂಡ 1:29-46
ನಂ. 3: ಯೆಹೋವನ ಆರಾಧನೆಗಾಗಿ ಆಸಕ್ತಿ (gt ಅಧ್ಯಾ. 16)
ನಂ. 4: ಲೈಂಗಿಕ ನೈತಿಕತೆಯಿಂದ ನಿಮಗೆ ಪ್ರಯೋಜನವಾಗುವ ವಿಧ (yy ಅಧ್ಯಾ. 18 ಪಾರಾ. 1-11.)
ಅಗೋ. 3 ಬೈಬಲ್ ವಾಚನ: ಧರ್ಮೋಪದೇಶಕಾಂಡ 4-6
ಸಂಗೀತ 91 (91)
ನಂ. 1: ಧರ್ಮೋಪದೇಶಕಾಂಡಕ್ಕೆ ಪೀಠಿಕೆ—ಭಾಗ 2 (si ಪುಟ 37 ಪಾರಾ. 7-9)
ನಂ. 2: ಧರ್ಮೋಪದೇಶಕಾಂಡ 5:6-22
ನಂ. 3: ನಿಕೊದೇಮನಿಗೆ ಕಲಿಸುವುದು (gt ಅಧ್ಯಾ. 17)
ನಂ. 4: ಕ್ರೈಸ್ತರೆಲ್ಲರೂ ಸುವಾರ್ತೆಯನ್ನು ಸಾರಲೇ ಬೇಕು (td 60ಎ)
ಅಗೋ. 10 ಬೈಬಲ್ ವಾಚನ: ಧರ್ಮೋಪದೇಶಕಾಂಡ 7-10
ಸಂಗೀತ 162 (89)
ನಂ. 1: sg ಪುಟ 33-5 ಪಾರಾ. 1-9
ನಂ. 2: ಧರ್ಮೋಪದೇಶಕಾಂಡ 7:1-11
ನಂ. 3: ಯೋಹಾನನು ಕಡಿಮೆಯಾಗುತ್ತಾನೆ ಯೇಸು ವೃದ್ಧಿಯಾಗುತ್ತಾನೆ (gt ಅಧ್ಯಾ. 18)
ನಂ. 4 ಲೈಂಗಿಕ ನೈತಿಕತೆಯಲ್ಲಿ ಅರ್ಥವಿದೆಯೇಕೆ (yy ಅಧ್ಯಾ. 18 ಪಾರಾ. 12-21)
ಅಗೋ. 17 ಬೈಬಲ್ ವಾಚನ: ಧರ್ಮೋಪದೇಶಕಾಂಡ 11-14
ಸಂಗೀತ 206 (111)
ನಂ. 1: sg ಪುಟ 36-8 ಪಾರಾ. 10-17
ನಂ. 2: ಧರ್ಮೋಪದೇಶಕಾಂಡ 13:1-11
ನಂ. 3: ಒಬ್ಬ ಸಮಾರ್ಯದ ಸ್ತ್ರೀಗೆ ಕಲಿಸುವದು (gt ಅಧ್ಯಾ. 19 ಪಾರಾ. 1-14)
ನಂ. 4: ಸಾಕ್ಷಿಯನ್ನು ಕೊಡುತ್ತಲೇ ಇರಬೇಕು (td 60ಬಿ)
ಅಗೋ. 24 ಬೈಬಲ್ ವಾಚನ: ಧರ್ಮೋಪದೇಶಕಾಂಡ 15-19
ಸಂಗೀತ 150 (83)
ನಂ. 1: sg ಪುಟ 39-41 ಪಾರಾ. 1-11
ನಂ. 2: ಧರ್ಮೋಪದೇಶಕಾಂಡ 18:9-22
ನಂ. 3: ಅನೇಕ ಸಮಾರ್ಯರು ನಂಬುವವರಾದದ್ದು ಏಕೆ? (gt ಅಧ್ಯಾ. 19 ಪಾರಾ. 15-21)
ನಂ. 4: ಲೈಂಗಿಕ ನೈತಿಕತೆಯ ಜೀವನಕ್ರಮವನ್ನು ದೃಢವಾಗಿ ಹಿಡಿಯಿರಿ (yy ಅಧ್ಯಾ. 18 ಪಾರಾ. 22-26)
ಅಗೋ. 31 ಬೈಬಲ್ ವಾಚನ: ಧರ್ಮೋಪದೇಶಕಾಂಡ 20-23
ಸಂಗೀತ 79 (104)
ನಂ. 1: sg ಪುಟ 41-3 ಪಾರಾ. 12-18
ನಂ. 2: ಧರ್ಮೋಪದೇಶಕಾಂಡ 23:9-25
ನಂ. 3: ಕಾನಾದಲ್ಲಿರುವಾಗ ಎರಡನೆಯ ಅದ್ಭುತ (gt ಅಧ್ಯಾ. 20)
ನಂ. 4: ಭಾನುವಾರ ಸಬ್ಬತಿನಲ್ಲಿ ಸಾಕ್ಷಿಕೊಡುವಿಕೆ ಯೋಗ್ಯವು (td 60ಸಿ)
ಸಪ್ಟಂ. 7 ಬೈಬಲ್ ವಾಚನ: ಧರ್ಮೋಪದೇಶಕಾಂಡ 24-27
ಸಂಗೀತ 59 (31)
ನಂ. 1: sg ಪುಟ 44-6 ಪಾರಾ. 1-8
ನಂ. 2: ಧರ್ಮೋಪದೇಶಕಾಂಡ 24:10-22
ನಂ. 3: ಯೇಸು ತನ್ನ ಸ್ವಂತ ಊರಲ್ಲಿ ಸಾರುತ್ತಾನೆ. (gt ಅಧ್ಯಾ. 21)
ನಂ. 4: ಪ್ರಣಯಾಚರಣೆ (ಡೇಟಿಂಗ್) ಯಲ್ಲಿನ ಸಮಸ್ಯೆಗಳು (yy ಅಧ್ಯಾ. 19 ಪಾರಾ. 1-13)
ಸಪ್ಟಂ. 14 ಬೈಬಲ್ ವಾಚನ: ಧರ್ಮೋಪದೇಶಕಾಂಡ 28-30
ಸಂಗೀತ 175 (88)
ನಂ. 1: sg ಪುಟ 46-8 ಪಾರಾ. 9-20
ನಂ. 2: ಧರ್ಮೋಪದೇಶಕಾಂಡ 30:8-20
ನಂ. 3: ನಾಲ್ಪರು ಶಿಷ್ಯರು ಕರೆಯಲ್ಪಟ್ಟರು (gt ಅಧ್ಯಾ. 22)
ನಂ. 4: ಸಾರುವಿಕೆಗಾಗಿ ಹಣವು ಸ್ವಯಂಪ್ರೇರಿತ ಕಾಣಿಕೆಗಳಿಂದ ಬರುತ್ತದೆ (td 60ಡಿ)
ಸಪ್ಟಂ. 21 ಬೈಬಲ್ ವಾಚನ: ಧರ್ಮೋಪದೇಶಕಾಂಡ 31-34
ಸಂಗೀತ 41 (22)
ನಂ. 1: ಧರ್ಮೋಪದೇಶಕಾಂಡ—ಯಾಕೆ ಉಪಯುಕ್ತವಾಗಿದೆ (si ಪುಟ 40-1 ಪಾರಾ. 30-34)
ನಂ. 2: ಧರ್ಮೋಪದೇಶಕಾಂಡ 32:1-14
ನಂ. 3: ಕಪೆರ್ನೌಮಿನಲ್ಲಿ ಹೆಚ್ಚಿನ ಅದ್ಭುತಗಳು (gt ಅಧ್ಯಾ. 23)
ನಂ. 4: ಮದುವೆಗೆ ಯೋಗ್ಯ ತಯಾರಿಯು ಅತ್ಯಾವಶ್ಯಕ (yy ಅಧ್ಯಾ. 19 ಪಾರಾ. 14-22)
ಸಪ್ಟಂ. 28 ಬೈಬಲ್ ವಾಚನ: ಯೆಹೋಶುವ 1-5
ಸಂಗೀತ 40 (15)
ನಂ. 1: ಯೆಹೋಶುವ—ಪೀಠಿಕೆ (si ಪುಟ 42-3 ಪಾರಾ. 1-5)
ನಂ. 2: ಯೆಹೋಶುವ 1:1-11
ನಂ. 3: ಯೇಸು ಭೂಮಿಗೆ ಬಂದ ಕಾರಣ (gt ಅಧ್ಯಾ. 24)
ನಂ. 4: ಸ್ತ್ರೀಯರು ಮತ್ತು ಮಕ್ಕಳು ಸಹಾ ಸಾಕ್ಷಿಕೊಡಲು ಅಪ್ಪಣೆವುಳ್ಳವರು (td 60ಇ)
ಒಕ್ಟೋ. 5 ಬೈಬಲ್ ವಾಚನ: ಯೆಹೋಶುವ 6-9
ಸಂಗೀತ 18 (115)
ನಂ. 1: (sg ಪುಟ 49-51 ಪಾರಾ. 1-8)
ನಂ. 2: ಯೆಹೋಶುವ 6:12-27
ನಂ. 3: ಕುಷ್ಟರೋಗಿಗಾಗಿ ಕನಿಕರ (gt ಅಧ್ಯಾ. 25)
ನಂ. 4: ಪ್ರಣಯಾಚರಣೆಯಲ್ಲಿ ಮಾನ್ಯವಾದ ನಡವಳಿಕೆ ಏನು? (yy ಅಧ್ಯಾ. 19 ಪಾರಾ. 23-32)
ಒಕ್ಟೋ. 12 ಬೈಬಲ್ ವಾಚನ: ಯೆಹೋಶುವ 10-13
ಸಂಗೀತ 213 (97)
ನಂ. 1: sg ಪುಟ 51-3 ಪಾರಾ. 9-18
ನಂ. 2: ಯೆಹೋಶುವ 10:1-14
ನಂ. 3: ಯೇಸು ಪಾಪಗಳನ್ನು ಕ್ಷಮಿಸುತ್ತಾನೆ ಮತ್ತು ವಾಸಿಮಾಡುತ್ತಾನೆ (gt ಅಧ್ಯಾ. 26)
ನಂ. 4: ಎಲ್ಲಾ ವಿಧದ ಜನರಿಗೆ ಸಾಕ್ಷಿಯು ಕೊಡಲ್ಪಡಲೇಬೇಕು (td 60ಎಫ್)
ಒಕ್ಟೋ. 19 ಬೈಬಲ್ ವಾಚನ ಯೆಹೋಶುವ 14-17
ಸಂಗೀತ 50 (23)
ನಂ. 1: sg 54-6 ಪಾರಾ. 1-8
ನಂ. 2: ಯೆಹೋಶುವ 14:1-14
ನಂ. 3: ಮತ್ತಾಯನು ಕರೆಯಲ್ಪಟ್ಟನು ಮತ್ತು ಔತಣ ಕೊಟ್ಟನು (gt ಅಧ್ಯಾ. 27)
ನಂ. 4: ಮದುವೆಯನ್ನು ಪೂರ್ಣವಾಗಿ ಆನಂದಿಸುವ ವಿಧ (yy ಅಧ್ಯಾ. 20 ಪಾರಾ. 1-18)
ಒಕ್ಟೋ. 26 ಲಿಖಿತ ಪುನರ್ವಿಮರ್ಶೆ. ಅರಣ್ಯಕಾಂಡ 23ರಿಂದ ಯೆಹೋಶುವ 17 ಸಂಪೂರ್ಣ
ಸಂಗೀತ 42 (7)
ನವಂ. 2 ಬೈಬಲ್ ವಾಚನ: ಯೆಹೋಶುವ 18:20
ಸಂಗೀತ 204 (109)
ನಂ. 1: sg ಪುಟ 56-8 ಪಾರಾ. 9-16
ನಂ. 2: ಯೆಹೋಶುವ 20:1-9
ನಂ. 3: ಉಪವಾಸದ ಕುರಿತು ಪ್ರಶ್ನಿಸಲ್ಪಟ್ಟದ್ದು (gt ಅಧ್ಯಾ. 28)
ನಂ. 4: ಸಾಕ್ಷಿಕೊಡುವಿಕೆಯು ಒಬ್ಬನನ್ನು ರಕ್ತಾಪರಾಧದಿಂದ ಮುಕ್ತನಾಗಿ ಮಾಡುತ್ತದೆ (td 60ಜಿ)
ನವಂ. 9 ಬೈಬಲ್ ವಾಚನ: ಯೆಹೋಶುವ 21-24
ಸಂಗೀತ 131 (77)
ನಂ. 1: ಯೆಹೋಶುವ—ಯಾಕೆ ಉಪಯುಕ್ತವಾಗಿದೆ (si ಪುಟ 45-6 ಪಾರಾ. 21-24
ನಂ. 2: ಯೆಹೋಶುವ 24:1-15
ನಂ. 3: ಸಬ್ಬತಿನಲ್ಲಿ ಸತ್ಕಾರ್ಯಗಳನ್ನು ಮಾಡುವುದು (gt ಅಧ್ಯಾ. 29)
ನಂ. 4: ವಿವಾಹದಲ್ಲಿ ನೀವು ಸಾಫಲ್ಯ ಪಡೆಯಬಲ್ಲ ವಿಧ (yy ಅಧ್ಯಾ. 20 ಪಾರಾ. 19-24
ನವಂ. 16 ಬೈಬಲ್ ವಾಚನ: ನ್ಯಾಯಸ್ಥಾಪಕರು 1-4
ಸಂಗೀತ 26 (9)
ನಂ. 1: ನ್ಯಾಯಸ್ಥಾಪಕರು—ಪೀಠಿಕೆ (si ಪುಟ 46-7 ಪಾರಾ. 1-8
ನಂ. 2: ನ್ಯಾಯಸ್ಥಾಪಕರು 2:8-23
ನಂ. 3: ಯೇಸು ತನ್ನ ಆರೋಪಿಗಳಿಗೆ ಉತ್ತರಕೊಡುತ್ತಾನೆ (gt ಅಧ್ಯಾ. 30)
ನಂ. 4: ಪೂರ್ವಜರನ್ನು ಪೂಜಿಸುವುದು ವ್ಯರ್ಥವು (td 1ಎ)
ನವಂ. 23 ಬೈಬಲ್ ವಾಚನ: ನ್ಯಾಯಸ್ಥಾಪಕರು 5-7
ಸಂಗೀತ 150 (83)
ನಂ. 1: sg ಪುಟ 58-61 ಪಾರಾ. 1-12
ನಂ. 2: ನ್ಯಾಯಸ್ಥಾಪಕರು 7:7-22
ನಂ. 3: ಸಬ್ಬತಿನಲ್ಲಿ ಧಾನ್ಯ ಕೀಳುವುದು ನ್ಯಾಯಸಮ್ಮತವೂ? (gt ಅಧ್ಯಾ. 31)
ನಂ. 4: ಲೌಕಿಕ ಸ್ವತ್ತುಗಳಿಗಿಂತ ಹೆಚ್ಚು ಬೆಲೆಯುಳ್ಳ ವಿಷಯಗಳು (yy ಅಧ್ಯಾ. 21 ಪಾರಾ. 1-9)
ನವಂ. 30 ಬೈಬಲ್ ವಾಚನ: ನ್ಯಾಯಸ್ಥಾಪಕರು 8-10
ಸಂಗೀತ 207 (112)
ನಂ. 1: sg ಪುಟ 61-3 ಪಾರಾ. 13-18
ನಂ. 2: ನ್ಯಾಯಸ್ಥಾಪಕರು 8:13-28
ನಂ. 3: ಸಬ್ಬತಿನಲ್ಲಿ ಯಾವುದು ನ್ಯಾಯಸಮ್ಮತ? (gt ಅಧ್ಯಾ. 32)
ನಂ. 4: ಮನುಷ್ಯರು ಗೌರವಿಸಲ್ಪಡಬಹುದು, ಆದರೆ ಆರಾಧಿಸಲ್ಪಡುವವನು ದೇವರು ಮಾತ್ರವೆ. (td 1ಬಿ)
ದಶಂ. 7 ಬೈಬಲ್ ವಾಚನ: ನ್ಯಾಯಸ್ಥಾಪಕರು 11-14
ಸಂಗೀತ 144 (78)
ನಂ. 1: sg ಪುಟ 63-6 ಪಾರಾ. 1-10
ನಂ. 2: ನ್ಯಾಯಸ್ಥಾಪಕರು 11:28-40
ನಂ. 3: ಯೆಶಾಯನ ಪ್ರವಾದನೆಯನ್ನು ನೆರವೇರಿಸುವದು (gt ಅಧ್ಯಾ. 33)
ನಂ. 4: ಅಧಿಕ ಮೂಲ್ಯತೆಯ ವಿಷಯಗಳನ್ನು ಬೆನ್ನಟ್ಟಿರಿ (yy ಅಧ್ಯಾ. 21 ಪಾರಾ. 10-15)
ದಶಂ. 14 ಬೈಬಲ್ ವಾಚನ: ನ್ಯಾಯಸ್ಥಾಪಕರು 15-18
ಸಂಗೀತ 191 (82)
ನಂ. 1: sg ಪುಟ 66-9 ಪಾರಾ. 11-22
ನಂ. 2: ನ್ಯಾಯಸ್ಥಾಪಕರು 16:18-31
ನಂ. 3: ತನ್ನ ಅಪೋಸ್ತಲರನ್ನು ಆರಿಸಿಕೊಂಡದ್ದು (gt ಅಧ್ಯಾ. 34)
ನಂ. 4 ದುಷ್ಟತನವನ್ನು ಅಂತ್ಯಗೊಳಿಸುವ ದೇವರ ಯುದ್ಧ (td 2ಎ)
ದಶಂ. 21 ಬೈಬಲ್ ವಾಚನ: ನ್ಯಾಯಸ್ಥಾಪಕರು 19-21
ಸಂಗೀತ 11 (12)
ನಂ. 1: ನ್ಯಾಯಸ್ಥಾಪಕರು—ಯಾಕೆ ಉಪಯುಕ್ತವಾಗಿದೆ (si ಪುಟ 50 ಪಾರಾ. 27-29)
ನಂ. 2: ನ್ಯಾಯಸ್ಥಾಪಕರು 21:8-25
ನಂ. 3: ಕೊಡಲ್ಪಟ್ಟವುಗಳಲ್ಲಿ ಅತ್ಯಂತ ಪ್ರಖ್ಯಾತ ಪ್ರಸಂಗ (gt ಅಧ್ಯಾ. 35 ಪಾರಾ. 1-6)
ನಂ. 4: ಅಪ್ರಾಮಾಣಿಕರಾಗಿರುವದರ ಫಲಿತಾಂಶಗಳು (yy ಅಧ್ಯಾ. 22 ಪಾರಾ. 1-13)
ದಶಂ. 28 ಬೈಬಲ್ ವಾಚನ: ರೂಥಳು 1-4
ಸಂಗೀತ 57 (29)
ನಂ. 1: ರೂಥಳು: ಪೀಠಿಕೆ ಮತ್ತು ಯಾಕೆ ಉಪಯುಕ್ತವು (si ಪುಟ 51-3 ಪಾರಾ. 1-3, 9, 10)
ನಂ. 2: ರೂಥಳು 1:7-22
ನಂ. 3: ನಿಜವಾಗಿಯೂ ಧನ್ಯರು ಯಾರು? (gt ಅಧ್ಯಾ. 35 ಪಾರಾ. 7-17)
ನಂ. 4: ದೇವರ ಕೊನೆಯ ಯುದ್ಧದಲ್ಲಿ ಕ್ರೈಸ್ತನ ಪಾತ್ರವು (td 2ಬಿ)
ಜನ. 4 ಬೈಬಲ್ ವಾಚನ: 1 ಸಮುವೇಲ 1-3
ಸಂಗೀತ 127 (64)
ನಂ. 1: 1 ಸಮುವೇಲ—ಪೀಠಿಕೆ (si ಪುಟ 53-4 ಪಾರಾ. 1-6)
ನಂ. 2: 1 ಸಮುವೇಲ 3:2-18
ನಂ. 3: ಅವನ ಹಿಂಬಾಲಕರಿಗೆ ಒಂದು ಉಚ್ಛಮಟ್ಟ (gt ಅಧ್ಯಾ. 35 ಪಾರಾ. 18-27)
ನಂ. 4: ನೀವು ಪ್ರಾಮಾಣಿಕರಾಗಿರಬೇಕು ಯಾಕೆ (yy ಅಧ್ಯಾ. 22 ಪಾರಾ. 14-22)
ಜನ. 11 ಬೈಬಲ್ ವಾಚನ: 1 ಸಮುವೇಲ 4-7
ಸಂಗೀತ 45 (87)
ನಂ. 1: sg ಪುಟ 69-71 ಪಾರಾ. 1-8
ನಂ. 2: 1 ಸಮುವೇಲ 7:1-14
ನಂ. 3: ಪ್ರಾರ್ಥನೆ ಮತ್ತು ದೇವರಲ್ಲಿ ಭರವಸ (gt ಅಧ್ಯಾ. 35 ಪಾರಾ. 28-37
ನಂ. 4: ದುಷ್ಟರ ನಾಶನವು ದೇವರ ಪ್ರೀತಿಯನ್ನು ಉಲ್ಲಂಘಿಸುವದಿಲ್ಲ (td 2ಸಿ)
ಜನ. 18 ಬೈಬಲ್ ವಾಚನ: 1 ಸಮುವೇಲ 8-11
ಸಂಗೀತ 222 (119)
ನಂ. 1: sg ಪುಟ 72-3 ಪಾರಾ. 9-13
ನಂ. 2: 1 ಸಮುವೇಲ 11:1-15
ನಂ. 3: ಜೀವದ ಹಾದಿ (gt ಅಧ್ಯಾ. 35 ಪಾರಾ. 38-49)
ನಂ. 4: ನಮ್ಮ ಜೀವಿತದಿಂದ ಅತ್ಯುತ್ತಮವನ್ನು ಪಡೆಯುವದು ಹೇಗೆ (yy ಅಧ್ಯಾ. 23 ಪಾರಾ. 1-11
ಜನ. 25 ಬೈಬಲ್ ವಾಚನ: 1 ಸಮುವೇಲ 12-14
ಸಂಗೀತ 156 (10)
ನಂ. 1: sg ಪುಟ 73-5 ಪಾರಾ. 1-8
ನಂ. 2: 1 ಸಮುವೇಲ 13:1-14
ನಂ. 3: ಒಬ್ಬ ಸೇನಾಧಿಕಾರಿಯ ಮಹಾ ನಂಬಿಕೆ (gt ಅಧ್ಯಾ. 36)
ನಂ. 4: ದೀಕ್ಷಾಸ್ನಾನವು ಒಂದು ಕ್ರೈಸ್ತ ಆವಶ್ಯಕತೆ (td 3ಎ)
ಫೆಬ್ರ. 1 ಬೈಬಲ್ ವಾಚನ: 1 ಸಮುವೇಲ 15-17
ಸಂಗೀತ 86 (45)
ನಂ. 1: sg ಪುಟ 75-8 ಪಾರಾ. 9-17
ನಂ. 2: 1 ಸಮುವೇಲ 15:5-23
ನಂ. 3: ಒಬ್ಬ ವಿಧವೆಯ ದುಃಖವನ್ನು ಯೇಸು ನೀಗಿಸುತ್ತಾನೆ (gt ಅಧ್ಯಾ. 37)
ನಂ. 4: ದೇವರನ್ನು ನಿಮ್ಮ ಸ್ನೇಹಿತನಾಗಿ ಪಡೆಯುವದರ ಮಹತ್ವವು (yy ಅಧ್ಯಾ. 23 ಪಾರಾ. 12-21)
ಫೆಬ್ರ. 8 ಬೈಬಲ್ ವಾಚನ: 1 ಸಮುವೇಲ 18-20
ಸಂಗೀತ 140 (24)
ನಂ. 1: sg ಪುಟ 78-80 ಪಾರಾ. 1-10
ನಂ. 2: 1 ಸಮುವೇಲ 18:1-16
ನಂ. 3: ಯೋಹಾನನಲ್ಲಿ ನಂಬಿಕೆಯ ಕೊರತೆ ಇತ್ತೋ? (gt ಅಧ್ಯಾ. 38)
ನಂ. 4: ದೀಕ್ಷಾಸ್ನಾನ ಪಾಪಗಳನ್ನು ತೊಳೆದುಹಾಕುವುದಿಲ್ಲ (td 3ಬಿ)
ಫೆಬ್ರ. 15 ಬೈಬಲ್ ವಾಚನ: 1 ಸಮುವೇಲ 21-24
ಸಂಗೀತ 138 (71)
ನಂ. 1: sg ಪುಟ 80-4 ಪಾರಾ. 11-24
ನಂ. 2: 1 ಸಮುವೇಲ 23:13-29
ನಂ. 3 ಅಹಂಕಾರಿಗಳು ಮತ್ತು ದೀನರು (gt ಅಧ್ಯಾ. 39)
ನಂ. 4: ದೇವರು ತಯಾರಿಸಿರುವ ಮಹಾ ಭವಿಷ್ಯತ್ತನ್ನು ಅನಂದಿಸುವ ವಿಧ (yy ಅಧ್ಯಾ. 24)
ಫೆಬ್ರ. 22 ಲಿಖಿತ ಪುನರ್ವಿಮರ್ಶೆ. ಯೆಹೋಶುವ 18ರಿಂದ 1 ಸಮುವೇಲ 24 ಸಂಪೂರ್ಣ
ಸಂಗೀತ 155 (117)