ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳಿಗೆ ನೀವು ಜಾಗರೂಕವಾದ ಗಮನವನ್ನು ಕೊಟ್ಟಿದ್ದೀರೊ? ಹಾಗಿರುವಲ್ಲಿ, ಈ ಕೆಳಗಿನ ವಿಷಯಗಳನ್ನು ಪುನಃ ಜ್ಞಾಪಿಸಿಕೊಳ್ಳುವುದನ್ನು ನೀವು ಆಸಕ್ತಿಕರವಾದದ್ದಾಗಿ ಕಂಡುಕೊಳ್ಳುವಿರಿ:
◻ ಇಂದು ಅನೇಕ ವಿವಾಹಿತ ದಂಪತಿಗಳು, ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಬಿಟ್ಟುಹೋದ ಅತ್ಯುತ್ಕೃಷ್ಟ ಮಾದರಿಯನ್ನು ಹೇಗೆ ಅನುಸರಿಸಿದ್ದಾರೆ?
ಅಕ್ವಿಲ ಮತ್ತು ಪ್ರಿಸ್ಕಿಲ್ಲರು ವಿಭಿನ್ನ ಸಭೆಗಳಲ್ಲಿ ಸೇವೆಸಲ್ಲಿಸಿದರು. ಅವರಂತೆ, ಆಧುನಿಕ ದಿನದ ಅನೇಕ ಹುರುಪುಳ್ಳ ಕ್ರೈಸ್ತರು, ಎಲ್ಲಿ ಅಗತ್ಯವು ಹೆಚ್ಚಾಗಿದೆಯೋ ಆ ಸ್ಥಳಗಳಿಗೆ ಸ್ಥಳಾಂತರಿಸಲು ತಮ್ಮನ್ನು ದೊರಕಿಸಿಕೊಂಡಿದ್ದಾರೆ. ರಾಜ್ಯ ಅಭಿರುಚಿಗಳು ಬೆಳೆಯುವುದನ್ನು ನೋಡುವುದರಿಂದ ಮತ್ತು ಅಮೂಲ್ಯವಾದ ಕ್ರೈಸ್ತ ಗೆಳೆತನಗಳನ್ನು ವಿಕಸಿಸಿಕೊಳ್ಳಲು ಶಕ್ತರಾಗಿರುವುದರಿಂದ ಬರುವಂತಹ ಆನಂದ ಮತ್ತು ತೃಪ್ತಿಯನ್ನೂ ಅವರು ಅನುಭವಿಸಿದ್ದಾರೆ.—12/15, ಪುಟ 24.
◻ ಮದ್ಯಪಾನೀಯಗಳ ಕುರಿತು ಬೈಬಲಿನ ನೋಟವು ಏನಾಗಿದೆ?
ಮದ್ಯಪಾನೀಯಗಳ ಕುರಿತಾದ ಬೈಬಲಿನ ನೋಟವು ಸಮತೋಲನದ್ದಾಗಿದೆ. ಒಂದು ಕಡೆಯಲ್ಲಿ ಬೈಬಲು ದ್ರಾಕ್ಷಾಮದ್ಯವು ದೇವರಿಂದ ಬಂದ ಒಂದು ಕೊಡುಗೆಯೆಂದು ಹೇಳುತ್ತದೆ. (ಕೀರ್ತನೆ 104:1, 15) ಇನ್ನೊಂದು ಕಡೆ, ಅದು ಅತಿಯಾದ ಲೋಲುಪತೆಯನ್ನು ಖಂಡಿಸುತ್ತದೆ. (ಲೂಕ 21:34; 1 ತಿಮೊಥೆಯ 3:8; ತೀತ 2:3; 1 ಪೇತ್ರ 4:3)—12/15, ಪುಟ 27.
◻ ಹಗ್ಗಾಯನ ಪುಸ್ತಕದ ಅರ್ಥಗರ್ಭಿತ ವೈಶಿಷ್ಟ್ಯವು ಯಾವುದಾಗಿದೆ?
ಹಗ್ಗಾಯನ ಪುಸ್ತಕವು ಕೇವಲ 38 ವಚನಗಳಿಂದ ರಚಿತವಾಗಿರುವುದಾದರೂ, ದೇವರ ಹೆಸರನ್ನು 35 ಬಾರಿ ಉಪಯೋಗಿಸಲಾಗಿದೆ. ಯೆಹೋವ ಎಂಬ ಹೆಸರನ್ನು “ಕರ್ತನು” ಎಂಬ ಬಿರುದಿನಿಂದ ಸ್ಥಾನಪಲ್ಲಟಗೊಳಿಸುವಾಗ, ಇಂತಹ ಪ್ರವಾದನೆಯು ಜೀವರಹಿತವಾಗಿ ಧ್ವನಿಸುತ್ತದೆ.—1/1, ಪುಟ 6.
◻ ದಾವೀದನ ಹಾಗೂ ಮನಸ್ಸೆಯ ಪಾಪಗಳಿಂದ ಯಾವ ಪಾಠವನ್ನು ಕಲಿಯಸಾಧ್ಯವಿದೆ?
ಯೆಹೋವನು ದಾವೀದನಿಗೆ ಹಾಗೂ ಮನಸ್ಸೆಗೆ ಕ್ಷಮೆನೀಡಿದರೂ, ಈ ಇಬ್ಬರು ಪುರುಷರು ಮತ್ತು ಅವರೊಂದಿಗೆ ಇಸ್ರಾಯೇಲ್ಯರು, ತಮ್ಮ ಪಾಪಪೂರ್ಣ ಕೃತ್ಯಗಳ ಪರಿಣಾಮಗಳೊಂದಿಗೆ ಜೀವಿಸಬೇಕಾಗಿತ್ತು. (2 ಸಮುವೇಲ 12:11, 12; ಯೆರೆಮೀಯ 15:3-5) ತದ್ರೀತಿಯಲ್ಲಿ, ಯೆಹೋವನು ಪಶ್ಚಾತ್ತಾಪಪಡುವ ಪಾಪಿಗಳನ್ನು ಕ್ಷಮಿಸುವಾಗಲೂ, ಅವರ ವರ್ತನೆಗಳಿಗಾಗಿ ತಪ್ಪಿಸಲಸಾಧ್ಯವಾದ ಪರಿಣಾಮಗಳು ಬಂದೇಬರಬಹುದು.—1/1, ಪುಟ 27.
◻ ದೇವರ ರಾಜ್ಯದ ‘ಶುಭಸಮಾಚಾರವನ್ನು ಸಾರುವವರ ಪಾದಗಳು’ ಯಾವ ವಿಧದಲ್ಲಿ “ಅಂದವಾಗಿವೆ”? (ಯೆಶಾಯ 52:7)
ಒಬ್ಬ ವ್ಯಕ್ತಿಯು ಇತರರಿಗೆ ಸಾರಲು ಹೊರಡುವಾಗ ಸಾಮಾನ್ಯವಾಗಿ ಪಾದಗಳು ಒಬ್ಬ ವ್ಯಕ್ತಿಯನ್ನು ಚಲಿಸುವಂತೆ ಮಾಡುತ್ತವೆ. ಅಂತಹ ಪಾದಗಳು ನಿಜವಾಗಿ ಆ ವ್ಯಕ್ತಿಯನ್ನು ಪ್ರತಿನಿಧಿಸುತ್ತವೆ. ಆದುದರಿಂದ ರಾಜ್ಯದ ಸುವಾರ್ತೆಗೆ ಕಿವಿಗೊಟ್ಟು, ಅದಕ್ಕೆ ಅನುಕೂಲಕರವಾಗಿ ಪ್ರತಿಕ್ರಿಯಿಸುವ ಅನೇಕರಿಗೆ, ಅಂತಹ ಸಂದೇಶವಾಹಕರ ಪಾದಗಳು ಒಂದು ಮನೋಹರವಾದ ನೋಟವಾಗಿದೆಯೆಂಬುದು ನಿಜ.—1/15, ಪುಟ 13.
◻ “ಸುವಾರ್ತೆಯನ್ನು ಪ್ರಕಟಿ”ಸುವುದರಲ್ಲಿ, ಯಾವ ಇಮ್ಮಡಿ ಉದ್ದೇಶದ ಕೆಲಸವು ಒಳಗೂಡಿದೆ? (1 ಕೊರಿಂಥ 9:16)
ಮೊದಲನೆಯದಾಗಿ, ನಾವು ದೇವರ ರಾಜ್ಯದ ಸುವಾರ್ತೆಯನ್ನು ಸಾರಬೇಕು. ಈ ಕೆಲಸದ ದ್ವಿತೀಯಾಂಶದಲ್ಲಿ ರಾಜ್ಯದ ಘೋಷಣೆಗೆ ಅನುಕೂಲಕರವಾಗಿ ಪ್ರತಿವರ್ತಿಸುವವರಿಗೆ ಕಲಿಸುವುದು ಒಳಗೂಡಿದೆ.—1/15, ಪುಟ 23.
◻ ಸಭಾ ಕೂಟಗಳಲ್ಲಿ ರಾಜ್ಯ ಸಂಗೀತಗಳನ್ನು ಹಾಡುವುದರಿಂದ ಯಾವ ವೈಯಕ್ತಿಕ ಪ್ರಯೋಜನಗಳು ಫಲಿಸುತ್ತವೆ?
ನಮ್ಮ ಸೃಷ್ಟಿಕರ್ತನ ಕಡೆಗೆ ನಮಗಿರುವ ಅನಿಸಿಕೆಗಳನ್ನು ವ್ಯಕ್ತಪಡಿಸುವ ಅವಕಾಶವನ್ನು ಹಾಡುವಿಕೆಯು ನಮಗೆ ಕೊಡುತ್ತದೆ. (ಕೀರ್ತನೆ 149:1, 3) ನಾವು ಸಭಾ ಹಾಡುವಿಕೆಯಲ್ಲಿ ನಮ್ಮ ಹೃದಯವನ್ನು ತೋಡಿಕೊಳ್ಳುವಾಗ, ಅದು ನಮ್ಮನ್ನು ಮುಂಬರುವ ಕಾರ್ಯಕ್ರಮಕ್ಕೆ ತಕ್ಕ ಮನೋವೃತ್ತಿಯುಳ್ಳವರಾಗಿರುವಂತೆ ಮಾಡಬಲ್ಲದು. ಅದು ಯೆಹೋವನ ಆರಾಧನೆಯಲ್ಲಿ ಹೆಚ್ಚಿನ ಪಾಲನ್ನು ವಹಿಸಿಕೊಳ್ಳುವಂತೆ ನಮ್ಮನ್ನು ಹುರಿದುಂಬಿಸಸಾಧ್ಯವಿದೆ.—2/1, ಪುಟ 28.
◻ ಜನನ ದಿನಕ್ಕಿಂತ ಮರಣದ ದಿನವು ಉತ್ತಮವಾಗಿರುವುದೆಂದು ಹೇಗೆ ಹೇಳಸಾಧ್ಯವಿದೆ? (ಪ್ರಸಂಗಿ 7:1)
ಸಾಯುವಂತಹ ನಂಬಿಗಸ್ತ ವ್ಯಕ್ತಿಗಳನ್ನು ಪುನರುತ್ಥಾನಗೊಳಿಸಸಾಧ್ಯವಿರುವ ಯೆಹೋವನೊಂದಿಗೆ ಒಬ್ಬನು ಅಷ್ಟರೊಳಗೆ ಒಂದು ಒಳ್ಳೆಯ ಹೆಸರನ್ನು ಗಳಿಸಿರುವಲ್ಲಿ ಮಾತ್ರ, ಒಬ್ಬನು ಜನಿಸಿರುವ ದಿನಕ್ಕಿಂತ ಮರಣದ ದಿನವು ಉತ್ತಮವಾಗಿರಸಾಧ್ಯವಿದೆ. (ಯೋಹಾನ 11:25)—2/15, ಪುಟ 12.
◻ ಪ್ರಸಂಗಿ ಪುಸ್ತಕವು ನಮಗೆ ವೈಯಕ್ತಿಕವಾಗಿ ಸಹಾಯಮಾಡಬೇಕು ಏಕೆ?
ಜೀವನದ ಕುರಿತಾದ ನಮ್ಮ ಹೊರನೋಟವನ್ನು ಮತ್ತು ನಾವು ಯಾವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇವೊ ಅದನ್ನು ಸರಿಪಡಿಸಲು, ಅದು ನಮ್ಮಲ್ಲಿ ಪ್ರತಿಯೊಬ್ಬರಿಗೆ ಸಹಾಯಮಾಡಬಲ್ಲದು. (ಪ್ರಸಂಗಿ 7:2; 2 ತಿಮೊಥೆಯ 3:16, 17)—2/15, ಪುಟ 16.
◻ ಯೆಹೋವನ ಸಾಕ್ಷಿಗಳು ಮೂಲಭೂತ ವಾದಿಗಳಾಗಿದ್ದಾರೊ?
ಇಲ್ಲ. ಅವರಿಗೆ ಬಲವಾದ ಧಾರ್ಮಿಕ ನಿಶ್ಚಿತಾಭಿಪ್ರಾಯಗಳಿರುವುದಾದರೂ, ಆ ಶಬ್ದವು ಉಪಯೋಗಿಸಲ್ಪಡುವಂತಹ ಅರ್ಥದಲ್ಲಿ ಅವರು ಮೂಲಭೂತ ವಾದಿಗಳಾಗಿಲ್ಲ. ಅವರು ಯಾರೊಂದಿಗೆ ಅಸಮ್ಮತಿಸುತ್ತಾರೋ ಅವರ ವಿರುದ್ಧವಾಗಿ ಸಾರ್ವಜನಿಕ ಮೆರವಣಿಗೆಗಳು ಹಾಗೂ ಹಿಂಸಾಕೃತ್ಯವನ್ನು ನಡೆಸುವುದನ್ನು ಆಶ್ರಯಿಸುವುದಿಲ್ಲ. ಅವರು ತಮ್ಮ ಮುಖಂಡನಾದ ಯೇಸು ಕ್ರಿಸ್ತನನ್ನು ಅನುಕರಿಸುತ್ತಾರೆ.—3/1, ಪುಟ 6.
◻ ದೇವರ ಪ್ರತೀಕಾರವನ್ನು ಜಾರಿಗೊಳಿಸಲು ಯೇಸುವಿನ ಬರೋಣದ ನಿಖರವಾದ ಸಮಯವು ಗೊತ್ತಿರದೆ ಇರುವುದು ಕ್ರೈಸ್ತರ ಮೇಲೆ ಯಾವ ಪರಿಣಾಮವನ್ನು ಹೊಂದಿದೆ?
ಇದು ಕ್ರೈಸ್ತರನ್ನು ಎಚ್ಚರವಾಗಿಡುತ್ತದೆ ಮತ್ತು ತಾವು ಯೆಹೋವನನ್ನು ನಿಸ್ವಾರ್ಥ ಉದ್ದೇಶಗಳಿಂದ ಸೇವಿಸುತ್ತೇವೆ ಎಂಬುದನ್ನು ರುಜುಪಡಿಸಲು ದಿನನಿತ್ಯವೂ ಅವರಿಗೆ ಅವಕಾಶಕೊಡುತ್ತದೆ.—3/1, ಪುಟ 13.
◻ ನಮಗೆ ಮೋಸಮಾಡಿರಬಹುದಾದ ಸಹೋದರನೊಬ್ಬನ ವಿರುದ್ಧವಾಗಿ ಕಾನೂನುಬದ್ಧ ಕ್ರಮವನ್ನು ಕೈಕೊಳ್ಳುವುದಕ್ಕೆ ಮೊದಲು ನಾವು ಏನನ್ನು ಪರಿಗಣಿಸಬೇಕು?
ನಮ್ಮ ಮೇಲೆ, ಇತರ ವ್ಯಕ್ತಿಗಳ ಮೇಲೆ, ಸಭೆಯ ಮೇಲೆ ಮತ್ತು ಹೊರಗಿನವರ ಮೇಲೆ ಆಗುವ ಸಂಭಾವ್ಯ ಪರಿಣಾಮಗಳನ್ನು ನಾವು ಪರಿಗಣಿಸಬೇಕು. (1 ಕೊರಿಂಥ 6:7)—3/15, ಪುಟ 22.
◻ ನಿಜ ಸಂತೋಷವನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ?
ನಿಜ ಸಂತೋಷವು ಹೃದಯದ ಒಂದು ಸ್ಥಿತಿಯಾಗಿದ್ದು, ನಿಜವಾದ ನಂಬಿಕೆ ಮತ್ತು ಯೆಹೋವನೊಂದಿಗಿನ ಒಂದು ಒಳ್ಳೆಯ ಸಂಬಂಧದ ಮೇಲೆ ಆಧಾರಿತವಾಗಿದೆ. (ಮತ್ತಾಯ 5:3)—3/15, ಪುಟ 23.
◻ ಒಬ್ಬ ಕ್ರೈಸ್ತನು ನ್ಯಾಯದರ್ಶಿ ಕರ್ತವ್ಯ (ಜೂರಿ ಡ್ಯೂಟಿ) ವಹಿಸಲು ಕರೆಯಲ್ಪಟ್ಟಾಗ ಏನು ಮಾಡಬೇಕು?
ಜೂರಿ ಡ್ಯೂಟಿಯನ್ನು ಎದುರಿಸುವ ಪ್ರತಿಯೊಬ್ಬ ಕ್ರೈಸ್ತನು, ತನ್ನ ಬೈಬಲ್ ತಿಳಿವಳಿಕೆಯ ಮತ್ತು ತನ್ನ ಸ್ವಂತ ಮನಸ್ಸಾಕ್ಷಿಯ ಆಧಾರದ ಮೇರೆಗೆ, ಯಾವ ಮಾರ್ಗವನ್ನು ಅನುಸರಿಸಬೇಕೆಂಬುದನ್ನು ನಿರ್ಣಯಿಸಬೇಕು. (ಗಲಾತ್ಯ 6:5)—4/1, ಪುಟ 29.