ಎಲ್ಲರೂ ‘ವಾಕ್ಯವನ್ನು ಹೃತ್ಪೂರ್ವವಾಗಿ ಸ್ವೀಕರಿಸ’ಬೇಕು!
1 ಲಕ್ಷಾಂತರ ಜನರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದಾರೆ. ಅವರು ನಿತ್ಯಜೀವವನ್ನು ಪಡೆದುಕೊಳ್ಳಬೇಕಾದರೆ, ಸಾ.ಶ. 33ರ ಪಂಚಾಶತ್ತಮದ ದಿನದಂದು ಪಶ್ಚಾತ್ತಾಪಪಟ್ಟು, ದೀಕ್ಷಾಸ್ನಾನಹೊಂದಿದ 3,000 ಜನರಂತೆ ‘ವಾಕ್ಯವನ್ನು ಹೃತ್ಪೂರ್ವಕವಾಗಿ ಸ್ವೀಕರಿಸ’ಬೇಕು. (ಅ. ಕೃ. 2:41, NW) ಇಂದು ಇದು ನಮ್ಮ ಮೇಲೆ ಯಾವ ಜವಾಬ್ದಾರಿಯನ್ನು ವಹಿಸುತ್ತದೆ?
2 ಯೆಹೋವನಿಗಾಗಿ ದೈವಭಕ್ತಿಯನ್ನು ಬೆಳೆಸಿಕೊಳ್ಳುವಂತೆ ನಾವು ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಬೇಕಾಗಿದೆ. (1 ತಿಮೊ. 4:7-10) ಹಾಗೆ ಮಾಡಲು, ಜೂನ್ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯ 20ನೇ ಪ್ಯಾರಗ್ರಾಫ್ ಸಲಹೆನೀಡುವುದು: “ಅಭ್ಯಾಸದ ಅವಧಿಯಾದ್ಯಂತ ಯೆಹೋವನ ಗುಣಗಳಿಗಾಗಿ ಗಣ್ಯತೆಯನ್ನು ಕಟ್ಟಲಿಕ್ಕಾಗಿರುವ ಅವಕಾಶಗಳಿಗಾಗಿ ಹುಡುಕಿರಿ. ದೇವರಿಗಾಗಿರುವ ನಿಮ್ಮ ಸ್ವಂತ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಿರಿ. ಯೆಹೋವನೊಂದಿಗೆ ಒಂದು ಹೃತ್ಪೂರ್ವಕ, ವೈಯಕ್ತಿಕ ಸಂಬಂಧವನ್ನು ವಿಕಸಿಸಿಕೊಳ್ಳುವ ವಿಧಗಳಲ್ಲಿ ಆಲೋಚಿಸುವಂತೆ ವಿದ್ಯಾರ್ಥಿಗೆ ಸಹಾಯ ಮಾಡಿರಿ.”
3 ನಾವು ಎದುರಿಸುವ ಸಮಸ್ಯೆ: ಸುಳ್ಳು ಧರ್ಮದ ಪ್ರಭಾವದಿಂದಾಗಿ ನಮ್ಮ ಜೀವಿತದಲ್ಲಿ ಯಾವುದೇ ಬದಲಾವಣೆಯನ್ನು ಕೇಳಿಕೊಳ್ಳದ, ಅಂದರೆ ಅನೇಕ ಜನರು, ಕಡಿಮೆ ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುವ ಆರಾಧನೆಯಲ್ಲಿ ತೃಪ್ತರಾಗಿದ್ದಾರೆ. (2 ತಿಮೊ. 3:5) ಸತ್ಯಾರಾಧನೆಯು, ದೇವರ ವಾಕ್ಯವನ್ನು ಕೇಳಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದನ್ನು ಅವಶ್ಯಪಡಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡುವುದೇ ನಮ್ಮ ಕೆಲಸವಾಗಿದೆ. ಅವರು ತಾವು ಕಲಿತುಕೊಳ್ಳುವಂತಹ ವಿಷಯಗಳನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳತಕ್ಕದು. (ಯಾಕೋ. 1:22-25) ಅವರ ಯಾವುದೋ ಒಂದು ವೈಯಕ್ತಿಕ ನಡತೆಯು ದೇವರಿಗೆ ಅಂಗೀಕಾರಾರ್ಹವಾಗಿಲ್ಲವಾದರೆ, ‘ತಿರುಗಿಕೊಂಡು’ ಆತನಿಗೆ ಸಂತೋಷವಾಗುವ ರೀತಿಯಲ್ಲಿ ನಡೆದುಕೊಳ್ಳುವ ತಮ್ಮ ಕರ್ತವ್ಯವನ್ನು ಅವರು ಅರಿತುಕೊಳ್ಳಬೇಕು. (ಅ. ಕೃ. 3:19) ನಿತ್ಯಜೀವವನ್ನು ಪಡೆದುಕೊಳ್ಳಲಿಕ್ಕಾಗಿ, ಅವರು ‘ಹೆಣಗಾಡಬೇಕು’ ಮತ್ತು ಸತ್ಯಕ್ಕಾಗಿ ಒಂದು ದೃಢವಾದ ನಿಲುವನ್ನು ತೆಗೆದುಕೊಳ್ಳಬೇಕು.–ಲೂಕ 13:24, 25.
4 ನೈತಿಕತೆಯ ಬಗ್ಗೆ ವಿವಿಧ ಅಂಶಗಳನ್ನು ಚರ್ಚಿಸುವಾಗ, ನಿಮ್ಮ ಬೈಬಲ್ ವಿದ್ಯಾರ್ಥಿಗೆ ಈ ವಿಷಯಗಳ ಕುರಿತು ನಿಜವಾಗಿಯೂ ಏನನಿಸುತ್ತದೆ ಮತ್ತು ಜೀವಿತದಲ್ಲಿ ಬದಲಾವಣೆಗಳನ್ನೇನಾದರೂ ಮಾಡಬೇಕಾದರೆ ಯಾವ ಕ್ರಿಯೆಯನ್ನು ಕೈಗೊಳ್ಳಬೇಕು ಎಂಬಂಥ ಪ್ರಶ್ನೆಗಳನ್ನು ಅವನಿಗೆ ಕೇಳಿರಿ. ಅವನು ಸತ್ಯವನ್ನು ಕಲಿತುಕೊಳ್ಳುತ್ತಿರುವ ಸಂಸ್ಥೆಯ ಕಡೆಗೆ ಅವನ ಧ್ಯಾನವನ್ನು ಸೆಳೆಯಿರಿ ಮತ್ತು ಸಭಾಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಅವನನ್ನು ಉತ್ತೇಜಿಸಿರಿ.–ಇಬ್ರಿ. 10:25.
5 ಕಲಿಸುವ ಸಮಯದಲ್ಲಿ, ವಿದ್ಯಾರ್ಥಿಯ ಹೃದಯವನ್ನು ತಲುಪುವುದು ನಮ್ಮ ಗುರಿಯಾಗಿರಲಿ. ಹೊಸಬರು ದೇವರ ವಾಕ್ಯವನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿ, ದೀಕ್ಷಾಸ್ನಾನ ಪಡೆದುಕೊಳ್ಳುವಂತೆ ಪ್ರೇರೇಪಿಸುವಾಗ, ನಾವು ಆನಂದವನ್ನು ಕಂಡುಕೊಳ್ಳುವೆವು.– 1ಥೆಸ. 2:13.