ನಿಷ್ಕೃಷ್ಟ ಜ್ಞಾನವನ್ನು ಹಂಚಿಕೊಳ್ಳಿರಿ
1 ಡಿಸೆಂಬರ್ ತಿಂಗಳಿನ ನಮ್ಮ ಕ್ಷೇತ್ರ ಶುಶ್ರೂಷೆಯಲ್ಲಿ, ನಾವು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವನ್ನು ಪ್ರದರ್ಶಿಸುವೆವು. ಸಮಯೋಚಿತವಾದ ಬೈಬಲ್ ಚರ್ಚೆಯೊಂದನ್ನು ಆರಂಭಿಸಲು ನೀವು ಏನು ಹೇಳುವಿರಿ, ಮತ್ತು ಉತ್ಕೃಷ್ಟವಾದ ಈ ಪ್ರಕಾಶನವನ್ನು ನೀವು ಹೇಗೆ ಪರಿಚಯಿಸುವಿರಿ?
2 ನಮ್ಮ ಕಿರುಹೊತ್ತಗೆಗಳನ್ನು ಉಪಯೋಗಿಸುವುದು: ಇತರ ಸಾಹಿತ್ಯವನ್ನು ನೀಡುವುದಕ್ಕೆ ಮೊದಲೇ, ವ್ಯಕ್ತಿಯೊಬ್ಬನ ಆಸಕ್ತಿಯನ್ನು ಕೆರಳಿಸಲು ಕಿರುಹೊತ್ತಗೆಗಳನ್ನು ಉಪಯೋಗಿಸುವುದರಲ್ಲಿ ಕೆಲವು ಪ್ರಚಾರಕರು ಯಶಸ್ಸನ್ನು ಕಂಡುಕೊಂಡಿದ್ದಾರೆ. ಇದನ್ನು ಸಾಧಿಸಲು ನಾವು ಹೇಗೆ ಸಹಾಯ ಮಾಡಲ್ಪಡಸಾಧ್ಯವಿದೆ? ಈ ಲೋಕವು ಪಾರಾಗುವುದೋ? ಎಂಬ ನಮ್ಮ ಕಿರುಹೊತ್ತಗೆಯನ್ನು ಪ್ರದರ್ಶಿಸುವ ಮೂಲಕವೇ.
ಒಬ್ಬ ವ್ಯಕ್ತಿಗೆ ಬೈಬಲಿನಲ್ಲಿ ವಿಶ್ವಾಸವಿರುವ ಹಿನ್ನೆಲೆಯಿರುವುದಾದರೆ, ನೀವು ಹೀಗೆ ಹೇಳಬಹುದು:
◼ “ಯೇಸು ಕ್ರಿಸ್ತನು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನಾಗಿದ್ದನು ಎಂಬುದನ್ನು ಅವರು ಒಪ್ಪಿಕೊಳ್ಳುವರೋ ಎಂದು ನಾವು ಜನರನ್ನು ಕೇಳುತ್ತಿದ್ದೇವೆ. [ಪ್ರತಿಕ್ರಿಯೆಗಾಗಿ ಸಮಯವನ್ನು ಅನುಮತಿಸಿರಿ.] ನಿಶ್ಚಯವಾಗಿ, ಅನೇಕ ಪುರುಷರು ಮಾನವ ವ್ಯವಹಾರಗಳ ಮಾರ್ಗಕ್ರಮವನ್ನು ಪ್ರಭಾವಿಸಿದ್ದಾರೆ, ಮತ್ತು ಕೆಲವರು ಮಾನವ ಕುಲದ ಪ್ರಗತಿಗೆ ನೆರವನ್ನಿತ್ತಿದ್ದಾರೆ, ಆದರೆ ಇತರರೆಲ್ಲರಿಂದ ಯೇಸು ಕ್ರಿಸ್ತನನ್ನು ಪ್ರತ್ಯೇಕಿಸುವಂತಹದ್ದು ಯಾವುದು ಎಂಬುದನ್ನು ಗಮನಿಸಿ. [ಯೋಹಾನ 17:3ನ್ನು ಓದಿರಿ.] ಮಾನವಕುಲಕ್ಕೆ ನಿತ್ಯ ಜೀವವನ್ನು ದಯಪಾಲಿಸಲು ಇನ್ನಾರಿಗೂ ಅಧಿಕಾರವಿಲ್ಲ. [ಕಿರುಹೊತ್ತಗೆಯ 3ನೆಯ ಪುಟಕ್ಕೆ ತಿರುಗಿಸಿರಿ.] ಯೇಸು ಇಲ್ಲಿ ಭೂಮಿಯ ಮೇಲಿದ್ದಾಗ, ಲೋಕದ ಅಂತ್ಯಕ್ಕೆ ಮೊದಲು ಸಂಭವಿಸುವ ಘಟನೆಗಳನ್ನು ಆತನು ವರ್ಣಿಸಿದನು. ಆದರೆ ಈ ಘಟನೆಗಳು, ಬಿಡುಗಡೆಯು ಸಮೀಪವಾಗುತ್ತಿತ್ತು ಎಂಬುದನ್ನು ಅರ್ಥೈಸಸಾಧ್ಯವಿದುದ್ದರಿಂದ, ಆತನು ತನ್ನ ಶಿಷ್ಯರಿಗೆ ಹರ್ಷಿಸುವಂತೆ ಸಹ ಉತ್ತೇಜಿಸಿದನು.” ಕ್ರಿಸ್ತನ ಸಾನ್ನಿಧ್ಯದ ಸೂಚನೆಯ ಕೆಲವು ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿದ ಬಳಿಕ, ಆತನ ರಾಜ್ಯದಾಳಿಕೆಯಿಂದ ಬರುವ ಆಶೀರ್ವಾದಗಳಲ್ಲಿ ಕೆಲವನ್ನು ತೋರಿಸುವ, ಹಿಂದಿನ ಪುಟಕ್ಕೆ ಗಮನವನ್ನು ನಿರ್ದೇಶಿಸಿರಿ.
3 ಒಬ್ಬ ಎಳೆಯ ಪ್ರಚಾರಕನು ಅಥವಾ ಹೊಸಬನು ಇಲ್ಲವೆ ಅನನುಭವಿಯೊಬ್ಬನು, ಒಂದು ಕಿರುಹೊತ್ತಗೆಯಲ್ಲಿರುವ ದೃಷ್ಟಾಂತಗಳನ್ನು ಪೀಠಿಕೆಯೋಪಾದಿ ಪ್ರದರ್ಶಿಸಬಹುದು.
ಬೈಬಲಿನಲ್ಲಿ ನಂಬಿಕೆಯಿಲ್ಲದ ವ್ಯಕ್ತಿಯೊಬ್ಬನೊಂದಿಗೆ ಮಾತಾಡುವಾಗ, ಒಬ್ಬ ಪ್ರಚಾರಕನು “ಈ ಲೋಕವು ಪಾರಾಗುವುದೋ?” ಎಂಬ ಕಿರುಹೊತ್ತಗೆಯ 3 ಮತ್ತು 4ನೆಯ ಪುಟಗಳನ್ನು ತೆರೆದು ಹೀಗೆ ಹೇಳಸಾಧ್ಯವಿದೆ:
◼ “ಈ ಎರಡು ಚಿತ್ರಗಳನ್ನು ಗಮನಿಸಿ, ಒಂದು ಯುದ್ಧದ ಸಮಯದಲ್ಲಿ ಬಾಂಬ್ಗಳನ್ನು ಬೀಳಿಸುತ್ತಿರುವ ವಿಮಾನದ ಚಿತ್ರ ಮತ್ತು ಇನ್ನೊಂದು ಹಸಿವಿನಿಂದಿರುವ ಮಗುವಿನ ಚಿತ್ರವಾಗಿದೆ. [5ನೆಯ ಪುಟಕ್ಕೆ ತಿರುಗಿಸಿರಿ.] ಒಂದು ಭೂಕಂಪದ ಮತ್ತು ಒಂದು ಆಸ್ಪತ್ರೆಯ ಹಾಸಿಗೆಯಲ್ಲಿರುವ ಅಸ್ವಸ್ಥ ಮನುಷ್ಯನ ಕುರಿತಾದ ಈ ಚಿತ್ರಗಳನ್ನು ನೋಡಿರಿ. [ವಿರಾಮ.] ಇಂತಹ ಭೀಕರ ವಿಷಯಗಳು ಬೇಗನೆ ಅಂತ್ಯಗೊಳ್ಳುವವೆಂದು ಬೈಬಲು ತೋರಿಸುತ್ತದೆ.”
4 ತದನಂತರ ನೀವು ಪ್ರಕಟನೆ 21:3, 4ನ್ನು ನೇರವಾಗಿ ಬೈಬಲಿನಿಂದ ಅಥವಾ ಕಿರುಹೊತ್ತಗೆಯಲ್ಲಿ 6ನೆಯ ಪುಟದ ಮೇಲೆ ಉದ್ಧರಿಸಲ್ಪಟ್ಟಿರುವಂತೆ ಓದಸಾಧ್ಯವಿದೆ. ತೋರಿಸಲ್ಪಡುವ ಆಸಕ್ತಿಯ ಮೇಲೆ ಹೊಂದಿಕೊಂಡು, ನೀವು ಹೆಚ್ಚಿನ ಮಾಹಿತಿಯನ್ನು ಎತ್ತಿತೋರಿಸಸಾಧ್ಯವಿದೆ. ಹೆಚ್ಚು ಸೂಕ್ತವಾದದ್ದಾಗಿ ತೋರುವ ಯಾವುದೇ ಪುಸ್ತಕ—ಅತ್ಯಂತ ಮಹಾನ್ ಪುರುಷ ಅಥವಾ ಸದಾ ಜೀವಿಸಬಲ್ಲಿರಿ—ವನ್ನು ನೀಡಿರಿ. ಸದಾ ಜೀವಿಸಬಲ್ಲಿರಿ ಪುಸ್ತಕದ 150-153 ಮತ್ತು 156-162ನೆಯ ಪುಟಗಳಲ್ಲಿರುವ ಚಿತ್ರಗಳನ್ನು ತೋರಿಸುವ ಮೂಲಕ, ನೀವು ಸದ್ಯದ ಪರಿಸ್ಥಿತಿಗಳನ್ನು ದೇವರ ರಾಜ್ಯದ ಕೆಳಗಿನ ಭವಿಷ್ಯತ್ತಿನ ಪರಿಸ್ಥಿತಿಗಳೊಂದಿಗೆ ತುಲನೆಮಾಡಿ ವ್ಯತ್ಯಾಸ ತೋರಿಸಸಾಧ್ಯವಿದೆ.
5 ಮುಂದಿನ ಒಂದು ಭೇಟಿಗಾಗಿ ತಳಪಾಯವನ್ನು ಹಾಕಿರಿ: ನಿಶ್ಚಯವಾಗಿ, ನಾವು ಒಂದು ಕಿರುಹೊತ್ತಗೆಯನ್ನು, ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು, ಅಥವಾ ಇತರ ಸಾಹಿತ್ಯವನ್ನು ಬಿಟ್ಟುಬಂದಿರಲಿ ಅಥವಾ ಕೇವಲ ಹಿತಕರವಾದ ಒಂದು ಸಂಭಾಷಣೆಯನ್ನು ಮಾಡಿರಲಿ, ನಾವು ಹೀಗೆ ಹೇಳಬಹುದು: “ಮುಂದಿನ ಸಲ ನಾನು ಬರುವಾಗ, ದೇವರ ರಾಜ್ಯವು ಅತಿ ಬೇಗನೆ ತರಲಿಕ್ಕಿರುವ ಬದಲಾವಣೆಯ ಕುರಿತಾದ ಇನ್ನೊಂದು ಆಸಕ್ತಿಭರಿತ ವಾಸ್ತವಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ.” ಭೇಟಿಯ ಕುರಿತಾಗಿ ಮತ್ತು ತೋರಿಸಲ್ಪಟ್ಟ ಆಸಕ್ತಿಯ ಕುರಿತಾಗಿ ಜಾಗರೂಕ ಟಿಪ್ಪಣಿಯನ್ನು ತೆಗೆದುಕೊಳ್ಳಲು ನಿಶ್ಚಿತರಾಗಿರ್ರಿ.
6 ಮಾನವಕುಲಕ್ಕಾಗಿರುವ ಏಕಮಾತ್ರ ಯಥಾರ್ಥ ನಿರೀಕ್ಷೆಯನ್ನು ರಾಜ್ಯವು ಕೊಡುತ್ತದೆ. ನಾವು ಸಂಧಿಸುವವರೆಲ್ಲರೊಂದಿಗೆ “ಕ್ರಿಸ್ತನೆಂಬ, ದೇವರ ಪವಿತ್ರ ರಹಸ್ಯ ಸಂಬಂಧವಾದ ನಿಷ್ಕೃಷ್ಟ ಜ್ಞಾನ”ವನ್ನು ಹಂಚಿಕೊಳ್ಳಲಿಕ್ಕಿರುವ ನಮ್ಮ ಶ್ರದ್ಧಾಪೂರ್ವಕವಾದ ಬಯಕೆಯನ್ನು ನಾವು ತೋರಿಸೋಣ.—ಕೊಲೊ. 2:2, NW.