ದೇವ ಪ್ರಭುತ್ವ ವಾರ್ತಗಳು
ಆರ್ಜೆಂಟೀನ: ಒಂದು ಹೊಸ ಎಲ್ಲ ಸಮಯದ 98,601 ಪ್ರಚಾರಕರ ಉಚ್ಚಾಂಕವನ್ನು ಫೆಬ್ರವರಿಯಲ್ಲಿ ಮುಟ್ಟಲಾಯಿತು. ಅದೇ ತಿಂಗಳಿನಲ್ಲಿ, 507 ಹೊಸ ಶಿಷ್ಯರು ದೀಕ್ಷಾಸ್ನಾನವನ್ನು ಪಡೆದರು.
ಬೆನಿನ್: ಫೆಬ್ರವರಿಯಲ್ಲಿ 2,967 ಪ್ರಚಾರಕರ ಒಂದು ಹೊಸ ಉಚ್ಚಾಂಕವು ವರದಿಸಲಾಯಿತು. ಒಂದು ವರ್ಷ ಹಿಂದಿನ ಚಟುವಟಿಕೆಯೊಂದಿಗೆ ಹೋಲಿಸಿದಾಗ, ಪ್ರಚಾರಕರು 13.8 ಪ್ರತಿಶತ ಏರಿದ್ದಾರೆ, ಗಂಟೆಗಳು 6.1 ಪ್ರತಿಶತ, ಪತ್ರಿಕೆ ನೀಡುವಿಕೆಗಳು 40.6 ಪ್ರತಿಶತ, ಮತ್ತು ಬೈಬಲ್ ಅಧ್ಯಯನಗಳು 25.1 ಪ್ರತಿಶತ ಏರಿವೆ.
ಎಕಡ್ವಾರ್: ಫೆಬ್ರವರಿ ಯಲ್ಲಿ ಕ್ಷೇತ್ರ ಚಟುವಟಿಕೆಯನ್ನು ವರದಿಸಿದ 23,176 ಪ್ರಚಾರಕರು 42,219 ಮನೆ ಬೈಬಲ್ ಅಭ್ಯಾಸಗಳನ್ನು ನಡೆಸಿದರು. ಕಳೆದ ವರ್ಷ ಫೆಬ್ರವರಿಯ ಮೇಲೆ ಇದು 2,180 ಪ್ರಚಾರಕರ ಮತ್ತು 3,183 ಬೈಬಲ್ ಅಭ್ಯಾಸಗಳ ಅಭಿವೃದ್ಧಿಯಾಗಿತ್ತು.
ಐರ್ಲಂಡ್: ಫೆಬ್ರವರಿಯಲ್ಲಿ 4,093 ಪ್ರಚಾರಕರು ವರದಿಸುವುದರೊಂದಿಗೆ, 59 ನೆಯ ಅನುಕ್ರಮಿಕ ಪ್ರಚಾರಕರ ಉಚ್ಚಾಂಕವನ್ನು ಮುಟ್ಟಲಾಯಿತು. ನಡೆಸಲಾಗುತ್ತಿರುವ 2,682 ಮನೆ ಬೈಬಲ್ ಅಭ್ಯಾಸಗಳ ಹೊಸ ಉಚ್ಚಾಂಕದೊಂದಿಗೆ ಭವಿಷ್ಯದ ಬೆಳವಣಿಗೆಯು ಆಶಾಜನಕವಾಗಿ ಕಾಣುತ್ತದೆ.
ಪೆರು: ಫೆಬ್ರವರಿ ಯಲ್ಲಿ, ಪೆರು ನಲ್ಲಿರುವ 43,366 ಪ್ರಚಾರಕರು 3,69,437 ಪುನರ್ ಭೇಟಿಗಳನ್ನು ಮತ್ತು 68,090 ಮನೆ ಬೈಬಲ್ ಅಭ್ಯಾಸಗಳನ್ನು ವರದಿಸಿದರು. ಲಿಮಾ ದಲ್ಲಿ ಹೊಸದಾಗಿ ಕಟ್ಟಲಾದ ಸಮ್ಮೇಳನ ಸಭಾಗೃಹವನ್ನು 21,240 ಜನರ ಹಾಜರಿಯಲ್ಲಿ ಸರ್ಮಪಿಸಲಾಯಿತು.
ಟಹೀಟಿ: ಫೆಬ್ರವರಿಯಲ್ಲಿ, 1,604 ಪ್ರಚಾರಕರು ವರದಿಸುವುದರೊಂದಿಗೆ, 13 ಪ್ರತಿಶತ ವೃದ್ಧಿಯನ್ನು ಮುಟ್ಟಲಾಯಿತು. ಇದು ಟಹೀಟಿಯ ಪ್ರಚಾರಕರ 64 ನೆಯ ಅನುಕ್ರಮಿಕ ಉಚ್ಚಾಂಕವಾಗಿತ್ತು.
ಜಾಎರ್: ಈ ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಗಲಭೆಗಳಿದ್ದರೂ, ಫೆಬ್ರವರಿಯಲ್ಲಿ ಸಹೋದರರು 71,098 ಪ್ರಚಾರಕರ ಒಂದು ಹೊಸ ಉಚ್ಚಾಂಕವನ್ನು ವರದಿಸಿದರು. ಕಳೆದ ವರ್ಷದ ಸರಾಸರಿಯ ಮೇಲೆ ಅದು 9 ಪ್ರತಿಶತ ಅಭಿವೃದ್ಧಿಯಾಗಿತ್ತು. ಕ್ಷೇತ್ರ ಸೇವೆಯಲ್ಲಿ ಸಭಾ ಪ್ರಚಾರಕರು ಸರಾಸರಿ 16.8 ತಾಸುಗಳನ್ನು ವ್ಯಯಿಸುತ್ತಿದ್ದಾರೆ. ಜಾಎರ್‌ನಲ್ಲಿ ಈಗ 6,000 ಕ್ಕಿಂತಲೂ ಹೆಚ್ಚು ಕ್ರಮದ ಪಯನೀಯರರಿದ್ದಾರೆ.
ಫೆಬ್ರವರಿ ಯಲ್ಲಿ, ಕ್ಯಾರಿಬಿಯನ್ ಪ್ರದೇಶದಲ್ಲಿರುವ ಅರೂಬ, ಗ್ವಾಡೆಲೋಪ್, ಮಾರ್ಟಿನೀಕ್, ಸೆಂಟ್. ಕಿಟ್ಸ್, ಮತ್ತು ಯು. ಎಸ್. ವರ್ಜಿನ್ ಐಲೆಂಡ್ಸ್, ಪ್ರಚಾರಕರ ಹೊಸ ಉಚ್ಚಾಂಕವನ್ನು ವರದಿಸಿದವು.