ನೀವು ಸಂಧ್ಯಾ ಸಾಕ್ಷಿಕಾರ್ಯವನ್ನು ಪ್ರಯತ್ನಿಸಿ ನೋಡಿದ್ದೀರೊ?
1 ನಮ್ಮ ಕೆಲಸದಲ್ಲಿ ಉತ್ಪನ್ನಕಾರಕರಾಗಿರುವುದರಲ್ಲಿ ನಾವೆಲ್ಲರೂ ಸಂತೋಷವನ್ನು ಕಂಡುಕೊಳ್ಳುತ್ತೇವೆ. ಇನ್ನೊಂದು ಕಡೆಯಲ್ಲಿ, ನಾವು ಸಕಾರಾತ್ಮಕ ಫಲಿತಾಂಶಗಳನ್ನು ನೋಡಲು ಅಸಮರ್ಥರಾಗಿರುವಾಗ, ಕೆಲಸವು ಜುಗುಪ್ಸೆಯುಳ್ಳದ್ದೂ ಅತೃಪ್ತಿದಾಯಕವೂ ಆಗಿ ಪರಿಣಮಿಸಸಾಧ್ಯವಿದೆ. ಅರ್ಥವತ್ತಾದ ಶ್ರಮವು ವೈಯಕ್ತಿಕವಾಗಿ ಪ್ರತಿಫಲದಾಯಕವಾಗಿದ್ದು, ಅದೊಂದು ಆಶೀರ್ವಾದವಾಗಿರುತ್ತದೆ. (ಹೋಲಿಸಿ ಪ್ರಸಂಗಿ 3:10-13.) ಈ ಮೂಲಸೂತ್ರವನ್ನು ನಾವು ನಮ್ಮ ಸಾರುವ ಕೆಲಸಕ್ಕೆ ಅನ್ವಯಿಸಬಲ್ಲೆವು. ನಾವು ಬಾಗಿಲಿಂದ ಬಾಗಿಲಿಗೆ ಹೋಗಿ ಬೈಬಲಿನ ವಿಷಯದಲ್ಲಿ ಜನರೊಂದಿಗೆ ಮಾತಾಡಶಕ್ತರಾಗುವಾಗ, ಆತ್ಮಿಕವಾಗಿ ಚೈತನ್ಯಗೊಳ್ಳುತ್ತ ಮನೆಗೆ ಹಿಂದಿರುಗುತ್ತೇವೆಂಬುದು ನಮಗೆ ಅನುಭವದಿಂದ ತಿಳಿದದೆ. ನಾವು ನಿಜವಾಗಿಯೂ ಏನನ್ನೊ ಪೂರೈಸಿರುವ ಅನಿಸಿಕೆ ನಮಗಾಗುತ್ತದೆ.
2 ಕೆಲವು ಪ್ರದೇಶಗಳಲ್ಲಿ ದಿನದ ಕೆಲವು ತಾಸುಗಳಲ್ಲಿ ಜನರನ್ನು ಮನೆಯಲ್ಲಿ ಕಂಡುಕೊಳ್ಳುವುದು ಬಹಳ ಕಷ್ಟಕರವಾಗಿ ಪರಿಣಮಿಸಿದೆ. ದಿನದ ಆದಿಭಾಗದಲ್ಲಿ ನಾವು ಭೇಟಿಕೊಡುವಾಗ, ಕೆಲವು ಸ್ಥಳಗಳಲ್ಲಿ 50ಕ್ಕೂ ಹೆಚ್ಚು ಪ್ರತಿಶತ ಜನರು ಮನೆಯಲ್ಲಿರುವುದಿಲ್ಲವೆಂದು ವರದಿಗಳು ಸೂಚಿಸುತ್ತವೆ. ಅನೇಕ ಸಭೆಗಳು ಈ ಸಮಸ್ಯೆಯನ್ನು ಸಂಧ್ಯಾ ಸಾಕ್ಷಿಕಾರ್ಯವನ್ನು ಏರ್ಪಡಿಸುವ ಮೂಲಕ ನಿಭಾಯಿಸಿವೆ ಮತ್ತು ಉತ್ತಮ ಸಾಫಲ್ಯವನ್ನು ಪಡೆದಿವೆ. ತಾವು ದಿನದಲ್ಲಿ ಹೆಚ್ಚು ತಡವಾಗಿ ಭೇಟಿಕೊಡುವಾಗ, ಹೆಚ್ಚು ಜನರು ಮನೆಯಲ್ಲಿರುತ್ತಾರೆಂದೂ ಮತ್ತು, ಸಾಮಾನ್ಯವಾಗಿ ಜನರು ಹೆಚ್ಚು ಆರಾಮವಾಗಿದ್ದು, ರಾಜ್ಯ ಸಂದೇಶಕ್ಕೆ ಕಿವಿಗೊಡಲು ಹೆಚ್ಚು ಪ್ರವೃತ್ತಿಯುಳ್ಳವರಾಗಿರುತ್ತಾರೆಂದೂ ಪ್ರಚಾರಕರು ವರದಿಸುತ್ತಾರೆ. ನಿಮ್ಮ ಟೆರಿಟೊರಿಯಲ್ಲಿ ನೀವು ಸಂಧ್ಯಾ ಸಾಕ್ಷಿಕಾರ್ಯವನ್ನು ಪ್ರಯತ್ನಿಸಿ ನೋಡಿದ್ದೀರೊ?—ಹೋಲಿಸಿ ಮಾರ್ಕ 1:32-34.
3 ಹಿರಿಯರು ಸಂಧ್ಯಾ ಸಾಕ್ಷಿಕಾರ್ಯವನ್ನು ಸಂಘಟಿಸುತ್ತಾರೆ: ಕೆಲವು ಪ್ರದೇಶಗಳಲ್ಲಿ, ಅಪರಾಹ್ಣದಲ್ಲಿ ತಡವಾಗಿ ಅಥವಾ ಸಾಯಂಕಾಲದ ಆದಿಭಾಗದಲ್ಲಿ ಕ್ಷೇತ್ರ ಸೇವೆಗಾಗಿ ನಡೆಸಿರುವ ಕೂಟಗಳು ಒಳ್ಳೆಯ ಬೆಂಬಲವನ್ನು ಪಡೆದಿವೆ. ಅಪರಾಹ್ಣದಲ್ಲಿ ಶಾಲೆಬಿಟ್ಟು ಬರುವ ಯುವ ಪ್ರಚಾರಕರಿಗೆ ಮತ್ತು ದಿನದಲ್ಲಿ ಹೆಚ್ಚು ತಡವಾಗಿ ಕೆಲಸ ಮುಗಿಸುವ ಪ್ರಾಪ್ತ ವಯಸ್ಕರಿಗೆ
ಪರಿಗಣನೆಯನ್ನು ತೋರಿಸಸಾಧ್ಯವಿದೆ. ವಾರಾಂತ್ಯಗಳಲ್ಲಿ ಕ್ಷೇತ್ರಸೇವೆಗೆ ಹೋಗಲು ಅಸಮರ್ಥರಾಗಿರುವ ಕೆಲವು ಪ್ರಚಾರಕರು, ವಾರದ ದಿನಗಳಲ್ಲಿನ ಸಂಧ್ಯಾ ಸಾಕ್ಷಿಕಾರ್ಯವು, ತಾವು ಸಾರುವ ಕಾರ್ಯದಲ್ಲಿ ಕ್ರಮವಾಗಿ ಭಾಗವಹಿಸಲು ಇರುವ ಒಂದು ಪ್ರಾಯೋಗಿಕ ವಿಧವಾಗಿದೆಯೆಂದು ಕಂಡುಕೊಂಡಿದ್ದಾರೆ.
4 ಸಂಧ್ಯಾ ಸಾಕ್ಷಿಕಾರ್ಯದ ಸಮಯದಲ್ಲಿ ನೀವು ಒಳಗೂಡಸಾಧ್ಯವಿರುವ ವಿವಿಧ ಚಟುವಟಿಕೆಗಳಿವೆ. ನೀವು ಪತ್ರಿಕೆಗಳೊಂದಿಗೆ ಅಥವಾ ತಿಂಗಳ ಸಾಹಿತ್ಯ ನೀಡುವಿಕೆಯೊಂದಿಗೆ ಮನೆಯಿಂದ ಮನೆಗೆ ಸಾಕ್ಷಿನೀಡಬಲ್ಲಿರಿ. ಪ್ರಚಾರಕರು ದಿನದ ಆದಿಭಾಗದಲ್ಲಿ ಅಥವಾ ವಾರಾಂತ್ಯಗಳಲ್ಲಿ ಭೇಟಿಕೊಟ್ಟಾಗ ಮನೆಯಲ್ಲಿ ಇಲ್ಲದಿದ್ದ ಜನರಿಗೆ ಭೇಟಿಕೊಡಲು ಸಾಯಂಕಾಲವು ಉತ್ತಮ ಸಮಯವಾಗಿದೆ. ಕೆಲಸದಿಂದ ಮನೆಗೆ ಬರುತ್ತಿರುವ ಜನರನ್ನು ಸಂಪರ್ಕಿಸುವ ಅವಕಾಶವನ್ನು ಕೊಡುವ ರಸ್ತೆಬದಿಯ ಸಾಕ್ಷಿಕಾರ್ಯಕ್ಕೂ ಉತ್ತಮವಾದ ಟೆರಿಟೊರಿಯಿರಬಹುದು. ಆಸಕ್ತಿ ತೋರಿಸಿರುವವರಿಗೆ ಪುನರ್ಭೇಟಿ ಮಾಡಲು ಸಾಯಂಕಾಲವು ಅತ್ಯುತ್ತಮ ಸಮಯವೆಂದು ಅನೇಕರು ಕಂಡುಕೊಳ್ಳುತ್ತಾರೆ.
5 ಜಾಣರೂ ವಿವೇಚನೆಯುಳ್ಳವರೂ ಆಗಿರಿ: ಮುಂಗತ್ತಲೆಯಲ್ಲಿ ಅಥವಾ ಕತ್ತಲೆ ಕವಿದ ನಂತರ ಹೊರಗೆ ಹೋಗುವುದು ಕೆಲವು ಪ್ರದೇಶಗಳಲ್ಲಿ ಅಪಾಯಕರವಾಗಿರಬಲ್ಲದು. ಒಳ್ಳೆಯ ಬೆಳಕಿರುವ ಬೀದಿಗಳಲ್ಲಿ, ಜೋಡಿಗಳಾಗಿ ಅಥವಾ ಗುಂಪುಗಳಾಗಿ ಪ್ರಯಾಣಿಸುವುದು ಮತ್ತು ನೀವು ಸುರಕ್ಷಿತರೆಂಬ ತುಸು ಆಶ್ವಾಸನೆಯಿರುವಲ್ಲಿ ಮಾತ್ರ ಮನೆಗಳನ್ನು ಮತ್ತು ವಾಸದ ಕೊಠಡಿಗಳನ್ನು ಭೇಟಿಮಾಡುವುದು ವಿವೇಕಪ್ರದ. ನೀವು ಬಾಗಿಲು ತಟ್ಟುವಾಗ, ನಿಮ್ಮನ್ನು ನೋಡಸಾಧ್ಯವಿರುವಲ್ಲಿ ನಿಂತು, ಸ್ಪಷ್ಟವಾಗಿ ಗುರುತಿಸಿಕೊಳ್ಳಿರಿ. ವಿವೇಚನೆಯುಳ್ಳವರಾಗಿರಿ. ನಿಮ್ಮ ಭೇಟಿಯು ಅಸಮಯದಲ್ಲಿ—ಕುಟುಂಬವು ಊಟಮಾಡುತ್ತಿರುವಂತಹ ಸಮಯದಲ್ಲಾಗಿದೆ ಎಂದು ನೀವು ಗಮನಿಸುವಾಗ, ಬೇರೊಂದು ಸಮಯದಲ್ಲಿ ಭೇಟಿಕೊಡಲು ಸಿದ್ಧರೆಂದು ಹೇಳಿರಿ. ಸಾಮಾನ್ಯವಾಗಿ ಮನೆಯವರು ರಾತ್ರಿ ನಿದ್ರೆಹೋಗಲು ಸಿದ್ಧವಾಗುತ್ತಿರಬಹುದಾದ ಸಮಯದಲ್ಲಿ, ತಡವಾದ ಭೇಟಿಗಳನ್ನು ಮಾಡುವುದಕ್ಕೆ ಬದಲಾಗಿ, ನಿಮ್ಮ ಸಾಕ್ಷಿಕಾರ್ಯವನ್ನು ಸಾಯಂಕಾಲದ ಆರಂಭದ ತಾಸುಗಳಿಗೆ ಸೀಮಿತಗೊಳಿಸುವುದು ಅತ್ಯುತ್ತಮ.
6 ಸಂಧ್ಯಾ ಸಾಕ್ಷಿಕಾರ್ಯಕ್ಕಾಗಿ ದೀರ್ಘಕಾಲದ ಬೇಸಗೆ ಸಾಯಂಕಾಲಗಳು ವಿಶೇಷವಾಗಿ ತಕ್ಕದ್ದಾಗಿವೆ. ನಾವು ದೇವರಿಗೆ “ಹಗಲಿರುಳು ಪವಿತ್ರ ಸೇವೆಯನ್ನು” ಸಲ್ಲಿಸುವ ಹಾಗೆ, ಯೆಹೋವನು ನಮ್ಮ ಪ್ರಯತ್ನಗಳನ್ನು ಖಂಡಿತವಾಗಿಯೂ ಆಶೀರ್ವದಿಸುವನು.—ಪ್ರಕ. 7:15, NW.