ನಿಜಶಾಂತಿ ಮತ್ತು ಭದ್ರತೆಯು
1 ಇತರರೊಂದಿಗೆ ಎನಾದರೂ ಒಳ್ಳೇದನ್ನು ಹಂಚಲಿರುವದು ತೀವ್ರ ಚಟುವಟಿಕೆಯನ್ನು ಪ್ರೇರಿಸುತ್ತದೆ. ಆದ್ದರಿಂದ ಜನವರಿಯಲ್ಲಿ ಅಂದವಾದ ಚಿತ್ರಗಳುಳ್ಳ, ನವೀಕರಿಸಿದ, ಟ್ರು ಪೀಸ್ ಎಂಡ್ ಸೆಕ್ಯೂರಿಟಿ—ಹೌ ಕ್ಯಾನ್ ಯು ಫೈಂಡ್ ಇಟ್? ಪುಸ್ತಕವನ್ನು ನೀಡುವಾಗ ಉತ್ಸಾಹದಿಂದಿರಲು ನಮಗೆ ಸಕಾರಣವದೆ. ಲೋಕ ಪರಿಸ್ಥಿತಿಗಳು ಶಾಂತಿ ಮತ್ತು ಭದ್ರತೆಯನ್ನು ಅತಿ ಸಮಯೋಚಿತ ವಿಷಯವನ್ನಾಗಿ ಮಾಡುತ್ತವೆ. ಸಾವಿರಾರು ವರ್ಷಗಳ ಮಾನವ ವಿಫಲತೆಯು, ಮನುಷ್ಯನಲ್ಲಿ ಅವನ ಅತ್ಯಂತ ಜರೂರಿಯ ಸಮಸ್ಯಗಳಿಗೆ ಉತ್ತರಗಳಿಲ್ಲವೆಂಬ ನಿಜತ್ವವನ್ನು ಅನೇಕರು ಎದುರಿಸುವಂತೆ ಮಾಡಿದೆ. ಆದರೆ ದೇವರ ರಾಜ್ಯವು ಪರಿಹಾರ ನೀಡುತ್ತದೆಂದು ನಮಗೆ ಗೊತ್ತಿದೆ. ದೇವರ ವಾಕ್ಯದಿಂದ ಇದನ್ನು ತೋರಿಸಶಕ್ತರಾಗುವದು ಮತ್ತು ಈ ಉತ್ತಮ ಪುಸ್ತಕವನ್ನು ನೀಡುವದು ಜನವರಿಯಲ್ಲಿ ನಮ್ಮ ಸೇವೆಯನ್ನು ಉತ್ಸಾಹದಿಂದ ಮಾಡುವಂತೆ ನಮಗೆ ಸಹಾಯಕವು.
2 ಸಂಯುಕ್ತ ರಾಷ್ಟ್ರವು “ಅಂತರಾಷ್ಟ್ರೀಯ ಶಾಂತಿ ವರ್ಷ” ವನ್ನು ಘೋಷಿಸಿದ ಆ ಸಮಯದಲ್ಲಿ ಈ ಪುಸ್ತಕವನ್ನು ನಮಗೆ ನೀಡಲಿಕ್ಕಿದ್ದದ್ದು ಅದೆಷ್ಟು ಯುಕ್ತವಾಗಿತ್ತು! ಶಾಂತಿ ಮತ್ತು ಭದ್ರತೆಯ ವಿಷಯವು ಬಹಳಷ್ಟು ಜನರ ಮನದಲ್ಲಿದೆ. ಸಂಯುಕ್ತ ರಾಷ್ಟ್ರವು ಅದನ್ನು ತರಲಿದೆ ಎಂದು ಅನೇಕರ ಮತ. ಆದರೆ ನಿಜ ಶಾಂತಿ ಮತ್ತು ಬಾಳುವ ಭದ್ರತೆಯನ್ನು ತರಲು ಕ್ರಿಸ್ತನ ಮೂಲಕವಾದ ದೇವರ ರಾಜ್ಯವೇ ಯೆಹೋವನು ಬಳಸುವ ಉಪಕರಣವೆಂದು ಯೆಹೋವನ ಸೇವಕರಿಗೆ ತಿಳಿದದೆ.
3 1986ರಲ್ಲಿ ಸಂಯುಕ್ತ ರಾಷ್ಟ್ರ ಸಂಘವು ಮಾಡಿದ ಫೋಷಣೆಯು 1 ಥೆಸಲೋನಿಕ 5:3 ರ ನೆರವೇರಿಕೆಯಲ್ಲವೆಂಬ ಎಚ್ಚರಿಕೆಯ ಮಾತು “ಸಮಗ್ರತೆ ಪಾಲಕರ” 1985 ರ ಅಧಿವೇಶನದಲ್ಲಿ ಹೇಳಿದ್ದು ನಮಗೆ ನೆನಪದೆ. “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ನಾಶನವು ಅವರ ಮೇಲೆ ಥಟ್ಟನೇ ಬರುವದು.” ಜನಾಂಗಗಳು ಶಾಂತಿ ಮತ್ತು ಭದ್ರತೆಗಾಗಿ ಚಟುವಟಿಕೆ ನಡಿಸಲು ಯೆಹೋವನು ಎಷ್ಟು ಹೆಚ್ಚು ಕಾಲ ಅನುಮತಿಸುವನೆಂದು ನಮಗೆ ಗೊತ್ತಿಲ್ಲ. ಆದರೂ “ಮಹಾ ಸಂಕಟಕ್ಕೆ” ನಾವು ಹತ್ತರಿಸುವಾಗ ಅಧಿಕ ವಿಕಾಸಗಳಿಗೆ ನಡಿಸುವ ಒಂದು ಗಮನಾರ್ಹ ಹೆಜ್ಜೆಯು ಇದಾಗಿರಬಹುದು.—ಮತ್ತಾ. 24:21.
ಪುಸ್ತಕ ನೀಡಲು ತಯಾರಿಸಿರಿ
4 ಟ್ರು ಪೀಸ್ ಪುಸ್ತಕದ ಸಮಗ್ರ ವಿಷಯಗಳ ಪರಿಚಯ ಮಾಡಿಕೊಳ್ಳಲು ಜನವರಿ ಚಟುವಟಿಕೆಯ ಮಂಚಿತವಾಗಿ ಅದರ ಭಾಗಗಳನ್ನು ನಾವು ಓದಿಕೊಳಬೇಕು. ಮೊದಲ ಎರಡು ಅಧ್ಯಾಯಗಳನ್ನು ನಾವು ಓದುವದಾದರೆ, ಜನವರಿಯಲ್ಲಿ ಪುಸ್ತಕ ನೀಡುವಾಗ ಬಳಸಬಹುದಾದ ಹಲವಾರು ಅತ್ಯುತ್ತಮ ವಿಷಯಗಳನ್ನು ಕಂಡುಕೊಳ್ಳುವೆವು ನಿಶ್ಚಯ.
5 ಮನೆಯವನೊಂದಿಗೆ ಸಂಭಾಷಣೆಗಾಗಿ ವಿಷಯವನ್ನು ಚರ್ಚಿಸಿಯಾದ ಮೇಲೆ ನಾವು ಹೀಗನ್ನಬಹುದು: “ನಿಜ ಶಾಂತಿ ಮತ್ತು ಭದ್ರತೆಯಿರುವ ಈ ಸಂತೋಷದ ಭವಿಷ್ಯವು ಅತಿ ಹತ್ತಿರವದೆ. ಆ ವಿಷಯವಾಗಿ ನನ್ನೊಂದಿಗೆ ಒಂದು ಸಮಯೋಚಿತ ಪುಸ್ತಕವಿದೆ. ಪುಸ್ತಕದ ಮೊದಲ ಪಾರಾದಲ್ಲಿರುವ ಈ ಹೇಳಿಕೆಯನ್ನು ಗಮನಿಸಿರಿ.” ನೀವು ಒಂದನೇ ಪಾರಾವನ್ನು ಓದಬಹುದು ಮತ್ತು ಅನಂತರ ಹೀಗನ್ನಿರಿ: “1ನೇ ಅಧ್ಯಾಯದಲ್ಲಿರುವ ಈ ಚಿತ್ರವು ಭೂಪರದೈಸವು ಹೇಗಿರುವದೆಂಬ ಕಲಾಕಾರನ ಕಲ್ಪನೆಯನ್ನು ಕೊಡುತ್ತದೆ. ಅಂತಹ ಶಾಂತಿಭರಿತ ಸುರಕ್ಷಿತ ಪರಿಸರದಲ್ಲಿ ನಿಮ್ಮ ಪ್ರಿಯ ಜನರೊಂದಿಗೆ ನೀವು ಜೀವಿಸ ಬಯಸಲಾರಿರೋ? (ಪ್ರತಿಕ್ರಿಯೆಗೆ ಸಮಯಕೊಡಿ.) ಅಂತಹ ಶಾಂತಿ ಮತ್ತು ಸುರಕ್ಷೆಯನ್ನು ಪಡೆಯುವದು ಹೇಗೆಂದು ತಿಳಿಯಲು ಈ ಪುಸ್ತಕವು ನಿಮಗೆ ಸಹಾಯ ಮಾಡುವದು. ಇದು 10 ರೂಪಾಯಿಗೆ ನಿಮ್ಮದು.”
6 ಇನ್ನೊಂದು ಪ್ರಸಂಗ ಈ ರೀತಿ ಕೊಡಬಹುದು: ಜ್ಞಾನೋಕ್ತಿ 1:8ನ್ನು ಓದಿದ ಮೇಲೆ ನಾವು 19ನೇ ಪುಟಕ್ಕೆ ತಿರುಗಿ ಹೀಗನ್ನಬಹುದು: “ದೇವರಿಂದ ವಾಗ್ದಾನಿತವಾದ ಆ ಸಂತಸದ ಭವಿಷ್ಯತ್ತು ನಮಗೆಷ್ಟು ಅಗತ್ಯವಿದೆ ಎಂದು ತೋರಿಸುವ ಒಂದು ಆಸಕ್ತ ಪಾರಾವು ಇಲ್ಲಿದೆ.“ 24ನೇ ಪಾರಾವನ್ನು ಓದಿದ ಮೇಲೆ ಹೀಗೆ ಮಂದರಿಸಿರಿ: “ಮುಂದಿನ ಪುಟದ 28ನೇ ಪಾರಾದಲ್ಲಿರುವ ಹೇಳಿಕೆಯನ್ನೂ ಗಮನಿಸಿರಿ. (ಪಾರಾ ಓದಿ.) ಲೋಕದ ಸಮಸ್ಯೆಗಳಿಗೆ ದೇವರ ಪರಿಹಾರವೇನೆಂದು ತಿಳಿಯಲು ಮತ್ತು ಭವಿಷ್ಯದಲ್ಲೇನು ಕಾದಿದೆ ಎಂಬ ಓಳ್ಳೇ ತಿಳುವಳಿಕೆಗಾಗಿ ಈ ಪುಸ್ತಕವು ಪ್ರಕಟವಾಗಿದೆ. ಇದು 10 ರೂಪಾಯಿಗೆ ನಿಮ್ಮದು.”
7 ಹಿಂದೆ ಆಸಕ್ತಿ ತೋರಿಸಿದವರನ್ನು ಬಿಡದೆ ಸಂದರ್ಶಿಸಿರಿ ಮತ್ತು ಅವರಿಗೆ ಈ ಪುಸ್ತಕ ನೀಡಿರಿ. ದೇವರ ವಾಗ್ದತ್ತ ಹೊಸ ಲೋಕದ ಕುರಿತಾದ ನಮ್ಮ ಹಿಂದಣ ಸಂಭಾಷಣೆಯನ್ನು ಅವರ ನೆನಪಿಗೆ ತರುವದು ಯುಕ್ತವೆಂದು ಕಂಡೀತು ಮತ್ತು ನಿಜಶಾಂತಿ ಹಾಗೂ ಭದ್ರತೆಯನ್ನು ಕಂಡುಕೊಳ್ಳುವದು ಹೇಗೆಂದು ತಿಳಿಸುವ ಒಂದು ಪುಸ್ತಕ ನಮ್ಮಲ್ಲಿದೆಂದು ಹೇಳಿರಿ. 91ನೇ ಪುಟಕ್ಕೆ ತಿರುಗಿ, 12ನೇ ಪಾರಾ ಓದಿ ಅನಂತರ ಹೀಗನ್ನಿ: “ಪಾರಾಗುವ ಅಶ್ವಾಸನೆಗೆ ಬೇರೇನು ಆವಶ್ಯಕವು? ದೇವರ ಆವಶ್ಯಕತೆಗಳೇನೆಂದು ಇಲ್ಲಿಂದ ಈ ಪುಸ್ತಕವು ಸವಿಸ್ತಾರವಾಗಿ ತಿಳಿಸುತ್ತದೆ. ಇದು ರೂಪಾಯಿ 10ಕ್ಕೆ ನಿಮ್ಮದು.”
8 ಹಿಂದೆ ಅಭ್ಯಸಿಸಿರುವ ಆದರೆ ಯಹೋವನಿಗಾಗಿ ತಮ್ಮ ನಿಲುವನ್ನು ತಕ್ಕೊಳ್ಳದ ವ್ಯಕ್ತಿಗಳಿಗೂ ನೀಡಲು ಈ ಪುಸ್ತಕ ಒಳ್ಳೇದು. 175 ಪುಟದ ಒಂದನೇ ಪಾರಾವನ್ನು ನಾವು ಓದಿಹೇಳಬಹುದು ಮತ್ತು ನಿಜ ಶಾಂತಿ ಮತ್ತು ಭದ್ರತೆಯನ್ನು ಪಡೆಯಲು ಯೋಗ್ಯ ನಿರ್ಣಯ ಮಾಡುವಂತೆ ಪುಸ್ತಕವು ಸಹಾಯ ಮಾಡುವ ವಿಧವನ್ನು ತಿಳಿಸಬಹುದು.
9 ಟ್ರು ಪೀಸ್ ಎಂಡ್ ಸೆಕ್ಯೂರಿಟಿ-ಹೌ ಕ್ಯಾನ್ ಯು ಫೈಂಡ್ ಇಟ್? ನೀಡಲು ನಾವೀಗಲೇ ಯೋಜನೆಯನ್ನು ಜನವರಿ ಚಟುವಟಿಕೆಗಾಗಿ ಮಾಡುವ. ಹೀಗೆ “ಶಾಂತಿದಾಯಕನಾದ ದೇವರಿಂದ” ಬರುವ ನಿಜಶಾಂತಿ ಮತ್ತು ಭದ್ರತೆಯನ್ನು ಇತರರೂ ಕಂಡುಕೊಳ್ಳುವಂತೆ ನಾವು ಸಹಾಯ ಮಾಡುವವರಾಗುವೆವು.—ರೋಮಾ. 16:20.