ಆಗಸ್ಟ್ ತಿಂಗಳ ಸೇವಾ ಕೂಟಗಳು
ಗಮನಿಸಿರಿ: ಸಮ್ಮೇಳನದ ಸಮಯಾವಧಿಯಲ್ಲಿ ನಮ್ಮ ರಾಜ್ಯದ ಸೇವೆ ಪ್ರತಿವಾರಕ್ಕೆ ಒಂದು ಸೇವಾಕೂಟವನ್ನು ಏರ್ಪಡಿಸುತ್ತದೆ. ಜಿಲ್ಲಾ ಸಮ್ಮೇಳನಕ್ಕೆ ಹಾಜರಾಗಲು ಸಾಧ್ಯವಾಗುವಂತೆ ಸಭೆಗಳು ಆವಶ್ಯಕವಾದ ಅಳವಡಿಸುವಿಕೆಗಳನ್ನು ಮಾಡಬಹುದು ಮತ್ತು ಅನಂತರ ಸಮ್ಮೇಳನದ ಮರುವಾರದ ಸೇವಾಕೂಟದಲ್ಲಿ ಕಾರ್ಯಕ್ರಮದ ಮುಖ್ಯ ವಿಷಯಗಳ 30-ನಿಮಿಷಗಳ ಪರಾಮರ್ಶೆ ಮಾಡಬಹುದು. ಮುಖ್ಯ ವಿಚಾರಗಳನ್ನು ಕೇಂದ್ರೀಕರಿಸಿ ದಿನ-ದಿನದ ಪರಾಮರ್ಶೆಯನ್ನು ಹೇಳಶಕ್ತರಾದ ಎರಡು ಯಾ ಮೂವರು ಅರ್ಹತೆಯುಳ್ಳ ಸಹೋದರರನ್ನು ಮೊದಲೇ ನೇಮಿಸಬಹುದು. ವೈಯಕ್ತಿಕ ಅನ್ವಯಕ್ಕೆ ಮತ್ತು ಕ್ಷೇತ್ರದಲ್ಲಿ ಬಳಸಲಾಗುವಂತೆ ಸಹೋದರರು ಮುಖ್ಯವಿಚಾರಗಳನ್ನು ನೆನಪಿನಲ್ಲಿಡಲು ಉತ್ತಮವಾಗಿ ತಯಾರಿಸಿದ ಈ ಪರಾಮರ್ಶೆಯು ಸಹಾಯ ಮಾಡಲಿರುವುದು. ಸಭಿಕರಿಂದ ಹೇಳಿಕೆಗಳು ಮತ್ತು ಅನುಭವಗಳು ಚುಟುಕಾಗಿಯೂ, ಮೊನಚಾಗಿಯೂ ಇರತಕ್ಕದ್ದು.
ಆಗಸ್ಟ್ 10 ರ ವಾರ
ಸಂಗೀತ 123 (63)
10 ನಿ: ನಮ್ಮ ರಾಜ್ಯದ ಸೇವೆ ಯಿಂದ ತಕ್ಕದ್ದಾದ ಪ್ರಕಟಣೆಗಳು ಮತ್ತು ಯಾವುದೇ ಸ್ಥಳೀಕ ತಿಳಿಸುವಿಕೆಗಳು. ಆಗಸ್ಟ್ 1, 1992 ರ ವಾಚ್ಟವರ್ ನ್ನು ನೀಡುವಾಗ, ಬಳಸಬಹುದಾದ ಮಾತಾಡುವ ಎರಡು ನಿರ್ದಿಷ್ಟ ವಿಚಾರಗಳನ್ನು ಕೂಡ ಎತ್ತಿತೋರಿಸಿರಿ.
20 ನಿ: “ನಿಮ್ಮ ರಾಜ್ಯ ನಿರೀಕ್ಷೆಯಲ್ಲಿ ಪಾಲಿಗರಾಗಲು ಬ್ರೊಷರ್ಗಳನ್ನು ಮುಖ್ಯನೋಟವಾಗಿ ಇಡಿರಿ.” ಪ್ರಶ್ನೋತ್ತರ ಚರ್ಚೆ; ಪ್ರತ್ಯಕ್ಷಾಭಿನಯಗಳು. ದೊರಕುವ ಬ್ರೊಷರ್ಗಳ ಕುರಿತು ಸಭೆಗೆ ತಿಳಿಸಿರಿ, ಮತ್ತು ಸ್ಥಳೀಕ ಕಾರ್ಯಕ್ಷೇತ್ರಕ್ಕೆ (ಟೆರಿಟರಿಗೆ) ವಿಶೇಷವಾಗಿ ತಕ್ಕದ್ದಾಗಿರುವ ಬ್ರೊಷರ್ಗಳ ಕುರಿತಾಗಿ ಸಭಿಕರಿಂದ ಹೇಳಿಕೆಗಳನ್ನು ವಿಚಾರಿಸಿರಿ. ಪ್ಯಾರಗ್ರಾಫ್ 3 ನ್ನು ಪರಿಗಣಿಸುವಾಗ, ನಮ್ಮ ಸಮಸ್ಯೆಗಳು ಬ್ರೊಷರ್ನ್ನು ಅವಿಧಿಯಾದ ಪರಿಸರದಲ್ಲಿ ಒಬ್ಬ ನೆರೆಯವನಿಗೆ, ಕೆಲಸಮಾಡುವಲ್ಲಿ ಸಹಕಾರ್ಮಿಕನಿಗೆ ಯಾ ಇನ್ನೊಂದೆಡೆಯಲ್ಲಿ ಹೇಗೆ ನೀಡಸಾಧ್ಯವಿದೆ ಎಂದು ತೋರಿಸಿರಿ. ಸಮಯ ಅನುಮತಿಸಿದಂತೆ, ಬ್ರೊಷರ್ಗಳನ್ನು ಉಪಯೋಗಿಸುವುದರಲ್ಲಿ ಅವರಿಗಾದ ಅನುಭವಗಳನ್ನು ಮುಂದಾಗಿ ನೇಮಿಸಿದ ಪ್ರಚಾರಕರು ಹೇಳಲಿ. ಆಗಸ್ಟ್ನಲ್ಲಿ ಬ್ರೊಷರ್ಗಳನ್ನು ನೀಡುವುದರಲ್ಲಿ ಸಹೋದರರಿಗೆ ಪೂರ್ಣವಾದ ಪಾಲು ಇರುವಂತೆ ಹುರುಪಿನಿಂದ ಪ್ರೋತ್ಸಾಹಿಸಿರಿ.
15 ನಿ: ನಿಮ್ಮ ರಜಾದಿನಗಳಲ್ಲಿ ಸಮಯವನ್ನು ವಿವೇಕಯುಕ್ತವಾಗಿ ಉಪಯೋಗಿಸಿರಿ. ದೇವಪ್ರಭುತ್ವ ಅಭಿರುಚಿಗಳನ್ನು ವರ್ಧಿಸಲು ರಜಾದಿನಗಳಲ್ಲಿ ಮತ್ತು ಸಮ್ಮೇಳನದ ತಿಂಗಳುಗಳಲ್ಲಿ ಅಧಿಕ ಸಮಯವನ್ನು ಈಗ ಉಪಯೋಗಿಸಲು ಯೋಜಿಸುವಂತೆ ಪ್ರಚಾರಕರಿಗೆ ಉತ್ತೇಜಿಸಿರಿ. ಪ್ರಯಾಣ ಮಾಡುತ್ತಿರುವಾಗ ಅವಿಧಿಯಾದ ಸಾಕ್ಷಿ ನೀಡಲು ಸಲಹೆಗಳನ್ನು ಸೇರಿಸಿರಿ. ವಾರದ ಬೈಬಲ್ ವಾಚನ ಮಾಡುವದನ್ನು, ಸೊಸೈಟಿಯ ಸಾಹಿತ್ಯಗಳನ್ನು ಓದುವದನ್ನು ಪೂರ್ಣಗೊಳಿಸಲು, ಮತ್ತು ರಜಾದಿನಗಳ ಅವಧಿಯಲ್ಲಿ ಅಧಿಕ ದೊರಕುವ ಸಮಯದ ವಿವೇಕಭರಿತ ಉಪಯೋಗವನ್ನು ಮಾಡಲು ವೈಯಕ್ತಿಕ ಗುರಿಗಳನ್ನು ಇಡುವಂತೆ ಎಲ್ಲರನ್ನು ಪ್ರೋತ್ಸಾಹಿಸಿರಿ.
ಸಂಗೀತ 165 (81) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 17 ರ ವಾರ
ಸಂಗೀತ 193 (103)
10 ನಿ: ಸ್ಥಳೀಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ದೇವಪ್ರಭುತ್ವ ವಾರ್ತೆಗಳು. ಕ್ಷೇತ್ರ ಸೇವೆಯ ಏರ್ಪಾಡುಗಳ ಕುರಿತು ಸಭೆಗೆ ಮರುಜ್ಞಾಪಕ ಮಾಡಿರಿ.
20 ನಿ: “ನಮ್ಮ ಪೀಠಿಕೆಯನ್ನು ನೀಡುವಿಕೆಯೊಂದಿಗೆ ಜೋಡಿಸುವುದು.” ಸಂಕ್ಷಿಪ್ತ ಭಾಷಣ ಮತ್ತು ಪ್ರತ್ಯಕ್ಷಾಭಿನಯಗಳು. ಪ್ಯಾರಗ್ರಾಫ್ 2 ರಲ್ಲಿ ನಮೂದಿಸಲ್ಪಟ್ಟಿರುವ ಸಲಹೆಗಳನ್ನುಪಯೋಗಿಸಿ ಶಾಸ್ತ್ರೀಯ ನಿರೂಪಣೆಯನ್ನು ಪ್ರದರ್ಶಿಸುವಂತೆ ಎಳೆಯ ಪ್ರಚಾರಕನೊಬ್ಬನನ್ನು ಏರ್ಪಡಿಸಿರಿ. ಯೆಶಾಯ 65:21-23 ನ್ನು ಪ್ರಸ್ತಾಪಿಸುವಾಗ, ಪ್ಯಾರಗ್ರಾಫ್ 6 ರಲ್ಲಿ ತಿಳಿಸಲ್ಪಟ್ಟಿರುವ ಗೋಚರಿಸುವಿಕೆಯನ್ನು ಬಳಸಿರಿ. ಇನ್ನೊಬ್ಬ ಪ್ರಚಾರಕನು ಪ್ಯಾರಗ್ರಾಫ್ 3 ರಲ್ಲಿರುವ ಸಲಹೆಗಳನ್ನು ಸೇರಿಸಿಕೊಂಡು ನಮ್ಮ ಸಮಸ್ಯೆಗಳು ಬ್ರೊಷರ್ ನೀಡುವದನ್ನು ಪ್ರದರ್ಶಿಸಲಿ. ಎರಡರಲ್ಲಿಯೂ, ಸಾಹಿತ್ಯ ನೀಡುವಿಕೆಯೊಂದಿಗೆ ನಿರೂಪಣೆಯು ಹೇಗೆ ಜೋಡಿಸಲ್ಪಟ್ಟಿರುತ್ತದೆ ಎಂಬುದನ್ನು ಅಧ್ಯಕ್ಷನು ಒತ್ತಿಹೇಳತಕ್ಕದ್ದು. ಬ್ರೊಷರ್ ಮತ್ತು ಪತ್ರಿಕೆಗಳ ಸಂಗ್ರಹವನ್ನು ಕೊಂಡೊಯ್ಯುವಂತೆ ಸಭೆಗೆ ಮರುಜ್ಞಾಪಕ ನೀಡಿರಿ.
15 ನಿ: ಆರ್ಮಗೆಡನ್ ಕುರಿತು ಪ್ರಶ್ನೆಗಳು. ರೀಸನಿಂಗ್ ಪುಸ್ತಕದ ಪುಟ 44-9 ರಲ್ಲಿರುವ ವಿಷಯವನ್ನಾವರಿಸಿ ಭಾಷಣ.
ಸಂಗೀತ 137 (105) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 24 ರ ವಾರ
ಸಂಗೀತ 8 (88)
15 ನಿ: ಸ್ಥಳೀಕ ತಿಳಿಸುವಿಕೆಗಳು. ಜುಲೈ ತಿಂಗಳ ಸೇವಾ ವರದಿಯನ್ನು ಸಭೆಯೊಂದಿಗೆ ಚರ್ಚಿಸಿ, ಶ್ಲಾಘನೆಗಳೊಂದಿಗೆ, ಪ್ರಗತಿಗಾಗಿ ಆವಶ್ಯಕವಾದ ಪ್ರೋತ್ಸಾಹವನ್ನು ಕೊಡಿರಿ. ನಾವು ಕ್ಷೇತ್ರ ಸೇವೆಯಲ್ಲಿ ಪಾಲಿಗರಾಗುವಾಗ ಮತ್ತು ಸಭೆಯೊಂದಿಗೆ ಸಹವಾಸಮಾಡುತ್ತಿರುವಾಗ, ವರ್ಷವಚನದೊಂದಿಗೆ ಪೂರ್ವಾಪರದ ಮೇಲೆ ಪ್ರತಿಬಿಂಬಿಸುವುದರ ಮೂಲಕ ನಾವು ನಿಜ ಸಂತೋಷವನ್ನು ಪಡೆಯಲು, ಹೇಗೆ ನಮಗೆ ಸಹಾಯ ಮಾಡುತ್ತದೆ ಎಂದು ತೋರಿಸಿರಿ. (ರೋಮಾ. 12:9-16) ಸಮಯ ಅನುಮತಿಸಿದ್ದಲ್ಲಿ, ಈ ವಾರಾಂತ್ಯದಲ್ಲಿ ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಬಹುದಾದ ಒಂದೆರಡು ತಕ್ಕದ್ದಾದ ಮಾತಾಡುವ ವಿಚಾರಗಳನ್ನು ಸೂಚಿಸಿರಿ.
15 ನಿ: “ನೀವು ಬೈಬಲ್ ಅಭ್ಯಾಸಗಳನ್ನು ನೀಡುತ್ತೀರೋ?” ಪ್ರಶ್ನೋತ್ತರಗಳ ಚರ್ಚೆ, ಇದನ್ನು ಹಿಂಬಾಲಿಸಿ ಆರಂಭಿಕ ಭೇಟಿಯಲ್ಲಿ ಯಾ ಪುನಃ ಭೇಟಿಯೊಂದರಲ್ಲಿ ಬೈಬಲ್ ಅಭ್ಯಾಸಗಳನ್ನು ಹೇಗೆ ಆರಂಭಿಸಬಹುದು ಎಂಬುದನ್ನು ತೋರಿಸುವ ಆಯ್ದ ಅನುಭವಗಳು.
15 ನಿ: ಸ್ಥಳೀಕ ಆವಶ್ಯಕತೆಗಳು, ಯಾ ಸತ್ಯಕ್ಕೆ ಅವರನ್ನು ಆಕರ್ಷಿಸಿದ್ದು ಏನು ಎಂಬುದರ ಮೇಲೆ ಮೂರು ಯಾ ನಾಲ್ಕು ಪ್ರಚಾರಕರ ಮುಖಾಮುಖಿ ಭೇಟಿ (ಇಂಟರ್ವ್ಯೂ) . ಅವರು ಎದುರಿಸಿದಂಥ ಯಾವುದೇ ಅಡಿಗ್ಡಳನ್ನು ಕೂಡ ಸೇರಿಸಬಹುದು.
ಸಂಗೀತ 184 (41) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 31 ರ ವಾರ
ಸಂಗೀತ 180 (100)
10 ನಿ: ಸ್ಥಳೀಕ ತಿಳಿಸುವಿಕೆಗಳು. ಪ್ರಶ್ನಾ ಪೆಟ್ಟಿಗೆ. ಈ ಭಾಗವನ್ನು ನಿರ್ವಹಿಸಲು ಸೇವಾ ಮೇಲ್ವಿಚಾರಕನಿಗೆ ನೇಮಿಸಬಹುದು.
20 ನಿ: “ನಮ್ಮ ಸಮಸ್ಯೆಗಳು ಬ್ರೊಷರ್ನಿಂದ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು.” ಚುಟುಕಾದ ಪೀಠಿಕೆಯ ನಂತರ ಇವರ ಹತ್ತಿರ ಪುನಃ ಭೇಟಿಗಳನ್ನು ಪ್ರತ್ಯಕ್ಷಾಭಿನಯಿಸಿರಿ. (1) ನಮ್ಮ ಸಮಸ್ಯೆಗಳು ಬ್ರೊಷರ್ನ್ನು ಸ್ವೀಕರಿಸಿದ ವ್ಯಕ್ತಿಯೊಡನೆ. (2) ಆಸಕ್ತಿಯನ್ನು ತೋರಿಸಿದರೂ, ಸಾಹಿತ್ಯವನ್ನು ತೆಗೆದುಕೊಳ್ಳದೆ ಇರುವ ವ್ಯಕ್ತಿಯೊಡನೆ. ಎರಡರಲ್ಲಿಯೂ ಇನ್ನೊಂದು ಪುನಃ ಭೇಟಿಗೆ ಬುನಾದಿಯನ್ನು ಹಾಕಿರಿ.
15 ನಿ: “ದೇವರ ವಾಕ್ಯವನ್ನು ಸ್ವೀಕರಿಸುವುದು, ಅನ್ವಯಿಸುವುದು, ಮತ್ತು ಪ್ರಯೋಜನಪಡೆಯುವುದು.” ಸಾಮಾನ್ಯವಾಗಿ ಸರ್ಕೀಟ್ ಸಮ್ಮೇಳನಗಳಿಗಾಗಿ ಗಣ್ಯತೆಯ, ತಯಾರಿಸಿದ ಸಂಕ್ಷಿಪ್ತ ಹೇಳಿಕೆಗಳಿಗಾಗಿ ಕರೆನೀಡಿರಿ. ಮುಂಚಿನ ಸರ್ಕೀಟ್ ಸಮ್ಮೇಳನದಲ್ಲಿ ಕಲಿತ ಮೂಲ್ಯತೆಯ ವಿಷಯಗಳನ್ನು ಗಮನಕ್ಕೆ ತರಬಹುದು. ಅನಂತರ ಪುಟ 1 ರಲ್ಲಿರುವ ಲೇಖನದ ಪ್ರಶ್ನೋತ್ತರ ಚರ್ಚೆ ಇರಲಿ. ತಿಳಿದಿರುವುದಾದರೆ, ಮುಂದಿನ ಸರ್ಕೀಟ್ ಸಮ್ಮೇಳನದ ತಾರೀಕನ್ನು ಪ್ರಕಟಿಸಿರಿ ಮತ್ತು ಎಲ್ಲರೂ ಹಾಜರಾಗುವಂತೆ ಉತ್ತೇಜಿಸಿರಿ.
ಸಂಗೀತ 157 (73) ಮತ್ತು ಸಮಾಪ್ತಿಯ ಪ್ರಾರ್ಥನೆ.