ಸಪ್ಟಂಬರಕ್ಕಾಗಿ ಸೇವಾ ಕೂಟಗಳು
ಸೂಚನೆ: ಅಧಿವೇಶನದ ಅವಧಿಯಲ್ಲಿ ನಮ್ಮ ರಾಜ್ಯದ ಸೇವೆಯು ಪ್ರತಿ ವಾರಕ್ಕಾಗಿ ಒಂದು ಸೇವಾ ಕೂಟವನ್ನು ಶೆಡ್ಯೂಲ್ ಮಾಡುವುದು. “ದೈವಿಕ ಬೋಧನೆ” ಜಿಲ್ಲಾ ಅಧಿವೇಶನವನ್ನು ಹಾಜರಾಗಲು ಮತ್ತು ಆಮೇಲೆ ಮುಂದಿನ ವಾರ ಸೇವಾ ಕೂಟದಲ್ಲಿ ಕಾರ್ಯಕ್ರಮದ ಮುಖ್ಯವಿಷಯಗಳ 30 ನಿಮಿಷಗಳ ಪರಾಮರ್ಶೆಯನ್ನು ಅನುಮತಿಸಲು, ಸಭೆಗಳು ಬೇಕಾದಂತೆ ಹೊಂದಾಣಿಕೆಗಳನ್ನು ಮಾಡಬಹುದು. ಜಿಲ್ಲಾ ಅಧಿವೇಶನ ಕಾರ್ಯಕ್ರಮದ ದಿನನಿತ್ಯದ ಪರಾಮರ್ಶೆಯನ್ನು, ಅದರ ಎದ್ದುಕಾಣುವ ಅಂಶಗಳ ಮೇಲೆ ಕೇಂದ್ರೀಕರಿಸಲು ಶಕ್ತರಾದ ಎರಡು ಯಾ ಮೂರು ಅರ್ಹ ಸಹೋದರರಿಗೆ ಮುಂಚಿತವಾಗಿಯೇ ನೇಮಿಸತಕ್ಕದ್ದು. ಉತ್ತಮವಾಗಿ ತಯಾರಿಸಲಾದ ಈ ವಿಮರ್ಶೆಯು ವೈಯಕ್ತಿಕ ಅನ್ವಯಕ್ಕಾಗಿ ಮತ್ತು ಕ್ಷೇತ್ರದಲ್ಲಿ ಉಪಯೋಗಕ್ಕಾಗಿ ಮುಖ್ಯ ಅಂಶಗಳನ್ನು ನೆನಪಿನಲ್ಲಿ ಇಡುವಂತೆ ಸಭೆಗೆ ಸಹಾಯ ಮಾಡುವುದು. ಸಭಿಕರಿಂದ ಹೇಳಿಕೆಗಳು ಮತ್ತು ತಿಳಿಸಲಾದ ಅನುಭವಗಳು ಸಂಕ್ಷಿಪ್ತವಾಗಿಯೂ, ವಿಷಯಕ್ಕೆ ತಕ್ಕಂತೆಯೂ ಇರಬೇಕು.
ಸಪ್ಟಂಬರ 6 ರ ವಾರ
ಸಂಗೀತ 164 (73)
5 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು.
15 ನಿ: ಶಾಲೆಗಾಗಿ ನಿಮ್ಮ ಮಕ್ಕಳನ್ನು ಬಲಪಡಿಸಿರಿ. ಇಂಟರ್ವ್ಯೂಗಳು ಮತ್ತು ಪ್ರತ್ಯಕ್ಷಾಭಿನಯಗಳೊಂದಿಗೆ ಭಾಷಣ. ಸಭೆಯಲ್ಲಿ ಅನೇಕ ಪ್ರಚಾರಕರು ಊಹಿಸಲಾರದಂಥ ವಿವಾದಾಂಶಗಳನ್ನು ಇಂದು ಕ್ರೈಸ್ತ ಯುವಜನರು ಎದುರಿಸುತ್ತಾರೆ. ನಿಷ್ಠೆಯ ಪರೀಕೆಗ್ಷಳೊಂದಿಗೆ ನಿಭಾಯಿಸಲು ತಮ್ಮ ಮಕ್ಕಳನ್ನು ಬಲಪಡಿಸಲಿಕ್ಕಾಗಿ ವಿಶೇಷವಾಗಿ ಹೆತ್ತವರು ಈ ತೊಂದರೆಗಳ ಕುರಿತು ಒಳ್ಳೆಯ ಜ್ಞಾನಸಾಮಗ್ರಿಯುಳ್ಳವರಾಗಿರಬೇಕು. ವಿಭಿನ್ನ ಪ್ರಾಯದ ಮೂರು ಎಳೆಯ ವ್ಯಕ್ತಿಗಳನ್ನು ಇಂಟರ್ವ್ಯೂ ಮಾಡಿರಿ. ಅವರು ದಿನನಿತ್ಯವೂ ಶಾಲೆಯಲ್ಲಿ ನಿಭಾಯಿಸಬೇಕಾದ ಕೆಲವು ನಿರ್ದಿಷ್ಟ ಒತ್ತಡಗಳು ಯಾವುವು? ಯೆಹೋವನೊಂದಿಗೆ ತಮ್ಮ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವಂತೆ ಯಾವುದು ಅವರಿಗೆ ಸಹಾಯ ಮಾಡುತ್ತದೆ? ಸ್ಕೂಲ್ ಬ್ರೋಷರ್ನ 11 ನೆಯ ಪುಟದಲ್ಲಿ 2 ಮತ್ತು 3 ನೆಯ ಪ್ಯಾರಗ್ರಾಫ್ಗಳನ್ನು ಒಟ್ಟಾಗಿ ಪರಿಗಣಿಸುತ್ತಿರುವ ಒಂದು ಕುಟುಂಬದ ಪ್ರತ್ಯಕ್ಷಾಭಿನಯವನ್ನು ಏರ್ಪಡಿಸಿರಿ. ಬೈಬಲಿನ ನೈತಿಕತೆಯ ಕುರಿತಾದ ಉನ್ನತ ಮಟ್ಟಗಳನ್ನು ಎತ್ತಿಹಿಡಿಯುವುದಕ್ಕಾಗಿ ಅವರನ್ನು ಅಪಹಾಸ್ಯ ಮಾಡಲಾಗುತ್ತದೆ ಮತ್ತು ಅವರು ಬಹಿಷ್ಕ್ರಿತರಂತೆ ಎಣಿಸಲ್ಪಡುತ್ತಾರೆಂದು ಮಕ್ಕಳು ಪ್ರಕಟಿಸುತ್ತಾರೆ. ಅವರ ಉದಾಹರಣೆಯಿಂದ ತನ್ನ ಸಂತೋಷವನ್ನು ವ್ಯಕ್ತಪಡಿಸುವ ಮತ್ತು ಯೆಹೋವನು ಅವರ ನಡತೆಯಿಂದ ಸಂತೋಷ ಪಟ್ಟಿದ್ದಾನೆಂದು ಅವರಿಗೆ ಜ್ಞಾಪಿಸುವ ಮೂಲಕ, ಕುಟುಂಬದ ತಲೆಯು ಮಕ್ಕಳನ್ನು ಉತ್ತೇಜಿಸುತ್ತಾನೆ. (ಜ್ಞಾನೋ. 27:11) ಅವರ ಒಳ್ಳೆಯ ಕಾರ್ಯಗಳಿಗಾಗಿ ಸಭೆಯಲ್ಲಿರುವ ಎಳೆಯರನ್ನು ಪ್ರಶಂಸಿಸುವ ಮತ್ತು ಈ ಶಾಲಾ ವರ್ಷದ ಉದ್ದಕ್ಕೂ ಅವರು ಆತ್ಮಿಕವಾಗಿ ಬಲಹೊಂದುವಂತೆ ತಮ್ಮ ಹೆತ್ತವರೊಂದಿಗೆ ಸಂಸರ್ಗ ಮಾಡಲು ಅವರನ್ನು ಪ್ರೋತ್ಸಾಹಿಸುವ ಮೂಲಕ ಭಾಗವನ್ನು ನಿರ್ವಹಿಸುತ್ತಿರುವ ಸಹೋದರನು ಕೊನೆಗೊಳಿಸುತ್ತಾನೆ.
10 ನಿ: “ಒಂದು ಮಹಾ ನಿಕ್ಷೇಪವನ್ನು ಗುರುತಿಸಲು ಇತರರಿಗೆ ಸಹಾಯ ಮಾಡುವುದು.” ಪ್ರಶ್ನೋತ್ತರ ಆವರಿಸುವಿಕೆ.
15 ನಿ: “ಇಸವಿ 1993ರ ‘ದೈವಿಕ ಬೋಧನೆ’ ಜಿಲ್ಲಾ ಅಧಿವೇಶನದಿಂದ ಪೂರ್ಣ ಪ್ರಯೋಜನ ಪಡೆಯಿರಿ”—ಭಾಗ ಒಂದು. ಒಂದರಿಂದ 16 ಪ್ಯಾರಗ್ರಾಫ್ಗಳ ಸಭಿಕರೊಂದಿಗಿನ ಚರ್ಚೆ. ಅಧಿವೇಶನವನ್ನು ಹಾಜರಾಗುವ ತಮ್ಮ ಬೈಬಲ್ ವಿದ್ಯಾರ್ಥಿಗಳೊಂದಿಗೆ ಪ್ರಚಾರಕರು ಸೂಕ್ತವಾದ ಅಂಶಗಳನ್ನು ಚರ್ಚಿಸತಕ್ಕದ್ದು.
ಸಂಗೀತ 108 (95) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸಪ್ಟಂಬರ 13 ರ ವಾರ
ಸಂಗೀತ 112 (59)
5 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿಯನ್ನು ಮತ್ತು ಕಾಣಿಕೆಗಳ ಅಂಗೀಕಾರಗಳನ್ನು ಒಳಗೂಡಿಸಿರಿ. ಸ್ಥಳಿಕ ಸಭೆಗೆ ಮತ್ತು ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕೆ ಆರ್ಥಿಕ ಬೆಂಬಲ ಕೊಟ್ಟದ್ದಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ.
10 ನಿ: “ಪತ್ರಿಕೆಗಳನ್ನು ಉಪಯೋಗಿಸುವದರಿಂದ ಇತರರಿಗೆ ಪ್ರಯೋಜನವಾಗುವಂತೆ ಮಾಡಿರಿ.” ಪ್ರತ್ಯಕ್ಷಾಭಿನಯಗಳೊಂದಿಗೆ ಭಾಷಣ. ಪತ್ರಿಕೆಗಳ ಪ್ರಚಲಿತ ಹಾಗೂ ಹಳೆಯ ಸಂಚಿಕೆಗಳ ಪೂರ್ಣ ಉಪಯೋಗವನ್ನು ಮಾಡುವುದರ ಮೌಲ್ಯವನ್ನು ಎತ್ತಿತೋರಿಸಿರಿ. ಒಂದು ಪ್ರಚಲಿತ ಪತ್ರಿಕೆಯನ್ನು ಪ್ರದರ್ಶಿಸುವ, ಮತ್ತು ಮನೆಯವನ ನಿರ್ದಿಷ್ಟವಾದ ಅಗತ್ಯವನ್ನು ಪೂರೈಸಲು ಒಂದು ಹಳೆಯ ಸಂಚಿಕೆಯನ್ನು ಹೇಗೆ ಉಪಯೋಗಿಸಬಹುದೆಂದು ತೋರಿಸುವ ಒಂದು—ಹೀಗೆ ಎರಡು ಪ್ರತ್ಯಕ್ಷಾಭಿನಯಗಳನ್ನು ಮಾಡಿರಿ.
15 ನಿ: “ಈ ಸೇವಾ ವರ್ಷದಲ್ಲಿ ನಾವು ಏನನ್ನು ಸಾಧಿಸುವೆವು?” ಸಭಿಕರ ಚರ್ಚೆಯೊಂದಿಗೆ ಭಾಷಣ. ಅಧ್ಯಕ್ಷ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡತಕ್ಕದ್ದು. ಸಭೆಯ ಕಳೆದ ವರ್ಷದ ಸೇವೆಯನ್ನು ವಿಮರ್ಶಿಸಿರಿ ಮತ್ತು 1994ರ ಸೇವಾ ವರ್ಷದಲ್ಲಿ ಹೆಚ್ಚಾದ ಚಟುವಟಿಕೆಗಾಗಿ ಯೋಜನೆಗಳನ್ನು ಮಾಡುವಂತೆ ಎಲ್ಲರನ್ನು ಉತ್ತೇಜಿಸಿರಿ.
15 ನಿ: “ಇಸವಿ 1993ರ ‘ದೈವಿಕ ಬೋಧನೆ’ ಜಿಲ್ಲಾ ಅಧಿವೇಶನದಿಂದ ಪೂರ್ಣ ಪ್ರಯೋಜನ ಪಡೆಯಿರಿ”—ಭಾಗ ಎರಡು. ಪ್ಯಾರಗ್ರಾಫ್ಗಳು 17ರಿಂದ 19ನ್ನು ಸಭಿಕರೊಂದಿಗೆ ಚರ್ಚಿಸಿರಿ ಮತ್ತು “ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ಲೇಖನವನ್ನು ಜಾಗರೂಕತೆಯಿಂದ ವಿಮರ್ಶಿಸಿರಿ. ಜೂನ್ 15, 1989ರ ದ ವಾಚ್ಟವರ್ನ ಪುಟಗಳು 10-20 ರಲ್ಲಿರುವ ಮಾಹಿತಿಯ ಮೇಲೆ ಆಧಾರಿತ ಸೂಕ್ತ ಮರುಜ್ಞಾಪನಗಳನ್ನು ಸೇರಿಸಿರಿ ಅಥವಾ ಅಧಿವೇಶನವನ್ನು ಹಾಜರಾಗುವ ಮೊದಲು ಈ ಲೇಖನಗಳಲ್ಲಿರುವ ಅಂಶಗಳನ್ನು ವಿಮರ್ಶಿಸುವಂತೆ ಕುಟುಂಬ ಗುಂಪುಗಳನ್ನು ಉತ್ತೇಜಿಸಿರಿ.
ಸಂಗೀತ 17 (12) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸಪ್ಟಂಬರ 20ರ ವಾರ
ಸಂಗೀತ 100 (28)
10 ನಿ: ಸ್ಥಳಿಕ ತಿಳಿಸುವಿಕೆಗಳು. ಈ ವಾರಾಂತ್ಯ ಕ್ಷೇತ್ರ ಸೇವೆಯಲ್ಲಿ ಪ್ರಚಲಿತ ಪತ್ರಿಕೆಗಳಿಂದ ಪ್ರದರ್ಶಿಸಬಹುದಾದ ಲೇಖನಗಳನ್ನು ಎತ್ತಿತೋರಿಸಿರಿ.
20 ನಿ: “ಸ್ಥಿರವಾದ ಅಸ್ತಿವಾರದ ಮೇಲೆ ಕಟ್ಟಲು ಕುರಿಗಳಂಥ ಜನರಿಗೆ ಸಹಾಯ ಮಾಡಿರಿ.” ಸಭಿಕರೊಂದಿಗೆ ಚರ್ಚಿಸಿರಿ. ಪ್ರತಿ ಪುನಃ ಸಂದರ್ಶನಕ್ಕಾಗಿ ತಯಾರಿಸುವ ಅಗತ್ಯವನ್ನು ಎತ್ತಿಹೇಳಿರಿ. ಪ್ಯಾರಗ್ರಾಫ್ 3 ಯಾ 5 ರಿಂದ ಮಾಹಿತಿಯನ್ನು ಉಪಯೋಗಿಸುತ್ತಾ, ಹಿಂದೆ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ತೆಗೆದುಕೊಂಡಿದ್ದ ವ್ಯಕ್ತಿಯೊಂದಿಗೆ ಪುನಃ ಸಂದರ್ಶನ ಮಾಡುವುದನ್ನು ಒಬ್ಬ ಅರ್ಹ ಪ್ರಚಾರಕನು ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿರಿ.
15 ನಿ: “ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು.” ಪ್ರಶ್ನೋತ್ತರಗಳು. ಪ್ಯಾರಗ್ರಾಫ್ 4ರ ಅನಂತರ, ಕೇವಲ ಬೈಬಲನ್ನು ಉಪಯೋಗಿಸಲಾದ ಆದರೆ ಸೂಚಿಸಿದಂತೆ ಸದಾ ಜೀವಿಸಬಲ್ಲಿರಿ ಯಾ ರೀಸನಿಂಗ್ ಪುಸ್ತಕದ ಭಾಗಗಳ ಮೇಲೆ ಆಧಾರಿತವಾದ ಒಂದು ಪುನಃ ಭೇಟಿಯ ಸ್ವಾರಸ್ಯವಾದ ಪ್ರತ್ಯಕ್ಷಾಭಿನಯವನ್ನು ಪರಿಚಯ ಪಡಿಸಿರಿ.
ಸಂಗೀತ 84 (30) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸಪ್ಟಂಬರ 27ರ ವಾರ
ಸಂಗೀತ 109 (18)
10 ನಿ: ಸ್ಥಳಿಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆಗಳು.
20 ನಿ: ಸತ್ತಂಥ ನಮ್ಮ ಪ್ರಿಯರು ಎಲ್ಲಿದ್ದಾರೆ? ಕೌಟುಂಬಿಕ ಚರ್ಚೆ. ರೀಸನಿಂಗ್ ಪುಸ್ತಕದ 98-100ರ ಪುಟಗಳಿಂದ ಆರಿಸಲಾದ ವಿಷಯವನ್ನು ಉಪಯೋಗಿಸುತ್ತಾ, ಕುಟುಂಬದ ನಿಕಟವಾದ ಮಿತ್ರನೊಬ್ಬನ ಮರಣದಲ್ಲಿ ಆದ ನಷ್ಟವನ್ನು ಕುಟುಂಬದ ತಲೆಯು ಪರಿಗಣಿಸುತ್ತಾನೆ. ಅವನ ಮಕ್ಕಳು ಬೈಬಲಿನ ದೃಷ್ಟಿಕೋನವನ್ನು ತಿಳಿದುಕೊಳ್ಳುವಂತೆ ಸಹಾಯ ಮಾಡುವುದರ ಮೇಲೆ ಅವನು ಕೇಂದ್ರೀಕರಿಸುತ್ತಾನೆ. ಮರಣವು ಏನನ್ನು ಅರ್ಥೈಸುತ್ತದೆ ಎಂಬುದನ್ನು ಅವರು ಗ್ರಹಿಸಿದ್ದಾರೊ ಮತ್ತು ಅವರ ವಯಸ್ಸಿನ ಅನುಸಾರ ಸ್ಪಷ್ಟವಾಗಿಗಿ ತಮ್ಮನ್ನು ಅಭಿವ್ಯಕ್ತಪಡಿಸಿಕೊಳ್ಳಲು ಶಕ್ತರಾಗಿದ್ದಾರೊ ಎಂದು ಖಚಿತಮಾಡಿಕೊಳ್ಳಲು ಪ್ರಶ್ನೆಗಳನ್ನು ಅವನು ಕೇಳುತ್ತಾನೆ. ಇತರರನ್ನು ಸಂತೈಸಲು ಅವರು ರೀಸನಿಂಗ್ ಪುಸ್ತಕವನ್ನು ಹೇಗೆ ಉಪಯೋಗಿಸಬಹುದೆಂದೂ ಕೂಡ ಅವನು ತೋರಿಸುತ್ತಾನೆ.
15 ನಿ: ಅಕ್ಟೋಬರದಲ್ಲಿ ಪತ್ರಿಕೆಗಳನ್ನು ನೀಡಿರಿ. ಪ್ರಚಲಿತ ಕಾವಲಿನಬುರುಜು ಪತ್ರಿಕೆಯನ್ನು ಪ್ರದರ್ಶಿಸುವ ಒಂದು, ಪ್ರಚಲಿತ ಎಚ್ಚರ! ವನ್ನು ಪ್ರದರ್ಶಿಸುವ ಒಂದು, ಮತ್ತು ಮನೆಯವನು ಕಾರ್ಯಮಗ್ನನಾಗಿದ್ದು ಒಂದು ಕಿರುಹೊತ್ತಗೆಯನ್ನು ಸ್ವೀಕರಿಸುವ ಒಂದು—ಹೀಗೆ ಮೂರು ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ. ಪ್ರತಿ ಪ್ರತ್ಯಕ್ಷಾಭಿನಯದ ನಂತರ, ನಿರೂಪಣೆಯು ಯಾಕೆ ಪರಿಣಾಮಕಾರಿಯಾಗಿತ್ತು ಎಂದು ಸಭಿಕರೊಂದಿಗೆ ವಿಶ್ಲೇಷಿಸಿರಿ. ಸೂಕ್ತವಾದ ಆಸಕ್ತಿಯು ತೋರಿಸಲ್ಪಟ್ಟಾಗ, ಪತ್ರಿಕೆಗಳಿಗೆ ಚಂದಾಗಳನ್ನು ಯಾ ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್ ಪುಸ್ತಕವನ್ನು ನೀಡಬಹುದು.
ಸಂಗೀತ 21 (1) ಮತ್ತು ಸಮಾಪ್ತಿಯ ಪ್ರಾರ್ಥನೆ.