ಗೀತೆ 108
ದೇವರ ನಿಷ್ಠೆಯ ಪ್ರೀತಿ
1. ದೇವರ ಪ್ರೀತಿಯು
ಸೋಲದ ನಿಷ್ಠೆ ಪ್ರೀತಿಯು.
ಸಾವಿನಿಂದ ಕಾಪಾಡಲು
ತನ್ನ ಮಗನ ನೀಡಿದ
ತನ್ನ ರಾಜ್ಯಕ್ಕೆ ಸೇರಲು
ಬಾಳೋ ದಾರಿಯ ತೋರಿದ.
(ಪಲ್ಲವಿ)
ಬಾಯಾರಿ ಸೋತೋಗಿರೋ
ದೀನ ಜನರೇ ಬನ್ನಿ
ಜೀವ ಜಲ ಸೇವಿಸಿ
ತ್ರಾಣವನ್ನು ಹೊಂದಿ!
2. ದೇವರ ಪ್ರೀತಿಯು
ಸೋಲದ ನಿಷ್ಠೆ ಪ್ರೀತಿಯು.
ಯೇಸು ಕ್ರಿಸ್ತನ ಮೂಲಕ
ರಾಜ್ಯ ಸ್ಥಾಪನೆ ಮಾಡಿದ
ಸಂಕಲ್ಪವ ಪೂರೈಸಿದ
ತನ್ನ ನಿಷ್ಠೆಯ ತೋರಿದ
(ಪಲ್ಲವಿ)
ಬಾಯಾರಿ ಸೋತೋಗಿರೋ
ದೀನ ಜನರೇ ಬನ್ನಿ
ಜೀವ ಜಲ ಸೇವಿಸಿ
ತ್ರಾಣವನ್ನು ಹೊಂದಿ!
3. ದೇವರ ಪ್ರೀತಿಯು,
ಸೋಲದ ನಿಷ್ಠೆ ಪ್ರೀತಿಯು.
ತನ್ನ ಶಕ್ತಿಯ ಮೂಲಕ,
ನಮ್ಮ ಜೀವನ ಸಾಗಲಿ.
ತನ್ನ ರಾಜ್ಯ ಸಂದೇಶವ,
ಸಾರಲು ನೆರವಾಗಲಿ!
(ಪಲ್ಲವಿ)
ಬಾಯಾರಿ ಸೋತೋಗಿರೋ
ದೀನ ಜನರೇ ಬನ್ನಿ
ಜೀವ ಜಲ ಸೇವಿಸಿ
ತ್ರಾಣವನ್ನು ಹೊಂದಿ!
(ಕೀರ್ತ. 33:5; 57:10; ಎಫೆ. 1:7 ಸಹ ನೋಡಿ)