ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/91 ಪು. 3
  • 1991 ರ ಸ್ಮಾರಕಾಚರಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1991 ರ ಸ್ಮಾರಕಾಚರಣೆ
  • 1991 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವಿಶೇಷ ಆಮಂತ್ರಣಗಳನ್ನು ಉಪಯೋಗಿಸಿರಿ
  • ಆವಶ್ಯಕ ಸಿದ್ಧತೆಗಳು
  • ಸ್ಮಾರಕಾಚರಣೆಗಾಗಿ ತಯಾರಿಯಲ್ಲಿ
    1993 ನಮ್ಮ ರಾಜ್ಯದ ಸೇವೆ
  • ಜ್ಞಾಪಕಕ್ಕಾಗಿ ವಿಷಯಗಳನ್ನು ಸಿದ್ಧಪಡಿಸಿರಿ
    1995 ನಮ್ಮ ರಾಜ್ಯದ ಸೇವೆ
  • ಜ್ಞಾಪಕಾಚರಣೆಗೆ ಪೂರ್ಣವಾಗಿ ತಯಾರಾಗಿರ್ರಿ
    2009 ನಮ್ಮ ರಾಜ್ಯದ ಸೇವೆ
  • ಕ್ರಿಸ್ತನ ಮರಣವನ್ನ ಸ್ಮರಿಸೋಕೆ ನಾವು ಮಾಡೋ ಪ್ರಯತ್ನವನ್ನ ಯೆಹೋವ ಆಶೀರ್ವದಿಸ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಇನ್ನಷ್ಟು
1991 ನಮ್ಮ ರಾಜ್ಯದ ಸೇವೆ
km 2/91 ಪು. 3

1991 ರ ಸ್ಮಾರಕಾಚರಣೆ

1 ಮಾರ್ಚ್‌ 26, 1991ನೇ ಶನಿವಾರವು, ಕ್ರಿಸ್ತನ ಮರಣದ ಸ್ಮಾರಕದ 1958ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ಹಾಜರಾಗಲು ನಾವು ನಮ್ಮ ಸ್ವಂತ ಯೋಜನೆಗಳನ್ನು ಮಾಡುವಲ್ಲಿ, ಆಮಂತ್ರಣದ ಅಗತ್ಯವಿರುವ ಅಥವಾ ಯಾವುದೇ ರೀತಿಯಲ್ಲಿ ನಮ್ಮ ವೈಯಕ್ತಿಕ ಸಹಾಯ ಬೇಕಾದ ಇತರರ ಕುರಿತೂ ನಾವು ಯೋಚಿಸುವ ಅಗತ್ಯವಿದೆ. ಸ್ಮಾರಕಾಚರಣೆಗಾಗಿ ತಯಾರು ಮಾಡಲು ಮತ್ತು ಇತರರನ್ನು ಆಮಂತ್ರಿಸಲು ಯೋಚಿಸುವ ಸಮಯ ಈಗಲೇ.—3ನೇ ಪುಟದಲ್ಲಿ, “ಸ್ಮಾರಕಕ್ಕಾಗಿ ತಯಾರಿಸತಕ್ಕ ವಿಷಯಗಳು” ಲೇಖವನ್ನು ದಯವಿಟ್ಟು ನೋಡಿ.

2 ಸ್ಮಾರಕಕ್ಕೆ ಹಾಜರಾಗುವುದನ್ನು ನಾವು ಹೇಗೆ ವೀಕ್ಷಿಸುತ್ತೇವೆ? ಕ್ರಿಸ್ತನ ಬಲಿದಾನಕ್ಕಾಗಿ ಗಣ್ಯತೆ ತೋರಿಸುವ ಒಂದು ಸುಯೋಗವಾಗಿ ಮತ್ತು ಸುಸಂಧಿಯಾಗಿ ನಾವದನ್ನು ನೋಡಬೇಕು. ನಿಮ್ಮ ಸ್ವಂತ ಸಭೆಯಿಂದ ದೂರವಿರುವುದು ನಿಮಗೆ ಗೊತ್ತಿದ್ದರೆ, ನೀವು ಸಂದರ್ಶಿಸುವ ಕ್ಷೇತ್ರದಲ್ಲಿರುವ ರಾಜ್ಯ ಸಭಾಗೃಹದಲ್ಲಿ ಅದಕ್ಕೆ ಹಾಜರಾಗುವಂತೆ, ಅದರ ವಿಳಾಸವು ನಿಮ್ಮಲ್ಲಿರುವಂತೆ ನೋಡಿಕೊಳ್ಳಿರಿ.

ವಿಶೇಷ ಆಮಂತ್ರಣಗಳನ್ನು ಉಪಯೋಗಿಸಿರಿ

3 ಮಾರ್ಚ್‌ನ ಆರಂಭದಿಂದಲೇ ನೀವು, ವಿಶಿಷ್ಟ ಸ್ಮಾರಕ ಆಮಂತ್ರಣಗಳನ್ನು ಉಪಯೋಗಿಸ ಸಾಧ್ಯವಿದೆ. ಅವುಗಳನ್ನು ಕರಪತ್ರಗಳಂತೆ ಹಂಚಬಾರದು, ಆಸಕ್ತ ಜನರಿಗೆ ವ್ಯಕ್ತಿಪರವಾಗಿ ಕೊಡಬೇಕೆಂಬದನ್ನು ನೆನಪಿನಲ್ಲಿಡಿರಿ. ಜನರು ಹೆಚ್ಚಾಗಿ ಸಮಯ ಮತ್ತು ತಾರೀಕನ್ನು ಮರೆತು ಬಿಡುತ್ತಾರಾದರ್ದಿಂದ, ಆಮಂತ್ರಣ ಪತ್ರದ ಕೆಳಗೆ ಅಥವಾ ಹಿಂದೆ ರಾಜ್ಯ ಸಭಾಗೃಹದ ವಿಳಾಸ ಮತ್ತು ಸ್ಮಾರಕಾಚರಣೆಯ ವೇಳೆಯನ್ನು ನೀಟಾಗಿ ಬರೆಯುವಂತೆ ಯಾ ಟೈಪು ಮಾಡುವಂತೆ ಸೂಚಿಸಲಾಗಿದೆ. ಸಾಧ್ಯವಾದರೆ ವ್ಯಕ್ತಿಯೊಂದಿಗೆ, ಸ್ಮಾರಕದ ಮಹತ್ವಾರ್ಥವನ್ನು ಅವನು ಸ್ಪಷ್ಟವಾಗಿ ತಿಳಿಯುವಂತೆ ಸ್ವಲ್ಪ ಸಮಯವನ್ನು ಕಳೆಯಿರಿ. ಹೊಸಾಸಕ್ತ ಜನರು ರಾಜ್ಯಸಭಾಗೃಹಕ್ಕೆ ತಾವಾಗಿಯೇ ಬರಲು ಸ್ವಲ್ಪ ಹಿಂಜರಿಯಬಹುದು. ಅವರಿಗಾಗಿ ವಾಹನಾದಿಯನ್ನು ಏರ್ಪಡಿಸಲು ಇಲ್ಲವೇ ಹೋಲಿನ ಹೊರಗೆ ಅವರಿಗಾಗಿ ಕಾಯಲು ನಿಮ್ಮನ್ನು ನೀಡಿಕೊಳ್ಳಬಲ್ಲಿರೋ? ಇದಕ್ಕಾಗಿ ಹೆಚ್ಚಿನ ಸಮಯ ಮತ್ತು ಪ್ರಯತ್ನದ ಅಗತ್ಯವಿದೆ ಆದರೆ, ನಿಮ್ಮ ಪ್ರಯತ್ನಗಳು ಗಣ್ಯಮಾಡಲ್ಪಡುವವು. ಹಾಗೂ, ಹಲವು ವರ್ಷಗಳಿಂದ ಸತ್ಯವನ್ನು ತಿಳಿದಿರುವ ಆದರೆ ಕೂಟಗಳಿಗೆ ಕ್ರಮವಾಗಿ ಹಾಜರಾಗದೇ ಇರುವವರಿಗೆ ಸಹಾಯಮಾಡಲು, ವಿಶೇಷ ಪ್ರಯತ್ನವನ್ನು ಮಾಡಬೇಕು.—ಲೂಕ 11:23; ಯೋಹಾ. 18:37ಬಿ.

ಆವಶ್ಯಕ ಸಿದ್ಧತೆಗಳು

4 ಸ್ಮಾರಕಾಚರಣೆಗಾಗಿ ಎಲ್ಲಾ ಏರ್ಪಾಡುಗಳು ಸಮಯಕ್ಕೆ ಮುಂಚಿತವಾಗಿಯೇ ಜಾಗರೂಕತೆಯಿಂದ ಮಾಡಲ್ಪಡುವಂತೆ ಸಭಾ ಹಿರಿಯರು ನೋಡಿಕೊಳ್ಳತಕ್ಕದ್ದು. ಕುರುಹುಗಳನ್ನು ಹಂಚಲಿಕ್ಕೆ ಒಳ್ಳೇ ಯೋಗ್ಯತೆ ಪಡೆದ ಸಹೋದರರನ್ನು ಆರಿಸಿರಿ. ದೊರೆಯುವುದಾದರೆ ಈ ಸಹೋದರರು, ಹಿರಿಯರು ಅಥವಾ ಶುಶ್ರೂಷೆ ಸೇವಕರಾಗಿರತಕ್ಕದ್ದು. ಕುರುಹುಗಳನ್ನು ದಾಟಿಸುವಿಕೆಯು ಅನಾವಶ್ಯಕವಾಗಿ ವಿಳಂಬಿಸದಂತೆ, ಇದನ್ನು ಮಾಡಲು ಸಾಕಷ್ಟು ಸಹೋದರರು ತಯಾರು ಇರುವಂತೆ ಸಿದ್ಧಗೊಳಿಸಿರಿ. ಸಭಿಕರಿಗೆ ಅದನ್ನು ದಾಟಿಸಿದಯಾದನಂತರ ಅವರು ಹೋಗಿ, ಎದುರು ಸಾಲಿನಲ್ಲಿ ಕೂಡ್ರುವರು ಮತ್ತು ಭಾಷಕನು ಅವರಿಗೆ ಅದನ್ನು ದಾಟಿಸುವನು. ಕೊನೆಗೆ ಅವರಲ್ಲೊಬ್ಬನು, ಭಾಷಕನಿಗೆ ಅದನ್ನು ನೀಡುವನು.

5 ವರ್ಷ ವರ್ಷವು ದಾಟಿದಂತೆ ನಾವು, ಕರ್ತನ ಸಂಜಾ ಭೋಜನವು ಇನ್ನು ಮುಂದೆ ಆಚರಿಸಲ್ಪಡದ ಆ ದಿನಕ್ಕೆ ಹತ್ತಿರವಾಗುತ್ತಾ ಇದ್ದೇವೆ. ತುಲನಾತ್ಮಕವಾಗಿ, ಕೇವಲ ಕೆಲವೇ ಕ್ರಿಸ್ತನ ಅಭಿಷಿಕ್ತ ಸಹೋದರರು ಉಳಿದಿರುತ್ತಾರೆ. ಆತನ ಸಹೋದರರೆಲ್ಲರೂ ಆತನೊಂದಿಗೆ ರಾಜ್ಯದಲ್ಲಿ ಸೇರುವ ತನಕ ಅವನ ಮರಣವನ್ನು ನೆನಪು ಮಾಡಬೇಕೆಂದು ಯೇಸು ಆಜ್ಞಾಪಿಸಿದನು. (ಲೂಕ 22:19; 1 ಕೊರಿ. 11:25) ಆ ತನಕ ನಾವು, ಅತ್ಯಂತ ಸಂತೋಷದಿಂದಲೂ ಗಣ್ಯತೆಯಿಂದಲೂ ಸ್ಮಾರಕಾಚರಣೆಗಾಗಿ ವಿಧೇಯತೆಯಿಂದ ಮತ್ತು ನಂಬಿಗಸ್ತತೆಯಿಂದ ಪ್ರತಿ ವರುಷ ಒಟ್ಟುಗೂಡುವೆವು.

[Box on page 3]

ಸ್ಮಾರಕಕ್ಕಾಗಿ ತಯಾರಿಸತಕ್ಕ ವಿಷಯಗಳು

(ಫೆಬ್ರವರಿ 15, 1985, ವಾಚ್‌ಟವರ್‌, ಪುಟ 19 ನೋಡಿ.)

1. ಸ್ಮಾರಕಾಚರಣೆಯ ಸರಿಯಾದ ಸಮಯ ಮತ್ತು ಸ್ಥಳವು ಪ್ರತಿಯೊಬ್ಬನಿಗೆ, ಭಾಷಕನಿಗೆ ಸಹಾ, ತಿಳಿಸಲ್ಪಟ್ಟಿದೆಯೇ? ಭಾಷಕನಿಗೆ ವಾಹನ ಸೌಕರ್ಯವಿದೆಯೋ?

2. ಕುರುಹುಗಳನ್ನು ಒದಗಿಸುವುದಕ್ಕೆ ನಿಶ್ಚಿತ ಏರ್ಪಾಡುಗಳನ್ನು ಮಾಡಲಾಗಿದೆಯೇ?

3. ಶುದ್ಧವಾದ ಟೇಬಲ್‌ ಕ್ಲಾತ್‌ ಮತ್ತು ಬೇಕಾದ ಗ್ಲಾಸ್‌

ಮತ್ತು ಪೇಟ್ಲುಗಳನ್ನು ಯಾರಾದರೂ ತರುವಂತೆ ಏರ್ಪಾಡುಗಳನ್ನು ಮಾಡಲಾಗಿದೆಯೇ?

4. ಹೋಲನ್ನು ಶುಚಿಮಾಡಲು ಯಾವ ಏರ್ಪಾಡುಗಳನ್ನು ಮಾಡಲಾಗಿದೆ?

5. ಎಟೆಂಡೆಂಟ್ಸ್‌ ಮತ್ತು ಸರ್ವರ್ಸ್‌ನ್ನು ನೇಮಿಸಲಾಗಿದೆಯೇ? ಅವರು ತಮ್ಮ ತಮ್ಮ ಕರ್ತವ್ಯಗಳನ್ನು ತಿಳುಕೊಳ್ಳುವಂತೆ ಸ್ಮಾರಕಕ್ಕೆ ಮುಂಚೆ ಒಂದು ಕೂಟವನ್ನು ಅವರೊಂದಿಗೆ ನಡಿಸಲಾಗಿದೆಯೇ? ಯಾವಾಗ? ಎಲ್ಲರಿಗೂ ಪರಿಣಾಮಕಾರಿಯಾಗಿ ಹಂಚಲ್ಪಡುವ ಖಾತ್ರಿಗಾಗಿ ಯಾವ ವಿಧಾನವನ್ನು ಹಿಂಬಾಲಿಸಲಾಗುವುದು?

6. ವೃದ್ಧರೂ ಅಬಲರೂ ಆದ ಸಹೋದರ ಮತ್ತು ಸಹೋದರಿಯರಿಗೆ ಸಹಾಯಕೊಡಲು ಏರ್ಪಾಡುಗಳು ಪೂರ್ತಿಯಾಗಿವೆಯೋ? ಮಲಗಿದಲ್ಲೀ ಇರುವ ಮತ್ತು ರಾಜ್ಯ ಸಭಾಗೃಹಕ್ಕೆ ಬರಶಕ್ತರಾಗದ ಯಾರೇ ಅಭಿಷಿಕ್ತರಿಗೆ ಹಂಚಲು ಏರ್ಪಾಡುಗಳನ್ನು ಮಾಡಲಾಗಿದೆಯೇ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ