ಗೀತೆ 10
ಹರ್ಷದಿ ಹಾಡಿ ಕೊಂಡಾಡು
1. ಹರ್ಷದಿ ಹಾಡಿ ಕೊಂಡಾಡು!
ದೇವರನ್ನು ನೀ ಶ್ಲಾಘಿಸು!
“ಎಚ್ಚರ! ಲೋಕದ ಅಂತ್ಯ
ಹತ್ತಿರ” ಬಂತೆಂದು ಘೋಷಿಸು.
ದೇವ ಯೆಹೋವ ತನ್ನ ಮಗನ
ಮೂಲಕ ತರುವ ರಾಜ್ಯ
ಸತ್ಯ, ಪ್ರೀತಿ, ನೀತಿ, ನ್ಯಾಯದಿಂದ
ಕೂಡಿದಂತ ಮಹಾರಾಜ್ಯ.
(ಪಲ್ಲವಿ)
ಹರ್ಷದಿ ಹಾಡಿ ಕೊಂಡಾಡು
ಆತನ ಪಾರಮ್ಯ ಘೋಷಿಸು!
2. ಹರ್ಷದಿ ಹಾಡಿ ಕೊಂಡಾಡು!
ದೇವರ ನಾಮ ಘೋಷಿಸು.
ಆತನ ಕೀರ್ತಿ ವೈಭವ,
ಭೂಮಿಯ ತುಂಬೆಲ್ಲ ಹಬ್ಬಿಸು.
ತುಂಬಾ ಮಹಿಮೆಯುಳ್ಳ ದೇವನು
ಆದರೂ ಆತ ದೀನನು
ಪ್ರೀತಿ, ಕರುಣೆಯುಳ್ಳ ಅಪ್ಪನು
ಕೇಳ್ವನು ಪ್ರಾರ್ಥನೆಯನ್ನು.
(ಪಲ್ಲವಿ)
ಹರ್ಷದಿ ಹಾಡಿ ಕೊಂಡಾಡು
ಆತನ ಪಾರಮ್ಯ ಘೋಷಿಸು!
(ಕೀರ್ತ. 89:27; 105:1; ಯೆರೆ. 33:11 ಸಹ ನೋಡಿ)