ಮಾರ್ಚ್ 10ರ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 10ರ ವಾರ
ಗೀತೆ 115 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 12 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 40-42 (10 ನಿ.)
ನಂ. 1: ಆದಿಕಾಂಡ 41:1-16 (4 ನಿಮಿಷದೊಳಗೆ)
ನಂ. 2: ಬೈಬಲನ್ನು ಸಕಲ ರಾಷ್ಟ್ರ ಕುಲಗಳ ಜನರಿಗಾಗಿ ಬರೆಯಲಾಗಿದೆ—ಬೈಬಲ್ ವಿಷಯಗಳು 22 ಸಿ (5 ನಿ.)
ನಂ. 3: ಅಬೀಹುಗೆ ಅಧಿಕಾರವಿದ್ದರೂ ಅವಿಧೇಯತೆಗೆ ಸಿಗುವ ಶಿಕ್ಷೆಯಿಂದ ವಿನಾಯಿತಿ ಸಿಗಲಿಲ್ಲ—ವಿಮೋ 24:1, 9-11; 28:1, 40-43; 29:10-46; 30:26-38; ಯಾಜ 8:1-3, 13-36; 10:1-7; ಅರ 3:2-4; 1ಪೂರ್ವ 24:1, 2 (5 ನಿ.)
ಸೇವಾ ಕೂಟ:
15 ನಿ: ಚೈತನ್ಯಕರವಾದ ಕುಟುಂಬ ಆರಾಧನೆ. ತಮ್ಮ ಕುಟುಂಬ ಆರಾಧನೆಯ ಕುರಿತು ತಿಳಿಸುವಂತೆ ಕುಟುಂಬವೊಂದನ್ನು ಸಂದರ್ಶನ ಮಾಡಿ. ಅವರ ಕುಟುಂಬ ಆರಾಧನೆಯಲ್ಲಿ ಯಾವ ವಿಷಯಗಳು ಒಳಗೂಡಿರುತ್ತವೆ? ಯಾವುದರ ಬಗ್ಗೆ ಚರ್ಚಿಸಬೇಕೆಂದು ಅವರು ಹೇಗೆ ತೀರ್ಮಾನಿಸುತ್ತಾರೆ? jw.org ವೆಬ್ ಸೈಟ್ನಲ್ಲಿ ಲಭ್ಯವಿರುವ ಯಾವ ಸಾಧನಗಳನ್ನು ಕುಟುಂಬ ಆರಾಧನೆಯಲ್ಲಿ ಉಪಯೋಗಿಸಿದ್ದಾರೆ? ಕುಟುಂಬ ಆರಾಧನೆ ಮಾಡುವುದು ಸಾರುವ ಕೆಲಸಕ್ಕೆ ಹೇಗೆ ನೆರವಾಗಿದೆ? ಇತರ ಚಟುವಟಿಕೆಗಳು ತಮ್ಮ ಶೆಡ್ಯೂಲ್ಗೆ ಅಡ್ಡಿಬರದಂತೆ ಹೇಗೆ ನೋಡಿಕೊಳ್ಳುತ್ತಾರೆ? ಈ ಕುಟುಂಬ ಆರಾಧನಾ ಕಾರ್ಯಕ್ರಮದಿಂದ ಅವರು ಯಾವ ಪ್ರಯೋಜನಗಳನ್ನು ಪಡೆದಿದ್ದಾರೆ?
15 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಂಭವನೀಯ ಸಂಭಾಷಣಾ ತಡೆಗಳಿಗೆ ಪ್ರತಿಕ್ರಿಯಿಸುವ ವಿಧ.” ಚರ್ಚೆ. ಪ್ರಚಾರಕರಿಗೆ ಎದುರಾಗಬಹುದಾದ ಎರಡು ಅಥವಾ ಮೂರು ಸಂಭವನೀಯ ಸಂಭಾಷಣಾ ತಡೆಗಳನ್ನು ಪರಿಗಣಿಸಿ ಮತ್ತು ಅಂಥ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬಹುದೆಂದು ಕೇಳಿ. ಏಪ್ರಿಲ್ 7ರ ವಾರದಲ್ಲಿ ಈ ವಿಷಯದಲ್ಲಿ ತಮಗಾದ ಅನುಭವಗಳನ್ನು ತಿಳಿಸುವ ಅವಕಾಶ ಇದೆಯೆಂದು ಪ್ರಚಾರಕರಿಗೆ ನೆನಪಿಸಿ.
ಗೀತೆ 97 ಮತ್ತು ಪ್ರಾರ್ಥನೆ