ಪಾಠ 11
ಬೈಬಲನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋದು ಹೇಗೆ?
ನೀವು ಯಾವತ್ತಾದ್ರೂ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದೀರಾ? ಆ ಕೆಲಸವನ್ನ ಹೇಗೆ ಮಾಡಿ ಮುಗಿಸೋದು ಅಂತ ಯೋಚನೆ ಮಾಡಿದ್ದೀರಾ? ‘ಹನಿಹನಿಗೂಡಿದರೆ ಹಳ್ಳ’ ಅನ್ನೋ ಹಾಗೆ ಒಂದು ದೊಡ್ಡ ಕೆಲಸವನ್ನ ಪ್ರತಿದಿನ ಸ್ವಲ್ಪಸ್ವಲ್ಪ ಮಾಡಿದ್ರೆ ಕೆಲವೇ ದಿನಗಳಲ್ಲಿ ಅದನ್ನ ಪೂರ್ತಿ ಮುಗಿಸಬಹುದು. ಬೈಬಲ್ ಕಲಿಯೋ ವಿಷಯದಲ್ಲೂ ಹಾಗೆನೇ. ‘ನಾನು ಬೈಬಲನ್ನ ಎಲ್ಲಿಂದ ಓದೋಕೆ ಶುರು ಮಾಡಲಿ?’ ಅಂತ ನೀವು ಯೋಚಿಸಿರಬಹುದು. ಈ ಪಾಠದಲ್ಲಿ ಬೈಬಲನ್ನ ಓದಿ ಆನಂದಿಸೋದು ಹೇಗೆ ಮತ್ತು ಅದರಿಂದ ಹೆಚ್ಚನ್ನ ಕಲಿಯೋದು ಹೇಗೆ ಅಂತ ನೋಡೋಣ.
1. ನಾವು ಯಾಕೆ ಬೈಬಲನ್ನ ಪ್ರತಿ ದಿನ ಓದಬೇಕು?
ಪ್ರತಿ ದಿನ ಯೆಹೋವನ “ನಿಯಮ ಪುಸ್ತಕವನ್ನ” ಅಂದರೆ ಬೈಬಲನ್ನ ಓದುವುದಾದರೆ ಖುಷಿಯಾಗಿ ಇರುತ್ತೀರ ಮತ್ತು ನೀವು ಮಾಡುವ ಎಲ್ಲಾ ಕೆಲಸಗಳು ಚೆನ್ನಾಗಿ ನಡೆಯುತ್ತೆ. (ಕೀರ್ತನೆ 1:1-3 ಓದಿ.) ಆರಂಭದಲ್ಲಿ ಬೈಬಲನ್ನ 5-10 ನಿಮಿಷ ಓದಿ. ಹೀಗೆ ಓದುತ್ತಾ ಓದುತ್ತಾ ಅದನ್ನ ಇನ್ನೂ ಜಾಸ್ತಿ ಓದಬೇಕು ಅನ್ನೋ ಆಸೆ ಹೆಚ್ಚಾಗುತ್ತೆ.
2. ಬೈಬಲನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ಏನು ಮಾಡಬೇಕು?
ಬೈಬಲನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಂದ್ರೆ, ಓದುವಾಗ ಮಧ್ಯದಲ್ಲಿ ನಿಲ್ಲಿಸಿ ಅದರ ಬಗ್ಗೆ ಯೋಚಿಸಬೇಕು. ಅಂದರೆ ನಾವು ಓದೋದು ಮಾತ್ರ ಅಲ್ಲ ‘ಓದಿದ್ದನ್ನ ಧ್ಯಾನಿಸಬೇಕು.’ (ಯೆಹೋಶುವ 1:8) ಅದಕ್ಕಾಗಿ ನೀವು ಓದುವಾಗ ಹೀಗೆ ಕೇಳಿಕೊಳ್ಳಿ: ಇದ್ರಿಂದ ನಾನು ಯೆಹೋವನ ಬಗ್ಗೆ ಏನು ಕಲಿಯಬಹುದು? ಇದನ್ನ ನನ್ನ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬಹುದು? ಇದನ್ನ ಬೇರೆಯವರಿಗೆ ಸಹಾಯ ಮಾಡಲಿಕ್ಕಾಗಿ ಹೇಗೆ ಉಪಯೋಗಿಸಬಹುದು?
3. ಬೈಬಲ್ ಓದೋಕೆ ಹೇಗೆ ಸಮಯ ಮಾಡಿಕೊಳ್ಳಬಹುದು?
ಬೈಬಲ್ ಓದೋಕೆ ಸಮಯನೇ ಸಿಗುತ್ತಿಲ್ಲ ಅಂತ ನಿಮಗೆ ಅನಿಸ್ತಿದೆಯಾ? ನಿಮ್ಮ ತರಾನೇ ತುಂಬ ಜನರಿಗೂ ಅನಿಸುತ್ತಿದೆ. ‘ಮುಖ್ಯವಾದ ವಿಷ್ಯಗಳಿಗೆ ಸಮಯ ಕೊಡಿ’ ಅಂತ ಬೈಬಲ್ ಹೇಳುತ್ತೆ. (ಎಫೆಸ 5:16) ಅದಕ್ಕಾಗಿ ಪ್ರತಿದಿನ ಯಾವಾಗ ಬೈಬಲ್ ಓದಿದರೆ ಚೆನ್ನಾಗಿರುತ್ತೆ ಅಂತ ನಿರ್ಧರಿಸಿ. ಕೆಲವರು ಬೆಳಗ್ಗೆ ಬೈಬಲನ್ನ ಓದುತ್ತಾರೆ, ಇನ್ನೂ ಕೆಲವರು ಮಧ್ಯಾಹ್ನ ಊಟ ಆದಮೇಲೆ ಓದುತ್ತಾರೆ. ಮತ್ತೆ ಕೆಲವರು ಮಲಗೋಕೆ ಮುಂಚೆ ಓದುತ್ತಾರೆ. ನಿಮಗೆ ಯಾವಾಗ ಬೈಬಲ್ ಓದೋಕೆ ಆಗುತ್ತೆ?
ಹೆಚ್ಚನ್ನ ತಿಳಿಯೋಣ
ಬೈಬಲ್ ಓದೋದನ್ನ ಹೇಗೆ ಆನಂದಿಸಬಹುದು ಅಂತ ಕಲಿಯಿರಿ. ಬೈಬಲ್ ಸ್ಟಡಿಯಿಂದ ಹೆಚ್ಚು ಪ್ರಯೋಜನ ಪಡೆಯಲಿಕ್ಕಾಗಿ ಹೇಗೆ ಚೆನ್ನಾಗಿ ತಯಾರಿ ಮಾಡೋದು ಅಂತನೂ ನೋಡಿ.
ಹೊಸ ರೀತಿಯ ಆಹಾರ ಹೋಗ್ತಾ ಹೋಗ್ತಾ ನಮಗೆ ಇಷ್ಟ ಆಗೋ ತರಾನೇ ಬೈಬಲನ್ನ ಓದುತ್ತಾ ಇದ್ದರೆ ಅದನ್ನ ಇನ್ನೂ ಓದಬೇಕು ಅನ್ನೋ ಆಸೆ ಜಾಸ್ತಿಯಾಗುತ್ತೆ
4. ಬೈಬಲ್ ಓದೋದನ್ನ ಆನಂದಿಸಿ
ಬೈಬಲ್ ಓದೋಕೆ ಶುರುಮಾಡೋದು ಕಷ್ಟ ಅನಿಸಬಹುದು. ಆದರೆ ನಾವು ಅದರ ಕಡೆಗೆ ‘ಹಸಿವೆಯನ್ನ’ ಅಂದರೆ ಆಸೆಯನ್ನ ಬೆಳೆಸಿಕೊಳ್ಳಬೇಕು. ಒಂದು ಹೊಸ ರೀತಿಯ ಆಹಾರ ಮೊದಮೊದಲು ನಮಗೆ ಇಷ್ಟವಾಗದಿದ್ರೂ ಹೋಗ್ತಾ ಹೋಗ್ತಾ ಇಷ್ಟವಾಗುತ್ತೆ. ಬೈಬಲ್ ಓದುವ ವಿಷಯದಲ್ಲೂ ಇದು ಸತ್ಯ. 1 ಪೇತ್ರ 2:2 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಪ್ರತಿ ದಿನ ಬೈಬಲ್ ಓದೋದಾದ್ರೆ ಹೋಗ್ತಾ ಹೋಗ್ತಾ ಅದನ್ನ ಇನ್ನೂ ಓದಬೇಕು ಅನ್ನೋ ಆಸೆ ಜಾಸ್ತಿಯಾಗುತ್ತಾ? ನಿಮಗೇನು ಅನಿಸುತ್ತೆ?
ಬೈಬಲ್ ಓದೋದನ್ನ ಆನಂದಿಸೋಕೆ ಕೆಲವರು ಹೇಗೆ ಕಲಿತುಕೊಂಡಿದ್ದಾರೆ ಅಂತ ತಿಳಿಯಲು ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ.
ವಿಡಿಯೋದಲ್ಲಿದ್ದ ಯುವ ಜನರಿಗೆ ಯಾಕೆ ಬೈಬಲ್ ಓದೋಕೆ ಆಗ್ತಿರಲಿಲ್ಲ?
ಬೈಬಲ್ ಓದುವ ರೂಢಿ ಮಾಡಿಕೊಳ್ಳೋಕೆ ಅವರಿಗೆ ಯಾವುದು ಸಹಾಯ ಮಾಡಿತು?
ಬೈಬಲ್ ಓದೋದನ್ನ ಇನ್ನಷ್ಟು ಆಸಕ್ತಿಕರವಾಗಿ ಮಾಡೋಕೆ ಅವರು ಏನು ಮಾಡಿದ್ರು?
ಬೈಬಲ್ ಓದೋದನ್ನ ಶುರು ಮಾಡೋಕೆ ಕೆಲವು ಸಲಹೆಗಳು:
ಸರಳ ಭಾಷೆಯಲ್ಲಿರುವ ಮತ್ತು ನಂಬಬಹುದಾದ ಬೈಬಲ್ ಭಾಷಾಂತರವನ್ನ ಆರಿಸಿಕೊಳ್ಳಿ. ಹೊಸ ಲೋಕ ಭಾಷಾಂತರ ಬೈಬಲನ್ನ ಉಪಯೋಗಿಸಿ ನೋಡಿ.
ನಿಮಗೆ ಇಷ್ಟವಾಗುವ ಬೈಬಲ್ ಭಾಗಗಳನ್ನ ಮೊದಲು ಓದಿ. ಬೈಬಲ್ ಓದೋದನ್ನ ಹೇಗೆ ಶುರು ಮಾಡೋದು ಅಂತ ತಿಳಿದುಕೊಳ್ಳೋಕೆ “ಪ್ರತಿದಿನ ಬೈಬಲ್ ಓದಿ ಆನಂದಿಸಿ” ಅನ್ನೋ ಚಾರ್ಟ್ ನೋಡಿ.
ಎಲ್ಲಿವರೆಗೆ ಓದಿದ್ದೀರಿ ಅನ್ನೋದಕ್ಕೆ ಗುರುತು ಹಾಕಿಡಿ. ಅದಕ್ಕಾಗಿ ಈ ಪುಸ್ತಕದಲ್ಲಿರುವ “ಬೈಬಲನ್ನ ಎಲ್ಲಿವರೆಗೆ ಓದಿದ್ದೀರಾ?” ಅನ್ನೋ ಚಾರ್ಟ್ ಉಪಯೋಗಿಸಿ.
JW ಲೈಬ್ರರಿ ಆ್ಯಪನ್ನ ಉಪಯೋಗಿಸಿ. ನಿಮ್ಮ ಮೊಬೈಲ್ ಅಥವಾ ಟ್ಯಾಬ್ನಲ್ಲಿ ಈ ಆ್ಯಪ್ ಇದ್ದರೆ ನೀವು ಎಲ್ಲೇ ಇದ್ರೂ ಬೈಬಲನ್ನ ಓದಬಹುದು ಅಥವಾ ಓದಿದ್ದನ್ನ ಕೇಳಿಸಿಕೊಳ್ಳಬಹುದು.
ಬೈಬಲ್ ಓದೋದನ್ನ ಇನ್ನೂ ಆನಂದಿಸಲು ಹೊಸ ಲೋಕ ಭಾಷಾಂತರದಲ್ಲಿರುವ ಪರಿಶಿಷ್ಟಗಳನ್ನ ನೋಡಿ. ಅದರಲ್ಲಿ ನಕ್ಷೆಗಳು, ಚಾರ್ಟ್ಗಳು, ಪದವಿವರಣೆಗಳು ಇವೆ.
5. ಬೈಬಲ್ ಸ್ಟಡಿಗಾಗಿ ತಯಾರಿ ಮಾಡಿ
ಕೀರ್ತನೆ 119:34 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಬೈಬಲ್ ಓದೋಕ್ಕಿಂತ ಮುಂಚೆ ಮತ್ತು ಬೈಬಲ್ ಸ್ಟಡಿಗಾಗಿ ತಯಾರಿ ಮಾಡೋಕೆ ಮುಂಚೆ ಯಾಕೆ ಪ್ರಾರ್ಥನೆ ಮಾಡಬೇಕು?
ಬೈಬಲ್ ಸ್ಟಡಿ ಮಾಡುವಾಗ ಚೆನ್ನಾಗಿ ಅರ್ಥ ಆಗಬೇಕಂದ್ರೆ ಈ ಪುಸ್ತಕದ ಪ್ರತಿ ಪಾಠವನ್ನ ತಯಾರಿ ಮಾಡುವಾಗ ಈ ರೀತಿ ಮಾಡಿ:
ಮೊದಲನೇ ಭಾಗದಲ್ಲಿರುವ ಪ್ಯಾರಗಳನ್ನ ಓದಿ.
ಅದರಲ್ಲಿರುವ ವಚನಗಳನ್ನ ಓದಿ. ನೀವು ಓದಿದ ಪ್ಯಾರಕ್ಕೆ ಅವು ಹೇಗೆ ಸಂಬಂಧಪಟ್ಟಿದೆ ಅಂತ ತಿಳಿದುಕೊಳ್ಳಿ.
ಕೊಡಲಾಗಿರುವ ಪ್ರಶ್ನೆಗೆ ಉತ್ತರವನ್ನ ಪ್ಯಾರದಲ್ಲಿ ಗುರುತಿಸಿ, ಹಾಗೆ ಮಾಡಿದ್ರೆ ಬೈಬಲ್ ಚರ್ಚೆ ಮಾಡುವಾಗ ಉತ್ತರ ಕೊಡೋಕೆ ಸುಲಭವಾಗುತ್ತೆ.
ನಿಮಗೆ ಗೊತ್ತಿತ್ತಾ?
ಯೆಹೋವನ ಸಾಕ್ಷಿಗಳು ಬೇರೆಬೇರೆ ಬೈಬಲ್ ಭಾಷಾಂತರಗಳನ್ನ ಉಪಯೋಗಿಸ್ತಿದ್ದಾರೆ. ಆದರೆ ನಮಗೆ ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರ ತುಂಬ ಇಷ್ಟ. ಯಾಕಂದ್ರೆ ಅದು ನಿಖರವಾಗಿದೆ, ಸರಳವಾಗಿದೆ ಮತ್ತು ಅದರಲ್ಲಿ ದೇವರ ಹೆಸರಿದೆ. “ಯೆಹೋವನ ಸಾಕ್ಷಿಗಳು ಅವರದ್ದೇ ಆದ ಬೈಬಲನ್ನು ಬಳಸುತ್ತಾರಾ?”—jw.org ಲೇಖನ ನೋಡಿ.
ಕೆಲವರು ಹೀಗಂತಾರೆ: “ಬೈಬಲ್ ಕಲಿಯೋಕೆ ಕಷ್ಟ. ಅದನ್ನ ಕಲಿಯೋಕೆ ನಂಗೆ ಸಮಯನೂ ಇಲ್ಲ, ತಾಳ್ಮೆನೂ ಇಲ್ಲ.”
ನಿಮಗೇನು ಅನಿಸುತ್ತೆ?
ನಾವೇನು ಕಲಿತ್ವಿ
ಬೈಬಲನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಂದ್ರೆ ಯಾವ ಸಮಯದಲ್ಲಿ ಬೈಬಲ್ ಓದಬೇಕು ಅಂತ ಮೊದಲೇ ತೀರ್ಮಾನಿಸಿ. ಓದಿದ್ದನ್ನ ಅರ್ಥಮಾಡಿಕೊಳ್ಳಲು ಸಹಾಯಕ್ಕಾಗಿ ಪ್ರಾರ್ಥಿಸಿ ಮತ್ತು ಬೈಬಲ್ ಸ್ಟಡಿಗಾಗಿ ಮೊದಲೇ ತಯಾರಿ ಮಾಡಿ.
ನೆನಪಿದೆಯಾ
ಬೈಬಲನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ಏನು ಮಾಡಬೇಕು?
ನಿಮಗೆ ಯಾವಾಗ ಬೈಬಲ್ ಓದೋಕೆ ಮತ್ತು ಕಲಿಯೋಕೆ ಆಗುತ್ತೆ?
ಬೈಬಲ್ ಸ್ಟಡಿಗೆ ಮೊದಲೇ ತಯಾರಿ ಮಾಡೋದು ಯಾಕೆ ಒಳ್ಳೇದು?
ಇದನ್ನೂ ನೋಡಿ
ಬೈಬಲ್ ಓದೋದ್ರಿಂದ ಪ್ರಯೋಜನ ಪಡೆಯಲಿಕ್ಕಾಗಿ ಕೊಡಲಾಗಿರುವ ಕೆಲವು ಸಲಹೆಗಳನ್ನ ನೋಡಿ.
ಯಾವ ಮೂರು ರೀತಿಯಲ್ಲಿ ಬೈಬಲನ್ನ ಓದಬಹುದು ಅಂತ ತಿಳಿದುಕೊಳ್ಳಿ.
“ಬೈಬಲ್ ಓದೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?—ಭಾಗ 1: ಬೈಬಲ್ ಬಗ್ಗೆ ತಿಳ್ಕೊಳ್ಳಿ” (jw.org ಲೇಖನ)
ಬೈಬಲ್ ಓದೋದನ್ನ ಇನ್ನೂ ಆನಂದಿಸೋಕೆ ಏನು ಮಾಡಬಹುದು ಅಂತ ನೋಡಿ.
“ಬೈಬಲ್ ಓದೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?—ಭಾಗ 2: ಬೈಬಲ್ ಓದೋದನ್ನ ಎಂಜಾಯ್ ಮಾಡಿ” (jw.org ಲೇಖನ)
ತುಂಬ ವರ್ಷಗಳಿಂದ ಬೈಬಲ್ ಓದುತ್ತಿರುವವರು ಅದನ್ನ ಆನಂದಿಸೋಕೆ ಕೆಲವು ಸಲಹೆಗಳನ್ನ ಕೊಟ್ಟಿದ್ದಾರೆ.