ಜ್ಞಾಪಕಕ್ಕಾಗಿ ವಿಷಯಗಳನ್ನು ಸಿದ್ಧಪಡಿಸಿರಿ
ಭಾಷಣಕರ್ತನನ್ನು ಒಳಗೂಡಿಸಿ, ಎಲ್ಲರಿಗೂ, ಆಚರಣೆಯ ನಿಖರವಾದ ಸಮಯ ಮತ್ತು ಸ್ಥಳವನ್ನು ತಿಳಿಸಲಾಗಿದೆಯೋ? ಕಾರ್ಯಕ್ರಮವು 45 ನಿಮಿಷಗಳನ್ನು ಮೀರಿಹೋಗಬಾರದೆಂದು ಭಾಷಣಕರ್ತನಿಗೆ ಅರಿವಿದೆಯೋ?
ಕುರುಹುಗಳನ್ನು ದೊರಕಿಸಿಕೊಳ್ಳಲು ಯಾರನ್ನಾದರೂ ನೇಮಿಸಲಾಗಿದೆಯೋ? (ಫೆಬ್ರವರಿ 1, 1991ರ ಕಾವಲಿನಬುರುಜು ಪುಟಗಳು 26-28ನ್ನು ನೋಡಿರಿ.) ಮೇಜನ್ನು ಒಂದು ಸ್ವಚ್ಛವಾದ ಮೇಜುಬಟ್ಟೆ ಮತ್ತು ಸಾಕಷ್ಟು ಸಂಖ್ಯೆಯ ಗಾಸ್ಲುಗಳು ಮತ್ತು ಪ್ಲೇಟುಗಳೊಂದಿಗೆ ಸಜ್ಜಾಗಿರಿಸುವಂತೆ ಏರ್ಪಾಡುಗಳನ್ನು ಮಾಡಲಾಗಿದೆಯೋ?
ರಾಜ್ಯ ಸಭಾಗೃಹವನ್ನು ಮುಂಚಿತವಾಗಿ ಮತ್ತು ನಂತರ ಶುಚಿಗೊಳಿಸಲು ಯೋಜನೆಗಳನ್ನು ಮಾಡಲಾಗಿದೆಯೋ? ಅಟೆಂಡೆಂಟರನ್ನು ಮತ್ತು ಪರಿಚಾರಕರನ್ನು ನೇಮಿಸಲಾಗಿದೆಯೋ? ಜ್ಞಾಪಕದ ಮುಂಚೆ ಅವರ ಕರ್ತವ್ಯಗಳ ಕುರಿತಾಗಿ ಜಾಗರೂಕತೆಯಿಂದ ಮತ್ತು ವ್ಯವಸ್ಥಿತವಾಗಿ ಚರ್ಚಿಸಲು ಒಂದು ಕೂಟವನ್ನು ಏರ್ಪಡಿಸಲಾಗಿದೆಯೋ? ಎಲ್ಲರಿಗೆ ದಕ್ಷತೆಯಿಂದ ಹಂಚಲಾಗಿದೆಯೆಂದು ಖಚಿತಪಡಿಸಿಕೊಳ್ಳಲಿಕ್ಕಾಗಿ ಯಾವ ಕಾರ್ಯವಿಧಾನವನ್ನು ಅನುಸರಿಸಲಾಗುವುದು?
ವೃದ್ಧ ಮತ್ತು ಅಶಕ್ತ ಸಹೋದರಸಹೋದರಿಯರು ಹಾಜರಾಗಲು ಸಹಾಯ ಮಾಡುವಂತೆ ಏರ್ಪಾಡುಗಳನ್ನು ಮಾಡಲಾಗಿದೆಯೋ? ಮನೆಯಲ್ಲಿ ನಿರ್ಬಂಧಿತರು ಮತ್ತು ಹಾಜರಾಗಲು ಅಶಕ್ತರಾಗಿರುವ ಅಭಿಷಿಕ್ತರಾದವರಲ್ಲಿ ಯಾರಾದರೂ ಇದ್ದಲ್ಲಿ, ಅವರಿಗೆ ಹಂಚಲು ತಯಾರಿಗಳನ್ನು ಮಾಡಲಾಗಿದೆಯೋ?