ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/98 ಪು. 2
  • ನವೆಂಬರಗಾಗಿ ಸೇವಾ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರಗಾಗಿ ಸೇವಾ ಕೂಟಗಳು
  • 1998 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ನವೆಂಬರ್‌ 2ರಿಂದ ಆರಂಭವಾಗುವ ವಾರ
  • ನವೆಂಬರ್‌ 9ರಿಂದ ಆರಂಭವಾಗುವ ವಾರ
  • ನವೆಂಬರ್‌ 16ರಿಂದ ಆರಂಭವಾಗುವ ವಾರ
  • ನವೆಂಬರ್‌ 23ರಿಂದ ಆರಂಭವಾಗುವ ವಾರ
  • ನವೆಂಬರ್‌ 30ರಿಂದ ಆರಂಭವಾಗುವ ವಾರ
1998 ನಮ್ಮ ರಾಜ್ಯದ ಸೇವೆ
km 11/98 ಪು. 2

ನವೆಂಬರಗಾಗಿ ಸೇವಾ ಕೂಟಗಳು

ನವೆಂಬರ್‌ 2ರಿಂದ ಆರಂಭವಾಗುವ ವಾರ

ಸಂಗೀತ 38 (16)

10ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇಯಿಂದ ಆಯ್ದ ಪ್ರಕಟಣೆಗಳು. ದೇಶದ ಮತ್ತು ಸ್ಥಳಿಕ ಸಭೆಯ ಜುಲೈ ತಿಂಗಳಿನ ಸೇವಾ ವರದಿಯ ಕುರಿತು ಹೇಳಿಕೆಯನ್ನು ನೀಡಿರಿ.

15ನಿ: “ಎಲ್ಲರೂ ‘ವಾಕ್ಯವನ್ನು ಹೃತ್ಪೂರ್ವಕವಾಗಿ ಸ್ವೀಕರಿಸ’ಬೇಕು!” ಪ್ರಶ್ನೋತ್ತರಗಳು. ಜೂನ್‌ 1996ರ ನಮ್ಮ ರಾಜ್ಯದ ಸೇ ಪುರವಣಿಯ, ಪ್ಯಾರಗ್ರಾಫ್‌ 21ರಿಂದ ಹೆಚ್ಚಿನ ಸಲಹೆಗಳನ್ನು ಸೇರಿಸಿರಿ.

20ನಿ. “ನನಗೆ ಒಂದು ಬೈಬಲ್‌ ಅಭ್ಯಾಸ ಬೇಕು!” ಸೇವಾ ಮೇಲ್ವಿಚಾರಕನಿಂದ ನಡೆಸಲ್ಪಡುವ ಸಭಿಕರೊಂದಿಗಿನ ಚರ್ಚೆ. ಪುನರ್ಭೇಟಿಗಳನ್ನು ಮಾಡಲಿಕ್ಕಾಗಿರುವ ಈ ಒಮ್ಮತ ಪ್ರಯತ್ನವು ಸ್ಥಳಿಕವಾಗಿ ಹೇಗೆ ಸಂಘಿಟಿಸಲ್ಪಡುವುದು ಎಂಬುದನ್ನು ವಿವರಿಸಿರಿ. ಸಾಧ್ಯವಿರುವಷ್ಟರ ಮಟ್ಟಿಗೆ, ಅನುಭವಸ್ಥ ಪ್ರಚಾರಕರು ಹೊಸಬರೊಂದಿಗೆ ಕೆಲಸಮಾಡಬಹುದು. ಮೇ 1998ರ ನಮ್ಮ ರಾಜ್ಯದ ಸೇ ಪುರವಣಿಯ, 12-15ನೇ ಪ್ಯಾರಗ್ರಾಫ್‌ಗಳಲ್ಲಿರುವ ಸಲಹೆಗಳನ್ನು ಪುನರ್ವಿಮರ್ಶಿಸಿರಿ. ಪುನರ್ಭೇಟಿಯೊಂದರಲ್ಲಿ ಒಂದು ಅಭ್ಯಾಸವನ್ನು ಬೇಗೆ ನಡೆಸುವುದೆಂದು ಒಬ್ಬ ಸಮರ್ಥ ಪ್ರಚಾರಕನು ಪ್ರತ್ಯಕ್ಷಾಭಿನಯಿಸಲಿ. ಒಂದು ಹೊಸ ಅಭ್ಯಾಸವನ್ನು ಪ್ರಾರಂಭಿಸಲು ಶ್ರಮಿಸುವಂತೆ ಪ್ರತಿಯೊಬ್ಬರನ್ನೂ ಉತ್ತೇಜಿಸಿರಿ.

ಸಂಗೀತ 35 (33) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 9ರಿಂದ ಆರಂಭವಾಗುವ ವಾರ

ಸಂಗೀತ 187(17)

13ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ. ಪ್ರಶ್ನಾ ರೇಖಾಚೌಕ.

15ನಿ: ಸ್ಥಳಿಕ ಅಗತ್ಯಗಳು.

17ನಿ: “ಕೂಟಗಳಲ್ಲಿ ಉತ್ತರಗಳನ್ನು ಹೇಳುವ ಮೂಲಕ ಒಬ್ಬರನ್ನೊಬ್ಬರನ್ನು ಪ್ರೋತ್ಸಾಹಿಸಿರಿ.” ಪ್ರಶ್ನೋತ್ತರಗಳು. ಉತ್ತರಗಳನ್ನು ನೀಡುವುದು ನಮ್ಮ ಆತ್ಮಿಕ ಪ್ರಗತಿಗೆ ಹೇಗೆ ಸಹಾಯಮಾಡುವುದು ಎಂಬುದನ್ನು ವಿವರಿಸಿರಿ. (ಸ್ಕೂಲ್‌ ಗೈಡ್‌ಬುಕ್‌, ಅಭ್ಯಾಸ 38, ಪ್ಯಾರಗ್ರಾಫ್‌ 4ನ್ನು ನೋಡಿ.) ಉತ್ತರಗಳನ್ನು ಕೊಡಲು ಹಿಂಜರಿಯುತ್ತಿದ್ದವರು ಹೇಗೆ ಜಯಹೊಂದಿದರು ಮತ್ತು ಕೂಟಗಳಲ್ಲಿ ಭಾಗವಹಿಸುವ ಮೂಲಕ ಹೇಗೆ ಆಶೀರ್ವಸಲ್ಪಟ್ಟಿದ್ದಾರೆ ಎಂಬುದನ್ನು ಹೇಳುವಂತೆ ಕೆಲವರನ್ನು ಆಮಂತ್ರಿಸಿರಿ.

ಸಂಗೀತ 51 (7) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 16ರಿಂದ ಆರಂಭವಾಗುವ ವಾರ

ಸಂಗೀತ 182 (24)

8ನಿ: ಸ್ಥಳಿಕ ತಿಳಿಸುವಿಕೆಗಳು. “ಭಾರತೀಯ ಭಾಷೆಗಳಲ್ಲಿ ಉಪಯೋಗಿಸಲ್ಪಡುವ ಪ್ರಾಣ ಎಂಬ ಪದ’ ಅನ್ನುವ ಶೀರ್ಷಿಕೆಯುಳ್ಳ ರೇಖಾಚೌಕವನ್ನು ಚರ್ಚಿಸಿರಿ.

20ನಿ: “ಮುಂದಾಳುತ್ವವನ್ನು ವಹಿಸುವ ಮೇಲ್ವಿಚಾರಕರು–ದೇವಪ್ರಭುತ್ವ ಶುಶ್ರೂಷಾ ಶಾಲೆ ಮೇಲ್ವಿಚಾರಕ.” ಶಾಲಾ ಮೇಲ್ವಿಚಾರಕನಿಂದ ಭಾಷಣ. ಸ್ಕೂಲ್‌ ಗೈಡ್‌ಬುಕ್‌ 10-11 ಪುಟಗಳು, 6-12ನೇ ಪ್ಯಾರಾಗ್ರಾಫ್‌ಗಳನ್ನು ಪುನರ್ವಿಮರ್ತಿಸಿರಿ.

17ನಿ: “ನಿಮ್ಮ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿರ್ರಿ.” ಪುರವಣಿಯ 1-7ನೇ ಪ್ಯಾರಾಗ್ರಾಫ್‌ಗಳ ಪ್ರಶ್ನೋತ್ತರ ಚರ್ಚೆ. ಸ್ಥಳಿಕ ಟೆರಿಟೊರಿಗೆ ವಿಶೇಷವಾಗಿ ಅನ್ವಯಿಸಬಹುದಾದ ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಿರಿ.

ಸಂಗೀತ 167(26) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 23ರಿಂದ ಆರಂಭವಾಗುವ ವಾರ

ಸಂಗೀತ 89 (23)

8ನಿ: ಸ್ಥಳಿಕ ತಿಳಿಸುವಿಕೆಗಳು. ಅತ್ಯಂತ ಮಹಾನ್‌ ಪುರು ಪುಸ್ತಕವು ಜನರ ಮೇಲೆ ಪ್ರಭಾವವನ್ನು ಬೀರಿದುದರ ಕುರಿತಾಗಿ, ಅಗಸ್ಟ್‌ 8, 1998, ಅವೇಕ್‌! ಪತ್ರಕೆಯ ಕೊನೆ ಪುಟದಲ್ಲಿ ಮುದ್ರಿತವಾಗಿರುವ ಅನುಭವಗಳನ್ನು ಹೇಳಿರಿ. ತಕ್ಕ ಸಂದರ್ಭಗಳಲ್ಲಿ ಈ ಪುಸ್ತಕವು ನೀಡಲು ಎಲ್ಲ ಪ್ರಚಾರಕರು ಸಿದ್ಧರಾಗಿರಬೇಕು.

17ನಿ: “ನಿಮ್ಮ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿರ್ರಿ.” ಪುರವಣಿಯ 8-21ನೇ ಪ್ಯಾರಾಗ್ರಾಫ್‌ಗಳ ಪ್ರಶ್ನೋತ್ತರ ಚರ್ಚೆ. ಸ್ಥಳಿಕ ಟೆರಿಟೊರಿಗೆ ವಿಶೇಷವಾಗಿ ಅನ್ವಯಿಸಬಹುದಾದ ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಿರಿ.

20ನಿ: ನಿಮ್ಮ ಬೈಬಲ್‌ ಓದುವಿಕೆಯ ಗುಣವನ್ನು ಹೆಚ್ಚಿಸಲು ಸಲಹೆಗಳು. ಮೇ 1, 1995ರ ಕಾವಲಿನಬುರುಜು ಪತ್ರಿಕೆಯ 16-17ನೇ ಪುಟಗಳ ಮೇಲಾಧಾರಿತ ಭಾಷಣ. ದಿನನಿತ್ಯದ ಬೈಬಲ್‌ ಓದುವಿಕೆಯಿಂದ ಪಡೆದುಕೊಳ್ಳುವ ಆತ್ಮಿಕ ಪ್ರಯೋಜನಗಳನ್ನು ಎತ್ತಿ ತೋರಿಸಿರಿ. ನೀಡಲ್ಪಡುವ ಸಲಹೆಗಳನ್ನು ಪುನರ್ವಿಮರ್ತಿಸಿರಿ ಮತ್ತು ಅವುಗಳನ್ನು ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದನ್ನು ಚರ್ಚಿಸಿರಿ. ದೇವರ ವಾಕ್ಯವನ್ನು ಕ್ರಮವಾಗಿ ಓದುವ ಮಾಲಕ ತಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದೇವೆ ಎಂಬುದನ್ನು ಇಬ್ಬರು ಅಥವಾ ಮೂವರು ಪ್ರಚಾರಕರು ಹೇಳಲಿ.

ಸಂಗೀತ 46 (5) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 30ರಿಂದ ಆರಂಭವಾಗುವ ವಾರ

ಸಂಗೀತ 64 (7)

15ನಿ: ಸ್ಥಳಿಕ ತಿಳಿಸುವಿಕೆಗಳು. ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಿಸಿರಿ. ನವೆಂಬರ್‌ ತಿಂಗಳಿನಲ್ಲಿ ಒಂದು ಅಭ್ಯಾಸವನ್ನು ಪ್ರಾರಂಭಿಸದಿದ್ದವರನ್ನು ಡಿಸೆಂಬರ್‌ ತಿಂಗಳಿನಲ್ಲಿ ಪ್ರಯತ್ನಿಸುವಂತೆ ಉತ್ತೇಜಿಸಿರಿ. ಏಕೆಂದರೆ ಆ ತಿಂಗಳಿನಲ್ಲಿ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ನ್ನೊಂದಿಗೆ ನಿತ್ಯಜೀವಕ್ಕೆ ನಡಿಸುವ ಜ್ಞಾ ಪುಸ್ತಕವು ನೀಡಲ್ಪಡುವುದು. ಜ್ಞಾ ಪುಸ್ತಕದಲ್ಲಿ 19ನೇ ಪುಟದಲ್ಲಿರುವ ರೇಖಾಚೌಕವನ್ನು ಉಪಯೋಗಿಸುತ್ತಾ, ಒಬ್ಬ ಸಮರ್ಥ ಪ್ರಚಾರಕನು ಒಂದು ಪುನರ್ಭೇಟಿ ಮಾಡುವುದನ್ನು ಪ್ರತ್ಯಕ್ಷಾಭಿನಯಿಸಲಿ. ಬೈಬಲ್‌ ಬೋಧನೆಗಳ ತಿಳುವಳಿಕೆಯನ್ನು ತಡೆದುಕೊಳ್ಳಲು ಈ ಪುಸ್ತಕವನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ಆ ಪ್ರಚಾರಕನು ವಿವರಿಸುತ್ತಾನೆ ಮತ್ತು ಒಂದು ಅಭ್ಯಾಸವನ್ನು ಪ್ರಾರಂಭಿಸುತ್ತಾನೆ.

15ನಿ: ಯೆಹೋವನ ಸಾಕ್ಷಿಗಳ 1999ರ ಕ್ಯಾಲೆಂಡರಿನ ಸದುಪಯೋಗವನ್ನು ಮಾಡಿರಿ. ಒಂದು ಭಾಷಣ. ಕ್ಯಾಲೆಂಡರಿನ ವೈಶಿಷ್ಟ್ಯಗಳನ್ನು ಪುನರ್ವಿಮರ್ಶಿಸಿರಿ: (1)ಗಮನಸೆಳೆಯುವ ಬೈಬಲ್‌ ಘಟನೆಗಳನ್ನು ಮತ್ತು ಬೋಧನೆಗಳನ್ನು ವರ್ಣಿಸುವ ಮನತಾಕುವ ಚಿತ್ರಗಳು, (2)ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ ವಾರದ ಬೈಬಲ್‌ ವಾಚನ ಶೆಡ್ಯೂಲ್‌, (3)ಜ್ಞಾಪಕಾಚರಣೆಯ ಮುಂಚೆ, ವಾರದ ವಾರ್ಷಿಕ ಬೈಬಲ್‌ ವಾಚನಾ ಶೆಡ್ಯೂಲ್‌, (4) ಬರಲಿರುವ ಲಿಖಿತ ಪುನರ್ವಿಮರ್ಶೆಗಳ ಪ್ರಕಟನೆ, ಮತ್ತು (5) ಪತ್ರಿಕಾ ಸೇವೆಯಲ್ಲಿ ಕ್ರಮವಾಗಿ ಪಾಲ್ಗೊಳ್ಳಲಿಕ್ಕಾಗಿ ಮರುಜ್ಞಾಪಕಗಳು, ಕ್ಷೇತ್ರ ಸೇವಾ ಶೆಡ್ಯೂಲ್‌ ಅನ್ನು ಮಾಡಲಿಕ್ಕಾಗಿ ಸಮಯವನ್ನು ಗೊತ್ತುಮಾಡಲು, ಕೂಟದ ನೇಮಕಗಳನ್ನು ಪಟ್ಟಿಮಾಡಲು ಸರ್ಕೀಟ ಮೇಲ್ವಿಚಾರಕನ ಭೇಟಿಗಳ ಮತ್ತು ಸಮೀಪಿಸುತ್ತಿರುವ ಸಮ್ಮೇಳನಗಳ ಕುರಿತಾದ ಮರುಜ್ಞಾಪನಗಳನ್ನು ಬರೆದಿಡಲಿಕ್ಕಾಗಿ, ಲಭ್ಯವಿರುವ ಸ್ಥಳವನ್ನು ಉಪಯೋಗಿಸಿಕೊಳ್ಳಲಿಕ್ಕಾಗಿರುವ ವಿಧಗಳನ್ನು ಚರ್ಚಿಸಿರಿ. ಮನೆಯಲ್ಲಿ ಅಥವಾ ಕೆಲಸಮಾಡುವ ಸ್ಥಳದಲ್ಲಿ ಕ್ಯಾಲೆಂಡರನ್ನು ಎಲ್ಲರಿಗೂ ಕಾಣುವಂತಹ ಜಾಗದಲ್ಲಿ ತೂಗುಹಾಕುವಲ್ಲಿ, ಶಾಸ್ತ್ರೀಯ ಚರ್ಚೆಗಳನ್ನು ಪ್ರಾರಂಭಿಸುವಂತಹ ಅವಕಾಶಗಳಿಗೆ ಅಸ್ಪದ ಕೊಡಬಹುದು. 1998 ವರ್ಷ ಪುಸ್ತ (ಇಂಗ್ಲೀಷ)ದ 8ನೇ ಪುಟದಿಂದ ಅನುಭವವನ್ನು ಹೇಳಿರಿ.

15ನಿ: “ಪುನರ್ಭೇಟಿಗಳನ್ನು ಮಾಡಲಿಕ್ಕಾಗಿರುವ ಧೈರ್ಯವನ್ನು ಒಟ್ಟುಗೂಡಿಸಿರಿ.” ಮಾರ್ಚ್‌ 1997ರ ನಮ್ಮ ರಾಜ್ಯದ ಸೇವೆ ಪುರವಣಿಯ ಮೇಲೆ ಆಧಾರಿಸಿ, ಸಭಿಕರ ಚರ್ಚೆಯೊಂದಿಗೆ ಭಾಷಣ. ಸುವಾರ್ತೆಯಲ್ಲಿ ಆಸಕ್ತಿ ತೋರಿಸುವ ಎಲ್ಲರನ್ನೂ ಪುನಃ ಸಂದರ್ಶಿಸಬೇಕೆಂದು ಅಂಶವನ್ನು ಒತ್ತಿಹೇಳಿರಿ.

ಸಂಗೀತ 121 (21) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ