ದಶಂಬರಕ್ಕಾಗಿ ಸೇವಾ ಕೂಟಗಳು
ದಶಂಬರ 9ರ ವಾರ
ಸಂಗೀತ 180 (100)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಈ ಶನಿವಾರ ಪತ್ರಿಕಾಸೇವೆಯಲ್ಲಿ ಉಪಯೋಗಿಸಬಹುದಾದ ಪ್ರಚಲಿತ ಪತ್ರಿಕೆಗಳಿಂದ ಲೇಖನಗಳನ್ನು ಎತ್ತಿಹೇಳಿರಿ.
20 ನಿ: “ಸತ್ಯವಾಕ್ಯವನ್ನು ನಿಪುಣತೆಯಿಂದ ನಿರ್ವಹಿಸುವದು.” ಪ್ರಶ್ನೋತ್ತರದ ಮೂಲಕ ಲೇಖನದ ಆವರಿಸುವಿಕೆ. ಬಾಗಲುಗಳಲ್ಲಿ ಬೈಬಲನ್ನು ಉಪಯೋಗಿಸುವ ಆವಶ್ಯಕತೆಯನ್ನು ಎತ್ತಿ ಹೇಳಿರಿ. 5ನೇ ಪಾರಗ್ರಾಫ್‌ನ್ನು ಚರ್ಚಿಸಿದ ನಂತರ, ಸೂಚಿಸಲ್ಪಟ್ಟ ದೃಶ್ಯಮಾಡಿರಿ. ಸಂಭಾಷಣೆಯ ವಿಷಯದೊಂದಿಗೆ ಬೈಬಲನ್ನು ನೀಡುವ ವಿಧಾನದ ಕುರಿತಾಗಿ ಸಂಕ್ಷಿಪ್ತವಾಗಿ ದೃಶ್ಯಮಾಡಿರಿ. ಇನ್ನೊಂದು ಬೈಬಲನ್ನು ಬಯಸದ ವ್ಯಕ್ತಿಗಳಿಗೆ ಪ್ರಚಾರಕರು ಕೆಲವೊಮ್ಮೆ ಗಾಡ್ಸ್ ವರ್ಡ್ ಪುಸ್ತಕವನ್ನು ನೀಡಲು ಇಚ್ಛಿಸಬಹುದು.
15 ನಿ: “ದ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್—ಸ್ಕೊಲರ್ಲೀ ಆ್ಯಂಡ್ ಹೊನಸ್ಟ್” ಮಾರ್ಚ್ 1, 1991ರಲ್ಲಿ ವಾಚ್‌ಟವರ್‌ನಲ್ಲಿ ಬಂದಿರುವ ಲೇಖನದ ಚರ್ಚೆ. ಸೇವೆಯಲ್ಲಿ ಬೈಬಲನ್ನು ನೀಡಲು ಸಹಾಯಕವಾಗುವ ಉಪಯುಕ್ತ ವಿಷಯಗಳನ್ನು ಎತ್ತಿಹೇಳಿರಿ. (ದೇಶಭಾಷೆ: “ಯೆಹೋವನು ಕೊಟ್ಟಿರುವ ಒಳನೋಟ.” ಆಗಸ್ಟ್ 1, 1990ರ ಕಾವಲಿನಬುರುಜು.)
ಸಂಗೀತ 23 (40) ಮತ್ತು ಸಮಾಪ್ತಿಯ ಪ್ರಾರ್ಥನೆ
ದಶಂಬರ 16ರ ವಾರ
ಸಂಗೀತ 161 (70)
8 ನಿ: ಸ್ಥಳೀಕ ತಿಳಿಸುವಿಕೆಗಳು. ಜನವರಿಯಲ್ಲಿ ಸಹಾಯಕ ಪಯನೀಯರಿಂಗ್ ಮಾಡಲು ಉತ್ತೇಜಿಸಿರಿ.
22 ನಿ: “ಸುವಾರ್ತೆಯನ್ನು ನೀಡುವದು—ಮನೆ ಬೈಬಲ್ ಅಬ್ಯಾಸಗಳನ್ನು ನೀಡುವದರಿಂದ.” ಪ್ರಶ್ನೋತ್ತರ ಆವರಿಸುವಿಕೆ. ಒಬ್ಬ ಅನುಭವೀ ಪ್ರಚಾರಕನು ಕೊಡಲ್ಪಟ್ಟ ಬೈಬಲಿನಲ್ಲಿ ಆಸಕ್ತಿಯನ್ನು ತೋರಿಸಿದ ಒಬ್ಬ ವ್ಯಕ್ತಿಯೊಡನೆ ಒಂದು ಬೈಬಲ್ ಅಭ್ಯಾಸವನ್ನು ಹೇಗೆ ಆರಂಭಿಸಬಹುದು ಎಂದು ದೃಶ್ಯಮಾಡಲಿ. ನೀಡುವಿಕೆ ಮಾಡಿರಲಿ ಯಾ ಇಲ್ಲದಿರಲಿ, ಯಾವುದೇ ಆಸಕ್ತಿ ತೋರಿಸಿರುವಲ್ಲೆಲ್ಲಾ ಪುನಃ ಹೋಗುವಂತೆ ಸಹೋದರರನ್ನು ಉತ್ತೇಜಿಸಿರಿ.
15 ನಿ: ಸ್ಥಳೀಕ ಆವಶ್ಯಕತೆಗಳು ಯಾ “ರಾಜ್ಯಘೋಷಕರ ವರದಿ.” ಭಾಷಣ. ಜನರ ಜೀವನಗಳ ಮೇಲೆ ಬಲವಾದ ಪರಿಣಾಮ ಬೀರಿರುವದನ್ನು ತೋರಿಸುವ ಅನುಭವಗಳನ್ನು ವಾಚ್‌ಟವರ್‌ನ ಈ ವಿಭಾಗದಿಂದ ತಿಳಿಸಿರಿ. ಏಪ್ರಿಲ್ 1, 1991 ಮತ್ತು ಆಗಸ್ಟ್ 1, 1991ರ ಸಂಚಿಕೆಗಳಲ್ಲಿರುವ ವರದಿಗಳನ್ನು ಸೇರಿಸಬಹುದು.
ಸಂಗೀತ 167 (107) ಮತ್ತು ಸಮಾಪ್ತಿಯ ಪ್ರಾರ್ಥನೆ.
ದಶಂಬರ 23ರ ವಾರ
ಸಂಗೀತ 96 (13)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಎಕೌಂಟ್ಸ್ ರಿಪೋರ್ಟ್. ಸೊಸೈಟಿಯ ದಾನ ಅಂಗೀಕಾರಗಳನ್ನು ಓದಿರಿ. ನೀಡುವಿಕೆಯಲ್ಲಿ ಅವರ ಭಾಗಕ್ಕಾಗಿ ಸಹೋದರರನ್ನು ಪ್ರಶಂಸಿಸಿರಿ. ದಶಂಬರ 25ಕ್ಕಾಗಿ ಸೇವಾ ಏರ್ಪಾಡನ್ನು ಪ್ರಕಟಿಸಿರಿ.
20 ನಿ: “ಸಭಾ ಪುಸ್ತಕಭ್ಯಾಸ ಏರ್ಪಾಡು—ಭಾಗ 5.” ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡುವ ಪ್ರಶ್ನೋತ್ತರ ಚರ್ಚೆ. ಈ ಒದಗಿಸುವಿಕೆಯಿಂದ ಕೆಲವರು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿಕೆಗಳನ್ನು ಕೇಳಿರಿ ಯಾ ಸೇವಾ ಮೇಲ್ವಿಚಾರಕನ ಭೇಟಿಯಿಂದ ಸಹಾಯ ಮಾಡಲ್ಪಟ್ಟ ಒಬ್ಬರು ಯಾ ಇಬ್ಬರನ್ನು ಇಂಟರ್‌ವ್ಯೂ ಮಾಡಿರಿ.
15 ನಿ: “ಮನೆ ಬೈಬಲ್ ಅಭ್ಯಾಸಗಳಿಗೆ ತಯಾರಿಸುವದು ಮತ್ತು ನಡಿಸುವದು.” ಹಿರಿಯನಿಂದ ಲೇಖನದ ಪ್ರಶ್ನೋತ್ತರದ ಪರಿಗಣನೆ.
ಸಂಗೀತ 75 (58) ಮತ್ತು ಸಮಾಪ್ತಿಯ ಪ್ರಾರ್ಥನೆ.
ದಶಂಬರ 30ರ ವಾರ
ಸಂಗೀತ 105 (46)
10 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆಗಳು. ವಾರಾಂತ್ಯದ ಕ್ಷೇತ್ರ ಸೇವೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಉತ್ತೇಜನ ಕೊಡಿರಿ.
20 ನಿ: “ಕ್ಷೇತ್ರ ಸೇವೆಯಲ್ಲಿ ಪೂರ್ಣಾತ್ಮದಿಂದಿರ್ರಿ—ಭಾಗ 5.” ಸರಣಿಯ ಸಮಾಪ್ತಿಯ ಭಾಗದ ಪ್ರಶ್ನೋತ್ತರ ಚರ್ಚೆ. ಕೊಡಲ್ಪಟ್ಟ ಸಲಹೆಗಳನ್ನು ಎಲ್ಲರೂ ಅನುಸರಿಸುವಂತೆ ಹುರುಪಿನಿಂದ ಪ್ರೋತ್ಸಾಹಿಸಿರಿ. ಸಮಯವಿದ್ದರೆ, ಶುಶ್ರೂಷೆಯಲ್ಲಿ ಪೂರ್ಣಾತ್ಮದ ಪಾಲು ಇದ್ದುದರಿಂದ ಆನಂದಿಸಿದ ವೈಯಕಿಕ್ತ ಪ್ರಯೋಜನಗಳನ್ನು ವಿವರಿಸಸಾಧ್ಯವಿರುವ ಒಬ್ಬ ಉತ್ಸಾಹೀ ಪ್ರಚಾರಕನ ಯಾ ಪಯನೀಯರನ ಇಂಟರ್‌ವ್ಯೂ ಸೇರಿಸಿರಿ.
15 ನಿ: ಲಿವ್ ಫಾರೆವರ್ (ಸದಾ ಜೀವಿಸುವದು) ಪುಸ್ತಕ ನೀಡುವಿಕೆ: ಮನೆ-ಮನೆ ಸೇವೆಯಲ್ಲಿ ಲಿವ್ ಫಾರೆವರ್ (ಸದಾ ಜೀವಿಸುವದು) ಪುಸ್ತಕಗಳನ್ನು ನಾವು ನೀಡುವ ಒಂದು ಪ್ರಾಮುಖ್ಯ ವಿಧಾನವಾಗಿದೆ ಎಂಬದರಲ್ಲಿ ಸಂದೇಹವಿಲ್ಲ. ಜನವರಿಯಲ್ಲಿ ಈ ಕೆಲಸದಲ್ಲಿ ಹೆಚ್ಚು ಸಮಯ ವ್ಯಯಿಸಲು ನೀವು ಕಾರ್ಯತಖ್ತೆಯನ್ನು ಮಾಡಶಕ್ತರೋ? ಸಂಭಾಷಣೆಗಾಗಿರುವ ವಿಷಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವದರ ಮತ್ತು ಪುಸ್ತಕದೊಂದಿಗೆ ಜೋಡಿಸುವದರ ಮೇಲೆ ಲಿವ್ ಫಾರೆವರ್ ಪುಸ್ತಕಗಳ ನೀಡುವಿಕೆಯು ಅಧಿಕಾಂಶವಾಗಿ ಹೊಂದಿಕೊಂಡಿರಬಹುದು. ಈ ವಿಚಾರದಲ್ಲಿ ನೀವು ಪ್ರಗತಿ ಮಾಡಲು ಏನಾದರೂ ಇದೆಯೇ? ಕೆಲವರಿಗೆ ಕುಟುಂಬವಾಗಿ ಪ್ರಾಕ್ಟೀಸ್ ಸೆಶ್ಶನ್ ಮಾಡಲು ಸಾಧ್ಯವಿರಬಹುದು. ಕ್ಷೇತ್ರಸೇವೆಗಾಗಿ ಕೂಟಗಳನ್ನು ನಡಿಸುವವರು ಸಹಾಯಕವಾಗಲು ಏನು ಮಾಡಸಾಧ್ಯವಿದೆ? ರೋಮಾಪುರ 12:8 ಅಂಥಹ ಮೇಲ್ವಿಚಾರಣೆ ಮಾಡುವವರನ್ನು “ನಿಜ ಆಸಕ್ತಿಯಿಂದ” ಮಾಡಲು ಉತ್ತೇಜಿಸುತ್ತದೆ. ಪ್ರಾಯಶಃ ನಿಮ್ಮ ಕಾರ್ಯಕ್ಷೇತ್ರದಲ್ಲಿ ಅಧಿಕಾಂಶ ಜನರು ಹಿಂದುಗಳಾಗಿರಬಹುದು. “ಸದಾ ಜೀವಿಸುವುದು ಕೇವಲ ಸ್ವಪ್ನವಲ್ಲ” ಎಂಬ ಅಧ್ಯಾಯ 1ನ್ನು ಉಪಯೋಗಿಸುವದರ ಕುರಿತಾಗಿ ಏನು? ದೇವರ ವಾಗ್ದಾನಿತ ಶಾಂತಿಯುತ ಹೊಸಲೋಕದಲ್ಲಿ ಜೀವಿಸುವ ಕುರಿತಾಗಿ ಆಸಕ್ತಿಯನ್ನು ಕೆರಳಿಸುವ ತಕ್ಕದ್ದಾದ ಸಮಾಚಾರವನ್ನು ಮೊದಲನೆಯ ಮೂರು ಪಾರಗ್ರಾಫ್‌ಗಳು ಒದಗಿಸುತ್ತವೆ. ಪುಟ 8 ಮತ್ತು 9ರಲ್ಲಿರುವ ಚಿತ್ರಗಳು ಪುಟ 11, ಯಾ 12 ಮತ್ತು 13ರಲ್ಲಿರುವದರೊಂದಿಗೆ ವ್ಯತ್ಯಾಸ ತೋರಿಸಲಾಗಿದೆ, ಇದು ಒಂದು ಕಣ್ನೋಟದ ಉತ್ತಮ ಆಕರ್ಷಣೆಯನ್ನು ಒದಗಿಸುತ್ತವೆ ಮತ್ತು ಒಂದು ಉತ್ತಮ ಕಲಿಸುವಿಕೆಯ ಸಹಾಯಕವಾಗಿ ಬಳಸಸಾಧ್ಯವಿದೆ. 110ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ದೊರಕುವ, ಲೋಕದ ಒಂದು ಅತಿ ಉತ್ತಮ ಬೈಬಲ್ ಅಧ್ಯಯನ ಸಹಾಯಕದೊಂದಿಗೆ ನಾವು ಸನ್ನದ್ಧರಾಗಿರುವದರಿಂದ, ಜನವರಿಯಲ್ಲಿ ನಾವು ಹುರುಪಿನಿಂದ ಶುಶ್ರೂಷೆಯಲ್ಲಿ ಅದನ್ನು ನೀಡೋಣ.
ಸಂಗೀತ 205 (118) ಮತ್ತು ಸಮಾಪ್ತಿಯ ಪ್ರಾರ್ಥನೆ.