ಗೀತೆ 37
ಪೂರ್ಣ ಮನದಿ ಯೆಹೋವನ ಸೇವೆ!
1. ಓ ಯೆಹೋವ ಸಾರ್ವಭೌಮ,
ವಿಶ್ವದಲ್ಲಿಲ್ಲ ನಿನ್ನ ಸಮ.
ಈ ಪ್ರಪಂಚ ನಿನ್ನ ಸೃಷ್ಟಿ,
ಎಂದೆಂದಿಗೂ ನೀನೇ ಪರಮ.
ನನ್ನ ಪೂರ್ಣ ಪ್ರಾಣದಿ ದೇವ,
ನಿಷ್ಠೆ ತೋರಿ ಪ್ರೀತಿಸುವೆ!
(ಪಲ್ಲವಿ)
ಓ ಯೆಹೋವ ನೀನೇ ದೇವ,
ಈ ಬದುಕು ನಿಂಗೆ ಮುಡಿಪು!
2. ಸಂಜೆ ರಂಗು ತಂಪು ಗಾಳಿ
ಸಲ್ಲಿಸಿದೆ ತಮ್ಮ ಮಹಿಮೆ.
ಸುಂದರ ಈ ನೋಟ ದೇವ,
ಹೆಚ್ಚಿಸಿದೆ ನಿನ್ನ ಗರಿಮೆ.
ನಿನ್ನ ಸೇವೆ ಮಾಡುವೆ ದೇವ,
ನಿನ್ನ ಕೀರ್ತಿ ನಾ ಸಾರುವೆ!
(ಪಲ್ಲವಿ)
ಓ ಯೆಹೋವ ನೀನೇ ದೇವ,
ಈ ಬದುಕು ನಿಂಗೆ ಮುಡಿಪು!
(ಧರ್ಮೋ. 6:15; ಕೀರ್ತ. 40:8; 113:1-3; ಪ್ರಸಂ. 5:4; ಯೋಹಾ. 4:34 ಸಹ ನೋಡಿ)