ಡಿಸೆಂಬರ್ಗಾಗಿ ಸೇವಾ ಕೂಟಗಳು
ಸೂಚನೆ: ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಿಂದ, ಮುಂದಿನ ತಿಂಗಳ ಮೊದಲ ಸೇವಾ ಕೂಟದ ಶೆಡ್ಯೂಲಿನ ಹೊರಮೇರೆಯನ್ನೂ ಸೇರಿಸಲಾಗುವುದು. ನಮ್ಮ ರಾಜ್ಯದ ಸೇವೆಯ ರವಾನೆಯಲ್ಲಾಗಬಹುದಾದ ವಿಳಂಬವನ್ನು ಸರಿದೂಗಿಸಲು ಈ ಹೊಂದಾಣಿಕೆಯನ್ನು ಮಾಡಲಾಗಿದೆ.
ಡಿಸೆಂಬರ್ 6ರಿಂದ ಆರಂಭವಾಗುವ ವಾರ
ಸಂಗೀತ 207
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: “ನಿಷ್ಪಕ್ಷಪಾತಿಯಾದ ಯೆಹೋವನನ್ನು ಅನುಕರಿಸಿರಿ.” ಪೀಠಿಕಾರೂಪದ ಹೇಳಿಕೆಗಳನ್ನು ಒಂದು ನಿಮಿಷಕ್ಕಿಂತ ಕಡಿಮೆ ಸಮಯಕ್ಕೆ ಸೀಮಿತಗೊಳಿಸಿ, ಪ್ರಶ್ನೋತ್ತರ ಚರ್ಚೆಯನ್ನು ಆರಂಭಿಸಿರಿ. ನಿಷ್ಪಕ್ಷಪಾತದ ಅರ್ಥವನ್ನು, ಯೆಹೋವನು ಈ ಗುಣವನ್ನು ಹೇಗೆ ಪ್ರದರ್ಶಿಸುತ್ತಾನೆ ಮತ್ತು ನಾವು ಈ ಗುಣವನ್ನು ಕ್ಷೇತ್ರ ಸೇವೆಯಲ್ಲಿ ಹೇಗೆ ಪ್ರದರ್ಶಿಸಬಹುದು ಎಂಬುದನ್ನು ವಿವರಿಸಿ.—ಒಳನೋಟ (ಇಂಗ್ಲಿಷ್), ಸಂಪುಟ 1, ಪುಟ 1192, 4-7ನೇ ಪ್ಯಾರಗಳನ್ನು ನೋಡಿ.
20 ನಿ: “ನಾವು ಅದನ್ನು ಹಿಂದೆ ಕೇಳಿಸಿಕೊಂಡಿರಲಿಲ್ಲವೋ?” ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಸತ್ಯವನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಹಾಗೂ ಗಣ್ಯಮಾಡಲು ಪುನರಾವರ್ತನೆಯು ಹೇಗೆ ಸಹಾಯಮಾಡಿದೆ ಎಂಬುದರ ಕುರಿತು ಸಭಿಕರು ಹೇಳಿಕೆ ನೀಡುವಂತೆ ಆಹ್ವಾನಿಸಿ.—ಕಾವಲಿನಬುರುಜು ಜುಲೈ 15, 1995, 21-2ನೆಯ ಪುಟಗಳು ಮತ್ತು ಆಗಸ್ಟ್ 15, 1993, 13-14ನೆಯ ಪುಟಗಳು, 10-12ನೆಯ ಪ್ಯಾರಗ್ರಾಫ್ಗಳು.
ಸಂಗೀತ 218 ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 13ರಿಂದ ಆರಂಭವಾಗುವ ವಾರ
ಸಂಗೀತ 168
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ಹಬ್ಬದ ಶುಭಾಶಯಗಳಿಗೆ ಜಾಣ್ಮೆಯಿಂದ ಹೇಗೆ ಪ್ರತ್ಯುತ್ತರವನ್ನು ಕೊಡುವುದು ಎಂಬುದರ ಕುರಿತು ಸಲಹೆಗಳನ್ನು ನೀಡಿ. ಮಹಾನ್ ಪುರುಷ ಇಲ್ಲವೇ ಮಹಾ ಬೋಧಕ ಪುಸ್ತಕದ ಪ್ರತಿಗಳು ಸಭೆಯ ಸ್ಟಾಕ್ನಲ್ಲಿರುವಲ್ಲಿ, ಕ್ರಿಸ್ಮಸ್ ರಜಾದಿನಗಳಲ್ಲಿ ಇವುಗಳನ್ನು ಕ್ಷೇತ್ರ ಸೇವೆಯಲ್ಲಿ ಉತ್ತಮ ರೀತಿಯಲ್ಲಿ ಹೇಗೆ ಉಪಯೋಗಿಸಬಹುದೆಂಬುದನ್ನು ತೋರಿಸಿ.
15 ನಿ: “ಇಸವಿ 2000ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆ.” ದೇವಪ್ರಭುತ್ವ ಶುಶ್ರೂಷಾ ಶಾಲೆಯ ಮೇಲ್ವಿಚಾರಕನಿಂದ ಒಂದು ಭಾಷಣ. ಹೊಸ ವರ್ಷಕ್ಕಾಗಿ ಶೆಡ್ಯೂಲಿನಲ್ಲಾಗಿರುವ ಮುಂದಿನ ಬದಲಾವಣೆಯನ್ನು ಪುನರ್ವಿಮರ್ಶಿಸಿ. ನೇಮಕ ನಂಬ್ರ 3, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನಲ್ಲಿ ಕಂಡುಬರುವ “ಚರ್ಚೆಗಾಗಿರುವ ಬೈಬಲ್ ವಿಷಯಗಳ” ಮೇಲಾಧಾರಿತವಾಗಿರುವುದು. ನೇಮಕ ನಂಬ್ರ 4ರಲ್ಲಿ, ಶಾಸ್ತ್ರಗಳ ಒಳನೋಟದ (ಇಂಗ್ಲಿಷ್) ಮೇಲಾಧಾರಿತವಾದ ಬೈಬಲ್ ವ್ಯಕ್ತಿಗಳ ಕುರಿತಾದ ಚರ್ಚೆಯು ಮುಂದುವರಿಯುವುದು ಹಾಗೂ ಆ ವರ್ಷದ ಕೊನೆಯ ಮೂರು ತಿಂಗಳುಗಳಲ್ಲಿ “ಚರ್ಚೆಗಾಗಿರುವ ಬೈಬಲ್ ವಿಷಯಗಳ” ಮೇಲಾಧಾರಿತವಾಗಿರುವುದು. ಈ ನೇಮಕದ ಪಕ್ಕದಲ್ಲಿ ಎಲ್ಲಿ ಸಂಖ್ಯಾಚಿಹ್ನೆ (#) ಕಾಣುತ್ತದೋ ಆ ಭಾಷಣವನ್ನು ಸಹೋದರರು ಕೊಡುವುದು ಉತ್ತಮವಾಗಿರುವುದು. ದಯವಿಟ್ಟು ಗಮನಿಸಿ, ಸ್ಥಳಿಕ ಭಾಷೆಗಳಿಗೆ ನೇಮಕ ನಂಬ್ರ 3, “ಚರ್ಚೆಗಾಗಿರುವ ಬೈಬಲ್ ವಿಷಯಗಳು” ಎಂಬ ಪುಸ್ತಿಕೆ ಮತ್ತು ನೇಮಕ ನಂಬ್ರ 4, ಕಾವಲಿನಬುರುಜು ಪತ್ರಿಕೆಯ ಲೇಖನಗಳ ಮೇಲಾಧಾರಿತವಾಗಿರುವುದು. ತಮ್ಮ ವಾರದ ಬೈಬಲ್ ವಾಚನವನ್ನು ಕ್ರಮವಾಗಿ ಮಾಡುತ್ತಿರುವಂತೆ ಮತ್ತು ಶಾಲೆಯ ನೇಮಕಗಳನ್ನು ಶ್ರದ್ಧೆಯಿಂದ ಪೂರೈಸುವಂತೆ ಎಲ್ಲರನ್ನು ಪ್ರೋತ್ಸಾಹಿಸಿರಿ.
20 ನಿ: “ದೇವರಲ್ಲಿ ನಂಬಿಕೆಯಿಲ್ಲದವರಿಗೆ ನೀವು ಹೇಗೆ ಸಾಕ್ಷಿ ನೀಡುವಿರಿ?” ಪ್ರಶ್ನೋತ್ನರಗಳು. ಅನೇಕರು ದೇವರಲ್ಲಿ ನಂಬಿಕೆಯನ್ನು ಕಳೆದುಕೊಂಡಿರುವುದಕ್ಕೆ ಹಲವಾರು ಕಾರಣಗಳನ್ನು ಪುನರ್ವಿಮರ್ಶಿಸಿರಿ. ದೇವರ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಏಕೆ ತರ್ಕಸಂಗತವಾದದ್ದಾಗಿದೆ ಎಂಬುದನ್ನು ಗ್ರಹಿಸುವಂತೆ ಸಹಾಯಮಾಡಲು ಅವರನ್ನು ನಾವು ಸಮೀಪಿಸಬಹುದಾದ ಕೆಲವು ವಿಧಗಳ ಕುರಿತು ಸಲಹೆ ನೀಡಿ. ಒಂದು ಇಲ್ಲವೇ ಎರಡು ಚುಟುಕಾದ ಪ್ರತ್ಯಕ್ಷಾಭಿನಯಗಳನ್ನು ಮಾಡಿ. ಹೆಚ್ಚಿನ ಮಾಹಿತಿಗಾಗಿ ರೀಸನಿಂಗ್ ಪುಸ್ತಕದ 145-51ನೇ ಪುಟಗಳನ್ನು ಹಾಗೂ ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಪುಸ್ತಕದ 14ನೇ ಅಧ್ಯಾಯವನ್ನು ನೋಡಿ.
ಸಂಗೀತ 220 ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 20ರಿಂದ ಆರಂಭವಾಗುವ ವಾರ
ಸಂಗೀತ 219
10 ನಿ: ಸ್ಥಳಿಕ ತಿಳಿಸುವಿಕೆಗಳು. ಇತ್ತೀಚೆಗೆ ಕ್ಷೇತ್ರಸೇವೆಯಲ್ಲಿ ಅನುಭವಿಸಿದಂತಹ ಚುಟುಕಾದ ಮತ್ತು ಯುಕ್ತವಾದ ಅನುಭವಗಳನ್ನು ಪ್ರಚಾರಕರು ಹೇಳಲಿ.
15 ನಿ: ಸಂಭವನೀಯ ಸಂಭಾಷಣಾ ತಡೆಗಟ್ಟುಗಳಿಗೆ ಪ್ರತಿಕ್ರಿಯಿಸುವುದು. ಸಭಿಕರೊಂದಿಗೆ ಚರ್ಚೆ ಮತ್ತು ಪ್ರತ್ಯಕ್ಷಾಭಿನಯಗಳು. ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ 7-8ನೇ ಪುಟಗಳಲ್ಲಿರುವ “ಹೇಳಿಕೆಗಳನ್ನು” ಓದಿ. 8-13ನೇ ಪುಟಗಳಿಂದ ಎರಡು ಇಲ್ಲವೇ ಮೂರು ‘ಸಂಭಾಷಣಾ ತಡೆಗಟ್ಟುಗಳನ್ನು’ ತೆಗೆದುಕೊಳ್ಳಿ ಇಲ್ಲವೇ ನಿಮ್ಮ ಕ್ಷೇತ್ರದಲ್ಲಿ ಆಗಾಗ್ಗೆ ಎದುರಾಗುವ ಇತರ ಸಂಭಾಷಣಾ ತಡೆಗಟ್ಟುಗಳನ್ನು ಉಪಯೋಗಿಸಿ. ಸೂಚಿಸಿರುವ ಪ್ರತಿಕ್ರಿಯೆಗಳಲ್ಲಿ ಕೆಲವೊಂದನ್ನು ಪುನರ್ವಿಮರ್ಶಿಸಿ, ಸ್ಥಳಿಕವಾಗಿ ಅವು ಏಕೆ ಪರಿಣಾಮಕಾರಿಯಾಗಿವೆ ಎಂಬುದನ್ನು ವಿಶ್ಲೇಷಿಸಿರಿ. ಅವುಗಳಲ್ಲಿ ಕೆಲವೊಂದನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ. ತಾವು ಉಪಯೋಗಿಸಿದಂತಹ ಯಾವ ಪ್ರತಿಕ್ರಿಯೆಗಳಿಗೆ ಉತ್ತಮ ಫಲಿತಾಂಶಗಳು ದೊರಕಿವೆಯೆಂಬುದನ್ನು ಹೇಳುವಂತೆ ಸಭಿಕರನ್ನು ಆಹ್ವಾನಿಸಿ.
20 ನಿ: ಒಂದು ಧಾರ್ಮಿಕ ಸಂಸ್ಥೆಯೊಂದಿಗೆ ಸಂಬಂಧಿಸಿರುವ ಉದ್ಯೋಗವನ್ನು ನಾನು ಸ್ವೀಕರಿಸಬೇಕೇ? ಒಬ್ಬ ಹಿರಿಯನಿಂದ ಭಾಷಣ, ಏಪ್ರಿಲ್ 15, 1999ರ ಕಾವಲಿನಬುರುಜು ಪತ್ರಿಕೆಯ 28-30ನೇ ಪುಟಗಳ ಮೇಲಾಧಾರಿತ ಭಾಷಣ. ಕೆಲವು ವ್ಯಕ್ತಿಗಳು ಅಂತಹ ಕೆಲಸಗಳನ್ನು ಸ್ವೀಕರಿಸಿದ್ದಾರೆ, ಆದರೆ ತಾವು ಏನನ್ನು ಮಾಡುತ್ತಿದ್ದೇವೊ ಅದು ಬೈಬಲ್ ತತ್ವಗಳಿಗೆ ಹೊಂದಿಕೆಯಲ್ಲಿಲ್ಲವೆಂಬುದು ಅವರಿಗೆ ನಂತರವೇ ತಿಳಿದುಬಂದಿದೆ. ಕೆಲವು ಧಾರ್ಮಿಕ ಸಂಬಂಧಗಳಿರುವ ಒಂದು ಐಹಿಕ ಉದ್ಯೋಗವನ್ನು ಮಾಡುವ ತೀರ್ಮಾನವನ್ನು ತೆಗೆದುಕೊಳ್ಳುವಾಗ, ನಾವು ಪರಿಗಣಿಸಬೇಕಾದ ಕೆಲವೊಂದು ಪ್ರಶ್ನೆಗಳನ್ನು ಪುನರ್ವಿಮರ್ಶಿಸಿರಿ. ಯೆಹೋವನ ಮುಂದೆ ಒಂದು ಒಳ್ಳೆಯ ನಿಲುವನ್ನು ಖಚಿತಪಡಿಸಿಕೊಳ್ಳುವ ಮಾರ್ಗವನ್ನು ಬೆನ್ನಟ್ಟುವಂತೆ ಎಲ್ಲರನ್ನು ಪ್ರೋತ್ಸಾಹಿಸಿ.—2 ಕೊರಿಂ. 6:3, 4, 14-18.
ಸಂಗೀತ 109 ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 27ರಿಂದ ಆರಂಭವಾಗುವ ವಾರ
ಸಂಗೀತ 166
10 ನಿ: ಸ್ಥಳಿಕ ತಿಳಿಸುವಿಕೆಗಳು. ನಿಮ್ಮ ಸಭೆಯು ಹೊಸ ವರ್ಷಕ್ಕಾಗಿ ಕೂಟಗಳ ಸಮಯವನ್ನು ಬದಲಾಯಿಸುವುದಾದರೆ, ಹೊಸ ಸಮಯದಲ್ಲಿ ಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಎಲ್ಲರನ್ನು ದಯಾಪೂರ್ವಕವಾಗಿ ಪ್ರೋತ್ಸಾಹಿಸಿ. ಯಾವುದೇ ಬದಲಾವಣೆಯಿದ್ದರೂ ಅದನ್ನು ಬೈಬಲ್ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ಜನರಿಗೆ ತಿಳಿಯಪಡಿಸಿ ಮತ್ತು ಹೊಸ ಸಮಯಾವಧಿಯನ್ನು ಸೂಚಿಸುವ ಕರಪತ್ರವನ್ನು ಉಪಯೋಗಿಸಲು ಆರಂಭಿಸಿ. ಡಿಸೆಂಬರ್ ತಿಂಗಳ ಕ್ಷೇತ್ರ ಸೇವೆಯ ವರದಿಯನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕಹುಟ್ಟಿಸಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: ಜನವರಿಯಲ್ಲಿ ಹಳೇ ಪುಸ್ತಕಗಳನ್ನು ನೀಡುವುದು. ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡುವುದು. ಭಾಷಣ ಮತ್ತು ಪ್ರತ್ಯಕ್ಷಾಭಿನಯಗಳು. ಸಭೆಯ ಸ್ಟಾಕಿನಲ್ಲಿರುವ 192 ಪುಟಗಳ ಎರಡು ಅಥವಾ ಮೂರು ಹಳೇ ಪುಸ್ತಕಗಳನ್ನು ತೋರಿಸಿ, ಅವುಗಳಲ್ಲಿ ಕೆಲವನ್ನು ಕ್ಷೇತ್ರಸೇವೆಗಾಗಿ ತೆಗೆದುಕೊಳ್ಳುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ. (ಈ ಪುಸ್ತಕಗಳಲ್ಲಿ ಯಾವುದೂ ಇಲ್ಲದಿರುವಲ್ಲಿ, ಜನವರಿಗಾಗಿರುವ ಪರ್ಯಾಯ ನೀಡುವಿಕೆಯ ಕುರಿತು ಚರ್ಚಿಸಿ.) ಸಾಹಿತ್ಯವನ್ನು ವಿತರಿಸುವ ಸರಳೀಕೃತ ಏರ್ಪಾಡಿನ ಮೇಲಾಧರಿಸಿ ಸಾಹಿತ್ಯವನ್ನು ಹೇಗೆ ನೀಡಬೇಕೆಂಬುದನ್ನು ತೋರಿಸುವ ಒಂದು ಇಲ್ಲವೆ ಎರಡು ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿ. ಬೈಬಲಿನಲ್ಲಿ ಆಸಕ್ತಿಯನ್ನು ಬೆಳೆಸಲು ಈ ಹಳೆಯ ಪ್ರಕಾಶನಗಳು ಈಗಲೂ ಏಕೆ ಪರಿಣಾಮಕಾರಿಯಾಗಿವೆ ಎಂಬುದನ್ನು ವಿವರಿಸಿ. ಪ್ರತಿಯೊಂದು ಪುಸ್ತಕದಿಂದಲೂ, ಸಂಭಾಷಣೆಯನ್ನು ಪ್ರಾರಂಭಿಸಲು ಉಪಯೋಗಿಸಬಹುದಾದ ಅಂಶಗಳನ್ನು ಮತ್ತು ದೃಷ್ಟಾಂತಗಳನ್ನು ಎತ್ತಿತೋರಿಸಿ. ಒಂದು ಇಲ್ಲವೇ ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಆಸಕ್ತಿಯು ಕಂಡುಬಂದಲ್ಲಿ, ಅಪೇಕ್ಷಿಸು ಬ್ರೋಷರನ್ನು ಉಪಯೋಗಿಸಿ ಅಭ್ಯಾಸವನ್ನು ಪ್ರಾರಂಭಿಸಬಹುದು.
ಸಂಗೀತ 224 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 3ರಿಂದ ಆರಂಭವಾಗುವ ವಾರ
ಸಂಗೀತ 10
8 ನಿ: ಸ್ಥಳಿಕ ತಿಳಿಸುವಿಕೆಗಳು.
17 ನಿ: ಉತ್ತರವನ್ನು ಹೇಗೆ ಕೊಡುವುದೆಂಬುದನ್ನು ತಿಳಿದಿರುವುದು. (ಕೊಲೊ. 4:6) ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಇತರರೊಂದಿಗೆ ಬೈಬಲ್ ಸತ್ಯವನ್ನು ಹಂಚಿಕೊಳ್ಳುವ ಮಾರ್ಗವನ್ನು ಸುಗಮಗೊಳಿಸುವುದರಲ್ಲಿ ರೀಸನಿಂಗ್ ಪುಸ್ತಕವು ಒಂದು ಅದ್ಭುತಕರ ಸಹಾಯಕವಾಗಿದೆ. ನಮ್ಮ ನಂಬಿಕೆಗಳಲ್ಲಿ ಯಾವುದಾದರೊಂದರ ಕುರಿತು ಮನೆಯವನು ಆಕ್ಷೇಪಣೆಯನ್ನು ಎಬ್ಬಿಸುವಾಗ, ಆ ನಂಬಿಕೆಯ ಕುರಿತು ವ್ಯವಹರಿಸುವ ವಿಭಾಗದ ಕೊನೆಯಲ್ಲಿರುವ “ಒಬ್ಬನು ಹೀಗೆ ಹೇಳುವುದಾದರೆ—”ಅನ್ನು ನಾವು ಉಪಯೋಗಿಸಬಹುದು. ಬೈಬಲಿನ ಕುರಿತು 64-8ನೆಯ ಪುಟಗಳಲ್ಲಿ ನೀಡಲ್ಪಟ್ಟಿರುವ ಹೇಳಿಕೆಗಳನ್ನು ಚರ್ಚಿಸಿ, ಅಲ್ಲಿ ಸೂಚಿಸಲ್ಪಟ್ಟಿರುವ ಉತ್ತರಗಳು ಏಕೆ ಹೆಚ್ಚು ಪರಿಣಾಮಕಾರಿಯಾಗಿರಬಹುದು ಎಂಬುದನ್ನು ಪರಿಗಣಿಸಿರಿ.
20 ನಿ: “ನಮ್ಮ ಸಾಹಿತ್ಯವನ್ನು ವಿವೇಕಯುತವಾಗಿ ಉಪಯೋಗಿಸಿರಿ.” ಪ್ರಶ್ನೋತ್ತರ ಚರ್ಚೆ. ಪ್ಯಾರ 7ನ್ನು ಚರ್ಚಿಸಿದ ನಂತರ, 4-7ನೆಯ ಪ್ಯಾರಗಳಲ್ಲಿ ಕೊಡಲ್ಪಟ್ಟಿರುವ ಸಲಹೆಗಳಲ್ಲಿ ಕೆಲವನ್ನು ಉಪಯೋಗಿಸಿ, ಎರಡು ಅಥವಾ ಮೂರು ಚುಟುಕಾದ ಪ್ರತ್ಯಕ್ಷಾಭಿನಯಗಳನ್ನು ಮಾಡಿಸಿ.
ಸಂಗೀತ 56 ಮತ್ತು ಸಮಾಪ್ತಿಯ ಪ್ರಾರ್ಥನೆ.