ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 4/15 ಪು. 32
  • ಕಡಿದ ಮರ ಮತ್ತೆ ಚಿಗುರಬಲ್ಲದೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಡಿದ ಮರ ಮತ್ತೆ ಚಿಗುರಬಲ್ಲದೇ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಅನುರೂಪ ಮಾಹಿತಿ
  • ಯೋಬನಿಗೆ ಪುನರುತ್ಥಾನದಲ್ಲಿ ಪೂರ್ಣ ನಂಬಿಕೆಯಿತ್ತು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ದೇವರ ಮನೆಯಲ್ಲಿ ಸೊಗಸಾಗಿ ಬೆಳೆದ ಆಲಿವ್‌ ಮರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ‘ಆಹಾ! ದೇವರ ವಿವೇಕ ಎಷ್ಟೋ ಅಗಾಧ!’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ವಿವಿಧ ಸಾಮರ್ಥ್ಯಗಳ ಆಲಿವ್‌ ಎಣ್ಣೆ
    ಎಚ್ಚರ!—1993
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 4/15 ಪು. 32
ಕಡಿದ ಮರ ಮತ್ತೆ ಚಿಗುರಿದೆ

ಕಡಿದ ಮರ ಮತ್ತೆ ಚಿಗುರಬಲ್ಲದೇ?

ಲೆಬನೋನಿನ ದೇವದಾರು ವೃಕ್ಷ (ಸೀಡರ್‌ ವೃಕ್ಷ) ನೋಡಲು ಬಹು ಸುಂದರ. ಇದರ ಮುಂದೆ ಆಲೀವ್‌ ಮರ ಅಷ್ಟೇನೂ ಚೆನ್ನಾಗಿ ಕಾಣಲ್ಲ. ಏಕೆಂದರೆ ಅದು ಅಂಕುಡೊಂಕಾಗಿ ಗಂಟುಗಂಟಾಗಿ ಬೆಳೆಯುತ್ತದೆ. ಆದರೆ ಆಲೀವ್‌ ಮರಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಅದೇನು ಅಂತ ನಿಮಗೆ ಗೊತ್ತಾ? ಎಂಥದ್ದೇ ವಾತಾವರಣದಲ್ಲೂ ಬದುಕಿ ಉಳಿಯುವ ಸಾಮರ್ಥ್ಯ ಅದಕ್ಕಿದೆ. ಈಗಿರುವ ಕೆಲವು ಆಲೀವ್‌ ಮರಗಳಿಗೆ 1000ಕ್ಕೂ ಹೆಚ್ಚು ವಯಸ್ಸಾಗಿದೆ ಎಂದು ಅಂದಾಜು ಮಾಡಲಾಗಿದೆ. ಆಲೀವ್‌ ಮರದ ಕಾಂಡವನ್ನು ಸಂಪೂರ್ಣವಾಗಿ ಕಡಿದು ಹಾಕಿದರೂ ಮತ್ತೆ ಚಿಗುರುವ ಸಾಮರ್ಥ್ಯ ಅದಕ್ಕಿದೆ. ಇದಕ್ಕೆ ಕಾರಣ ವಿಶಾಲವಾಗಿ ಹರಡಿರುವ ಅದರ ಬೇರುಗಳು. ಅವು ಜೀವಂತವಿದ್ದರೆ ಸಾಕು ಮರ ಮತ್ತೆ ಚಿಗುರಬಲ್ಲದು.

ನಂಬಿಗಸ್ತ ವ್ಯಕ್ತಿಯಾಗಿದ್ದ ಯೋಬನಿಗೆ ತಾನು ಸತ್ತರೂ ಮತ್ತೆ ಬದುಕುವೆ ಎಂಬ ಭರವಸೆಯಿತ್ತು. (ಯೋಬ 14:13-15) ತನ್ನನ್ನು ಪುನರುತ್ಥಾನ ಮಾಡುವ ಸಾಮರ್ಥ್ಯ ದೇವರಿಗಿದೆ ಎಂದು ವಿವರಿಸಲು ಅವನು ಒಂದು ಮರದ (ಬಹುಶಃ ಆಲೀವ್‌ ಮರದ) ಉದಾಹರಣೆ ಕೊಟ್ಟನು. “ಕಡಿದ ಮರವೂ ತಾನು ಮೊಳೆಯುವದನ್ನು ನಿಲ್ಲಿಸದೆ ಮತ್ತೆ ಚಿಗುರೇನೆಂದು ನಿರೀಕ್ಷಿಸುತ್ತದಲ್ಲವೇ!” ಎಂದು ಯೋಬ ಹೇಳಿದನು. ತೀವ್ರ ಬರಗಾಲದಿಂದ ಆಲಿವ್‌ ಮರ ಒಣಗಿ ಸತ್ತುಹೋಗಿದ್ದರೂ ಮಳೆ ಬಿದ್ದಾಗ ಬೇರಿನಿಂದ ಚಿಗುರುಗಳು ಮೇಲೆ ಬಂದು “ಗಿಡದ ಹಾಗೆ ಕವಲೊಡೆಯುವದು.”—ಯೋಬ 14:7-9.

ಕಡಿದ ಆಲೀವ್‌ ಮರ ಮತ್ತೆ ಚಿಗುರುವುದನ್ನು ನೋಡುವ ತವಕ ರೈತನಿಗಿರುತ್ತದೆ. ಹಾಗೆಯೇ ತೀರಿಹೋಗಿರುವ ತನ್ನ ನಂಬಿಗಸ್ತ ಸೇವಕರನ್ನು ಮತ್ತು ಇತರರನ್ನು ಮತ್ತೆ ಜೀವಂತಗೊಳಿಸುವ ತವಕ ಯೆಹೋವ ದೇವರಿಗಿದೆ. (ಮತ್ತಾ. 22:31, 32; ಯೋಹಾ. 5:28, 29; ಅ. ಕಾ. 24:15) ಮರಣಪಟ್ಟಿರುವವರು ಹೊಸ ಲೋಕದಲ್ಲಿ ಜೀವಂತರಾಗಿ ಬರುವಾಗ ಅವರನ್ನು ಸ್ವಾಗತಿಸುವುದು ಹೇಗಿರುತ್ತದೆಂದು ಸ್ವಲ್ಪ ಊಹಿಸಿ!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ