ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ನವೆಂಬರ್: ಬೈಬಲ್—ಅದರಲ್ಲಿ ಏನಿದೆ? ಈ ಹೊಸ ಬ್ರೋಷರ್‌ನೊಂದಿಗೆ ಕೆಳಗಿನವುಗಳನ್ನೂ ನೀಡಬಹುದು: ಸಕಲ ಜನರಿಗಾಗಿರುವ ಒಂದು ಗ್ರಂಥ, ಸಂತೃಪ್ತಿಕರವಾದ ಜೀವನ ಲಭ್ಯವಾಗುವ ವಿಧ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಡಿಸೆಂಬರ್: ಜೀವಿಸಿರುವವರಲ್ಲೇ ಅತ್ಯಂತ ಮಹಾನ್ ಪುರುಷ. ಮನೆಯಲ್ಲಿ ಮಕ್ಕಳಿರುವಲ್ಲಿ ಬೈಬಲ್ ಕಥೆಗಳ ನನ್ನ ಪುಸ್ತಕ ನೀಡಿ. ಜನವರಿ: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮನೆಯವನ ಬಳಿ ಈ ಪುಸ್ತಕ ಇರುವುದಾದರೆ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1995ಕ್ಕೆ ಮುಂಚೆ ಪ್ರಕಟವಾದ ಬೇರಾವುದೇ ಪುಸ್ತಕವನ್ನು ಪ್ರಚಾರಕರು ನೀಡಬಹುದು. ಫೆಬ್ರವರಿ: ಕುಟುಂಬ ಸಂತೋಷದ ರಹಸ್ಯ.