ನಿಷ್ಠೆ—ಯಾವ ಬೆಲೆಗೆ?
“ನಿಷ್ಠೆಯವನೊಂದಿಗೆ ನೀನು ನಿಷ್ಠೆಯಿಂದ ವರ್ತಿಸುವಿ.”—ಕೀರ್ತನೆ 18:25, NW.
1, 2. (ಎ) ನಿಷ್ಠೆ ಅಂದರೆ ಏನು, ಮತ್ತು ಅದರ ರೂಪಗಳು ನಮ್ಮ ಜೀವಿತಗಳನ್ನು ಬಾಧಿಸುವದು ಹೇಗೆ? (ಬಿ) ನಮ್ಮ ಪ್ರಧಾನ ಮಾದರಿಯಾಗಿ ಯೆಹೋವನ ಕಡೆಗೆ ತಿರುಗುವದು ಯಾಕೆ ಒಳ್ಳೆಯದು?
ನಂಬಿಗಸ್ತಿಕೆ, ಕರ್ತವ್ಯ, ಪ್ರೀತಿ, ಹಂಗು, ಸ್ವಾಮಿನಿಷ್ಠೆ. ಈ ಶಬ್ದಗಳಲ್ಲಿ ಏನು ಸಾಮಾನ್ಯವಾಗಿದೆ? ಅವು ನಿಷ್ಠೆಯ ವಿಭಿನ್ನ ಮುಖಗಳಾಗಿವೆ. ನಿಷ್ಠೆಯು ಹೃತ್ಪೂರ್ವಕ ಭಕ್ತಿಯಿಂದ ಎದ್ದೇಳುವ ಒಂದು ದೈವಿಕ ಗುಣವಾಗಿದೆ. ಆದಾಗ್ಯೂ, ಇಂದಿನ ಹೆಚ್ಚಿನ ಜನರಿಗೆ, ನಿಷ್ಠತೆ ಎಂದರೆ ಅಷ್ಟೇನೂ ಮಹತ್ವದ್ದಲ್ಲ. ಒಂದು ವಿವಾಹ ಸಂಗಾತಿಗೆ ನಂಬಿಗಸ್ತಿಕೆ, ಹಿರಿಯ ಕುಟುಂಬ ಸದಸ್ಯರ ಕಡೆಗೆ ಇರುವ ಹಂಗು, ತನ್ನ ಯಜಮಾನನಿಗೆ ಸೇವಕನೊಬ್ಬನ ಸ್ವಾಮಿನಿಷ್ಠೆ—ಎಲ್ಲವೂ ಅನಿಶ್ಚಿತವಾಗಿದ್ದು, ಆಗಾಗ್ಯೆ ಅದರ ವಿಷಯ ರಾಜಿಮಾಡಿಕೊಳ್ಳಲಾಗುತ್ತದೆ. ಮತ್ತು ನಿಷ್ಠೆಗಳ ನಡುವೆ ಘರ್ಷಣೆ ಎದ್ದಾಗ ಏನಾಗುತ್ತದೆ? ಇತ್ತೀಚಿಗೆ ಇಂಗ್ಲೆಂಡಿನಲ್ಲಿ ಒಬ್ಬ ಅಕೌಂಟೆಂಟ್ (ಕರಣೀಕರನು) ತೆರಿಗೆ ಅಧಿಕಾರಿಗೆ ತನ್ನ ಕಂಪೆನಿಯ ಹಣಕಾಸಿನ ಕುರಿತು ಸತ್ಯವನ್ನು ಹೇಳಿದಾಗ, ಅವನು ತನ್ನ ಉದ್ಯೋಗವನ್ನು ಕಳಕೊಂಡನು.
2 ನಿಷ್ಠೆಯ ಕುರಿತು ಮಾತಾಡುವದು ಸುಲಭ, ಆದರೆ ನಿಜವಾದ ನಿಷ್ಠತೆಗೆ, ಭಯವನ್ನು ಉಂಟುಮಾಡುವ ರಾಜಿಯು ಒಳಗೂಡಿರದ ಕಾರ್ಯಗಳ ಬೆಂಬಲವು ಇರತಕ್ಕದ್ದು. ಅಪರಿಪೂರ್ಣ ಮಾನವರಾದ ನಾವು ಇದರಲ್ಲಿ ಹೆಚ್ಚಾಗಿ ತಪ್ಪುತ್ತೇವೆ. ಆದುದರಿಂದ, ಯಾರ ನಿಷ್ಠತೆಯನ್ನು ಯಶಸ್ವಿಯಾಗಿ ಪ್ರಶ್ನೆಗೆಳೆಯಸಾಧ್ಯವಿಲ್ಲವೋ, ಅಂಥ ಒಂದು ಉತ್ತಮ ಉದಾಹರಣೆಯನ್ನು ಪರಿಗಣಿಸುವದು ನಮಗೆ ಒಳ್ಳೆಯದು, ಅದು ಸ್ವತಃ ಯೆಹೋವ ದೇವರದ್ದೇ ಆಗಿದೆ.
ನಿಷ್ಠೆಯು ಉದಾಹರಿಸಲ್ಪಟ್ಟದ್ದು
3. ಆದಿಕಾಂಡ 3:15ರಲ್ಲಿ ತನ್ನ ಉದ್ದೇಶಕ್ಕೆ ನಿಷ್ಠನಾಗಿದ್ದಾನೆಂದು ಯೆಹೋವನು ರುಜುಪಡಿಸಿದ್ದು ಹೇಗೆ?
3 ಆದಾವನು ಪಾಪ ಮಾಡಿದಾಗ, ಇನ್ನೂ ಅಜನಿತ ಮಾನವ ಕುಟುಂಬವನ್ನು ವಿಮೋಚಿಸುವ ತನ್ನ ಉದ್ದೇಶವನ್ನು ಯೆಹೋವನು ಸ್ಪಷ್ಟವಾಗಿ ವ್ಯಕ್ತಪಡಿಸಿದನು. ಮಾನವ ಸೃಷ್ಟಿಯ ಕಡೆಗಿದ್ದ ಅವನ ಪ್ರೀತಿಯೇ ಈ ಕೃತ್ಯಕ್ಕೆ ಆಧಾರವಾಗಿತ್ತು. (ಯೋಹಾನ 3:16) ತಕ್ಕ ಸಮಯದಲ್ಲಿ, ಆದಿಕಾಂಡ 3:15 ರಲ್ಲಿ ಮುನ್ನುಡಿದ ವಾಗ್ದಾನಿತ ಸಂತಾನವಾದ ಯೇಸು ಕ್ರಿಸ್ತನು, ಆ ವಿಮೋಚನ ಯಜ್ಞವೆಂದು ರುಜುವಾದನು, ಮತ್ತು ತಾನು ವ್ಯಕ್ತ ಪಡಿಸಿದ ಉದ್ದೇಶವನ್ನು ಹಿಂದಕ್ಕೆ ತೆಗೆದುಕೊಳ್ಳುವದು ಯೆಹೋವನಿಗೆ ಯೋಚಿಸಲಸಾಧ್ಯವಾದದ್ದಾಗಿತ್ತು. ಯೇಸುವಿನ ಯಜ್ಞವನ್ನು ಸ್ವೀಕರಿಸುವದರಿಂದ, ನಮ್ಮ ನಂಬಿಕೆಯು ನಿರಾಶೆಗೆ ನಡಿಸುವದಿಲ್ಲ.—ರೋಮಾಪುರ 9:33.
4. ಯೆಹೋವನು ಯೇಸುವಿಗೆ ನಿಷ್ಠನಾಗಿದ್ದನು ಎಂದು ಹೇಗೆ ರುಜುವಾದನು ಮತ್ತು ಯಾವ ಫಲಿತಾಂಶಗಳೊಂದಿಗೆ?
4 ಯೇಸುವಿನ ಕಡೆಗೆ ಯೆಹೋವನಿಗಿದ್ದ ನಿಷ್ಠೆಯು, ಮಗನನ್ನು ಭೂಮಿಯ ಮೇಲಿದ್ದಾಗ ತುಂಬಾ ಬಲಪಡಿಸಿತು. ತನಗೆ ಮರಣವನ್ನು ಅನುಭವಿಸಲಿಕ್ಕಿತ್ತು ಎಂದು ಯೇಸುವಿಗೆ ತಿಳಿದಿತ್ತು ಮತ್ತು ಕೊನೆಯ ತನಕ ಅವನ ದೇವರಿಗೆ ನಿಷ್ಠನಾಗಿ ನಿಲ್ಲಲು ಅವನು ದೃಢಮನಸ್ಕನಾಗಿದ್ದನು. ಆತನ ಮಾನವ-ಪೂರ್ವದ ಅಸ್ತಿತ್ವದ ಅರಿವು ಅವನ ದೀಕ್ಷಾಸ್ನಾನದಲ್ಲಿ, ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಾಗ ಪ್ರಕಟಿಸಲ್ಪಟ್ಟಿತು. ಅವನನ್ನು ಮೋಸದಿಂದ ಹಿಡುಕೊಡಲ್ಪಡುವ ರಾತ್ರಿಯಲ್ಲಿ, ಪರಲೋಕದ ಅವನ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ‘ಲೋಕ ಉಂಟಾಗುವದಕ್ಕಿಂತ ಯೆಹೋವನ ಬಳಿಯಲ್ಲಿ ಅವನಿಗಿದ್ದ ಮಹಿಮೆಯಲ್ಲಿ’ ಪುನಃ ಸೇರಿಸುವಂತೆ ಅವನು ಕೇಳಿಕೊಂಡನು. (ಯೋಹಾನ 17:5) ಇದು ಹೇಗೆ ಸಾಧ್ಯವಿತ್ತು? ತನ್ನ ನಿಷ್ಠೆಯ ಮಗನನ್ನು ಸಮಾಧಿಯಲ್ಲಿ ಕೊಳೆಯುವ ಅವಸ್ಥೆಗೆ ಯೆಹೋವನು ಬಿಡದೆ ಇರುವದರ ಮೂಲಕವೇ. ಯೆಹೋವನು ಅವನನ್ನು ಮರಣದಿಂದ ಅಮರತ್ವಕ್ಕೆ ಎಬ್ಬಿಸಿದನು, ಹೀಗೆ ಕೀರ್ತನೆ 16:10 ರಲ್ಲಿ ದಾಖಲಿಸಿದ ಪ್ರವಾದನಾ ವಾಗ್ದಾನವನ್ನು ನಿಷ್ಠೆಯಿಂದ ಪೂರೈಸಿದನು: “ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ [ಶಿಯೋಲ್‌ನಲ್ಲಿ, NW] ಬಿಡುವದಿಲ್ಲ.”—ಅ.ಕೃತ್ಯಗಳು 2:24-31; 13:35; ಪ್ರಕಟನೆ 1:18.
5. ಯೇಸುವಿಗೆ ಮಾಡಿದ ಯೆಹೋವನ ವಾಗ್ದಾನಗಳಿಗೆ ನಿಷ್ಠೆಯ ಇತರ ಯಾವ ವಿಷಯಗಳು ಸಂಬಂಧಿಸಿವೆ?
5 ತನ್ನ ಪುನರುತ್ಥಾನದ ನಂತರ ಹಿಂಬಾಲಿಸಿ, ‘ಆತನ ವಿರೋಧಿಗಳನ್ನು ಪಾದಪೀಠವಾಗಿ ಮಾಡುವ’ ಯೆಹೋವನ ಮಾತುಗಳ ಮೇಲೆ ಆತುಕೊಳ್ಳಲು ತದ್ರೀತಿಯಲ್ಲಿ ಯೇಸುವಿಗೆ ತಿಳಿದಿತ್ತು. (ಕೀರ್ತನೆ 110:1) “ಅನ್ಯ ಜನಾಂಗಗಳ ನೇಮಿತ ಸಮಯದ” ಅಂತ್ಯದಲ್ಲಿ, ಸ್ವರ್ಗದಲ್ಲಿ ರಾಜ್ಯದ ಸ್ಥಾಪನೆಯೊಂದಿಗೆ ಆ ಸಮಯವು 1914 ರಲ್ಲಿ ಆಗಮಿಸಿತು. ಆತನ ಶತ್ರುಗಳ ಮೇಲೆ ಯೇಸುವಿನ ವಾಗ್ದಾನಿತ ಆಧಿಪತ್ಯಕ್ಕೇರುವಿಕೆಯು, ಪರಲೋಕದಿಂದ ಸೈತಾನನನ್ನೂ, ಅವನ ದೆವ್ವಗಳನ್ನೂ ಉಚ್ಛಾಟನೆ ಮಾಡುವದರೊಂದಿಗೆ ಆರಂಭಿಸಲ್ಪಟ್ಟಿತು. ಅವರನ್ನು ಒಂದು ಸಾವಿರ ವರ್ಷಗಳ ತನಕ ಅಧೋಲೋಕದಲ್ಲಿ ಬಂಧಿಸಿದಾಗ ಮತ್ತು “ಭೂರಾಜರುಗಳನ್ನೂ, ಅವರ ಸೈನ್ಯಗಳನ್ನೂ” ನಾಶಮಾಡಿದಾಗ, ಅದರ ಕೊನೆಯ ಬಿಂದುವಿಗೆ ಅದು ತಲುಪಲಿರುವದು.—ಲೂಕ 21:24; ಪ್ರಕಟನೆ 12:7-12; 19:19; 20:1-3.
6. ದೃಢವಾದ ಯಾವ ನಿರೀಕ್ಷೆಯನ್ನು ದೇವರು ನಮಗೆ ನೀಡುತ್ತಿದ್ದಾನೆ, ಮತ್ತು ನಾವು ಅದಕ್ಕೆ ಹೇಗೆ ಗಣ್ಯತೆಯನ್ನು ತೋರಿಸಬಹುದು?
6 ಕೀರ್ತನೆಗಾರನು ಪ್ರೇರಿಸಿದ್ದು: “ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು.” (ಕೀರ್ತನೆ 37:34) ಯೆಹೋವನು ತನ್ನ ಮಾತನ್ನು ನೆರವೇರಿಸುವನು ಮತ್ತು “ಆತನ ಮಾರ್ಗವನ್ನು ಅನುಸರಿಸುವ” ಸ್ತ್ರೀ, ಪುರುಷ ಮತ್ತು ಮಕ್ಕಳನ್ನು ಈ ದುಷ್ಟ ಲೋಕದ ಅಂತ್ಯದಿಂದ ರಕ್ಷಿಸುವನು ಎಂಬ ವಿಷಯದಲ್ಲಿ ನಾವು ಭರವಸೆಯಿಂದಿರಸಾಧ್ಯವಿದೆ. ಮೂಲ ಹಿಬ್ರೂವಿನಲ್ಲಿ ಆ ವಾಕ್ಸರಣಿಯು ಯೆಹೋವನನ್ನು ಸೇವಿಸುವದರಲ್ಲಿ ಶೃದ್ಧೆ ಮತ್ತು ನಂಬಿಗಸ್ತಿಕೆ ಎರಡೂ ಅಭಿಪ್ರಾಯವನ್ನು ಕೊಡುತ್ತದೆ. ಆದುದರಿಂದ, ಈಗ ಉತ್ಸಾಹಗುಂದುವ ಇಲ್ಲವೇ ನಮಗೆ ಕೊಡಲ್ಪಟ್ಟ ಸೇವಾ ಸುಯೋಗಗಳನ್ನು ಬಿಟ್ಟುಕೊಡುವ ಸಮಯವಿದಾಗಿರುವದಿಲ್ಲ. ನಮ್ಮ ದೇವರ ಮತ್ತು ಅವನ ರಾಜ್ಯದ ನಿಷ್ಠೆಯ ಸೇವೆಯಲ್ಲಿ ನಮ್ಮನ್ನು ಶ್ರಮಪಟ್ಟು ದುಡಿಯುವ ಸಮಯವಿದಾಗಿದೆ. (ಯೆಶಾಯ 35:3, 4) ನಮ್ಮನ್ನು ಉತ್ತೇಜಿಸುವ ಉತ್ತಮ ಮಾದರಿಗಳು ನಮಗಿವೆ. ಅವುಗಳಲ್ಲಿ ಕೆಲವನ್ನು ನಾವು ಪರಿಗಣಿಸೋಣ.
ಮೂಲಪಿತೃಗಳು ನಿಷ್ಠೆಯನ್ನು ಪ್ರತಿಬಿಂಬಿಸಿದರು
7, 8. (ಎ) ಯೆಹೋವನು ನೋಹ ಮತ್ತು ಅವನ ಕುಟುಂಬಕ್ಕೆ ಯಾವ ಕೆಲಸದ ನೇಮಕಗಳನ್ನು ಮಾಡಿದನು? (ಬಿ) ಭೂವ್ಯಾಪಕ ಜಲಪ್ರಳಯದ ಸಮಯದಲ್ಲಿ ನೋಹನ ಮನೆಯವರು ದೇವರಿಂದ ರಕ್ಷಣೆಗೆ ಯೋಗ್ಯರೆಂದು ಹೇಗೆ ಸಿದ್ಧಪಡಿಸಿದರು?
7 ಒಂದು ದುಷ್ಟ ಮಾನವ ಸಮಾಜವನ್ನು ನೀರಿನ ಪ್ರಳಯದ ಮೂಲಕ ನಾಶಪಡಿಸಲು ಯೆಹೋವನು ಉದ್ದೇಶಿಸಿದಾಗ, ನೋಹನ ಕುಟುಂಬದ ರಕ್ಷಣೆಗಾಗಿ ಮತ್ತು ಈ ಭೂಮಿಯಲ್ಲಿ ಜೀವನವನ್ನು ಮುಂದುವರಿಸುವಿಕೆಗಾಗಿ ಕುಟುಂಬದ ಪಾಲಕನಾಗಿದ್ದ ಅವನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿದನು. (ಆದಿಕಾಂಡ 6:18) ದೈವಿಕ ರಕ್ಷಣೆಯ ಪ್ರತೀಕ್ಷೆಗಾಗಿ ನೋಹನು ಕೃತಜ್ಞನಾಗಿದ್ದನು, ಆದರೆ ಅವನೂ, ಅವನ ಪರಿವಾರವೂ ಅದಕ್ಕಾಗಿ ಅರ್ಹರೆಂದು ರುಜುಪಡಿಸಬೇಕಿತ್ತು. ಹೇಗೆ? ಯೆಹೋವನು ಅವರಿಗೆ ಆಜ್ಞಾಪಿಸಿದ್ದನ್ನು ಮಾಡುವದರ ಮೂಲಕವೇ. ಅವರು ಮೊದಲು ನಾವೆಯನ್ನು ಕಟ್ಟುವ ಒಂದು ಅಸಾಧಾರಣ ಕೆಲಸವನ್ನು ಎದುರಿಸಬೇಕಾಯಿತು. ಅದು ಪೂರ್ಣಗೊಂಡ ಮೇಲೆ, ಪ್ರಾಣಿ ಸಾಮ್ರಾಜ್ಯದ ಪ್ರತಿನಿಧಿ ಸ್ವರೂಪವಾಗಿ ಎಲಾವ್ಲನ್ನೂ ನಾವೆಯಲ್ಲಿ ತುಂಬಿಸಬೇಕಿತ್ತು ಮತ್ತು ದೀರ್ಘಕಾಲದ ತನಕ ಅವರ ಪೋಷಣೆಗಾಗಿ ಸಾಕಾಗುವಷ್ಟು ಆಹಾರವನ್ನೂ ಜಮಾಯಿಸಬೇಕಿತ್ತು. ಆದರೆ ಅಷ್ಟೇ ಅಲ್ಲ. ಸಿದ್ಧತೆಗಳನ್ನು ಮಾಡುವ ಈ ದೀರ್ಘಾವಧಿಯಲ್ಲಿ, ಪೂರ್ವನಿದರ್ಶನೆಯಿಲ್ಲದ ಸಾರುವ ಕೆಲಸದಲ್ಲಿ ಅವನಿಗೆ ಎಷ್ಟು ಸಾಧ್ಯವೋ ಅಷ್ಟನ್ನು ಮಾಡುತ್ತಿದ್ದನು, ಬರಲಿರುವ ದೈವಿಕ ದಂಡನೆಯ ಎಚ್ಚರಿಕೆಯನ್ನು ನೀಡುತ್ತಿದ್ದನು.—ಆದಿಕಾಂಡ ಅಧ್ಯಾಯಗಳು 6 ಮತ್ತು 7; 2 ಪೇತ್ರ 2:5.
8 ಬೈಬಲು ನಮಗೆ ಹೇಳುವದೇನಂದರೆ “ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು. ದೇವರ ಅಪ್ಪಣೆ ಕೊಟ್ಟ ಪ್ರಕಾರವೇ ನೋಹನು ಮಾಡಿದನು.” (ಆದಿಕಾಂಡ 6:22; 7:5) ತಮ್ಮ ನೇಮಕಗಳನ್ನು ಪೂರೈಸುವದರಲ್ಲಿ ನೋಹನು ಮತ್ತು ಅವನ ಕುಟುಂಬವು ನಿಷ್ಠಾವಂತರೆಂದು ರುಜುವಾದರು. ಅವರ ಸ್ವ-ತ್ಯಾಗದ ಆತ್ಮದ ಅರ್ಥವು ಏನಾಗಿತ್ತೆಂದರೆ ಅವರ ಸಮಯವನ್ನು ಲಾಭದಾಯಕ ರೀತಿಯಲ್ಲಿ ವ್ಯಯಿಸುವುದೇ, ಆದರೆ ಕೆಲಸವು ಶ್ರಮದ್ದೂ, ಸಾರುವದು ಕಷ್ಟಕರವೂ ಆಗಿತ್ತು. ಜಲ ಪ್ರಳಯದ ಮೊದಲು ಮಕ್ಕಳನ್ನು ಉತ್ಪಾದಿಸದೆ ಇದ್ದುದರಿಂದ, ನೋಹನ ಪುತ್ರರೂ, ಅವರ ಪತ್ನಿಯರೂ, ಕೈಯಲ್ಲಿದ್ದ ನೇಮಿತ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆಯೂ ಮತ್ತು ಅವರ ಚಟುವಟಿಕೆಗಳನ್ನು ಸುಸಂಘಟಿಸುವಂತೆಯೂ ಸಹಾಯವಾಯಿತು. ಆ ವಿಪ್ಲವಕಾರಿ ಜಲಪ್ರಳಯವು ಒಂದು ದುಷ್ಟ ಲೋಕಕ್ಕೆ ನ್ಯಾಯಯುಕ್ತ ಅಂತ್ಯವೊಂದನ್ನು ತಂದಿತು. ಕೇವಲ ನೋಹ, ಅವನ ಹೆಂಡತಿ, ಅವರ ಮೂವರು ಪುತ್ರರು ಮತ್ತು ಮೂವರ ಸೊಸೆಯಂದಿರು ಮಾತ್ರ ಪಾರಾದರು. ಅವರು ದೇವರಿಗೂ, ಅವನ ಮಾರ್ಗದರ್ಶನೆಗೂ ನಿಷ್ಠರಾಗಿದದ್ದಕ್ಕಾಗಿ ನಾವು ಸಂತೋಷಿಸಬಹುದು ಯಾಕಂದರೆ ನಮ್ಮಲ್ಲಿ ಪ್ರತಿಯೊಬ್ಬನೂ ಒಂದೇ ಶೇಮ್, ಹಾಮ್ ಅಥವಾ ಯೆಫೆತನ ಮೂಲಕ, ನೋಹನಿಂದ ನೇರವಾಗಿ ಬಂದಿರುತ್ತೇವೆ.—ಆದಿಕಾಂಡ 5:32; 1 ಪೇತ್ರ 3:20.
9. (ಎ) ಅಬ್ರಹಾಮನಿಗೆ ಯೆಹೋವನ ಪರೀಕ್ಷೆಯು ಅವನ ನಿಷ್ಠೆಯ ಒಂದು ಪರೀಕ್ಷೆಯಾಗಿತ್ತು ಹೇಗೆ? (ಬಿ) ಇದರಲ್ಲಿ ಇಸಾಕನು ನಿಷ್ಠೆಯನ್ನು ಪ್ರದರ್ಶಿಸಿದ್ದು ಹೇಗೆ?
9 ಇಸಾಕನನ್ನು ಒಂದು ಬಲಿಯಾಗಿ ಅರ್ಪಿಸಲು ಅಬ್ರಹಾಮನು ಸಿದ್ಧಪಡಿಸುವಾಗ, ಯೆಹೋವನ ಅಪ್ಪಣೆಗೆ ನಂಬಿಗಸ್ತ ವಿಧೇಯತೆಯಲ್ಲಿ ಅವನು ವರ್ತಿಸುತ್ತಿದ್ದನು. ಅವನ ನಿಷ್ಠೆಯ ಎಂಥಾ ಪರೀಕ್ಷೆ ಅದಾಗಿತ್ತು! ಆದಾಗ್ಯೂ, ಯೆಹೋವನು ಅಬ್ರಹಾಮನ ಕೈಯನ್ನು ತಡೆಯುತ್ತಾ ಅಂದದ್ದು: “ನೀನು ನಿನ್ನ ಒಬ್ಬನೇ ಮಗನನ್ನಾದರೂ ನನಗೆ ಸಮರ್ಪಿಸುವದಕ್ಕೆ ಹಿಂದೆಗೆಯಲಿಲ್ಲವಾದದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬುದು ಈಗ ತೋರಿಬಂತು.” ಹಾಗಿದ್ದರೂ, ಅದರ ಮುಂಚೆ ನಡೆದ ವಿಷಯದ ಮೇಲೆ ಪ್ರತಿಬಿಂಬಿಸುವದರಿಂದ, ನಾವು ಒಳ್ಳೆಯದನ್ನು ಮಾಡುತ್ತೇವೆ. ಮೊರೀಯ ಬೆಟ್ಟಕ್ಕೆ ಮೂರು ದಿನಗಳ ಪ್ರಯಾಣ ಮಾಡುತ್ತಿರುವ ಸಮಯದಲ್ಲಿ ವಿಷಯಗಳನ್ನು ತೂಗಿನೋಡಲು ಮತ್ತು ಅವನ ಮನಸ್ಸನ್ನು ಬದಲಾಯಿಸಲು ಅಬ್ರಹಾಮನಿಗೆ ಖಂಡಿತವಾಗಿಯೂ ಸಾಕಷ್ಟು ಸಮಯವಿತ್ತು. ಯಜ್ಞಕ್ಕಾಗಿ ಕಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಮತ್ತು ತನ್ನ ಸ್ವಂತ ಕೈಕಾಲುಗಳನ್ನು ಬಂಧಿಸುವಂತೆ ಅನುಮತಿಯನ್ನಿತ್ತ ಇಸಾಕನ ಕುರಿತಾಗಿ ಏನು? ಅವನ ತಂದೆಯಾದ ಅಬ್ರಹಾಮನಿಗೆ ತೋರಿಸುವ ಅವನ ಸ್ವಾಮಿನಿಷ್ಠೆಯಲ್ಲಿ ಅವನು ತಪ್ಪಿಹೋಗಲಿಲ್ಲ, ಇಲ್ಲವೇ ಅವನ ಜೀವವನ್ನು ಬೆಲೆಯಾಗಿ, ಅವನ ನಿಷ್ಠೆಯ ಪಥದ್ದಲ್ಲಿ ಕೊಡಬೇಕಾಗುತ್ತದೆ ಎಂದು ತೋರಿ ಬಂದರೂ, ಅವನು ಆಡಬೇಕಾದ ಪಾತ್ರದ ಕುರಿತು ಅವನೇನೂ ಪ್ರಶ್ನೆಯನ್ನು ಎಬ್ಬಿಸಲಿಲ್ಲ.—ಆದಿಕಾಂಡ 22:1-18; ಇಬ್ರಿಯ 11:17.
ಕ್ರೈಸ್ತ ನಿಷ್ಠೆ
10, 11. ಆದಿಕ್ರೈಸ್ತರು ನಿಷ್ಠೆಯ ಯಾವ ಮಾದರಿಗಳನ್ನು ಒದಗಿಸಿರುತ್ತಾರೆ?
10 ಯೆಹೋವನು ಯಾವಾಗಲೂ ನಿಜವಾದ ನಿಷ್ಠೆಯಿಂದ ವರ್ತಿಸಿದ್ದಾನೆ. “ದೇವರನ್ನು ಅನುಕರಿಸುವವರಾಗಿರ್ರಿ” ಎಂದು ಅಪೊಸ್ತಲ ಪೌಲನು ಪ್ರಚೋದಿಸುತ್ತಾನೆ. (ಎಫೆಸ 5:1, 2) ಮೂಲ ಪಿತೃಗಳು ಪ್ರತಿವರ್ತಿಸಿದಂತೆ, ಕ್ರೈಸ್ತರೂ ಪ್ರತಿವರ್ತಿಸಬೇಕಾಗಿತ್ತು. ಮುಂದಿನ ಅನುಭವವು ತೋರಿಸುವಂತೆ, ಆದಿಕ್ರೈಸ್ತರು ನಿಷ್ಠೆಯ ಆರಾಧನೆಯಲ್ಲಿ ಒಳ್ಳೆಯ ಮಾದರಿಗಳನ್ನಿಟ್ಟರು.
11 ಚಕ್ರವರ್ತಿ ಕೊನ್‌ಸ್ಟಂಟೀನ್‌ನ ತಂದೆ, ರೋಮನ್ ಚಕ್ರವರ್ತಿ ಒಂದನೇ ಕೊನ್‌ಸ್ಟಂಟಿಯಸ್‌ಗೆ ಯೇಸು ಕ್ರಿಸ್ತನ ಅನುಯಾಯಿಗಳ ಕಡೆಗೆ ಆಳವಾದ ಗೌರವವು ಇತ್ತೆಂದು ತೋರುತ್ತದೆ. ತನ್ನ ಅರಮನೆಗೆ ಸೇರಿದ ಕ್ರೈಸ್ತರ ನಿಷ್ಠೆಯನ್ನು ಪರೀಕ್ಷಿಸಲು, ಅವನು ಅವರಿಗೆ ಹೇಳಿದ್ದೇನಂದರೆ ಅವರು ವಿಗ್ರಹಗಳಿಗೆ ಬಲಿ ಅರ್ಪಿಸಲು ಒಪ್ಪಿದರೆ ಮಾತ್ರವೇ ಅವರು ಸೇವೆಯಲ್ಲಿ ಉಳಿಯಬಹುದು. ನಿರಾಕರಿಸಿದಾದ್ದರೆ ಅವರನ್ನು ಕೆಲಸದಿಂದ ವಜಾಮಾಡಲಾಗುತ್ತದೆ ಮತ್ತು ಅವನ ಕೈಯಿಂದ ಪ್ರತೀಕಾರವು ತೀರಿಸಲ್ಪಡುವದು ಎಂದು ತಿಳಿಸಲ್ಪಟ್ಟಿತು. ಈ ಸರಳ ಕ್ರಿಯೆಯ ಮೂಲಕ, ತಮ್ಮ ನಿಷ್ಠೆಯನ್ನು ಎಂದಿಗೂ ಬಿಡದವರನ್ನು ಗುರುತಿಸಲು ಕೊನ್‌ಸ್ಟಂಟಿಯಸ್ ಬಯಸಿದ್ದನು. ದೇವರಿಗೆ ಮತ್ತು ಅವನ ಸೂತ್ರಗಳಿಗೆ ನಿಷ್ಠರೆಂದು ಕಂಡುಬಂದವರು ಚಕ್ರವರ್ತಿಯ ಸೇವೆಯಲ್ಲಿ ಇಡಲ್ಪಟ್ಟರು, ಕೆಲವರು ನಂಬಿಕೆಯ ಸಲಹೆಗಾರರೂ ಆದರು. ದೇವರ ಆಜೆಗ್ಞೆ ದ್ರೋಹ ಬಗೆದವರು ತಲೆತಗ್ಗಿಸುವಂಥ ರೀತಿಯಲ್ಲಿ ವಜಾಗೊಳಿಸಲ್ಪಟ್ಟರು.
12. ಕ್ರೈಸ್ತ ಮೇಲ್ವಿಚಾರಕನು ನಿಷ್ಠೆಯನ್ನು ಹೇಗೆ ಪ್ರದರ್ಶಿಸಬೇಕು, ಮತ್ತು ಇದು ಸಭೆಯ ಹಿತಕ್ಕಾಗಿ ಏಕೆ ಆವಶ್ಯಕವಾಗಿರುತ್ತದೆ?
12 ನಿಷ್ಠೆಯು ಎಲ್ಲಾ ಕ್ರೈಸ್ತರ ಜೀವಿತಗಳಲ್ಲಿ ಒಂದು ವಿಶೇಷ ಲಕ್ಷಣವಾಗಿರಬೇಕಾದರೂ, ಒಬ್ಬ ಮನುಷ್ಯನು ಕ್ರೈಸ್ತ ಮೇಲ್ವಿಚಾರಕನಾಗಲು ಆವಶ್ಯವಿರುವ ಗುಣಗಳ ಪಟ್ಟಿಯಲ್ಲಿ ಇದನ್ನು ನಿರ್ದಿಷ್ಟವಾಗಿ ನಮೂದಿಸಲಾಗಿದೆ. ವಿಲ್ಯಂ ಬಾರ್‌ಕ್ಲೇ ಹೇಳುವದೇನಂದರೆ ಇಲ್ಲಿ “ನಿಷ್ಠೆ” ಎಂದು ತರ್ಜುಮೆಯಾದ ಹೊ‘ಸಿ-ಒಸ್ ಎಂಬ ಗ್ರೀಕ್ ಶಬ್ದವು, “ಯಾವನೇ ಮಾನವ-ರಚಿತ ನಿಯಮಗಳಿಗಿಂತ ಮೊದಲು ಇದ್ದ ಮತ್ತು ಇರುವ ನಿತ್ಯತೆಯ ನಿಯಮಗಳಿಗೆ ವಿಧೇಯನಾಗುವ ಮನುಷ್ಯನನ್ನು” ವಿವರಿಸುತ್ತದೆ. ಹಿರಿಯರು ದೇವರ ನಿಯಮಗಳಿಗೆ ವಿಧೇಯತೆ ತೋರಿಸಲು ಇಂಥಾ ನಿಷ್ಠೆಯ ನಿಲುವನ್ನು ತಕ್ಕೊಳ್ಳುವದು ಆವಶ್ಯಕವಾಗಿದೆ. ಈ ಯೋಗ್ಯ ಮಾದರಿಯು ಸಭೆಯು ಬೆಳೆಯುವಂತೆ ಮತ್ತು ಅದನ್ನು ಒಂದು ಗುಂಪಾಗಿ ಅಥವಾ ಅದರ ಸದಸ್ಯರನ್ನು ವೈಯಕ್ತಿಕವಾಗಿ ಬೆದರಿಸುವ ಎಲ್ಲಾ ಪರೀಕ್ಷೆ ಮತ್ತು ಒತ್ತಡಗಳನ್ನು ಎದುರಿಸಲು ಸಾಕಷ್ಟು ಬಲವಾಗಿರುವಂತೆ ಸಹಾಯ ಮಾಡುವದು. (1 ಪೇತ್ರ 5:3) ಯೆಹೋವನೆಡೆಗೆ ಅವರ ನಿಷ್ಠೆಯಲ್ಲಿ ಎಂದಿಗೂ ಒಪ್ಪಂದ ಮಾಡಿಕೊಳ್ಳದಂತೆ ಅವರ ಹಿಂಡಿನ ಕಡೆಗೆ ನೇಮಿತ ಹಿರಿಯರಿಗೆ ಒಂದು ಮಹತ್ತಾದ ಜವಾಬ್ದಾರಿ ಇರುತ್ತದೆ ಯಾಕಂದರೆ ಸಭೆಯು “ಅವರ ನಂಬಿಕೆಯನ್ನು ಅನುಕರಿಸುವಂತೆ” ಪ್ರಬೋಧಿಸಲಾಗಿದೆ.—ಇಬ್ರಿಯ 13:7.
ನಿಷ್ಠೆ—ಯಾವ ಬೆಲೆಗೆ?
13. “ಎಲ್ಲಾ ಮನುಷ್ಯರಿಗೆ ಅವರ ಬೆಲೆ ಇದೆ” ಎಂಬ ಸೂತ್ರದ ಅರ್ಥವೇನು, ಮತ್ತು ಯಾವ ಉದಾಹರಣೆಗಳು ಇದನ್ನು ದೃಢೀಕರಿಸುವಂತೆ ತೋರುತ್ತವೆ?
13 “ಎಲ್ಲಾ ಮನುಷ್ಯರಿಗೆ ಅವರ ಬೆಲೆ ಇದೆ” ಎಂಬ ಸೂತ್ರವು 18ನೆಯ ಶತಮಾನದ ಬ್ರಿಟಿಷ್ ಪ್ರಧಾನ ಮಂತ್ರಿ ಸರ್ ರೋಬರ್ಟ್ ವಾಲ್ಪೊಲ್‌ರಿಗೆ ಸೇರಿದ್ದು ಎಂದು ಹೇಳಲಾಗಿದೆ. ಇತಿಹಾಸದಲ್ಲೆಲ್ಲಾ ನಿಷ್ಠೆಗಳು ಸ್ವಾರ್ಥಲಾಭಕ್ಕಾಗಿ ಮಾರಲ್ಪಟ್ಟಿವೆ ಎಂಬ ನಿಜಾಂಶವನ್ನು ಅದು ಚೆನ್ನಾಗಿ ಹೇಳುತ್ತದೆ. ಹೆನ್ರಿ ಫಿಲಿಪ್ಪನನ್ನು ಒಬ್ಬ ನಿಷ್ಟಾವಂತ ಗೆಳೆಯನೆಂದು ಸ್ವೀಕರಿಸಿದ ಬೈಬಲ್ ತರ್ಜುಮೆಗಾರ ವಿಲ್ಯಂ ಟಿಂಡೇಲ್‌ರನ್ನು ಗಮನಿಸಿರಿ. 1535ರಲ್ಲಿ ಫಿಲಿಪ್ಪನು ದ್ರೋಹಮಾಡಿ, ಟಿಂಡೇಲರನ್ನು ಅವನ ವಿರೋಧಿಗಳಿಗೆ ಹಿಡುಕೊಟ್ಟನು, ಇದರಿಂದಾಗಿ ಟಿಂಡೇಲರನ್ನು ಕೂಡಲೇ ದಸ್ತಗಿರಿ ಮಾಡಲಾಯಿತು ಮತ್ತು ಅವರು ಅಕಾಲಿಕ ಮರಣಕ್ಕೆ ನಡಿಸಲ್ಪಟ್ಟರು. ಒಬ್ಬ ಇತಿಹಾಸಗಾರನು ಹೇಳಿದ್ದೇನಂದರೆ ಫಿಲಿಪ್ಪನು ಪ್ರಾಯಶಃ ಇಂಗ್ಲಿಷ್ ಅರಸನ ಇಲ್ಲವೆ ಇಂಗ್ಲಿಷ್ ಕ್ಯಾಥಲಿಕರ ಕಾರ್ಯಭಾರಿಯಾಗಿದ್ದು, “ಯೂದನ-ಕೆಲಸ ಮಾಡಿದ್ದಕ್ಕೆ ಒಳ್ಳೆಯ ಸಂಭಾವನೆ ಪಡೆದಿರಬೇಕು.” ಖಂಡಿತವಾಗಿ, ಆ ಇತಿಹಾಸಗಾರನು, ಯೇಸು ಕ್ರಿಸ್ತನಿಗೆ ಸ್ವಾಮಿದ್ರೋಹ ಮಾಡಿದ ಬೆಲೆಯಾಗಿ, 30 ಬೇಳ್ಳಿ ನಾಣ್ಯಗಳನ್ನು ಸ್ವೀಕರಿಸಿದ ಇಸ್ಕರಿಯೋತ ಯೂದನಿಗೆ ಸರಿದೂಗಿಸುತ್ತಾನೆ. ಆದಾಗ್ಯೂ, ಈ ಉದಾಹರಣೆಗಳಿಂದ ಒಬ್ಬ ವ್ಯಕ್ತಿಯ ನಿಷ್ಠೆಯ “ಬೆಲೆ”ಯು ಹಣ ಮಾತ್ರ ಎಂಬ ತೀರ್ಮಾನಕ್ಕೆ ಬರಬಾರದು. ಅದು ಹಾಗಿಲ್ಲ.
14. ಯೆಹೋವನೆಡೆಗಿನ ಯೋಸೇಫನ ನಿಷ್ಠೆಯು ಪರೀಕೆಗ್ಷೆ ಹೇಗೆ ಒಡ್ಡಲ್ಪಟ್ಟಿತು ಮತ್ತು ಯಾವ ಫಲಿತಾಂಶಗಳೊಂದಿಗೆ?
14 ಪೊಟೀಫರನ ಹೆಂಡತಿಯು ಯೋಸೇಫನನ್ನು “ಅವಳೊಂದಿಗೆ ಸಂಗಮಕ್ಕೆ ಕರೆದಾಗ” ಯೆಹೋವನೆಡೆಗಿನ ಅವನ ನಿಷ್ಠೆಯು ಪರೀಕೆಗ್ಷೆ ಒಳಪಟ್ಟಿತ್ತು. ಅವನೇನು ಮಾಡುವನು? ಒಳಗೂಡಿರುವ ತತ್ವಗಳು ಕುರಿತು ಈಗಾಗಲೇ ಸ್ಪಷ್ಟವಾಗಿ ಮನಸ್ಸಿನಲ್ಲಿದವ್ದನಾಗಿ, ಅವನೆಂದೂ “ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ, ದೇವರಿಗೆ ವಿರುದ್ಧವಾಗಿ ಪಾಪಮಾಡಲಾರೆನು” ಎಂದು ದೃಢ ಸಂಕಲ್ಪ ಮಾಡಿ, ಯೋಸೇಫನು ಮನೆಯಿಂದ ಓಡಿಹೋದನು. ಲೈಂಗಿಕ ಸುಖಾನುಭವದ ಪ್ರತೀಕ್ಷೆಯು ಅವನ ದೇವರಾದ ಯೆಹೋವನಿಗೆ ಯೋಸೇಫನು ನಿಷ್ಠನಾಗಿರುವದನ್ನು ಸೋಲಿಸಲು ಸಾಧ್ಯವಿರಲಿಲ್ಲ.—ಆದಿಕಾಂಡ 39:7-9.
15. ಅಬ್ಷಾಲೋಮನು ದ್ರೋಹವನ್ನು ಹೇಗೆ ಪ್ರದರ್ಶಿಸಿದನು ಮತ್ತು ಯಾವ ಪರಿಣಾಮಗಳೊಂದಿಗೆ?
15 ಅಲ್ಲಿ ಇನ್ನೂ ಬೇರೆ ಅಪಾಯಗಳಿವೆ; ಮಹತ್ವಾಕಾಂಕ್ಷೆಯು ನಿಷ್ಠೆಯನ್ನು ಕುಂಠಿತಗೊಳಿಸಬಹುದು. ತನ್ನ ತಂದೆಯಾದ ಅರಸ ದಾವೀದನ ವಿರುದ್ಧ ಅಬ್ಷಾಲೋಮನ ದಂಗೆಯೇಳುವಿಕೆಗೆ ಪ್ರೇರೇಪಣೆಯು ಅದೇ ಆಗಿತ್ತು. ಗುಪ್ತಾಲೋಚನೆಗಳಿಂದ ಮತ್ತು ಒಳಸಂಚಿನಿಂದ, ಜನರೊಂದಿಗೆ ಮೆಚ್ಚಿಕೆಯನ್ನು ಪಡೆಯಲು ಅಬ್ಷಾಲೋಮನು ಪ್ರಯತ್ನಿಸಿದನು. ಕಟ್ಟಕಡೆಗೆ, ಅವನ ತಂದೆಯ ಸ್ವಾಮಿನಿಷ್ಠ ಬೆಂಬಲಿಗರನ್ನು ಎದುರಿಸಲು ಒಂದು ಸೇನೆಯನ್ನು ಅವನು ಅಣಿಗೊಳಿಸಿದನು. ಯೋವಾಬನ ಹಸ್ತದಲ್ಲಿ ಅವನ ಮರಣವು ಅವನ ತಂದೆಯಾದ ದಾವೀದನ ವಿರುದ್ಧದ ಸ್ವಾಮಿದ್ರೋಹಕ್ಕೆ ಅಂತ್ಯವನ್ನು ತಂದಿತು, ಆದರೆ ಒಂದು ದೇವಪ್ರಭುತ್ವ ಏರ್ಪಾಡನ್ನು ಕಿತ್ತೆಸೆಯಲು ಮಾಡುವ ಪ್ರಯತ್ನಕ್ಕೆ ತೆರಬೇಕಾದ ಬೆಲೆ ಎಷ್ಟು!—2 ಸಮುವೇಲ 15:1-12; 18:6-17.
ಬೆಲೆಯೇ ಇಲ್ಲದ ನಿಷ್ಠೆ
16. ಸೈತಾನನ ಹೇತುವಿನ ಕುರಿತು 2 ಕೊರಿಂಥ 11:3 ಏನನ್ನು ಪ್ರಕಟಿಸುತ್ತದೆ?
16 ಪ್ರತಿಯೊಬ್ಬರಿಗೆ ಅವರದ್ದೇ ಬೆಲೆಯಿದೆ ಎಂದು ಸೈತಾನನು ವಾದಿಸುವದಾದರೂ, ಮತ್ತು ಅಬ್ಷಾಲೋಮನ ವಿಷಯದಲ್ಲಿ ಇದು ಸತ್ಯವಾದರೂ, ಯೋಸೇಫನ ವಿಷಯದಲ್ಲಿ ಇದು ಸತ್ಯವಾಗಿರಲಿಲ್ಲ, ಮತ್ತು ಯೆಹೋವನ ನಿಷ್ಠಾವಂತ ಆರಾಧಕರ ವಿಷಯದಲ್ಲಿ ಇದೆಂದೂ ನಿಜವಾಗಿರಲಿಕ್ಕಿಲ್ಲ. ಆದಾಗ್ಯೂ, ನಮ್ಮ ನಿರ್ಮಾಣಿಕನ ಕಡೆಗಿನ ನಮ್ಮ ನಿಷ್ಠೆಯನ್ನು ಮುರಿಯುವಂತೆ ಮಾಡಲು ಸೈತಾನನು ಯಾವುದೇ ಬೆಲೆಯನ್ನಾದರೂ ತೆರಲು ಸಿದ್ಧನು. ಅಪೊಸ್ತಲ ಪೌಲನು ತನ್ನ ಭಯವನ್ನು ವ್ಯಕ್ತಪಡಿಸುತ್ತಾ ಅಂದದ್ದು, “ಸರ್ಪವು ತನ್ನ ಕುಯುಕ್ತಿಯಿಂದ ಹವ್ವಳನ್ನು ಮೋಸಪಡಿಸಿದಂತೆ” ನಮ್ಮ ಆಲೋಚನೆಯು ಭ್ರಷ್ಟಗೊಂಡು, ಯೆಹೋವನಿಗೆ ನಮ್ಮ ನಿಷ್ಠೆ ಮತ್ತು ಅವನ ನಮ್ಮ ಆರಾಧನೆಯು ಒಪ್ಪಂದಕ್ಕೆ ನಡಿಸಲ್ಪಡಬಹುದು.—2 ಕೊರಿಂಥ 11:3.
17. ಬೆಲೆಕಟ್ಟಲಾಗದ ಸೇವಾಸುಯೋಗಗಳನ್ನು ಕೆಲವರು ಯಾವುದರೊಂದಿಗೆ ವಿಕ್ರಯಿಸಿಕೊಂಡಿದ್ದಾರೆ?
17 ನಾವು ನಮ್ಮನ್ನೇ ಹೀಗೆ ಕೇಳುವದು ತಕ್ಕದ್ದಾಗಿದೆ: ‘ನನ್ನ ಸೃಷ್ಟಿಕರ್ತನನ್ನು ನಿಷ್ಠೆಯಿಂದ ಆರಾಧಿಸುವ ನನ್ನ ಸುಯೋಗದ ಬದಲಿಗೆ ನಾನು ಸ್ವೀಕರಿಸಬಹುದಾದ ಯಾವುದೇ ಬೆಲೆ ಇದೆಯೋ?’ ಇದು ಒಂದು ದುಃಖದ ಸಂಗತಿ, ಏನಂದರೆ ಯೋಸೇಫನಂತಿರದೆ, ಯೆಹೋವನ ಸಮರ್ಪಿತ ಸೇವಕರಾಗಿದ್ದ ಕೆಲವರು ಬದಲಿಯಾಗಿ ತೀರ ಕಡಿಮೆಯದ್ದನ್ನು ಕೇಳಿಕೊಂಡಿದ್ದಾರೆ. ಅನೈತಿಕ ದೈಹಿಕ ಸುಖಭೋಗಗಳ ತಾತ್ಕಾಲಿಕ ಸಂತೋಷಕ್ಕಾಗಿ ಕೆಲವು ಹಿರಿಯರು ಸಹಿತ ಅವರ ಬೆಲೆಕಟ್ಟಲಾಗದ ಪವಿತ್ರ ಸೇವೆಯ ಸುಯೋಗಗಳನ್ನು ವಿಕ್ರಯಿಸಿಕೊಂಡಿದ್ದಾರೆ. ಹಿರಿಯರಾಗಿರಲಿ, ಇಲ್ಲದಿರಲಿ, ಹೀಗೆ ಮಾಡುವ ಹೆಚ್ಚಿನವರು ಕುಟುಂಬದ ಐಕ್ಯತೆ, ಸಭೆಯಲ್ಲಿನ ಪ್ರೀತಿ ಮತ್ತು ಗೌರವ ಮತ್ತು ಸೈತಾನನಿಂದ ಬರುವ ಯಾವುದೇ ಶೋಧನೆಗಳನ್ನು ಪ್ರತಿರೋಧಿಸಲು ಮತ್ತು ನಿಷ್ಠೆಯನ್ನು ಕಾಪಾಡಲು ಬಲವನ್ನು ಕೊಡುವಾತನಾದ ಆ ಒಬ್ಬನ—ಅಂದರೆ ಯೆಹೋವನ ಮೆಚ್ಚಿಕೆಯನ್ನು ಮರಳಿ ಪಡೆಯಲಾಗದ ರೀತಿಯಲ್ಲಿ ಕಳಕೊಂಡಿರುತ್ತಾರೆ.—ಯೆಶಾಯ 12:2; ಫಿಲಿಪ್ಪಿಯ 4:13.
18. 1 ತಿಮೊಥೆಯ 6:9, 10ರಲ್ಲಿ ಕೊಡಲ್ಪಟ್ಟ ಎಚ್ಚರಿಕೆಗೆ ಕಿವಿಗೊಡುವದು ಯಾಕೆ ಪ್ರಾಮುಖ್ಯವಾಗಿದೆ?
18 ಇತರರು, ಬೈಬಲಿನ ಸ್ಪಷ್ಟ ಎಚ್ಚರಿಕೆಗಳ ನಡುವೆಯೂ, ಲೌಕಿಕ ಬೆನ್ನಟ್ಟುವಿಕೆಗಳಲ್ಲಿ ಮುನ್ನಡೆಯುವ ಮಹತ್ವಾಕಾಂಕ್ಷೆಯ ದೃಢ ನಿರ್ಧಾರ ಮಾಡಿಕೊಂಡಿರುತ್ತಾ, “ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಂಡಿರುತ್ತಾರೆ.” (1 ತಿಮೊಥೆಯ 6:9, 10) ಪೌಲನಿಂದ ಉಲ್ಲೇಖಿಸಲ್ಪಟ್ಟ ಒಬ್ಬ ಕ್ರೈಸ್ತನಾಗಿದ್ದ ದೇಮನು, ಈ ಕಾರಣದಿಂದ ತಾತ್ಕಾಲಿಕವಾಗಿಯೋ ಯಾ ಶಾಶ್ವತವಾಗಿಯೋ ನಷ್ಟಹೊಂದಿದನು. (2 ತಿಮೊಥೆಯ 4:10) ವಿಪತ್ಕಾರಕ ಪರಿಣಾಮಗಳಿಲ್ಲದೇ, ಯೆಹೋವನೆಡೆಗಿನ ನಿಷ್ಠೆಯ ವಿಷಯದಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವದಿಲ್ಲ. “ದೇವರು ತಿರಸ್ಕಾರ ಸಹಿಸುವವನಲ್ಲ; ಮನುಷ್ಯನು ತಾನು ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ.”—ಗಲಾತ್ಯ 6:7.
19, 20. (ಎ) ಮಿತಿಮೀರಿದ ಟೆಲಿವಿಶನ್ ವೀಕ್ಷಣೆಯೊಂದಿಗೆ ಜತೆಗೂಡಿರುವ ಕೆಲವು ಅಪಾಯಗಳು ಯಾವುವು? (ಬಿ) ಒಂದು ಸಾಕ್ಷಿ ಕುಟುಂಬವು ಯಾವ ಮಾದರಿಯನ್ನಿಟ್ಟಿತು?
19 ಕೆಲವೊಮ್ಮೆ ಚೌಕಾಯಿಷಿ ಬೆಲೆಯು ಒಂದು ಗುಪ್ತವಾದ ರೀತಿಯಲ್ಲಿ ತಿಳಿಯದಂತಿರುತ್ತದೆ. ಉದಾಹರಣೆಗೆ, ಅಮೆರಿಕ ಒಂದು ವರದಿಯು ತಿಳಿಸುವದು, ಅಧಿಕಾಂಶ ಕುಟುಂಬಗಳು ತಮ್ಮ ಜಾಗೃತ ವೇಳೆಯ ಅರ್ಥದಷ್ಟು ಸಮಯವನ್ನು ಮನೆಯಲ್ಲಿ ಟೆಲಿವಿಶನ್ ನೋಡುವದರಲ್ಲಿ ಕಳೆಯುತ್ತಾರೆ. ಯುವ ಜನರು ವಿಶೇಷವಾಗಿ ಇದರ ಚಟದಲ್ಲಿ ಬಿದ್ದಿರುತ್ತಾರೆ. ಕ್ರೈಸ್ತನೊಬ್ಬನು ಅಧಿಕಾಂಶ ತನ್ನ ಮನಸ್ಸಿಗೆ ಟೆಲಿವಿಶನ್ ಮೂಲಕ, ಅದರ ಲೈಂಗಿಕತೆ ಮತ್ತು ಹಿಂಸಾಚಾರವನ್ನು, ಉಣಿಸುತ್ತಾ ಇರುವದಾದರೆ, ಅವನು ಬಲು ಬೇಗನೇ ತನ್ನ ಕ್ರಿಸ್ತೀಯ ಸೂತ್ರಗಳನ್ನು ದುರ್ಲಕ್ಷ್ಯಿಸಸಾಧ್ಯವಿದೆ. ಅದು ಸುಲಭವಾಗಿ ಯೆಹೋವನಿಗೆ ಸ್ವಾಮಿದ್ರೋಹಿಯಾಗಲು ಮತ್ತು ಯೆಹೋವನಿಂದ ಬೇರ್ಪಡಲು ನಡಿಸಬಹುದು. ಅಂಥ ದುಸ್ಸಹವಾಸವು ಉಪಯುಕ್ತ ಸದಾಚಾರಗಳನ್ನು ಹಾಳುಗೆಡವಬಹುದು. (1 ಕೊರಿಂಥ 15:33) ಯೆಹೋವನ ವಾಕ್ಯವನ್ನು ಅಭ್ಯಸಿಸಲು ಮತ್ತು ಧ್ಯಾನಿಸಲು ಸಮಯ ತೆಗೆದುಕೊಳ್ಳುವಂತೆ ಶಾಸ್ತ್ರಗ್ರಂಥಗಳು ನಮಗೆ ಎಚ್ಚರಿಕೆಯನ್ನು ಕೊಡುತ್ತವೆ ಎಂಬುದನ್ನು ನಾವು ಮರೆಯಬಾರದು. ಯೆಹೋವನ ಒಬ್ಬ ನಿಷ್ಠ ಆರಾಧಕನಾಗಿ ನಿತ್ಯ ಜೀವಕ್ಕೆ ನಡಿಸಬಹುದಾದ ಜ್ಞಾನವನ್ನು ಪಡೆಯುವದರ ಬದಲು ಟೆಲಿವಿಶನ್ ಪರದೆಯ ಮುಂದೆ ಅತಿರೇಕವಾಗಿ ಸಮಯವನ್ನು ಆರಾಮವಾಗಿ ವ್ಯಯಿಸುವದು ಒಂದು ನ್ಯಾಯಬದ್ಧ ಬದಲಿಯಾಗಿದೆಯೇ? ಇಂದು ಸತ್ಯದ ಪರಿಜ್ಞಾನಕ್ಕೆ ಬರುತ್ತಿರುವ ಅನೇಕರು ಈ ವಿಷಯದಲ್ಲಿ ಅವರ ಯೋಚನೆಗಳಲ್ಲಿ ಒಂದು ಮಹತ್ತರವಾದ ಬದಲಾವಣೆಯನ್ನು ಮಾಡಬೇಕಾಗುತ್ತದೆ.—1 ತಿಮೊಥೆಯ 4:15; 2 ತಿಮೊಥೆಯ 2:15.
20 ಜಪಾನಿನ ವ್ಯಾಪಾರಿಯಾಗಿದ್ದ ತಕಾಶಿಯು ಇಂಗ್ಲೆಂಡಿನಲ್ಲಿ ಜೀವಿಸುತ್ತಿದ್ದನು. ಅವನ ಕುಟುಂಬದೊಂದಿಗೆ ಪ್ರತಿ ಸಾಯಂಕಾಲ ಮೂರರಿಂದ ನಾಲ್ಕು ತಾಸುಗಳಷ್ಟು ಸಮಯ ಟೆಲಿವಿಶನ್ ನೋಡುವದರಲ್ಲಿ ಕಳೆಯುತ್ತಿದ್ದನು. ನಾಲ್ಕು ವರ್ಷಗಳ ಹಿಂದೆ, ಅವನೂ, ಅವನ ಹೆಂಡತಿಯೂ ದೀಕ್ಷಾಸ್ನಾನ ಪಡೆದುಕೊಂಡ ಮೇಲೆ, ವೈಯಕ್ತಿಕ ಮತ್ತು ಕೌಟುಂಬಿಕ ಅಭ್ಯಾಸವು ಪ್ರಥಮತೆಯನ್ನು ಪಡೆಯಬೇಕೆಂದು ನಿರ್ಧರಿಸಿದನು. ಟೆಲಿವಿಶನ್ ವೀಕ್ಷಿಸುವದನ್ನು ಸರಾಸರಿ ದಿನಕ್ಕೆ 15 ಯಾ 30 ನಿಮಿಶಗಳಿಗೆ ಇಳಿಸಿ, ಅವನು ಕುಟುಂಬದಲ್ಲಿ ಒಂದು ಒಳ್ಳೆಯ ನೇತೃತ್ವವನ್ನು ವಹಿಸಿದನು. ತಕಾಶಿಯು ಅಭ್ಯಾಸಕ್ಕೆ ಎರಡು ಬೈಬಲುಗಳನ್ನು ಬಳಸಬೇಕಾದರೂ, ಒಂದು ಇಂಗ್ಲಿಷ್, ಮತ್ತೊಂದು ಜಾಪಾನೀಸ್, ಅವನ ಆತ್ಮಿಕ ಬೆಳವಣಿಗೆಯು ಬಹಳ ತೀವ್ರಗತಿಯದ್ದಾಗಿತ್ತು ಮತ್ತು ಒಂದು ಇಂಗ್ಲಿಷ್ ಭಾಪೆಯನ್ನಾಡುವ ಸಭೆಯೊಂದರಲ್ಲಿ ಒಬ್ಬ ಶುಶ್ರೂಷಕ ಸೇವಕನಾಗಿ ಈಗ ಅವನು ಸೇವೆ ಸಲ್ಲಿಸುತ್ತಿದ್ದಾನೆ. ಅವನ ಹೆಂಡತಿಯು ಸಹಾಯಕ ಪಯನೀಯರ್ ಆಗಿದ್ದಾಳೆ. “ನಮ್ಮ ಇಬ್ಬರು ಎಳೆಯ ಹುಡುಗರ ಆತ್ಮಿಕತೆಯನ್ನು ಸುರಕ್ಷಿತವಾಗಿಡಲು,” ಅವನು ಹೇಳುವದು, “ನನ್ನ ಹೆಂಡತಿ ಮತ್ತು ನಾನು ಅವರು ಟೆಲಿವಿಶನ್‌ನಲ್ಲಿ ಏನನ್ನು ನೋಡಲು ಅನುಮತಿಸತಕ್ಕದ್ದು ಎಂಬುದನ್ನು ನಾನು ಜಾಗ್ರತೆಯಿಂದ ಅಂಕೆಯಲಿಡ್ಲುತ್ತೇನೆ.” ಅಂಥಾ ಸಥ್ವ-ಶಿಸ್ತುಪಡಿಸಿಕೊಳ್ಳುವಿಕೆಯು ಬಹುಮಾನವನ್ನು ತರುತ್ತದೆ.
21. ಸೈತಾನನ ಕೆಲವು ತಂತ್ರಗಳ ಕುರಿತು ನಾವೇನನ್ನು ತಿಳಿದಿರುತ್ತೇವೆ ಮತ್ತು ನಮ್ಮನ್ನು ನಾವು ಸುರಕ್ಷಿತರಾಗಿ ಇಟ್ಟುಕೊಳ್ಳುವದು ಹೇಗೆ?
21 ನಾವಿದರ ಕುರಿತು ಖಾತ್ರಿಯಿಂದಿರಬಹುದು: ಸೈತಾನನು ನಮ್ಮ ಬಲಹೀನತೆಗಳನ್ನು ತಿಳಿದಿದ್ದಾನೆ, ಪ್ರಾಯಶಃ ನಾವು ನಮ್ಮನ್ನು ತಿಳಿದಿರುವದಕ್ಕಿಂತಲೂ ಹೆಚ್ಚು ಉತ್ತಮವಾಗಿ ತಿಳಿದಿರಬಹುದು. ನಾವು ಒಪ್ಪಂದಮಾಡಿಕೊಳ್ಳುವಂಥ ಅಥವಾ ಯೆಹೋವನಿಗೆ ನಾವು ತೋರಿಸುವ ಸ್ವಾಮಿನಿಷ್ಠೆಯನ್ನು ದುರ್ಬಲಗೊಳಿಸಲು, ಅವನು ಪ್ರಯತ್ನಿಸುವಾಗ ಅವನು ಯಾವದಕ್ಕೂ ಹಿಂಜರಿಯುವದಿಲ್ಲ. (ಮತ್ತಾಯ 4:8, 9 ಹೋಲಿಸಿರಿ.) ಹಾಗಾದರೆ ನಾವು ನಮ್ಮನ್ನು ಸುರಕ್ಷಿತೆಯಲ್ಲಿ ಇಟ್ಟುಕೊಳ್ಳುವದು ಹೇಗೆ ಸಾಧ್ಯ? ನಮ್ಮ ಸಮರ್ಪಣೆಯನ್ನು ಯಾವಾಗಲೂ ನಮ್ಮ ಮುಂದುಗಡೆ ಇಟ್ಟುಕೊಳ್ಳುವದರಿಂದ ಮತ್ತು ಇತರರ ಆತ್ಮಿಕ ಆವಶ್ಯಕತೆಗಳ ಶುಶ್ರೂಷೆಯನ್ನು ನಾವು ಮಾಡುತ್ತಿರುವಾಗ, ನಮ್ಮ ಕೌಶಲ್ಯವನ್ನು ಬೆಳಸುವದರಲ್ಲಿ ಆನಂದಿಸುವದರ ಮೂಲಕ. ಯೆಹೋವನ ನಿಷ್ಠ ಸೇವಕರೋಪಾದಿ, ನಾವು ಅವನ ಸೇವೆಯಲ್ಲಿ ಕಾರ್ಯಮಗ್ನರಾಗಿರಿಸಿಕೊಳ್ಳತಕ್ಕದ್ದು ಮತ್ತು ಅವನ ಪವಿತ್ರ ವಾಕ್ಯದಿಂದ ಎಲ್ಲಾ ಸಮಯಗಳಲ್ಲೂ ಮಾರ್ಗದರ್ಶಿಸಲ್ಪಡತಕ್ಕದ್ದು. ದೇವರಿಗೆ ನಿಷ್ಠೆಯನ್ನು ತೋರಿಸುವದರಲ್ಲಿ ಸೈತಾನನು ನೀಡುವ ಯಾವುದೇ ಬೆಲೆಯು ನಮ್ಮನ್ನು ಪಕ್ಕಕ್ಕೆ ತಳ್ಳಲಾರದು ಎಂಬ ನಮ್ಮ ದೃಢ ನಿರ್ಧಾರದಲ್ಲಿ ಇದು ನಮಗೆ ಸಹಾಯವಾಗುವದು.—ಕೀರ್ತನೆ 119:14-16. (w90 8/15)
ನೀವು ಹೇಗೆ ಉತ್ತರಿಸುವಿರಿ?
◻ ಯೆಹೋವನು ಮತ್ತು ಯೇಸುವು ನಿಷ್ಠೆಯನ್ನು ಹೇಗೆ ಪ್ರದರ್ಶಿಸಿರುತ್ತಾರೆ?
◻ ನಿಷ್ಠೆಯ ಕುರಿತಾಗಿರುವ ಬೈಬಲಿನ ಇನ್ನಿತರ ಉದಾಹರಣೆಗಳು ಯಾವವು?
◻ ಸೈತಾನನು ನಮಗೇನನ್ನು ನೀಡಬಹುದು ಇಲ್ಲವೇ ಮಾಡಲು ಪ್ರಯತ್ನಿಸಬಹುದು?
◻ ಯೆಹೋವನ ನಮ್ಮ ಆರಾಧನೆಯಲ್ಲಿ ನಾವು ನಿಷ್ಠರಾಗಿ ಉಳಿಯಲು ಸ್ವತಃ ನಮ್ಮನ್ನು ನಾವು ಹೇಗೆ ಬಲಪಡಿಸಿಕೊಳ್ಳಬಹುದು?