ಬೈಬಲಿನಲ್ಲಿರುವ ರತ್ನಗಳು | ಹೋಶೇಯ 1-7
ಯೆಹೋವನಂತೆ ನೀವೂ ನಿಷ್ಠಾವಂತ ಪ್ರೀತಿಯಲ್ಲಿ ಸಂತೋಷಿಸುತ್ತೀರಾ?
ವಚನಬದ್ಧತೆ, ಸಮಗ್ರತೆ, ನಿಷ್ಠೆ ಮತ್ತು ಆಳವಾದ ಭಾವನೆಗಳು ಕೂಡಿದ ಪ್ರೀತಿಯೇ ನಿಷ್ಠಾವಂತ ಪ್ರೀತಿ. ನಿಷ್ಠಾವಂತ ಪ್ರೀತಿ ಮತ್ತು ಕ್ಷಮೆಯ ಪಾಠವನ್ನು ಕಲಿಸಲು ಯೆಹೋವನು ಹೋಶೇಯ ಮತ್ತು ಅವನ ಹೆಂಡತಿ ಗೋಮೆರಳ ಉದಾಹರಣೆಯನ್ನು ಉಪಯೋಗಿಸಿದನು.—ಹೋಶೇ 1:2; 2:7; 3:1-5.
ಗೋಮೆರಳು ಹೇಗೆ ನಿಷ್ಠಾವಂತ ಪ್ರೀತಿಯ ಕೊರತೆಯನ್ನು ತೋರಿಸಿದಳು?
ಇಸ್ರಾಯೇಲ್ಯರು ಹೇಗೆ ನಿಷ್ಠಾವಂತ ಪ್ರೀತಿಯ ಕೊರತೆಯನ್ನು ತೋರಿಸಿದರು?
ಹೋಶೇಯನು ಹೇಗೆ ನಿಷ್ಠಾವಂತ ಪ್ರೀತಿಯನ್ನು ತೋರಿಸಿದನು?
ಯೆಹೋವನು ಹೇಗೆ ನಿಷ್ಠಾವಂತ ಪ್ರೀತಿಯನ್ನು ತೋರಿಸಿದನು?
ಧ್ಯಾನಿಸಿ: ನಾನು ಯೆಹೋವನಿಗೆ ನಿಷ್ಠಾವಂತ ಪ್ರೀತಿಯನ್ನು ಹೇಗೆ ತೋರಿಸಬಹುದು?