ಜನವರಿಗಾಗಿ ಸೇವಾ ಕೂಟಗಳು
ಜನವರಿ 1ರ ವಾರ
ಸಂಗೀತ 133 (68)
7 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
13 ನಿ: “ಸೂಕ್ಷ್ಮ ಪರಿಜ್ಞಾನದೊಂದಿಗೆ ಸಾರಿರಿ.” ಮುಖ್ಯಾಂಶಗಳನ್ನು ಚರ್ಚಿಸಿರಿ, ಮತ್ತು ಒಂದು ಅಥವಾ ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ. ಯಾವ ಹಳೆಯ ಪುಸ್ತಕಗಳು ಸದ್ಯ ಸ್ಟಾಕ್‌ನಲ್ಲಿವೆ ಎಂಬುದನ್ನು ಸಭೆಗೆ ತಿಳಿಸಿರಿ.
10 ನಿ: “ಕಂಪ್ಯೂಟರ್ ತಂತ್ರಜ್ಞಾನದ ಒಂದು ಸಮತೂಕದ ನೋಟವನ್ನು ಕಾಪಾಡಿಕೊಳ್ಳುವುದು.” ಪುರವಣಿ ಲೇಖನ. ಪ್ರಶ್ನೋತ್ತರಗಳು. ಸ್ಥಳಿಕವಾಗಿ ಅನ್ವಯಿಸಿರಿ. ಒಂದು ಕಂಪ್ಯೂಟರ್‌ನಲ್ಲಿ ಅಥವಾ ಬೇರೆ ರೀತಿಯಲ್ಲಿ, ನಮ್ಮ ಭಾಷಣಗಳು ಮತ್ತು ಕೂಟದ ಭಾಗಗಳನ್ನು ಇತರರು ತಯಾರಿಸುವಂತೆ ಮಾಡುವುದರ ವಿರುದ್ಧವಾದ ಎಚ್ಚರಿಕೆಯ ಕಡೆಗೆ ಗಮನವನ್ನು ಸೆಳೆಯಿರಿ. ನಿಮ್ಮ ಸಭೆಯಲ್ಲಿನ ಸಭಾ ದಾಖಲೆಗಳು ಪೇಪರ್‌ಗಳಲ್ಲಿ ಸಂಗ್ರಹಿಸಲ್ಪಟ್ಟಿರುವುದಾದರೂ, ಅವುಗಳನ್ನು ಗುಟ್ಟಾಗಿಡುವ ಅಗತ್ಯವನ್ನು ಒತ್ತಿಹೇಳಿರಿ. ಸಭೆಯ ಕೆಲಸಕ್ಕಾಗಿ ಸೊಸೈಟಿಯಿಂದ ಒದಗಿಸಲ್ಪಟ್ಟಿರುವ ಫಾರ್ಮ್‌ಗಳನ್ನು ಉಪಯೋಗಿಸುವ ಸೂಚನೆಯನ್ನು ಒತ್ತಿಹೇಳಿರಿ, ಮತ್ತು ಸೊಸೈಟಿಯು ಮುದ್ರಿತ ಫಾರ್ಮ್‌ಗಳನ್ನು ಒದಗಿಸಿರುವಂತಹ ವಿದ್ಯಮಾನಗಳಲ್ಲಿ, ವೈಯಕ್ತಿಕವಾಗಿ ಮಾಡಿದ ಫಾರ್ಮ್‌ಗಳನ್ನು ಉಪಯೋಗಿಸುವುದು ಅಯುಕ್ತವಾಗಿದೆ ಎಂದು ಹೇಳಿರಿ.
15 ನಿ: ಸ್ಥಳಿಕ ಅಗತ್ಯಗಳು. (ಅಥವಾ 1995, ಅಕ್ಟೋಬರ್ 1ರ ಕಾವಲಿನಬುರುಜು ಪತ್ರಿಕೆಯ 25-8ನೆಯ ಪುಟಗಳಲ್ಲಿರುವ “ನಿಮ್ಮ ತುರ್ತುಪ್ರಜ್ಞೆಯನ್ನು ಕಾಪಾಡಿರಿ” ಎಂಬ ವಿಷಯದ ಮೇಲಾಧಾರಿತವಾದ ಒಂದು ಭಾಷಣ.)
ಸಂಗೀತ 28 (5) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 8ರ ವಾರ
ಸಂಗೀತ 138 (71)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ಸುವಾರ್ತೆಯು ಸಾರಲ್ಪಡುವಂತೆ ಮಾಡಲಿಕ್ಕಾಗಿರುವ ಸ್ಥಳಿಕ ಮತ್ತು ಲೋಕವ್ಯಾಪಕ ಕಾರ್ಯಕ್ಕೆ ಕೊಡಲ್ಪಡುವ ಆರ್ಥಿಕ ಸಹಾಯಕ್ಕಾಗಿ ಸೂಕ್ತವಾದ ಪ್ರಶಂಸೆಯನ್ನು ಕೊಡಿರಿ.
15 ನಿ: ಅಡ್‌ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡ್‌ನ ಸಂರಕ್ಷಕ ಮೌಲ್ಯ. ಪ್ರತಿಯೊಬ್ಬರೂ ಅಡ್‌ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡನ್ನು ಸರಿಯಾಗಿ ಭರ್ತಿಮಾಡಿ, ಅದನ್ನು ಎಲ್ಲಾ ಸಮಯಗಳಲ್ಲಿ ಕೊಂಡೊಯ್ಯುವುದರ ಪ್ರಮುಖತೆಯನ್ನು ಮತ್ತು ಮಕ್ಕಳು ತಮ್ಮೊಂದಿಗೆ ಯಾವಾಗಲೂ ಐಡೆಂಟಿಟಿ ಕಾರ್ಡನ್ನು ಹೊಂದಿರುವ ಅಗತ್ಯವನ್ನು ಹಿರಿಯನು ಸಭೆಯೊಂದಿಗೆ ಚರ್ಚಿಸುತ್ತಾನೆ. ಕಾರ್ಡಿನ ಶಿರೋನಾಮವು ಸೂಚಿಸುವಂತೆ, ವೈದ್ಯಕೀಯ ಆರೈಕೆಯ ಸಂಬಂಧದಲ್ಲಿ ಏನು ಅಪೇಕ್ಷಿಸಲ್ಪಡುತ್ತದೆ (ಅಥವಾ ಏನು ಅಪೇಕ್ಷಿಸಲ್ಪಡುವುದಿಲ್ಲ) ಎಂಬುದರ ಕುರಿತಾಗಿ ಅಡ್‌ವಾನ್ಸ್ (ಮುಂಚಿತವಾದ) ನೋಟಿಸನ್ನು ಇದು ಒದಗಿಸುತ್ತದೆ. ಇದನ್ನು ಪ್ರತಿ ವರ್ಷ ಏಕೆ ಮಾಡಲಾಗುತ್ತದೆ? ಗತಕಾಲದ್ದೆಂದು ಅಥವಾ ಇನ್ನುಮುಂದೆ ಒಬ್ಬನ ನಿಶ್ಚಿತಾಭಿಪ್ರಾಯದ ಒಂದು ಪ್ರತಿಫಲನವಲ್ಲವೆಂದು ಪರಿಗಣಿಸಲ್ಪಡಬಹುದಾದ ಒಂದು ಕಾರ್ಡಿಗಿಂತಲೂ, ಪ್ರಚಲಿತ ಕಾರ್ಡೊಂದು ಹೆಚ್ಚು ಪ್ರೇರಕವಾಗಿದೆ. ನೀವು ಸ್ವತಃ ನಿಮ್ಮ ಪರವಾಗಿ ಮಾತಾಡಲು ಅಶಕ್ತರಾಗಿರುವುದಾದರೆ, ಈ ದಾಖಲೆ ಪತ್ರವು ನಿಮ್ಮ ಪರವಾಗಿ ಮಾತಾಡುತ್ತದೆ. ಈ ರಾತ್ರಿ ಕಾರ್ಡುಗಳು ಕೊಡಲ್ಪಡುವವು. ಮನೆಯಲ್ಲಿ ಅವುಗಳನ್ನು ಜಾಗರೂಕತೆಯಿಂದ ಭರ್ತಿಮಾಡಬೇಕು, ಆದರೆ ಅವುಗಳಿಗೆ ಸಹಿ ಮಾಡಬಾರದು. ಕಳೆದ ಎರಡು ವರ್ಷಗಳಿಂದ ಮಾಡಲ್ಪಟ್ಟಿರುವಂತೆ, ಸಭಾ ಪುಸ್ತಕ ಅಭ್ಯಾಸದ ಸ್ಥಳಗಳಲ್ಲಿ, ಪುಸ್ತಕ ಅಭ್ಯಾಸ ನಿರ್ವಾಹಕರ ಮೇಲ್ವಿಚಾರಣೆಯ ಕೆಳಗೆ, ಸಹಿ ಮಾಡುವ ಮತ್ತು ಸಾಕ್ಷಿ ಸಹಿ ಮಾಡುವ ಕಾರ್ಯವನ್ನು ಮಾಡಲಾಗುವುದು. ಸಾಕ್ಷಿಗಳೋಪಾದಿ ಸಹಿ ಮಾಡುವವರು, ಕಾರ್ಡ್ ಪಡೆದಿರುವವನು ಆ ದಾಖಲೆ ಪತ್ರಕ್ಕೆ ಸಹಿ ಮಾಡುವುದನ್ನು ವಾಸ್ತವವಾಗಿ ನೋಡಬೇಕು. ಜನವರಿ 15ರ ವಾರದಲ್ಲಿ ಪುಸ್ತಕ ಅಭ್ಯಾಸವನ್ನು ಹಿಂಬಾಲಿಸಿ ಇದನ್ನು ಮಾಡಲಾಗುವುದು. (ಈ ಕಾರ್ಯವಿಧಾನದ ಕುರಿತಾದ ವಿವರಗಳಿಗಾಗಿ ಜನವರಿ, 1994ರ ನಮ್ಮ ರಾಜ್ಯದ ಸೇವೆಯ 2ನೆಯ ಪುಟವನ್ನು ನೋಡಿರಿ. 1991, ಅಕ್ಟೋಬರ್ 15ರ ಪತ್ರವನ್ನು ಸಹ ನೋಡಿ.) ದೀಕ್ಷಾಸ್ನಾನ ಪಡೆದುಕೊಂಡ ಎಲ್ಲ ಪ್ರಚಾರಕರು, ಅಡ್‌ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡನ್ನು ಭರ್ತಿಮಾಡಬಹುದು. ಈ ಕಾರ್ಡಿನ ಭಾಷಾ ಶೈಲಿಯನ್ನು, ತಮ್ಮ ಸ್ವಂತ ಸನ್ನಿವೇಶಗಳು ಮತ್ತು ನಿಶ್ಚಿತಾಭಿಪ್ರಾಯಗಳಿಗೆ ಅನುಸರಿಸಿಕೊಳ್ಳುವ ಮೂಲಕ, ಅಸ್ನಾನಿತ ಪ್ರಚಾರಕರು ತಮ್ಮ ಸ್ವಂತ ಡೈರೆಕ್ಟಿವ್ ಅನ್ನು ಬರೆದುಕೊಳ್ಳಲು ಬಯಸಬಹುದು. ಐಡೆಂಟಿಟಿ ಕಾರ್ಡನ್ನು ಭರ್ತಿ ಮಾಡಲು, ತಮ್ಮ ಅಸ್ನಾನಿತ ಮಕ್ಕಳಿಗೆ ಹೆತ್ತವರು ಸಹಾಯ ಮಾಡಬಲ್ಲರು.
20 ನಿ: “ಕೇವಲ ಕೇಳುವವರಲ್ಲ—ನಡೆಯುವವರಾಗಿರ್ರಿ.” ಪ್ರಶ್ನೋತ್ತರಗಳು. ಸಮಯವು ಅನುಮತಿಸಿದಂತೆ, ಒಳನೋಟ (ಇಂಗ್ಲಿಷ್) ಪುಸ್ತಕದ, 2ನೆಯ ಸಂಪುಟದ, 521ನೆಯ ಪುಟದಲ್ಲಿರುವ 1 ಮತ್ತು 2ನೆಯ ಪ್ಯಾರಗ್ರಾಫ್‌ಗಳ ಮೇಲಾಧಾರಿತವಾದ, ವಿಧೇಯತೆಯ ಪ್ರಮುಖತೆಯನ್ನು ಚರ್ಚಿಸಿರಿ.
ಸಂಗೀತ 70 (39) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 15ರ ವಾರ
ಸಂಗೀತ 77 (41)
12 ನಿ: ಸ್ಥಳಿಕ ತಿಳಿಸುವಿಕೆಗಳು. ಮನೆಯಲ್ಲಿಲ್ಲದವರ ಕುರಿತಾದ ಅಧಿಕಗೊಳ್ಳುತ್ತಿರುವ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ. ಹಾದುಹೋಗುತ್ತಿರಬಹುದಾದ, ಪಕ್ಕದಾರಿಗಳಲ್ಲಿ ನಿಂತಿರಬಹುದಾದ, ಅಥವಾ ಕಾರುಗಳಲ್ಲಿ ಕುಳಿತುಕೊಂಡಿರಬಹುದಾದ ಜನರನ್ನು ಸಮೀಪಿಸಲಿಕ್ಕಾಗಿ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ, ಸಮಯವನ್ನು ಕಾಪಾಡಿಕೊಳ್ಳುವಂತೆ ಪ್ರಚಾರಕರನ್ನು ಉತ್ತೇಜಿಸಿರಿ.
18 ನಿ: “ಕೆಲವರನ್ನು ರಕ್ಷಿಸಲಿಕ್ಕಾಗಿ ಪುನರ್ಭೇಟಿಗಳನ್ನು ಮಾಡಿರಿ.” ಸೂಚಿಸಲ್ಪಟ್ಟ ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದಲ್ಲಿ ಅಭ್ಯಾಸಗಳನ್ನು ಆರಂಭಿಸುವುದರ ಗುರಿಯನ್ನು ಶಿಫಾರಸ್ಸು ಮಾಡಿರಿ.
15 ನಿ: “ನಮ್ಮ ಪತ್ರಿಕೆಗಳ ಅತ್ಯುತ್ತಮ ಉಪಯೋಗವನ್ನು ಮಾಡಿರಿ.” ಸೇವಾ ಮೇಲ್ವಿಚಾರಕನಿಂದ, ಪುರವಣಿಯ 1ರಿಂದ 13 ಪ್ಯಾರಗ್ರಾಫ್‌ಗಳ ಮೇಲಾಧಾರಿತವಾದ ಸಚೇತನದಾಯಕ ಭಾಷಣ.
ಸಂಗೀತ 156 (118) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 22ರ ವಾರ
ಸಂಗೀತ 200 (108)
10 ನಿ: ಸ್ಥಳಿಕ ತಿಳಿಸುವಿಕೆಗಳು.
18 ನಿ: “1996ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆಯಿಂದ ಪ್ರಯೋಜನ ಪಡೆಯಿರಿ—ಭಾಗ 1.” ಶಾಲಾ ಮೇಲ್ವಿಚಾರಕನಿಂದ ಭಾಷಣ. ಅಕ್ಟೋಬರ್ 1995ರ ನಮ್ಮ ರಾಜ್ಯದ ಸೇವೆಯಲ್ಲಿ ಕಂಡುಬಂದ ದೇವಪ್ರಭುತ್ವ ಶುಶ್ರೂಷಾ ಶಾಲಾ ಸೂಚನೆಗಳಲ್ಲಿ, ವಿದ್ಯಾರ್ಥಿ ನೇಮಕಗಳಿಗಾಗಿ ಒದಗಿಸಲ್ಪಟ್ಟಿರುವ ಮಾರ್ಗದರ್ಶನೆಗಳನ್ನು ಪುನರ್ವಿಮರ್ಶಿಸಿರಿ.
17 ನಿ: “ನಮ್ಮ ಪತ್ರಿಕೆಗಳ ಅತ್ಯುತ್ತಮ ಉಪಯೋಗವನ್ನು ಮಾಡಿರಿ.” ಪುರವಣಿಯ 14ರಿಂದ 17ನೆಯ ಪ್ಯಾರಗ್ರಾಫ್‌ಗಳನ್ನು ಸಭಿಕರೊಂದಿಗೆ ಚರ್ಚಿಸಿರಿ. ಎಲ್ಲಾ ಸಮಯಗಳಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಹಂಚಲಿಕ್ಕಾಗಿ ವಿಶೇಷ ಪ್ರಯತ್ನ ಮಾಡುವುದನ್ನು ಒತ್ತಿಹೇಳಿರಿ. ಈ ಪತ್ರಿಕೆಗಳು ವಿವಿಧ ಭಾಷೆಗಳಲ್ಲಿ ಪ್ರಕಾಶಿಸಲ್ಪಡುವುದರಿಂದ, ನಾವು ಅನೇಕ ಭಾಷೆಗಳಲ್ಲಿ—ಕಡಿಮೆಪಕ್ಷ ನಮ್ಮ ಟೆರಿಟೊರಿಯಲ್ಲಿ ನಾವು ಕ್ರಮವಾಗಿ ಸಂಧಿಸುವ ಎಲ್ಲಾ ಭಾಷೆಗಳಲ್ಲಿ—ಪತ್ರಿಕೆಗಳನ್ನು ನಮ್ಮೊಂದಿಗೆ ಕೊಂಡೊಯ್ಯುತ್ತೇವೆ. ನಮ್ಮ ಪತ್ರಿಕೆಗಳು ಸಂಕ್ಷಿಪ್ತವಾದ, ಹೊಸತಾದ ಸಮಾಚಾರಗಳನ್ನು ಒದಗಿಸುವುದರಿಂದ, ಅವುಗಳನ್ನು ವಿತರಿಸುವುದು, ಆಸಕ್ತಿಯನ್ನು ಬೆಳೆಸುವ ಅತ್ಯಂತ ಪರಿಣಾಮಕಾರಿ ಸಾಧನವಾಗಿರಸಾಧ್ಯವಿದೆ. ಆಸಕ್ತಿಯು ಕಂಡುಕೊಳ್ಳಲ್ಪಡುವಲ್ಲಿ, ಅದನ್ನು ಗುರುತಿಸಿಕೊಳ್ಳಲು ಮತ್ತು ಪುನಃ ಭೇಟಿ ಮಾಡಲು ನಿಶ್ಚಿತರಾಗಿರ್ರಿ. ಪತ್ರಿಕಾ ಮಾರ್ಗಗಳನ್ನು ವಿಕಸಿಸಲು ಪ್ರಯತ್ನಿಸಿರಿ. 14ನೆಯ ಪ್ಯಾರಗ್ರಾಫ್‌ನಲ್ಲಿ ವರ್ಣಿಸಿರುವಂತೆ, ಒಂದು ಕುಟುಂಬ ಗುಂಪು ಪ್ರ್ಯಾಕ್ಟೀಸ್ ಸೆಷನ್ ಅನ್ನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ. ಹಾಗೂ, ಕೊಡಿಕೆಗಳನ್ನು ಅಧಿಕಗೊಳಿಸಲಿಕ್ಕಾಗಿರುವ ಕೆಲವು ಪ್ರಾಯೋಗಿಕ ಸಲಹೆಗಳನ್ನು ತಿಳಿಸಿರಿ.
ಸಂಗೀತ 92 (51) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 29ರ ವಾರ
ಸಂಗೀತ 31 (66)
7 ನಿ: ಸ್ಥಳಿಕ ತಿಳಿಸುವಿಕೆಗಳು.
18 ನಿ: “ಧೈರ್ಯದಿಂದ ಮಾತಾಡಿರಿ.” ಭಾಷಣ ಮತ್ತು ಚರ್ಚೆಯು ಹಿರಿಯನೊಬ್ಬನಿಂದ ನಿರ್ವಹಿಸಲ್ಪಡಬೇಕು. ಸ್ಥಳಿಕ ಆದಿತ್ಯವಾರದ ಸೇವಾ ಏರ್ಪಾಡುಗಳನ್ನು ಪುನರ್ವಿಮರ್ಶಿಸಿರಿ. ಒಳ್ಳೆಯ ಬೆಂಬಲಕ್ಕಾಗಿ ಪ್ರಶಂಸೆ ನೀಡಿರಿ, ಮತ್ತು ಅಭಿವೃದ್ಧಿಯ ಅಗತ್ಯವಿರುವಲ್ಲಿ ಸಲಹೆಗಳನ್ನು ಕೊಡಿರಿ.
20 ನಿ: ಫೆಬ್ರವರಿ ತಿಂಗಳಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀಡಿರಿ. ಈ ಪುಸ್ತಕವು, ಪ್ರಾಮಾಣಿಕ ಹೃದಯದ ಜನರಿಗೆ ಮೂಲಭೂತ ಬೈಬಲ್ ಸತ್ಯಗಳನ್ನು ಕಲಿಸುವುದರಲ್ಲಿ ಒಂದು ಪ್ರಬಲ ಸಾಧನವಾಗಿದೆ ಎಂಬುದನ್ನು ಸಭಿಕರಿಗೆ ಪುನಃ ಜ್ಞಾಪಿಸಿರಿ. ಫೆಬ್ರವರಿ ಮತ್ತು ಸೆಪ್ಟೆಂಬರ್ 1995ರ ನಮ್ಮ ರಾಜ್ಯದ ಸೇವೆಯ ಎರಡೂ ಸಂಚಿಕೆಗಳಲ್ಲಿ, ಈ ಪುಸ್ತಕವನ್ನು ಕೊಡುವುದರ ಕುರಿತಾದ, 4ನೆಯ ಪುಟದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಪುನರ್ವಿಮರ್ಶಿಸಿರಿ. ಕುಟುಂಬ ಪುಸ್ತಕವು ಬಹಳ ಪ್ರಾಯೋಗಿಕವಾದ ಒಂದು ಪ್ರಕಾಶನವಾಗಿದ್ದು, ನೀಡಲು ಸುಲಭವಾಗಿರುವುದರಿಂದ, ಇದರ ಪ್ರತಿಗಳನ್ನು ಎಲ್ಲ ಸಮಯಗಳಲ್ಲಿ ತಮ್ಮೊಂದಿಗೆ ಕೊಂಡೊಯ್ಯುವಂತೆ ಸಹ ಪ್ರಚಾರಕರನ್ನು ಉತ್ತೇಜಿಸಿರಿ. ಸದಾ ಜೀವಿಸಬಲ್ಲಿರಿ ಪುಸ್ತಕದ ಒಂದು ನಿರೂಪಣೆಯನ್ನು ಮತ್ತು ಕುಟುಂಬ ಪುಸ್ತಕದ ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ. ಈ ವಾರಾಂತ್ಯದಲ್ಲಿ ಸೇವೆಯಲ್ಲಿ ಉಪಯೋಗಿಸಲಿಕ್ಕಾಗಿ, ಸದಾ ಜೀವಿಸಬಲ್ಲಿರಿ ಮತ್ತು ಕುಟುಂಬ ಪುಸ್ತಕಗಳ ಪ್ರತಿಗಳನ್ನು ಪಡೆದುಕೊಳ್ಳುವಂತೆ ಎಲ್ಲರನ್ನು ಜ್ಞಾಪಿಸಿರಿ.
ಸಂಗೀತ 143 (76) ಮತ್ತು ಸಮಾಪ್ತಿಯ ಪ್ರಾರ್ಥನೆ.