ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ
1 ಮಾರ್ಚ್ 1996ರಿಂದಾರಂಭಿಸಿ, ಸರ್ಕಿಟ್ ಸಮ್ಮೇಳನಗಳ ಮುಖ್ಯ ವಿಷಯವು “ದೇವರ ವಾಕ್ಯವನ್ನು ಕಾರ್ಯರೂಪಕ್ಕೆ ತರಲು ಕಿವಿಗೊಡಿರಿ ಮತ್ತು ಕಲಿಯಿರಿ” ಎಂಬುದಾಗಿರುವುದು. ಧರ್ಮೋಪದೇಶಕಾಂಡ 31:12, 13ರ ಮೇಲಾಧಾರಿತವಾದ ಈ ಮುಖ್ಯ ವಿಷಯವು, ನಾವು ಕಲಿಯಲು ಮತ್ತು ಅನ್ವಯಿಸಲು ಅಗತ್ಯವಿರುವ ಪಾಠಗಳನ್ನು ಎತ್ತಿಹೇಳಲಿಕ್ಕಾಗಿ, ಇಡೀ ಕಾರ್ಯಕ್ರಮಕ್ಕೆ ಸರಿಹೊಂದುವ ಒಂದು ಆಧಾರವನ್ನು ಒದಗಿಸುತ್ತದೆ.
2 ಇಂದು ಅಧಿಕಾಂಶ ಜನರು, ತಪ್ಪುದಾರಿಗೆ ನಡಿಸುವ ಪ್ರೇರಿತ ಅಭಿವ್ಯಕ್ತಿಗಳಿಗೆ ಕಿವಿಗೊಡುತ್ತಾರಾದರೂ, ನಮ್ಮಲ್ಲಿ ಪ್ರತಿಯೊಬ್ಬರಿಗೂ ದೇವರ ವಾಕ್ಯಕ್ಕೆ ಕಿವಿಗೊಡುವ ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಕಲಿಯುವ ಅತ್ಯಾವಶ್ಯಕ ಅಗತ್ಯವಿದೆ. (ಲೂಕ 11:28; 1 ತಿಮೊ. 4:1) ಈ ವೀಕ್ಷಣದಲ್ಲಿ, ಪ್ರಚಾರಕರು, ಕುಟುಂಬಗಳು, ಹಿರಿಯರು ಮತ್ತು ಪಯನೀಯರರಿಗಾಗಿ, ಉತ್ತೇಜನ ಮತ್ತು ಸಹಾಯವನ್ನು ಒದಗಿಸಲಿಕ್ಕಾಗಿ ಈ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮವು ವಿನ್ಯಾಸಿಸಲ್ಪಟ್ಟಿದೆ. ಶನಿವಾರದಂದು, “ನಮ್ಮ ಸಮಸ್ಯೆಗಳನ್ನು ನಿಭಾಯಿಸುವುದು—ದೇವರ ವಾಕ್ಯಕ್ಕೆ ಗಮನಕೊಡುವ ಮೂಲಕ” ಎಂಬ ವಿಷಯದ ಮೇಲೆ ನಾಲ್ಕು ಭಾಗದ ಒಂದು ಭಾಷಣಮಾಲೆಯಿರುವುದು. ಮತ್ತು ಆದಿತ್ಯವಾರ ಬೆಳಗ್ಗೆ, “ಶಾಸ್ತ್ರಗಳು ನೀತಿಯಲ್ಲಿ ಶಿಸ್ತುಗೊಳಿಸುವ ವಿಧ” ಎಂಬ ಶಿರೋನಾಮವುಳ್ಳ ಒಂದು ಭಾಷಣಮಾಲೆಯಿರುವುದು. ನೀವು ಮತ್ತು ನಿಮ್ಮ ಕುಟುಂಬವು ತಪ್ಪಿಸಲೇಬಾರದಂತಹ ಆತ್ಮಿಕ ಉತ್ತೇಜನವನ್ನು ಇಡೀ ಕಾರ್ಯಕ್ರಮವು ಸಾದರಪಡಿಸುವುದು.
3 ಶನಿವಾರ ಮತ್ತು ಆದಿತ್ಯವಾರ—ಎರಡೂ ದಿನಗಳಲ್ಲಿ, ಕ್ಷೇತ್ರ ಶುಶ್ರೂಷೆಗಾಗಿ ಪ್ರಾಯೋಗಿಕ ಸಲಹೆಗಳು ಕೊಡಲ್ಪಡುವವು ಮತ್ತು ಪ್ರತ್ಯಕ್ಷಾಭಿನಯಿಸಲ್ಪಡುವವು. ಉತ್ತೇಜನದಾಯಕವಾದ ಮತ್ತು ಬೋಧಪ್ರದವಾದ ಅನುಭವಗಳು ಮತ್ತು ಸಂದರ್ಶನಗಳು ಸಹ ಪ್ರಸ್ತುತಪಡಿಸಲ್ಪಡುವವು. ಹೀಗೆ, ನೀವು ಕಲಿಯುವಂತಹ ವಿಷಯಗಳನ್ನು ರೂಢಿಯಲ್ಲಿ ಹಾಕುವ ಉದ್ದೇಶದಿಂದ ಹಾಜರಿರುವ ಮತ್ತು ಆಲಿಸುವ ಮೂಲಕ, ದೇವರ ವಾಕ್ಯದ ಆಜ್ಞೆಗಳನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ನೀವು ಹೆಚ್ಚು ಉತ್ತಮವಾದ ಸ್ಥಿತಿಯಲ್ಲಿರುವಿರಿ.
4 ಸರ್ಕಿಟ್ ಸಮ್ಮೇಳನದ ಅತ್ಯುಜಲ್ವ ಭಾಗಗಳಲ್ಲಿ ಒಂದು, ಹೊಸದಾಗಿ ಸಮರ್ಪಿತರಾದ ಸಹೋದರ ಸಹೋದರಿಯರ ದೀಕ್ಷಾಸ್ನಾನವಾಗಿರುವುದು. ತಮ್ಮ ಈ ಸಾರ್ವಜನಿಕ ಘೋಷಣೆಗೆ ಮುಂಚಿತವಾಗಿ ಅಭ್ಯರ್ಥಿಗಳು, ದೀಕ್ಷಾಸ್ನಾನಕ್ಕಾಗಿರುವ ತಮ್ಮ ಅಪೇಕ್ಷೆಯನ್ನು ಅಧ್ಯಕ್ಷ ಮೇಲ್ವಿಚಾರಕನಿಗೆ ವ್ಯಕ್ತಪಡಿಸಬೇಕು. ಇದರಿಂದಾಗಿ ಹಿರಿಯರು ಅವರೊಂದಿಗೆ ಸಂಧಿಸುವಂತೆ ಅವನು ಏರ್ಪಡಿಸಸಾಧ್ಯವಿದೆ.
5 ಈ ಸರ್ಕಿಟ್ ಸಮ್ಮೇಳನ ಸರಣಿಗಾಗಿರುವ ಬಹಿರಂಗ ಭಾಷಣವು, “ಬೈಬಲಿನ ಮೂಲಕ ಏಕೆ ಮಾರ್ಗದರ್ಶಿಸಲ್ಪಡಬೇಕು?” ಎಂಬ ಶಿರೋನಾಮವುಳ್ಳದ್ದಾಗಿದೆ. ಹಾಜರಾಗುವಂತೆ ಆಸಕ್ತ ಜನರನ್ನು ಆಮಂತ್ರಿಸಿರಿ. ನೀವು ಮತ್ತು ನಿಮ್ಮ ಕುಟುಂಬವು ಪಡೆಯಲಿರುವ ಹೆಚ್ಚು ಅಗತ್ಯವಾಗಿರುವ ಉತ್ತೇಜನ ಮತ್ತು ಸಹಾಯದ ನಿರೀಕ್ಷೆಯಲ್ಲಿ, ಇಡೀ ಕಾರ್ಯಕ್ರಮಕ್ಕಾಗಿ ಹಾಜರಿರುವಂತೆ ನಿಶ್ಚಿತ ಯೋಜನೆಗಳನ್ನು ಮಾಡಿರಿ.