ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಪು. 62-ಪು. 65 ಪ್ಯಾ. 4
  • ಸಂಭಾಷಣಾ ಕೌಶಲಗಳನ್ನು ಉತ್ತಮಗೊಳಿಸುವ ವಿಧ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂಭಾಷಣಾ ಕೌಶಲಗಳನ್ನು ಉತ್ತಮಗೊಳಿಸುವ ವಿಧ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮನೆಯಲ್ಲೇ ಆರಂಭಿಸುವುದು
  • ಒಬ್ಬ ಅಪರಿಚಿತನೊಂದಿಗೆ ಸಂಭಾಷಣೆ ನಡೆಸುವುದು
  • ಸಂಭಾಷಣೆಯನ್ನು ಮುಂದುವರಿಸುವ ವಿಧ
  • ಜೊತೆವಿಶ್ವಾಸಿಗಳೊಂದಿಗೆ ಇರುವಾಗ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅನೌಪಚಾರಿಕವಾಗಿ ಸಾಕ್ಷಿ ನೀಡಲು ಮೊದಲ ಹೆಜ್ಜೆ ತೆಗೆದುಕೊಳ್ಳಿ
    2014 ನಮ್ಮ ರಾಜ್ಯದ ಸೇವೆ
  • ಸಂಭಾಷಣೆಯು ಒಂದು ಕಲೆ
    ಎಚ್ಚರ!—1995
  • ನಾನು ಚೆನ್ನಾಗಿ ಮಾತಾಡೋ ಕಲೆನಾ ಬೆಳೆಸಿಕೊಳ್ಳೋಕೆ ಏನು ಮಾಡಲಿ?
    ಯುವಜನರ ಪ್ರಶ್ನೆಗಳು
  • ಸುವಾರ್ತೆಯನ್ನು ನೀಡುವದು—ಜನರೊಂದಿಗೆ ಸಂಭಾಷಿಸುವ ಮೂಲಕ
    1990 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಪು. 62-ಪು. 65 ಪ್ಯಾ. 4

ಸಂಭಾಷಣಾ ಕೌಶಲಗಳನ್ನು ಉತ್ತಮಗೊಳಿಸುವ ವಿಧ

ಇತರರೊಂದಿಗೆ ಸಂಭಾಷಣೆ ಮಾಡುವುದು ನಿಮಗೆ ಸಾಮಾನ್ಯವಾಗಿ ಸುಲಭವಾದ ವಿಷಯವಾಗಿದೆಯೊ? ಅನೇಕರಿಗೆ, ಸಂಭಾಷಣೆಯಲ್ಲಿ ತೊಡಗುವ ವಿಚಾರವೇ, ಅದರಲ್ಲೂ ಪರಿಚಯವಿಲ್ಲದವರೊಂದಿಗೆ ಸಂಭಾಷಣೆ ನಡೆಸುವ ಯೋಚನೆಯೇ ಕಳವಳವನ್ನು ಉಂಟುಮಾಡುತ್ತದೆ. ಇಂತಹ ಜನರು ನಾಚಿಕೆ ಸ್ವಭಾವದವರಾಗಿರಬಹುದು. ಅವರು ಹೀಗೆ ಯೋಚಿಸಬಹುದು: ‘ನಾನು ಯಾವ ವಿಷಯದ ಕುರಿತು ಮಾತಾಡಬೇಕು? ಆ ಚರ್ಚೆಯನ್ನು ಆರಂಭಿಸುವುದಾದರೂ ಹೇಗೆ? ಅದನ್ನು ಹೇಗೆ ಮುಂದುವರಿಸಬಲ್ಲೆ?’ ಭರವಸಚಿತ್ತರೂ ಸ್ನೇಹಪರರೂ ಆದ ಜನರು ಸಂಭಾಷಣೆಯಲ್ಲಿ ಮೇಲುಗೈ ಪಡೆಯಬಹುದು. ಆದರೆ ಇತರರನ್ನು ಪ್ರಶ್ನಿಸಿ, ಅವರು ಮಾತಾಡುವಂತೆ ಮಾಡುವುದು ಮತ್ತು ಅವರು ಹೇಳುವುದನ್ನು ಕೇಳಿಸಿಕೊಳ್ಳಲು ಕಲಿಯುವುದು ಅವರೆದುರಿಗಿರುವ ಸವಾಲಾಗಿದೆ. ಆದುದರಿಂದ, ನಾವು ನಾಚಿಕೆ ಸ್ವಭಾವದವರಾಗಲಿ, ಸ್ನೇಹಪರರಾಗಲಿ, ನಾವೆಲ್ಲರೂ ಸಂಭಾಷಣೆಯ ಕಲೆಯನ್ನು ಬೆಳೆಸಿಕೊಳ್ಳುತ್ತಾ ಹೋಗುವ ಅಗತ್ಯವಿದೆ.

ಮನೆಯಲ್ಲೇ ಆರಂಭಿಸುವುದು

ನಿಮ್ಮ ಸಂಭಾಷಣಾ ಕೌಶಲಗಳನ್ನು ಉತ್ತಮಗೊಳಿಸಲು ಮನೆಯಲ್ಲೇ ಏಕೆ ಆರಂಭಿಸಬಾರದು? ಆತ್ಮೋನ್ನತಿಯನ್ನು ಮಾಡುವ ಸಂಭಾಷಣೆಯು, ಕುಟುಂಬದ ಸಂತೋಷಕ್ಕೆ ಹೆಚ್ಚಿನ ನೆರವನ್ನು ನೀಡಬಲ್ಲದು.

ಇಂತಹ ಸಂಭಾಷಣೆಗಾಗಿರುವ ಅತಿ ಮುಖ್ಯ ಕೀಲಿ ಕೈ, ಒಬ್ಬರು ಇನ್ನೊಬ್ಬರ ಕುರಿತು ಗಾಢವಾದ ಚಿಂತೆಯನ್ನು ವ್ಯಕ್ತಪಡಿಸುವುದೇ ಆಗಿದೆ. (ಧರ್ಮೋ. 6:6, 7; ಜ್ಞಾನೋ. 4:1-4) ಹೀಗೆ ನಾವು ಚಿಂತಿಸುವಾಗ ಮಾತುಕತೆ ನಡಿಸುತ್ತೇವೆ ಮಾತ್ರವಲ್ಲ, ಆ ವ್ಯಕ್ತಿಯು ಏನಾದರೂ ಹೇಳಲು ಬಯಸುವಾಗ ನಾವು ಕಿವಿಗೊಡುತ್ತೇವೆ. ಇನ್ನೊಂದು ಮುಖ್ಯ ಅಂಶವೇನೆಂದರೆ, ಹೇಳಲು ನಮ್ಮಲ್ಲಿ ಪ್ರಯೋಜನಕರವಾದ ಯಾವುದಾದರೂ ವಿಷಯವಿರಬೇಕು. ವೈಯಕ್ತಿಕ ಬೈಬಲ್‌ ವಾಚನ ಮತ್ತು ಅಧ್ಯಯನದ ಕ್ರಮವಾದ ಕಾರ್ಯಕ್ರಮವು ನಮಗಿರುವಲ್ಲಿ, ಇತರರೊಂದಿಗೆ ಹಂಚಿಕೊಳ್ಳಲು ನಮ್ಮಲ್ಲಿ ಹೇರಳವಾದ ವಿಷಯಗಳಿರುವವು. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಪುಸ್ತಿಕೆಯ ವಿವೇಕಪೂರ್ಣವಾದ ಉಪಯೋಗವು, ಚರ್ಚೆಯನ್ನು ಉದ್ರೇಕಿಸಬಲ್ಲದು. ಆ ದಿನ ಕ್ಷೇತ್ರ ಸೇವೆಯಲ್ಲಿ ಪ್ರಾಯಶಃ ಒಂದು ಆನಂದಕರವಾದ ಅನುಭವ ನಮಗಾಗಿರಬಹುದು. ನಾವು ಬೋಧಪ್ರದವಾದ ಅಥವಾ ಹಾಸ್ಯಕರವಾದ ಒಂದು ವಿಷಯವನ್ನು ಓದಿರಬಹುದು. ಕುಟುಂಬದ ಹಿತಕರವಾದ ಸಂಭಾಷಣೆಯ ಸಮಯದಲ್ಲಿ ನಾವು ಇದನ್ನು ಹಂಚಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು. ಇದು ಕುಟುಂಬ ವೃತ್ತದ ಹೊರಗಿರುವ ಜನರೊಡನೆ ನಾವು ಸಂಭಾಷಿಸುವಂತೆಯೂ ಸಹಾಯಮಾಡಬಲ್ಲದು.

ಒಬ್ಬ ಅಪರಿಚಿತನೊಂದಿಗೆ ಸಂಭಾಷಣೆ ನಡೆಸುವುದು

ಅನೇಕರು ಅಪರಿಚಿತರೊಂದಿಗೆ ಸಂಭಾಷಣೆ ನಡೆಸಲು ಹಿಂಜರಿಯುತ್ತಾರೆ. ಆದರೆ, ದೇವರ ಮತ್ತು ನೆರೆಯವರ ಕಡೆಗಿನ ಪ್ರೀತಿಯ ಕಾರಣ, ಬೈಬಲ್‌ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳಲಿಕ್ಕಾಗಿ ಯೆಹೋವನ ಸಾಕ್ಷಿಗಳು ಸಂಭಾಷಣೆ ಮಾಡುವುದನ್ನು ಕಲಿಯಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುತ್ತಾರೆ. ಈ ಕ್ಷೇತ್ರದಲ್ಲಿ ಪ್ರಗತಿಯನ್ನು ಮಾಡಲು ಯಾವುದು ಸಹಾಯಮಾಡಬಲ್ಲದು?

ಫಿಲಿಪ್ಪಿ 2:4 ರಲ್ಲಿ ಕೊಡಲ್ಪಟ್ಟಿರುವ ಮೂಲತತ್ತ್ವವು ಬೆಲೆಬಾಳುವಂಥದ್ದಾಗಿದೆ. ‘[ನಮ್ಮಲ್ಲಿ] ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಬೇಕು’ ಎಂದು ನಮ್ಮನ್ನು ಪ್ರೋತ್ಸಾಹಿಸಲಾಗಿದೆ. ಹೀಗೆ ಯೋಚಿಸಿರಿ: ನೀವು ಆ ವ್ಯಕ್ತಿಯನ್ನು ಈ ಮೊದಲು ಭೇಟಿಯಾಗಿಲ್ಲದಿರುವಲ್ಲಿ, ಅವನು ನಿಮ್ಮನ್ನು ಅಪರಿಚಿತನಂತೆ ಪರಿಗಣಿಸುತ್ತಾನೆ. ಹಾಗಾದರೆ ನೀವು ಅವನನ್ನು ಆರಾಮವಾಗಿರುವಂತೆ ಹೇಗೆ ಮಾಡಬಲ್ಲಿರಿ? ಆದರಣೀಯ ಮುಗುಳುನಗೆ ಮತ್ತು ಸ್ನೇಹಪರವಾದ ವಂದನೆಯು ಇದನ್ನು ಮಾಡಲು ಸಹಾಯಮಾಡುತ್ತದೆ. ಆದರೆ ಇನ್ನೂ ಹೆಚ್ಚಿನ ವಿಷಯಗಳು ಇದರಲ್ಲಿ ಸೇರಿವೆ.

ಅವನು ಏನನ್ನೋ ಯೋಚಿಸುತ್ತಿರುವಾಗ ನೀವು ಅವನನ್ನು ಸಂದರ್ಶಿಸಿರಬಹುದು. ಆಗ, ಅವನ ಮನಸ್ಸಿನಲ್ಲಿ ಏನಿದೆಯೋ ಅದಕ್ಕೆ ಸ್ಪಂದಿಸುವುದನ್ನು ಬಿಟ್ಟು, ನಿಮ್ಮ ಮನಸ್ಸಿನಲ್ಲಿ ಏನಿದೆಯೊ ಅದನ್ನು ಅವನು ಚರ್ಚಿಸುವಂತೆ ನೀವು ಪ್ರಯತ್ನಿಸುವುದಾದರೆ, ಅವನು ಸಕಾರಾತ್ಮಕ ಪ್ರತಿವರ್ತನೆಯನ್ನು ತೋರಿಸುವನೊ? ಸಮಾರ್ಯದ ಬಾವಿಯೊಂದರ ಬಳಿ ಒಬ್ಬ ಸ್ತ್ರೀಯನ್ನು ಭೇಟಿಯಾದಾಗ ಯೇಸು ಏನು ಮಾಡಿದನು? ಆಕೆಯ ಮನಸ್ಸು ನೀರನ್ನು ಸೇದುವುದರ ಮೇಲಿತ್ತು. ಯೇಸು ಆಕೆಯೊಂದಿಗೆ ಆ ವಿಷಯದ ಆಧಾರದ ಮೇಲೆ ಸಂಭಾಷಣೆಯನ್ನು ಆರಂಭಿಸಿದನು ಮತ್ತು ಅದನ್ನು ಬೇಗನೆ ಸಜೀವವಾದ ಆತ್ಮಿಕ ಚರ್ಚೆಯಾಗಿ ಮಾರ್ಪಡಿಸಿದನು.—ಯೋಹಾ. 4:7-26.

ನೀವು ಜಾಗರೂಕತೆಯಿಂದ ಗಮನಿಸುವವರಾಗಿರುವಲ್ಲಿ, ಜನರು ಯಾವುದರ ಕುರಿತು ಆಲೋಚಿಸುತ್ತಿದ್ದಾರೆಂಬುದನ್ನು ನೀವು ಗ್ರಹಿಸಬಲ್ಲಿರಿ. ಆ ವ್ಯಕ್ತಿ ಸಂತೋಷದಿಂದಿರುವಂತೆ ಕಾಣುತ್ತಾನೊ, ದುಃಖಿತನಾಗಿ ತೋರುತ್ತಾನೊ? ಅವನು ವೃದ್ಧನೊ, ಪ್ರಾಯಶಃ ದುರ್ಬಲನೊ? ಮಕ್ಕಳು ಮನೆಯಲ್ಲಿದ್ದಾರೆಂಬ ರುಜುವಾತು ಕಾಣುತ್ತದೊ? ಆ ವ್ಯಕ್ತಿ ಪ್ರಾಪಂಚಿಕ ಸಂಪತ್ತುಳ್ಳವನಂತೆ ಕಾಣುತ್ತಾನೊ ಅಥವಾ ಜೀವನಾವಶ್ಯಕತೆಗಳಿಗಾಗಿ ಹೆಣಗಾಡುತ್ತಿರುವವನಂತೆ ಕಾಣುತ್ತಾನೊ? ಗೃಹಾಲಂಕಾರ ಅಥವಾ ಸ್ವಂತ ಆಭರಣಗಳು ಧಾರ್ಮಿಕ ಪ್ರಭಾವವನ್ನು ಸೂಚಿಸುತ್ತವೋ? ನಿಮ್ಮ ವಂದನಾ ನುಡಿಗಳು ಅಂತಹ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ, ಆ ವ್ಯಕ್ತಿಯು ನಿಮ್ಮನ್ನು ಸಮಾನವಾದ ಅಭಿರುಚಿಯುಳ್ಳವರಂತೆ ಪರಿಗಣಿಸಬಹುದು.

ಆದರೆ ನೀವು ಮನೆಯವನನ್ನು ಮುಖಾಮುಖಿಯಾಗಿ ಭೇಟಿಯಾಗದೆ, ಪ್ರಾಯಶಃ ಬೀಗಹಾಕಿರುವ ಬಾಗಿಲಿನ ಮೂಲಕ ಬರುವ ಸ್ವರವನ್ನು ಮಾತ್ರ ಕೇಳಿಸಿಕೊಳ್ಳುವುದಾದರೆ, ನೀವು ಯಾವ ತೀರ್ಮಾನಕ್ಕೆ ಬರುವಿರಿ? ಅವನು ಭಯದಿಂದ ಜೀವಿಸುತ್ತಿರುವ ವ್ಯಕ್ತಿಯಾಗಿರಬಹುದೆಂದೇ. ಆ ವಿಷಯವನ್ನು ಉಪಯೋಗಿಸುತ್ತಾ ನೀವು ಮುಚ್ಚಿರುವ ಬಾಗಿಲಿನ ಮೂಲಕವೇ ಸಂಭಾಷಣೆಗೆ ತೊಡಗಬಲ್ಲಿರೊ?

ಕೆಲವು ಕಡೆಗಳಲ್ಲಿ, ನಿಮ್ಮ ಕುರಿತಾಗಿಯೇ ಕೆಲವು ವಿಷಯಗಳನ್ನು ತಿಳಿಸುವ ಮೂಲಕ, ಅಂದರೆ ನಿಮ್ಮ ಹಿನ್ನೆಲೆ, ನೀವು ಆ ವ್ಯಕ್ತಿಯ ಮನೆಗೆ ಬಂದಿರುವ ಕಾರಣ, ನೀವು ದೇವರಲ್ಲಿ ನಂಬಿಕೆಯಿಟ್ಟಿರುವ ಕಾರಣ, ನೀವು ಬೈಬಲಿನ ಅಧ್ಯಯನವನ್ನು ಮಾಡತೊಡಗಲು ಕಾರಣ ಮತ್ತು ಬೈಬಲು ನಿಮಗೆ ಸಹಾಯ ಮಾಡಿರುವ ವಿಧದ ಕುರಿತು ತಿಳಿಸುವ ಮೂಲಕ, ಒಬ್ಬ ವ್ಯಕ್ತಿಯನ್ನು ಸಂಭಾಷಣೆಗೆ ಎಳೆಯಸಾಧ್ಯವಿದೆ. (ಅ. ಕೃ. 26:4-23) ಆದರೆ ಇದನ್ನು ವಿವೇಚನೆಯಿಂದ, ಮನಸ್ಸಿನಲ್ಲಿ ಸ್ಪಷ್ಟವಾದ ಧ್ಯೇಯವುಳ್ಳವರಾಗಿ ಮಾಡುವುದು ಅಗತ್ಯ. ಇದಕ್ಕೆ ಪ್ರತಿಯಾಗಿ, ಆ ವ್ಯಕ್ತಿಯು ಸ್ವತಃ ತನ್ನ ವಿಷಯವಾಗಿ ಮತ್ತು ಅವನು ವಿಷಯಗಳನ್ನು ಯಾವ ದೃಷ್ಟಿಕೋನದಿಂದ ನೋಡುತ್ತಾನೆಂಬುದರ ಬಗ್ಗೆ ಮಾತಾಡುವಂತೆ ಪ್ರೇರಿಸಲ್ಪಟ್ಟಾನು.

ಕೆಲವು ಸಂಸ್ಕೃತಿಗಳಲ್ಲಿ, ಅಪರಿಚಿತರಿಗೆ ಅತಿಥಿಸತ್ಕಾರವನ್ನು ಮಾಡುವುದು ವಾಡಿಕೆಯಾಗಿದೆ. ಒಳಗೆ ಬಂದು ಕುಳಿತುಕೊಳ್ಳಿರಿ ಎಂದು ಜನರು ನಿಮ್ಮನ್ನು ಸಿದ್ಧಮನಸ್ಸಿನಿಂದ ಕರೆಯಬಹುದು. ನೀವು ಕುಳಿತಾದ ಮೇಲೆ, ಆ ಕುಟುಂಬದ ಹಿತಕ್ಷೇಮದ ಬಗ್ಗೆ ನೀವು ವಿನಯದಿಂದ ಕೇಳುವಲ್ಲಿ ಮತ್ತು ಅವರ ಉತ್ತರಕ್ಕೆ ಯಥಾರ್ಥತೆಯಿಂದ ಕಿವಿಗೊಡುವಲ್ಲಿ, ನೀವು ಹೇಳಲಿರುವ ವಿಷಯಕ್ಕೂ ಮನೆಯವನು ಅಷ್ಟೇ ಆಸಕ್ತಿಯಿಂದ ಗಮನಕೊಟ್ಟಾನು. ಬೇರೆ ಕಡೆಗಳಲ್ಲಿ ಜನರು ಸಂದರ್ಶಕರಲ್ಲಿ ಇನ್ನೂ ಹೆಚ್ಚು ತೀವ್ರಾಸಕ್ತಿಯನ್ನು ತೋರಿಸುವುದರಿಂದ, ಸಂಭಾಷಣೆಗೆ ಮುಂಚೆ ಅವರೊಂದಿಗೆ ಇನ್ನೂ ಹೆಚ್ಚು ಸಮಯವನ್ನು ವ್ಯಯಿಸಬೇಕಾಗಬಹುದು. ಈ ಕಾರ್ಯಗತಿಯಲ್ಲಿ, ನಿಮಗೂ ಅವರಿಗೂ ಸಮಾನಾಸಕ್ತಿಯಿರುವ ವಿಷಯಗಳಿವೆ ಎಂಬುದನ್ನು ಅವರು ಕಂಡುಕೊಳ್ಳಬಹುದು. ಇದು ಪ್ರಯೋಜನಕರವಾದ ಆತ್ಮಿಕ ಚರ್ಚೆಗೆ ನಡೆಸಬಹುದು.

ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಭಾಷೆಗಿಂತ ಭಿನ್ನವಾಗಿರುವ ಭಾಷೆಗಳನ್ನು ಮಾತಾಡುವ ಅನೇಕ ಜನರಿರುವುದಾದರೆ ಆಗೇನು? ನೀವು ಅಂಥವರನ್ನು ಹೇಗೆ ತಲಪಬಲ್ಲಿರಿ? ಅಂಥ ಕೆಲವು ಭಾಷೆಗಳಲ್ಲಿ ಕೇವಲ ಸರಳವಾದ ವಂದನೆಗಳನ್ನು ನೀವು ಕಲಿತರೂ, ನಿಮಗೆ ಅವರಲ್ಲಿ ಆಸಕ್ತಿಯಿದೆಯೆಂದು ಜನರು ಗ್ರಹಿಸುವರು. ಇದು ಇನ್ನೂ ಹೆಚ್ಚಿನ ಸಂವಾದಕ್ಕೆ ದಾರಿಯನ್ನು ತೆರೆಯಬಹುದು.

ಸಂಭಾಷಣೆಯನ್ನು ಮುಂದುವರಿಸುವ ವಿಧ

ಸಂಭಾಷಣೆಯನ್ನು ಮುಂದುವರಿಸಲಿಕ್ಕಾಗಿ, ಆ ವ್ಯಕ್ತಿಯ ಆಲೋಚನೆಗಳಲ್ಲಿ ಆಸಕ್ತಿ ತೋರಿಸಿರಿ. ಅವನಿಗೆ ಇಷ್ಟವಿರುವಲ್ಲಿ ಅವನು ತನ್ನ ಮನಸ್ಸಿನಲ್ಲಿರುವ ವಿಚಾರಗಳನ್ನು ವ್ಯಕ್ತಪಡಿಸುವಂತೆ ಪ್ರೋತ್ಸಾಹಿಸಿರಿ. ಜಾಗರೂಕತೆಯಿಂದ ಆಯ್ಕೆಮಾಡಿರುವ ಪ್ರಶ್ನೆಗಳು ಸಹಾಯಕರವಾಗಿರಸಾಧ್ಯವಿದೆ. ದೃಷ್ಟಿಕೋನ ಪ್ರಶ್ನೆಗಳನ್ನು ಕೇಳುವುದು ಅತ್ಯುತ್ತಮವಾದದ್ದಾಗಿದೆ, ಏಕೆಂದರೆ ಸಾಮಾನ್ಯವಾಗಿ ಅವುಗಳಿಗೆ ಸಿಗುವ ಉತ್ತರವು ಹೌದು ಅಥವಾ ಇಲ್ಲ ಎಂಬುದಕ್ಕಿಂತಲೂ ಹೆಚ್ಚಾಗಿರುತ್ತದೆ. ಉದಾಹರಣೆಗೆ, ಒಂದು ಸ್ಥಳಿಕ ಸಮಸ್ಯೆಯ ಕುರಿತು ಹೇಳಿದ ಮೇಲೆ, “ಈ ಸ್ಥಿತಿಗತಿಗೆ ಕಾರಣವೇನೆಂದು ನೀವು ನೆನಸುತ್ತೀರಿ?” ಅಥವಾ “ಅದಕ್ಕೆ ಪರಿಹಾರವೇನೆಂದು ನೀವೆಣಿಸುತ್ತೀರಿ?” ಎಂದು ನೀವು ಪ್ರಶ್ನಿಸಬಹುದು.

ಒಂದು ಪ್ರಶ್ನೆಯನ್ನು ಕೇಳಿದ ಮೇಲೆ, ಕೊಡಲ್ಪಡುವ ಉತ್ತರಕ್ಕೆ ಕಿವಿಗೊಟ್ಟು ಆಲಿಸಿರಿ. ಮಾತಿನ ಮೂಲಕವೊ, ತಲೆಯನ್ನು ಅಲ್ಲಾಡಿಸುತ್ತಲೊ, ಭಾವಾಭಿನಯದಿಂದಲೋ, ನಿಮ್ಮ ನಿಜಾಸಕ್ತಿಯನ್ನು ತೋರಿಸಿರಿ. ಮಧ್ಯೆ ಬಾಯಿ ಹಾಕಬೇಡಿ. ಬಿಚ್ಚುಮನಸ್ಸಿನಿಂದ ಹೇಳಲ್ಪಡುತ್ತಿರುವ ವಿಷಯವನ್ನು ಪರಿಗಣಿಸಿ. “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ.” (ಯಾಕೋ. 1:19) ನೀವು ಪ್ರತ್ಯುತ್ತರ ಕೊಡುವಾಗ, ಅವರು ಹೇಳುತ್ತಿದ್ದ ವಿಷಯವನ್ನು ನೀವು ನಿಜವಾಗಿಯೂ ಕಿವಿಗೊಡುತ್ತಿದ್ದಿರೆಂಬುದನ್ನು ತೋರಿಸಿರಿ.

ಆದರೆ, ಪ್ರತಿಯೊಬ್ಬನೂ ನಿಮ್ಮ ಪ್ರಶ್ನೆಗಳನ್ನು ಉತ್ತರಿಸಲಿಕ್ಕಿಲ್ಲವೆಂಬುದನ್ನು ತಿಳಿದುಕೊಳ್ಳಿರಿ. ಕೆಲವರ ಪ್ರತಿಕ್ರಿಯೆ, ಹುಬ್ಬೇರಿಸುವಿಕೆ ಅಥವಾ ಮುಗುಳು ನಗೆ ಮಾತ್ರ ಆಗಿರಬಹುದು. ಇತರರು ಹೌದು ಅಥವಾ ಇಲ್ಲ ಎಂದಷ್ಟೇ ಹೇಳಿಯಾರು. ಆಗ ಹತಾಶರಾಗಬೇಡಿ. ತಾಳ್ಮೆಯುಳ್ಳವರಾಗಿರಿ. ಸಂಭಾಷಣೆಯನ್ನು ಬಲಾತ್ಕಾರದಿಂದ ಮುಂದುವರಿಸಲು ಪ್ರಯತ್ನಿಸಬೇಡಿ. ಆ ವ್ಯಕ್ತಿ ಕಿವಿಗೊಡಲು ಇಷ್ಟಪಡುವಲ್ಲಿ, ಆ ಸಂದರ್ಭವನ್ನು ಆತ್ಮೋನ್ನತಿ ಮಾಡುವಂಥ ಶಾಸ್ತ್ರೀಯ ವಿಷಯಗಳನ್ನು ಹಂಚಿಕೊಳ್ಳಲಿಕ್ಕಾಗಿ ಉಪಯೋಗಿಸಿರಿ. ಆ ವ್ಯಕ್ತಿ ಸಕಾಲದಲ್ಲಿ ನಿಮ್ಮನ್ನು ಮಿತ್ರನೆಂದು ಪರಿಗಣಿಸಲಾರಂಭಿಸಬಹುದು. ಪ್ರಾಯಶಃ ಆಗ ಅವನು ತನ್ನ ಅನಿಸಿಕೆಗಳನ್ನು ಇನ್ನೂ ಹೆಚ್ಚು ಮುಕ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವನು.

ನೀವು ಜನರೊಂದಿಗೆ ಮಾತಾಡುವಾಗ, ಭವಿಷ್ಯತ್ತಿನ ಪುನರ್ಭೇಟಿಗಳಿಗಾಗಿ ಸಿದ್ಧತೆಯನ್ನು ಮಾಡಿರಿ. ಒಬ್ಬ ವ್ಯಕ್ತಿಯು ಅನೇಕ ಪ್ರಶ್ನೆಗಳನ್ನು ಕೇಳುವಲ್ಲಿ, ಅವುಗಳಲ್ಲಿ ಕೆಲವನ್ನು ಉತ್ತರಿಸಿ, ಮುಂದಿನ ಭೇಟಿಯಲ್ಲಿ ಚರ್ಚಿಸಲಿಕ್ಕಾಗಿ ಒಂದೆರಡು ಪ್ರಶ್ನೆಗಳನ್ನು ಉಳಿಸಿರಿ. ಅದರ ವಿಷಯವಾಗಿ ಸಂಶೋಧನೆ ನಡೆಸುತ್ತೇನೆಂದು ಹೇಳಿ, ತದನಂತರ ಅದರ ಫಲಿತಾಂಶಗಳನ್ನು ಅವನೊಂದಿಗೆ ಹಂಚಿಕೊಳ್ಳಿರಿ. ಅವನು ಪ್ರಶ್ನೆಗಳನ್ನು ಕೇಳದಿರುವಲ್ಲಿ, ಅವನಲ್ಲಿ ಆಸಕ್ತಿ ಹುಟ್ಟಿಸಬಹುದೆಂದು ನೀವು ನೆನಸುವ ಒಂದು ಪ್ರಶ್ನೆಯೊಂದಿಗೆ ನಿಮ್ಮ ಸಂಭಾಷಣೆಯನ್ನು ಮುಕ್ತಾಯಗೊಳಿಸಿರಿ. ಮತ್ತು ಅದನ್ನು ಮುಂದಿನ ಭೇಟಿಯಲ್ಲಿ ಚರ್ಚಿಸುತ್ತೇನೆಂದು ಹೇಳಿರಿ. ಇದರ ಕುರಿತಾದ ಅನೇಕಾನೇಕ ವಿಷಯಗಳು ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್‌) ಪುಸ್ತಕದಲ್ಲಿ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನಲ್ಲಿ ಹಾಗೂ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಇತ್ತೀಚಿನ ಸಂಚಿಕೆಗಳಲ್ಲಿ ಕಂಡುಬರುತ್ತವೆ.

ಜೊತೆವಿಶ್ವಾಸಿಗಳೊಂದಿಗೆ ಇರುವಾಗ

ನೀವು ಇನ್ನೊಬ್ಬ ಯೆಹೋವನ ಸಾಕ್ಷಿಯನ್ನು ಪ್ರಥಮ ಬಾರಿ ಭೇಟಿಯಾಗುವಾಗ, ಅವನ ಪರಿಚಯ ಮಾಡಿಕೊಳ್ಳಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುತ್ತೀರೊ? ಇಲ್ಲವೆ ಸುಮ್ಮನೆ ನಿಂತುಕೊಂಡಿರುತ್ತೀರೊ? ನಮ್ಮ ಸಹೋದರರ ಕಡೆಗೆ ನಮಗಿರುವ ಪ್ರೀತಿಯು, ನಾವು ಅವನ ಪರಿಚಯವನ್ನು ಮಾಡಿಕೊಳ್ಳುವಂತೆ ನಮ್ಮನ್ನು ಪ್ರೇರಿಸಬೇಕು. (ಯೋಹಾ. 13:35) ನೀವು ಹೇಗೆ ಆರಂಭಿಸಬಲ್ಲಿರಿ? ನೀವು ನಿಮ್ಮ ಹೆಸರನ್ನು ಹೇಳಿ, ಆ ವ್ಯಕ್ತಿಯ ಹೆಸರನ್ನು ಕೇಳಬಹುದು. ಸಾಮಾನ್ಯವಾಗಿ, ನೀವು ಸತ್ಯವನ್ನು ಹೇಗೆ ಕಲಿತಿರಿ ಎಂಬ ಪ್ರಶ್ನೆಯು ಆಸಕ್ತಿಕರವಾದ ಸಂಭಾಷಣೆಗೆ ನಡೆಸಿ, ನೀವು ಪರಸ್ಪರ ಪರಿಚಯ ಮಾಡಿಕೊಳ್ಳುವಂತೆ ಸಹಾಯಮಾಡುವುದು. ನೀವು ಹೇಳುವಂಥ ವಿಷಯವು ನಿರರ್ಗಳವಾಗಿ ಬರುತ್ತಿಲ್ಲ ಎಂದು ನಿಮಗನಿಸಿದರೂ, ನಿಮ್ಮ ಪ್ರಯತ್ನವು ಆ ವ್ಯಕ್ತಿಗೆ ನೀವು ಅವನ ಕುರಿತು ಚಿಂತಿಸುತ್ತೀರಿ ಎಂಬುದನ್ನು ಸೂಚಿಸುತ್ತದೆ. ಮತ್ತು ಅದೇ ಮುಖ್ಯ ಸಂಗತಿಯಾಗಿದೆ.

ನಿಮ್ಮ ಸಭೆಯ ಸದಸ್ಯನೊಬ್ಬನೊಂದಿಗೆ ಅರ್ಥವತ್ತಾದ ಸಂಭಾಷಣೆ ನಡೆಸಲು ಯಾವುದು ಸಹಾಯಮಾಡಬಲ್ಲದು? ಆ ವ್ಯಕ್ತಿಯಲ್ಲಿ ಮತ್ತು ಅವನ ಕುಟುಂಬದ ವಿಷಯದಲ್ಲಿ ಯಥಾರ್ಥವಾದ ಆಸಕ್ತಿಯನ್ನು ತೋರಿಸಿರಿ. ಕೂಟವು ಈಗ ತಾನೇ ಮುಗಿದಿದೆಯೆ? ನೀವು ಸಹಾಯಕರವೆಂದು ಕಂಡುಕೊಂಡ ವಿಚಾರಗಳ ಕುರಿತು ಮಾತಾಡಿರಿ. ಇದು ನಿಮಗಿಬ್ಬರಿಗೂ ಪ್ರಯೋಜನಕರವಾಗಿರಬಲ್ಲದು. ಇತ್ತೀಚಿನ ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯಲ್ಲಿ ಬಂದಿರುವ ಆಸಕ್ತಿಕರವಾದ ಒಂದು ವಿಷಯದ ಕುರಿತು ನೀವು ಹೇಳಬಹುದು. ಇದನ್ನು ನಿಮ್ಮ ಜ್ಞಾನದ ಪ್ರದರ್ಶನವಾಗಿಯೋ ಅಥವಾ ಅವರ ಜ್ಞಾನದ ಪರೀಕ್ಷೆಯೋ ಎಂಬಂತೆ ಮಾಡಬಾರದು. ಬದಲಾಗಿ, ನಿಮಗೆ ವಿಶೇಷ ಹರ್ಷವನ್ನು ತಂದಿರುವ ಯಾವುದಾದರೊಂದು ವಿಷಯವನ್ನು ಹಂಚಿಕೊಳ್ಳಲಿಕ್ಕಾಗಿ ಇದನ್ನು ಮಾಡಿರಿ. ನಿಮ್ಮಲ್ಲಿ ಒಬ್ಬನಿಗೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಗವಿರುವುದಾದರೆ, ಅದನ್ನು ಹೇಗೆ ಮಾಡಬಹುದೆಂಬ ವಿಷಯದಲ್ಲಿ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಿರಿ. ನೀವು ಕ್ಷೇತ್ರ ಶುಶ್ರೂಷೆಯ ಅನುಭವಗಳನ್ನೂ ಪರಸ್ಪರ ಹಂಚಿಕೊಳ್ಳಬಹುದು.

ಜನರಲ್ಲಿ ನಮಗಿರುವ ಆಸಕ್ತಿಯು, ಅನೇಕವೇಳೆ ಜನರು ಏನು ಹೇಳುತ್ತಾರೊ ಮತ್ತು ಮಾಡುತ್ತಾರೊ ಆ ವಿಷಯಗಳ ಕುರಿತಾದ ಸಂಭಾಷಣೆಗೆ ನಡೆಸುತ್ತದೆ ಎಂಬುದಂತೂ ನಿಶ್ಚಯ. ಹಾಸ್ಯ ಪ್ರವೃತ್ತಿಯೂ ನಮ್ಮ ಮಾತಿನ ಭಾಗವಾಗಬಹುದು. ನಾವು ಏನು ಹೇಳುತ್ತೇವೋ ಅದು ಆತ್ಮೋನ್ನತಿ ಮಾಡುವಂತಹದ್ದಾಗಿರುತ್ತದೊ? ದೇವರ ವಾಕ್ಯದ ಸಲಹೆಯನ್ನು ನಾವು ಮನಸ್ಸಿಗೆ ತೆಗೆದುಕೊಂಡು, ದೈವಿಕ ಪ್ರೀತಿಯಿಂದ ಪ್ರಚೋದಿಸಲ್ಪಡುವಲ್ಲಿ, ನಮ್ಮ ಮಾತು ನಿಶ್ಚಯವಾಗಿಯೂ ಆತ್ಮೋನ್ನತಿ ಮಾಡುವಂತಹದ್ದಾಗಿರುವುದು.—ಜ್ಞಾನೋ. 16:27, 28; ಎಫೆ. 4:25, 29; 5:3, 4; ಯಾಕೋ. 1:26.

ನಾವು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವ ಮೊದಲು ಅದಕ್ಕಾಗಿ ತಯಾರಿಮಾಡುತ್ತೇವೆ. ಹಾಗಾದರೆ, ಮಿತ್ರರೊಂದಿಗೆ ಸಂಭಾಷಣೆಯಲ್ಲಿ ಒಳಗೂಡುವ ಉದ್ದೇಶದಿಂದ, ಸ್ವಾರಸ್ಯಕರವಾದ ಚುಟುಕುಗಳನ್ನು ಏಕೆ ತಯಾರಿಸಬಾರದು? ನೀವು ಸ್ವಾರಸ್ಯಕರವಾದ ವಿಷಯಗಳನ್ನು ಓದುವಾಗ ಮತ್ತು ಕೇಳಿಸಿಕೊಳ್ಳುವಾಗ, ಇತರರೊಂದಿಗೆ ಹಂಚಿಕೊಳ್ಳಲು ಬಯಸುವಂಥ ವಿಷಯಗಳನ್ನು ಬರೆದಿಟ್ಟುಕೊಳ್ಳಿ. ಸಕಾಲದಲ್ಲಿ, ಆಯ್ಕೆಮಾಡಲು ಬಹಳಷ್ಟು ಸಂಗತಿಗಳು ನಿಮ್ಮಲ್ಲಿರುವವು. ಹೀಗೆ ಮಾಡುವುದರಿಂದ, ಜೀವನದ ದೈನಂದಿನ ನಿಯತಕ್ರಮದ ಕುರಿತು ಮಾತ್ರ ಮಾತಾಡುವುದಕ್ಕಿಂತ ಹೆಚ್ಚು ವಿಶಾಲವಾದ ರೀತಿಯಲ್ಲಿ ಮಾತಾಡಲು ನಿಮಗೆ ಸಾಧ್ಯವಾಗುವುದು. ಎಲ್ಲಕ್ಕಿಂತಲೂ ಮಿಗಿಲಾಗಿ, ದೇವರ ವಾಕ್ಯವು ನಿಮಗೆಷ್ಟು ಅಮೂಲ್ಯವಾಗಿದೆಯೆಂಬುದಕ್ಕೆ ನಿಮ್ಮ ಮಾತು ರುಜುವಾತನ್ನು ನೀಡಲಿ!—ಕೀರ್ತ. 139:17.

ಸಂಭಾಷಣೆಯನ್ನು ಆರಂಭಿಸುವ ಸಹಾಯಕಗಳು

  • ಸ್ಥಳಿಕ ಪದ್ಧತಿಗಳನ್ನು ಅನುಸರಿಸಿರಿ

  • ಮನಃಪೂರ್ವಕವಾಗಿ ಅಭಿನಂದಿಸಿರಿ

  • ಪರಸ್ಪರ ಆಸಕ್ತಿಯಿರುವ ವಿಷಯವನ್ನು ಹೇಳಿರಿ

  • ಒಂದು ದೃಷ್ಟಿಕೋನ ಪ್ರಶ್ನೆಯನ್ನು ಕೇಳಿರಿ

ಸಹಾಯಕರವಾದ ಗುಣಗಳು

  • ಉಲ್ಲಾಸಕರ ಮನೋಭಾವ

  • ಸ್ನೇಹಪರತೆ ಮತ್ತು ಯಥಾರ್ಥತೆ

  • ತಕ್ಕ ಮಟ್ಟಿಗಿನ ವೈಯಕ್ತಿಕ ಆಸಕ್ತಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ