ಬೈಬಲಿನ ಮೌಲ್ಯವನ್ನು ಗಣ್ಯಮಾಡುವಂತೆ ಇತರರಿಗೆ ಸಹಾಯ ಮಾಡಿರಿ
1 ತನ್ನ ಶಿಷ್ಯರಿಗೆ ಏನು ಅಗತ್ಯವಿತ್ತೊ ಅದನ್ನು ಯೇಸು ಒದಗಿಸಿದನು. ಲೂಕ 24:45 ವರದಿಸುವುದು: “ಅವರು ಶಾಸ್ತ್ರವಚನಗಳನ್ನು ತಿಳುಕೊಳ್ಳುವಂತೆ ಆತನು ಅವರ ಬುದ್ಧಿಯನ್ನು ತೆರೆದ”ನು. ಅವರು ತನ್ನ ತಂದೆಯ ಒಪ್ಪಿಗೆಯನ್ನು ಪಡೆಯಲು ಬಯಸುವುದಾದರೆ, ದೇವರ ವಾಕ್ಯವಾದ ಬೈಬಲನ್ನು ಅಭ್ಯಾಸಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಅವರಿಗೆ ಅಗತ್ಯವಾಗಿತ್ತೆಂಬುದು ಯೇಸುವಿಗೆ ತಿಳಿದಿತ್ತು. (ಕೀರ್ತ. 1:1, 2) ನಮ್ಮ ಸಾರುವ ಕಾರ್ಯಕ್ಕೆ ಅದೇ ರೀತಿಯ ಉದ್ದೇಶವಿದೆ. ಎಲ್ಲಿ ನಾವು ‘ಯೇಸು ಆಜ್ಞಾಪಿಸಿದ್ದ ಎಲ್ಲಾ ವಿಷಯಗಳನ್ನು ಕಾಪಾಡಿಕೊಳ್ಳುವಂತೆ ಜನರಿಗೆ ಕಲಿಸ’ಬಲ್ಲೆವೊ, ಆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು ನಮ್ಮ ಗುರಿಯಾಗಿದೆ. (ಮತ್ತಾ. 28:20) ಇದನ್ನು ಮನಸ್ಸಿನಲ್ಲಿಡುವುದರೊಂದಿಗೆ, ನೀವು ಪುನರ್ಭೇಟಿಗಳನ್ನು ಮಾಡುವಾಗ ಸಹಾಯಕಾರಿಯಾಗಿರಬಹುದಾದ ವಿಷಯಗಳ ಕುರಿತು ಕೆಲವು ಸಲಹೆಗಳು ಮುಂದೆ ಕೊಡಲ್ಪಟ್ಟಿವೆ.
2 ನೀವು ಆರಂಭದಲ್ಲಿ “ಬೈಬಲು—ದೇವರ ವಾಕ್ಯವೊ ಅಥವಾ ಮಾನವನದ್ದೊ?” (ಇಂಗ್ಲಿಷ್) ಎಂಬ ಪುಸ್ತಕದ ಕುರಿತು ಚರ್ಚಿಸಿರುವಲ್ಲಿ, ನೀವು ನಿಮ್ಮ ಚರ್ಚೆಯನ್ನು ಈ ರೀತಿಯಲ್ಲಿ ಮುಂದುವರಿಸಬಹುದು:
◼ “ಬೈಬಲಿನ ಸಲಹೆಯ ಪ್ರಾಯೋಗಿಕ ಮೌಲ್ಯವನ್ನು ದೃಷ್ಟಾಂತಿಸುವ ಬೇರೆ ಯಾವುದೋ ವಿಷಯವನ್ನು ನಾನು ನಿಮಗೆ ತೋರಿಸಲು ಬಯಸುತ್ತೇನೆ. ಅನೇಕ ಜನರು ಇತರರೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಾರೆ. ನಮ್ಮ ಸುತ್ತಲಿರುವವರೊಂದಿಗೆ ಹೆಚ್ಚು ಉತ್ತಮವಾದ ಒಂದು ಸಂಬಂಧವನ್ನು ಬೆಳೆಸಿಕೊಳ್ಳಲಿಕ್ಕಾಗಿ ನಾವೇನು ಮಾಡಸಾಧ್ಯವಿದೆ? [ಪ್ರತಿಕ್ರಿಯೆಯೊಂದರ ಬಳಿಕ, 167-8ನೆಯ ಪುಟಗಳಲ್ಲಿರುವ 15ನೆಯ ಪ್ಯಾರಗ್ರಾಫ್ಗೆ ತಿರುಗಿಸಿರಿ, ಮತ್ತು ಮತ್ತಾಯ 7:12ನ್ನು ಓದಿ. 16ನೆಯ ಪ್ಯಾರಗ್ರಾಫ್ನಲ್ಲಿ ಅಭಿವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಕೂಡಿಸಿರಿ.] ಇದು, ಬೈಬಲಿನ ಸಲಹೆಯಲ್ಲಿ ಕಂಡುಬರುವ ವಿವೇಕದ ಮತ್ತೊಂದು ಉದಾಹರಣೆಯಾಗಿದೆ. ಮುಂದಿನ ಬಾರಿ ನಾನು ಭೇಟಿಯಾಗುವಾಗ, ವಿವಾಹಿತ ದಂಪತಿಗಳು ತಮ್ಮ ಸಂಬಂಧದಲ್ಲಿ ಹೆಚ್ಚು ಮಹತ್ತರವಾದ ಆನಂದವನ್ನು ಕಂಡುಕೊಳ್ಳುವಂತೆ ಸಹಾಯ ಮಾಡಲು ಬೈಬಲು ಕೊಡುವ ಬುದ್ಧಿವಾದವನ್ನು ನಿಮಗೆ ತೋರಿಸಲು ಇಷ್ಟಪಡುತ್ತೇನೆ.” ಬೈಬಲು ಒಂದು ಸಂತೋಷಭರಿತ ಕುಟುಂಬ ಜೀವನಕ್ಕಾಗಿ ಏನನ್ನು ಶಿಫಾರಸ್ಸು ಮಾಡುತ್ತದೆಂದು ತೋರಿಸುವ, 170-2 ಪುಟಗಳಲ್ಲಿರುವ ವಿಷಯವನ್ನು ಚರ್ಚಿಸಲಿಕ್ಕಾಗಿ ಹಿಂದಿರುಗಲು ಏರ್ಪಾಡುಗಳನ್ನು ಮಾಡಿರಿ.
3 ಬೈಬಲಿನಲ್ಲಿ ಆಸಕ್ತಿಯನ್ನು ತೋರಿಸಿದ ಯಾರೊಂದಿಗಾದರೂ ನೀವು ಮಾತಾಡಿರುವುದಾದರೆ, ಆಗ ಒಂದು ಅಭ್ಯಾಸವನ್ನು ಆರಂಭಿಸುವುದರಲ್ಲಿ ಬಹುಶಃ ಈ ಪ್ರಸ್ತಾವನೆಯು ಪರಿಣಾಮಕಾರಿಯಾಗಿರಬಹುದು:
◼ “ಕಾರ್ಯತಃ ನೀವು ಯಾರೊಂದಿಗೆ ಮಾತಾಡುತ್ತೀರೊ ಅವರೆಲ್ಲರೂ, ಜೀವಿಸಲಿಕ್ಕಾಗಿ ಒಂದು ಶಾಂತಿಭರಿತ ಹಾಗೂ ಭದ್ರ ಲೋಕವು ಇರುವಂತೆ ತಾವು ಬಯಸುತ್ತೇವೆಂದು ನಿಮಗೆ ಹೇಳುವರು. ಪ್ರತಿಯೊಬ್ಬರು ಅದನ್ನೇ ಬಯಸುತ್ತಿರುವಲ್ಲಿ, ಇಷ್ಟೊಂದು ಸಂಕ್ಷೋಭೆ ಮತ್ತು ಹಿಂಸಾಚಾರದಿಂದ ತುಂಬಿರುವ ಒಂದು ಲೋಕವು ನಮಗಿದೆ ಏಕೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಆ ಪ್ರಶ್ನೆಗೆ ಉತ್ತರವನ್ನು ನೀವು ಬೈಬಲಿನಲ್ಲಿ ಎಲ್ಲಿ ಕಂಡುಕೊಳ್ಳಸಾಧ್ಯವಿದೆಯೆಂಬುದನ್ನು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ನಿಮಗೆ ತೋರಿಸುತ್ತದೆ. 1659ನೆಯ ಪುಟಕ್ಕೆ ತಿರುಗಿಸಿರಿ, ಮತ್ತು “ಚರ್ಚೆಗಾಗಿ ಬೈಬಲ್ ವಿಷಯಗಳು” ನಂಬ್ರ 43ಎಯಲ್ಲಿರುವ “ಲೋಕ ಸಂಕಟಕ್ಕೆ ಕಾರಣರಾಗಿರುವವರು” ಎಂಬುದರ ಕಡೆಗೆ ನಿರ್ದೇಶಿಸಿರಿ. 2 ಕೊರಿಂಥ 4:4ನ್ನು ಓದಿರಿ. ದೇವರು ಪಿಶಾಚನನ್ನು ನಾಶಮಾಡಿ, ಶಾಶ್ವತವಾದ ಶಾಂತಿ ಮತ್ತು ಸಂತೋಷದ ಒಂದು ಲೋಕವನ್ನು ಹೇಗೆ ತರುವನೆಂಬುದನ್ನು ವಿವರಿಸಿರಿ. ಪ್ರಕಟನೆ 21:3, 4ನ್ನು ಓದಿ, ತದನಂತರ ನೀವು ಹೀಗನ್ನಸಾಧ್ಯವಿದೆ: “ಮುಂದಿನ ಬಾರಿ ನಾನು ಭೇಟಿಮಾಡುವಾಗ, ಸಂಕಟರಹಿತವಾದ ಒಂದು ಲೋಕವನ್ನು ನೀವು ಎದುರುನೋಡಬಲ್ಲ ಕಾರಣವನ್ನು ವಿವರಿಸುವ ಕೆಲವು ಶಾಸ್ತ್ರವಚನಗಳನ್ನು ನಿಮಗೆ ತೋರಿಸಲು ನಾನು ಬಯಸುತ್ತೇನೆ.”
4 ಹಳೆಯ 192 ಪುಟದ ಪುಸ್ತಕಗಳಲ್ಲಿ ಒಂದನ್ನು ಮನೆಯವನು ಪಡೆದುಕೊಂಡಿದ್ದಲ್ಲಿ, ನೀವು ಹಿಂದಿರುಗುವಾಗ ಹೀಗೆ ಹೇಳಬಹುದು:
◼ “ಈ ಹಿಂದೆ ನಾವು ಮಾತಾಡಿದಾಗ, ಬೈಬಲನ್ನು ಅಭ್ಯಾಸಿಸುವುದು ಏಕೆ ಪ್ರಯೋಜನಕರವಾಗಿದೆ ಎಂಬುದರ ಕುರಿತು ನಾವು ಕೆಲವು ಕಾರಣಗಳನ್ನು ಚರ್ಚಿಸಿದ್ದೆವು. ಇದರ ಕುರಿತು ಹೆಚ್ಚನ್ನು ತಿಳಿಯಲು ಮಾಡುವ ಒಂದು ಪ್ರಾಮಾಣಿಕ ಪ್ರಯತ್ನವು, ದೇವರು ನಮಗಾಗಿ ಏನನ್ನು ಕಾದಿರಿಸಿದ್ದಾನೆ ಎಂಬುದನ್ನು ಗಣ್ಯಮಾಡಲು ನಮಗೆ ಸಹಾಯ ಮಾಡಬಲ್ಲದು. [ಯೋಹಾನ 17:3ನ್ನು ಓದಿರಿ.] ದೇವರು ಏನನ್ನು ವಾಗ್ದಾನಿಸಿದ್ದಾನೆ ಮತ್ತು ನಾವಾತನನ್ನು ಹೇಗೆ ಮೆಚ್ಚಿಸಸಾಧ್ಯವಿದೆ ಎಂಬುದರ ಕುರಿತಾಗಿ ಹೆಚ್ಚನ್ನು ಕಲಿಯಲು, ಸಾವಿರಾರು ಮಂದಿಗೆ ಸಹಾಯ ಮಾಡಿರುವ ಅಭ್ಯಾಸ ಕಾರ್ಯಕ್ರಮವೊಂದನ್ನು ನಾವು ವಿಕಸಿಸಿದ್ದೇವೆ.” ಮನೆಯವನು ಸ್ವೀಕರಿಸಿರುವ ಯಾವುದೇ ಪ್ರಕಾಶನದಲ್ಲಿರುವ ಅಧ್ಯಾಯದ ಶಿರೋನಾಮಗಳನ್ನು ಪುನರ್ವಿಮರ್ಶಿಸಿರಿ ಮತ್ತು ನಾವು ಒಂದು ಬೈಬಲ್ ಅಭ್ಯಾಸವನ್ನು ನಡೆಸುವ ವಿಧವನ್ನು ಪ್ರದರ್ಶಿಸಿರಿ.
5 ದೇವರ ವಾಕ್ಯದ ಉತ್ಕೃಷ್ಟ ಮೌಲ್ಯವನ್ನು ಗಣ್ಯಮಾಡುವಂತೆ ನೀವು ಪ್ರಾಮಾಣಿಕ ವ್ಯಕ್ತಿಗಳಿಗೆ ಸಹಾಯ ಮಾಡಬಲ್ಲಿರಾದರೆ, ಸಾಧ್ಯವಿರುವ ಅತ್ಯುತ್ತಮ ವಿಧದಲ್ಲಿ ನೀವು ಅವರಿಗೆ ಸಹಾಯ ಮಾಡಿದ್ದೀರಿ. ಅದರ ಪುಟಗಳ ಅಭ್ಯಾಸದಿಂದ ಅವರು ಕಲಿಯಬಲ್ಲ ವಿವೇಕವು, “ಜೀವದ ಮರ”ವಾಗಿರಸಾಧ್ಯವಿದೆ; ಅದು ಅವರಿಗೆ ಅಧಿಕ ಸಂತೋಷವನ್ನು ತರುವುದು.—ಜ್ಞಾನೋ. 3:18.