ಗೀತೆ 74
ರಾಜ್ಯದ ಗೀತೆ ಬನ್ನಿ ಹಾಡಿರಿ!
1. ಪರಮ ಶ್ರೇಷ್ಠ ಯೆಹೋವನಿಗಾಗಿ
ವಿಜಯ ಗೀತೆ ಹರ್ಷದಿ ಹಾಡಿ
ನಿಷ್ಠೆಯ ತೋರಿ ದೇವರ ಕೊಂಡಾಡಿ
ರಾಜ್ಯದ ಗೀತೆ ಬನ್ನಿರಿ ಹಾಡಿ
(ಪಲ್ಲವಿ)
‘ಯೆಹೋವನ ಆರಾಧಿಸಿ.
ರಾಜ ಯೇಸು ಎಂದು ಸಾರಿ!
ಕಲಿಯಿರಿ ರಾಜ್ಯದ ಗೀತೆಯನ್ನು;
ಸ್ತುತಿಸಿರಿ ದೇವನಾಮವನ್ನು.’
2. ದೇವರ ಆಳ್ವಿಕೆಯ ಹೊಸ ಗೀತೆ
ಕ್ರಿಸ್ತನೇ ರಾಜ ಎಂದು ಸಾರುತ್ತೆ.
ಜನಿಸಿದೆ ಈಗ ಹೊಸ ಜನಾಂಗ;
ಸ್ವಾಗತ ಕೋರುವರು ಯೇಸುಗೆ.
(ಪಲ್ಲವಿ)
‘ಯೆಹೋವನ ಆರಾಧಿಸಿ.
ರಾಜ ಯೇಸು ಎಂದು ಸಾರಿ!
ಕಲಿಯಿರಿ ರಾಜ್ಯದ ಗೀತೆಯನ್ನು;
ಸ್ತುತಿಸಿರಿ ದೇವನಾಮವನ್ನು.’
3. ಕಲಿಯುತ್ತಾರೆ ದೀನರು ಈ ಗೀತೆ
ರಾಜ್ಯ ಗೀತೆ ಸರಳ ಸ್ಪಷ್ಟತೆ
ಮಹಾ ಸಮೂಹ ನಿಪುಣರಾಗುತ್ತೆ
ಕಲಿಸೋಕೆ ಎಲ್ಲರಿಗೂ ಗೀತೆ
(ಪಲ್ಲವಿ)
‘ಯೆಹೋವನ ಆರಾಧಿಸಿ.
ರಾಜ ಯೇಸು ಎಂದು ಸಾರಿ!
ಕಲಿಯಿರಿ ರಾಜ್ಯದ ಗೀತೆಯನ್ನು;
ಸ್ತುತಿಸಿರಿ ದೇವನಾಮವನ್ನು.’
(ಕೀರ್ತ. 95:6; 1 ಪೇತ್ರ 2:9, 10; ಪ್ರಕ. 12:10 ಸಹ ನೋಡಿ)