ಶಾಂತಿ ಮತ್ತು ಭದ್ರತೆ—ಒಂದು ದೃಢ ನಿರೀಕ್ಷೆ
1 ಅಧಿಕಾಂಶ ಜನರು ಇಂದು ಶಾಂತಿ ಮತ್ತು ಭದ್ರತೆಯನ್ನು ಅಪೇಕ್ಷಿಸುತ್ತಾರೆ. ಆದರೆ ಭದ್ರತೆಯು ಒಳಗೂಡಿರುವ ನಿಜಶಾಂತಿಯು ಈ ಲೋಕಕ್ಕೆ ಎಟಕಲಾರದೆ ಇದೆ. ಮಿಲ್ಯಾಂತರ ಜನರು, ಯುದ್ಧದಿಂದ ಜರ್ಜರಿತವಾದ ಕ್ಷೇತ್ರಗಳಲ್ಲಿ ಜೀವಿಸುತ್ತಿದ್ದಾರೆ. ಭಯವಾದಿ ಚಟುವಟಿಕೆ ಮತ್ತು ಗೆರಿಲ್ಲಾ ಯುದ್ಧಗಳ ಕಾರಣ ಶಾಂತಿ ಮತ್ತು ಭದ್ರತೆಯನ್ನು ಕಾಣುವ ಆಶೆಯೇ ಇಲ್ಲ ಎಂದು ಇತರ ಅಸಂಖ್ಯಾತ ಜನರ ಭಾವನೆ. ಪಾತಕಿಗಳು ತಮ್ಮ ದುಷ್ಕೃತ್ಯವನ್ನು ಚಲಾಯಿಸ ತೊಡಗುವಂತೆ ಕಾಣುವ ರಾತ್ರಿವೇಳೆ ಬಂದಾಗ, ಹೆಚ್ಚಿನವರು ಬಲವಾಗಿ ಭದ್ರಪಡಿಸಲ್ಪಟ್ಟ ತಮ್ಮ ಮನೆಗಳಿಂದ ಹೊರಬರಲು ಅಂಜುತ್ತಾರೆ. ನಿಜವಾಗಿ ನೆಮ್ಮದಿಯ ಜೀವನವನ್ನು ನಡಿಸುವವರು ಕೊಂಚಜನ.
2 ಒಳ್ಳೇ ಪರಿಸ್ಥಿತಿಗಳಿಗಾಗಿ ಹಂಬಲಿಸುವವರಿಗಾಗಿ ಶಾಂತಿಯ ಸಂದೇಶವು ಸ್ವಾಗತಾರ್ಹ. ಕ್ರೈಸ್ತರಾದ ನಾವು, ಯೇಸುವಿನ ಆಜ್ಞೆಯನ್ನು ಪಾಲಿಸುತ್ತೇವೆ: “ಇದಲ್ಲದೆ ನೀವು ಯಾವ ಮನೆಯೊಳಗೆ ಹೋದರೂ—ಈ ಮನೆಗೆ ಶಾಂತಿಯಾಗಲಿ ಎಂದು ಮೊದಲು ಹೇಳಿರಿ. ಶಾಂತಿಮಿತ್ರನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನಿಲ್ಲುವುದು. ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವದು.” (ಲೂಕ 10:5, 6) ಶಾಂತಿಯ ದೇವರ ಪ್ರತಿನಿಧಿಗಳಾದ ನಾವು, ಜನರನ್ನು ಶಾಂತಿಪೂರ್ವಕವಾಗಿ ಗೋಚರಿಸುತ್ತೇವೆ. ನಮ್ಮ ಪಾದಗಳು, “ಶಾಂತಿಯ ವಿಷಯವಾದ ಸುವಾರ್ತೆಯನ್ನು ತಿಳಿಸುವುದರಲ್ಲಿ ಸಿದ್ಧವಾದ ಕೆರಗಳನ್ನು” ಮೆಟ್ಟಿಕೊಂಡಿವೆ.—ಎಫೆ. 6:15.
ಶಾಂತಿ ಅನ್ವೇಷಕರಾಗಿ ಮಾದರಿಗಳು
3 ಒಂದು ಶಾಂತಿಯುಕ್ತ ಸಂದೇಶವನ್ನು ಶಿಫಾರಸು ಮಾಡಬೇಕಾದರೆ, ಯೆಹೋವನ ಜನರು ತಮ್ಮ ಸಮಾಜಗಳಲ್ಲಿ ಮತ್ತು ಸಭೆಗಳಲ್ಲಿ ಶಾಂತಿಪೂರ್ಣರಾಗಿ ಜೀವಿಸಬೇಕು. ನಾವು ಶಾಂತಿ ಅನ್ವೇಷಕರೋಪಾದಿ ಆದರ್ಶ ಮಾದರಿಗಳಾಗಿರಬೇಕು. ಪೇತ್ರನು ಜತೆ ಕ್ರೈಸ್ತರಿಗೆ, “ಶಾಂತರಾಗಿದ್ದು ಆತನೆದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳಲು ಪ್ರಯಾಸಪಡಿರಿ” ಎಂದು ಬರೆದಿದ್ದಾನೆ. (2 ಪೇತ್ರ 3:14) ಶಾಂತಿ ಅನ್ವೇಷಕರೋಪಾದಿ ನಾವು ಆದರ್ಶ ಮಾದರಿಗಳಾಗುವುದು ಹೇಗೆ?
4 ಮೊದಲಾಗಿ, ಶಾಂತಿಯ ದೇವರಾದ ಯೆಹೋವನೊಂದಿಗೆ ಶಾಂತಿಭರಿತ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕು. ಆತನನ್ನು ಪರಮಾಧಿಕಾರಿಯಾಗಿ ನಾವು ಅಂಗೀಕರಿಸುತ್ತೇವೆ, ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗುತ್ತೇವೆ. (ಕೀರ್ತ. 34:14) ಆತನ ಆತ್ಮದ ಒಂದು ಫಲವಾದ ಶಾಂತಿಯು, ನಮ್ಮ ಜೀವನದಲ್ಲಿ ತೋರಿಬರಬೇಕು.—ಗಲಾ. 5:22.
5 ಶಾಂತಿ ಅನ್ವೇಷಕ ಕ್ರೈಸ್ತರಾದ ನಮ್ಮ ಮಾದರಿಯಲ್ಲಿ, ಮಾನವ ಅಧಿಪತಿಗಳಿಗೆ ಗೌರವವು ಸಹಾ ಸೇರಿರಬೇಕು. ಇದರಲ್ಲಿ ಸರಕಾರಿ ಅಧಿಕಾರಿಗಳು, ಶಾಲಾ ಅಧ್ಯಾಪಕರು, ಮಾಲಕರು, ಹೆತ್ತವರು ಮತ್ತು ಹಿರಿಯರು ಸೇರಿದ್ದಾರೆ. (ರೋಮಾ. 13:1, 2: ಕೊಲೊ. 3:22; ಎಫೆ. 6:1; ಇಬ್ರಿ. 13:17) ನಿಶ್ಚಿಂತೆಯ ಮತ್ತು ಶಾಂತಿಯ ಜೀವನವನ್ನು ನಡಿಸುವ ಮೂಲಕ ನಾವು, ನಮ್ಮ ಸಂದೇಶಕ್ಕೆ ಶೋಭೆಯನ್ನು ತರುತ್ತೇವೆ. ಹೀಗೆ ನಾವು “ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವವುಗಳನ್ನು ಸಾಧಿಸಿಕೊಳ್ಳಲು” ಬಯಸುತ್ತೇವೆಂದು ನಾವು ಪ್ರದರ್ಶಿಸುತ್ತೇವೆ. (ರೋಮಾ. 14:19) ನಮಗೆ, ಹೊಸ ವ್ಯವಸ್ಥೆಯಲ್ಲಿ ಶಾಂತಿ ಮತ್ತು ಭದ್ರತೆಯು ಒಂದು ನಿಶ್ಚಿತ ನಿರೀಕ್ಷೆಯಾಗಿ ಇದೆ.
ಪ್ರಚಲಿತ ನೀಡುವಿಕೆ ಶಾಂತಿಯನ್ನು ಪ್ರವರ್ಧಿಸುತ್ತದೆ
6 ಜುಲೈ ತಿಂಗಳಲ್ಲಿ ನಾವು ನಮ್ಮ ನಿರೀಕ್ಷೆಯನ್ನು, ಟ್ರು ಪೀಸ್ ಆ್ಯಂಡ್ ಸೆಕ್ಯೂರಿಟಿ—ಹೌ ಕ್ಯಾನ್ ಯು ಫೈಂಡ್ ಇಟ್? ಎಂಬ ಪುಸ್ತಕವನ್ನು 12 ರೂಪಾಯಿಗೆ ನೀಡುವ ಮೂಲಕ ಹಂಚುತ್ತೇವೆ. ಇಂದಿನ ಸಂಕಷ್ಟಭರಿತ ಲೋಕದಲ್ಲಿ ಶಾಂತಿ ಮತ್ತು ಭದ್ರತೆಯು ಮಿಲ್ಯಾಂತರ ಜನರ ಮನದ ಚಿಂತೆಯಾಗಿರಲಾಗಿ, ಈ ನೀಡಿಕೆಯು ಅತ್ಯಂತ ಕಾಲೋಚಿತವಾಗಿದೆ.
7 ಈ ಪುಸ್ತಕದ ಮೊದಲ ಎರಡು ಅಧ್ಯಾಯಗಳಲ್ಲಿ ಮಾತಾಡತಕ್ಕ ಅತ್ಯುತ್ತಮ ವಿಷಯಗಳಿವೆ. 5ನೇ ಪುಟದ ಮೊದಲ ಎರಡು ಪಾರಾಗಳನ್ನು ಮನೆಯವನು ಓದುವಂತೆ ನೀವು ಬಯಸಬಹುದು ಇಲ್ಲವೇ ಪುಟ 8ರ ಪಾರೆಗ್ರಾಫ್ 11ಕ್ಕೆ ನಿರ್ದೇಶಿಸಿ ಅಲ್ಲಿ, ದೇವರ ದೃಢವಾಗ್ದಾನಗಳು ಮಾನವ ಮುಖಂಡರ ವಾಗ್ದಾನಕ್ಕಿಂತ ಹೇಗೆ ಭಿನ್ನವಾಗಿದೆಂದು ತೋರಿಸಬಹುದು. ಪುಟ 20-1ರಲ್ಲಿ ಪಾರಾ 28 ಮತ್ತು 29ನ್ನು ಸಹಾ ನೋಡಿರಿ. ಆಸಕ್ತಿ ತೋರಿಸಿದ ಮತ್ತು ಪುಸ್ತಕ ತಕ್ಕೊಂಡ ಎಲ್ಲರನ್ನು ಬೈಬಲಧ್ಯಯನ ಆರಂಭಿಸುವ ಪ್ರಯತ್ನದೊಂದಿಗೆ ತಪ್ಪದೆ ಪುನಃಸಂದರ್ಶಿಸಿರಿ.
8 ಶಾಂತಿಯ ದೇವರಾದ ಯೆಹೋವನಿಂದ ಖಾತರಿಯಿಂದ ನೀಡಲ್ಪಟ್ಟ ಈ ದೃಢ ನಿರೀಕ್ಷೆಯನ್ನು, ಶಾಂತಿ ಮತ್ತು ಭದ್ರತೆಯನ್ನು ಹುಡುಕುವ ಜನರಿಗೆ ತಿಳಿಸುತ್ತಾ ಹೋಗೋಣ ಮತ್ತು ಶಾಂತಿಯ ರಾಜಕುವರನಾದ ಯೇಸುವಿನ ಕೈಕೆಳಗಿನ ದೇವರಾಜ್ಯದ ಮೂಲಕ ಅದು ಹೇಗೆ ಪೂರೈಸಲ್ಪಡುವದೆಂದು ಕಲಿಸೋಣ. (ಯೆಶಾ. 9:6, 7) ನಮ್ಮ ಶಾಂತಿಭರಿತ ಜೀವನಕ್ರಮವು, “ಶಾಂತಿಯನ್ನು ಹಾರೈಸಿ ಅದನ್ನು ಬೆನ್ನಟ್ಟುವ” ಕ್ರೈಸ್ತರೋಪಾದಿ ನಮ್ಮನ್ನು ಶಿಫಾರಸು ಮಾಡುವಂತಾಗಲಿ.—1 ಪೇತ್ರ 3:10, 11.