ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2005ರ ಆಗಸ್ಟ್ 29ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2005ರ ಜುಲೈ 4ರಿಂದ ಆಗಸ್ಟ್ 29ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ಉಲ್ಲೇಖಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಇತರರೊಂದಿಗೆ ನಮ್ಮ ನಿರೀಕ್ಷೆಯನ್ನು ಹಂಚಿಕೊಳ್ಳುವಾಗ, ನಮ್ಮ ‘ತರ್ಕಸಮ್ಮತತೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗುವಂತೆ’ ಮಾಡುವುದು ಹೇಗೆ, ಮತ್ತು ಇದು ಪ್ರಾಮುಖ್ಯವೇಕೆ? (ಫಿಲಿ. 4:5, NW; ಯಾಕೋ. 3:17) [be-KA ಪು. 251 ಪ್ಯಾರ. 1-3, ಚೌಕ]
2. ನಾವು ಯಾವಾಗ ಮಣಿಯಬೇಕೆಂದು ತಿಳಿದಿರುವುದು ಇತರರೊಂದಿಗೆ ಯಶಸ್ವಿಕರವಾದ ರೀತಿಯಲ್ಲಿ ವ್ಯವಹರಿಸಲು ಹೇಗೆ ಸಹಾಯಮಾಡುವುದು? [be-KA ಪು. 252 ಪ್ಯಾರ. 5-ಪು. 253 ಪ್ಯಾರ. 1]
3. ಇತರರು ಒಂದು ವಿಷಯದ ಕುರಿತು ಯೋಚಿಸುವಂತೆ ನಾವು ಸಹಾಯಮಾಡುವಾಗ ಪ್ರಶ್ನೆಗಳ ಕೌಶಲಭರಿತ ಉಪಯೋಗವು ಏಕೆ ಪ್ರಾಮುಖ್ಯ? [be-KA ಪು. 253 ಪ್ಯಾರ. 2-3]
4. ಭಾಷಣವನ್ನು ಒಡಂಬಡಿಸುವಂಥದ್ದಾಗಿ ಮಾಡಲಿಕ್ಕಾಗಿ ಯಾವ ಅಂಶಗಳನ್ನು ಪರಿಗಣಿಸತಕ್ಕದ್ದು? [be-KA ಪು. 255 ಪ್ಯಾರ. 1-3, ಚೌಕ; ಪು. 256 ಪ್ಯಾರ. 1-2, ಚೌಕ]
5. ಶಾಸ್ತ್ರವಚನಗಳ ತರ್ಕಬದ್ಧತೆಯನ್ನು ಬೆಂಬಲಿಸಲು ನಾವು ಬೈಬಲಿನ ಹೊರಗಿನ ರುಜುವಾತನ್ನು ಕೊಡಲು ನಿರ್ಣಯಿಸುವಲ್ಲಿ ನಾವೇನನ್ನು ಮನಸ್ಸಿನಲ್ಲಿಡತಕ್ಕದ್ದು? [be-KA ಪು. 256 ಪ್ಯಾರ. 4-6, ಚೌಕ]
ನೇಮಕ ನಂ. 1
6. ಯೇಸುವಿನ ಐತಿಹಾಸಿಕತೆಗೆ ಸಾಕ್ಷಿಕೊಡುವ ಯಾವ ಸ್ಪಷ್ಟ ರುಜುವಾತಿದೆ? [w03-KA 6/15 ಪು. 4-7]
7. ‘ಒಳ್ಳೆಯವರ ಮಾತುಗಳು ಜನರನ್ನು ಅಪಾಯದಿಂದ ರಕ್ಷಿಸುವುದು’ (ಪರಿಶುದ್ಧ ಬೈಬಲ್) ಮತ್ತು ‘ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವದು’ ಹೇಗೆ? (ಜ್ಞಾನೋ. 12:6, 7) [w03-KA 1/15 ಪು. 30 ಪ್ಯಾರ. 1-3]
8. ಬೈಬಲು, ನಾವೇನು ಮಾಡಬೇಕು ಅಥವಾ ಏನು ಮಾಡಬಾರದೆಂಬುದನ್ನು ಹೇಳುವ ನಿಯಮಗಳ ಒಂದು ಪಟ್ಟಿಯಾಗಿ ಬರೆಯಲ್ಪಟ್ಟಿರದ ಕಾರಣ ನಾವು ಹೇಗೆ ‘ಯೆಹೋವನ ಚಿತ್ತವೇನೆಂಬುದನ್ನು ಗ್ರಹಿಸ’ಸಾಧ್ಯವಿದೆ? (ಎಫೆ. 5:17, NW) [w03-KA 12/1 ಪು. 21 ಪ್ಯಾರ. 3-ಪು. 22 ಪ್ಯಾರ. 3]
9. ಯಾವ ಬೈಬಲ್ ಮೂಲತತ್ತ್ವಗಳ ಅನ್ವಯವು, ಒಬ್ಬ ವ್ಯಕ್ತಿಗೆ ಬಡತನ ಇಲ್ಲವೆ ಕಷ್ಟಕರ ಆರ್ಥಿಕ ಪರಿಸ್ಥಿತಿಗಳೊಂದಿಗೆ ನಿಭಾಯಿಸಲು ಸಹಾಯಮಾಡಬಲ್ಲದು? [w03-KA 8/1 ಪು. 5 ಪ್ಯಾರ. 2-5]
10. ಉದಾರವಾಗಿ ಕೊಡುವುದರಲ್ಲಿ ಯೆಹೋವನು ಇಟ್ಟಿರುವ ಮಾದರಿಯು ನಮ್ಮನ್ನು ಹೇಗೆ ಪ್ರಭಾವಿಸಬೇಕು? (ಮತ್ತಾ. 10:8) [w03-KA 8/1 ಪು. 20-2]
ಸಾಪ್ತಾಹಿಕ ಬೈಬಲ್ ವಾಚನ
11. ಸೊಲೊಮೋನನು ಕಟ್ಟಿಸಿದ ಆಲಯದ ಪ್ರವೇಶದ್ವಾರದಲ್ಲಿದ್ದ, ಯಾಕೀನ್ ಮತ್ತು ಬೋವಜ್ ಎಂಬ ಹೆಸರುಳ್ಳ ಎರಡು ಕಂಬಗಳಿಂದ ಏನು ಸೂಚಿಸಲ್ಪಟ್ಟಿತ್ತು? (1 ಅರ. 7:15-22)
12. ಸೊಲೊಮೋನನು ತೂರಿನ ಅರಸನಾದ ಹೀರಾಮನಿಗೆ ಗಲಿಲಾಯ ಪ್ರಾಂತದಲ್ಲಿ ಕೊಟ್ಟ 20 ಪಟ್ಟಣಗಳ ದಾನವು ಮೋಶೆಯ ಧರ್ಮಶಾಸ್ತ್ರಕ್ಕನುಸಾರವಾಗಿತ್ತೊ? (1 ಅರ. 9:10-13)
13. “ಒಬ್ಬ ದೇವರ ಮನುಷ್ಯನ” ಅವಿಧೇಯತೆಯಿಂದ ನಾವು ಯಾವ ಪಾಠವನ್ನು ಕಲಿಯಬಹುದು? (1 ಅರ. 13:1-25)
14. ಯೆಹೂದದ ರಾಜ ಆಸನು ತನ್ನ ಧೈರ್ಯವನ್ನು ಹೇಗೆ ಪ್ರದರ್ಶಿಸಿದನು, ಮತ್ತು ಅವನ ಮಾದರಿಯಿಂದ ನಾವೇನನ್ನು ಕಲಿಯಬಲ್ಲೆವು? (1 ಅರ. 15:11-13)
15. ರಾಜ ಅಹಾಬ ಮತ್ತು ನಾಬೋತರು ಒಳಗೊಂಡಿದ್ದ ಘಟನೆಯು, ಸ್ವಾನುಕಂಪದ ಅಪಾಯವನ್ನು ಹೇಗೆ ದೃಷ್ಟಾಂತಿಸುತ್ತದೆ? (1 ಅರ. 21:1-16)