ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಹಬ್ಬಿಸುವುದು
1 “ಮನುಷ್ಯರಿಗೆ ಜ್ಞಾನವನ್ನು ಕಲಿಸುತ್ತಿರುವವನು” ಯೆಹೋವನು ಆಗಿದ್ದಾನೆ. (ಕೀರ್ತ. 94:10, NW) ತನಗೆ ಸ್ವೀಕಾರಯೋಗ್ಯವಾಗಿ ಹೇಗೆ ಸೇವೆ ಸಲ್ಲಿಸಬೇಕೆಂಬುದನ್ನು ಅರಿಯದವರಿಗೆ, ತನ್ನ ಕುರಿತಾದ ಜೀವರಕ್ಷಕ ಜ್ಞಾನವನ್ನು ಹಬ್ಬಿಸಲು ಆತನು ನಮ್ಮನ್ನು ಉಪಯೋಗಿಸುತ್ತಾನೆ. ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು ಉತ್ತಮವಾದೊಂದು ಬೋಧನಾ ಸಾಧನವಾಗಿದೆ; ಇದರ ಮುಖಾಂತರ ಪ್ರಾಮಾಣಿಕ ಹೃದಯಿಗಳು ದೇವರ ಲಿಖಿತ ವಾಕ್ಯವಾದ ಬೈಬಲಿನಿಂದ ಆತನ ನಿಷ್ಕೃಷ್ಟ ಜ್ಞಾನವನ್ನು ಸಂಪಾದಿಸಿಕೊಳ್ಳಬಲ್ಲರು. (1 ತಿಮೊ. 2:3, 4) ಜ್ಞಾನ ಪುಸ್ತಕದ ಸತ್ಯದ ಸ್ಫುಟ ಮತ್ತು ತರ್ಕಶುದ್ಧವಾದ ವಿಕಸನವು, ಯೆಹೋವನು ತಮಗೆ ಏನನ್ನು ಕಲಿಸಲು ಪ್ರಯತ್ನಿಸುತ್ತಿದ್ದಾನೆ ಎಂಬುದನ್ನು ಗ್ರಹಿಸಿಕೊಳ್ಳಲು ಜನರಿಗೆ ಸಹಾಯಮಾಡುವುದು. ಆದುದರಿಂದ, ನಾವು ಶುಶ್ರೂಷೆಯಲ್ಲಿ ಪಾಲನ್ನು ತೆಗೆದುಕೊಳ್ಳುವಾಗ ನಮ್ಮೊಂದಿಗೆ ಈ ಪುಸ್ತಕದ ಹಲವಾರು ಭಾಷೆಗಳ ಒಂದು ಸರಬರಾಯಿಯು ಇರಬೇಕು. ಈ ತಿಂಗಳು, ಜನರು ಪುಸ್ತಕವನ್ನು ಓದಲು ಬಯಸುವಂತೆ ಮಾಡುವ ಸಂಭಾಷಣೆಯಲ್ಲಿ ಅವರನ್ನು ಒಳಗೂಡಿಸಲು ನಾವು ಬಯಸುವೆವು. ಇಲ್ಲಿ ಕೆಲವು ಸಲಹೆಗಳಿವೆ. ಇವುಗಳನ್ನು ಬಾಯಿಪಾಠಮಾಡಲಿಕ್ಕೆ ಪ್ರಯತ್ನಿಸುವ ಬದಲು, ನಿಮ್ಮ ಸ್ವಂತ ಮಾತುಗಳಲ್ಲಿ ಮತ್ತು ಸ್ವಾಭಾವಿಕ ವಿಧದ ಸಂಭಾಷಣೆಯಲ್ಲಿ ಮುಖ್ಯ ವಿಚಾರಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸಿರಿ.
2 ಹೆಚ್ಚಿನ ಜನರು ಮರಣದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡಿರುವುದರಿಂದ, ಮೊದಲು ಈ ರೀತಿಯ ಯಾವುದಾದರೊಂದು ವಿಷಯವನ್ನು ಹೇಳುವ ಮೂಲಕ ಸಂಭಾಷಣೆಯೊಂದರೊಳಗೆ ಪುನರುತ್ಥಾನ ನಿರೀಕ್ಷೆಯನ್ನು ನೀವು ಪರಿಚಯಿಸಸಾಧ್ಯವಿದೆ:
◼ “ನಮ್ಮಲ್ಲಿ ಹೆಚ್ಚಿನವರು ಮರಣದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ಅಂಥ ವ್ಯಕ್ತಿಗಳನ್ನು ನೀವು ಪುನಃ ನೋಡುವಿರೆಂಬುದರ ಕುರಿತಾಗಿ ನೀವು ಕುತೂಹಲಪಟ್ಟಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮರಣವು, ಮನುಷ್ಯನಿಗಾಗಿದ್ದ ದೇವರ ಮೂಲ ಉದ್ದೇಶದ ಭಾಗವಾಗಿರಲಿಲ್ಲ. ನಮ್ಮ ಪ್ರೀತಿಪಾತ್ರರು ಮರಣದಿಂದ ರಕ್ಷಿಸಲ್ಪಡಸಾಧ್ಯವಿದೆ ಎಂಬುದನ್ನು ಯೇಸು ರುಜುಪಡಿಸಿದನು. [ಯೋಹಾನ 11:11, 25, 44ನ್ನು ಓದಿರಿ.] ಇದು ಶತಮಾನಗಳ ಹಿಂದೆ ಸಂಭವಿಸಿದರೂ, ನಮಗಾಗಿ ದೇವರು ಏನು ಮಾಡುವೆನೆಂದು ವಾಗ್ದಾನಿಸಿದ್ದಾನೋ ಅದನ್ನು ತೋರಿಸುತ್ತದೆ. [ಜ್ಞಾನ ಪುಸ್ತಕದ ಪುಟ 85ರಲ್ಲಿರುವ ಚಿತ್ರವನ್ನು ತೆಗೆದು, ವಿವರಣೆಯ ಬರಹವನ್ನು ಓದಿರಿ. ಅನಂತರ ಪುಟ 86ರಲ್ಲಿರುವ ಚಿತ್ರವನ್ನು ತೋರಿಸಿ, ಅದರ ಕುರಿತಾಗಿ ಹೇಳಿಕೆಯನ್ನು ನೀಡಿರಿ.] ಪುನರುತ್ಥಾನದ ಈ ಸಾಂತ್ವನದಾಯಕ ನಿರೀಕ್ಷೆಯ ಕುರಿತು ಹೆಚ್ಚಿನ ವಿಷಯವನ್ನು ನೀವು ಓದಲು ಇಚ್ಛಿಸುವುದಾದರೆ, ಈ ಪುಸ್ತಕವನ್ನು ನಿಮ್ಮೊಂದಿಗೆ ಬಿಟ್ಟುಹೋಗಲು ನಾನು ಸಂತೋಷಿಸುವೆ.”
3 ಪುನರುತ್ಥಾನ ನಿರೀಕ್ಷೆಯ ಕುರಿತಾದ ಪ್ರಥಮ ಚರ್ಚೆಯನ್ನು ಮಾಡಿದ ಬಳಿಕ, ಅದೇ ವ್ಯಕ್ತಿಯೊಂದಿಗೆ ಈ ವಿಧದಲ್ಲಿ ಮುಂದಿನ ಸಂಭಾಷಣೆಯನ್ನು ನೀವು ಪ್ರಾರಂಭಿಸಸಾಧ್ಯವಿದೆ:
◼ “ಮರಣವು, ಮಾನವನಿಗಾಗಿದ್ದ ದೇವರ ಮೂಲ ಉದ್ದೇಶದ ಭಾಗವಾಗಿರಲಿಲ್ಲವೆಂಬ ನನ್ನ ಹೇಳುವಿಕೆಯ ಬಗ್ಗೆ ನಿಮಗೆ ಜ್ಞಾಪಕವಿರಬಹುದು. ಅದು ನಿಜವಾಗಿದ್ದಲ್ಲಿ, ನಾವು ಏಕೆ ವೃದ್ಧರಾಗಿ, ಸಾಯುತ್ತೇವೆ? ಕೆಲವು ಆಮೆಗಳು 100ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಜೀವಿಸುತ್ತವೆ, ಮತ್ತು ಸಾವಿರಾರು ವರ್ಷಗಳಿಂದ ಜೀವಂತವಾಗಿರುವ ಮರಗಳಿವೆ. ಮಾನವರು 70 ಅಥವಾ 80 ವರ್ಷಗಳು ಮಾತ್ರವೇ ಏಕೆ ಜೀವಿಸುತ್ತಾರೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಪ್ರಥಮ ಮಾನವ ಜೊತೆಯು ದೇವರಿಗೆ ಅವಿಧೇಯವಾದುದರಿಂದ ನಾವು ಸಾಯುತ್ತೇವೆ.” ರೋಮಾಪುರ 5:12ನ್ನು ಓದಿರಿ. ಜ್ಞಾನ ಪುಸ್ತಕದ 53ನೇ ಪುಟವನ್ನು ತಿರುಗಿಸಿ, ಅಧ್ಯಾಯದ ಶೀರ್ಷಿಕೆಯನ್ನು ಓದಿರಿ. ಮುದ್ರಿತ ಪ್ರಶ್ನೆಗಳಿಗೆ ಉತ್ತರಗಳನ್ನು ನಿರ್ದೇಶಿಸುತ್ತಾ, ಮೊದಲ ಮೂರು ಪ್ಯಾರಗ್ರಾಫ್ಗಳನ್ನು ಪರಿಗಣಿಸಿರಿ. ಅಧ್ಯಾಯದ ಉಳಿದ ಭಾಗವನ್ನು ಚರ್ಚಿಸಲು ನಂತರ ಹಿಂದಿರುಗುವುದಕ್ಕೆ ಒಂದು ಭೇಟಿ ನಿಶ್ಚಯವನ್ನು ಮಾಡಿರಿ. ಈ ಮಧ್ಯೆ ಅದರ ಓದುವಿಕೆಯನ್ನು ಮುಗಿಸಲು ಆ ವ್ಯಕ್ತಿಯನ್ನು ಉತ್ತೇಜಿಸಿರಿ.
4 ಮತಶ್ರದ್ಧೆಯುಳ್ಳವನಾಗಿ ತೋರುವ ಒಬ್ಬ ವ್ಯಕ್ತಿಯೊಡನೆ ನೀವು ಮಾತಾಡುವಲ್ಲಿ, ನೀವು ಹೀಗೆ ಹೇಳಬಹುದು:
◼ “ಇಂದು ಅಕ್ಷರಾರ್ಥಕವಾಗಿ ನೂರಾರು ವಿಭಿನ್ನ ಧರ್ಮಗಳಿವೆ. ಅವು ಎಲ್ಲ ರೀತಿಯ ಘರ್ಷಣಾತ್ಮಕ ನಂಬಿಕೆಗಳನ್ನು ಬೋಧಿಸುತ್ತವೆ. ಕೆಲವು ಜನರು ಎಲ್ಲ ಧರ್ಮಗಳು ಒಳ್ಳೆಯವುಗಳಾಗಿವೆ ಮತ್ತು ನಾವು ಏನನ್ನು ನಂಬುತ್ತೇವೋ ಅದು ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲವೆಂಬುದಾಗಿ ಹೇಳುತ್ತಾರೆ. ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಯೇಸು ಏಕೈಕ ಧರ್ಮವಿದೆ ಎಂದು ಹೇಳಿದನು ಮತ್ತು ಆರಾಧನೆಯ ಅನೇಕ ರೂಪಗಳು ದೇವರಿಗೆ ಅಸ್ವೀಕಾರಯೋಗ್ಯವಾಗಿವೆ ಎಂದು ತೋರಿಸಿದನು. [ಮತ್ತಾಯ 7:21-23ನ್ನು ಓದಿರಿ.] ನಾವು ದೇವರನ್ನು ಪ್ರಸನ್ನಗೊಳಿಸಲು ಬಯಸುವುದಾದರೆ, ಆತನ ಚಿತ್ತದೊಂದಿಗೆ ಸಾಮರಸ್ಯದಲ್ಲಿ ನಾವು ಆತನನ್ನು ಆರಾಧಿಸತಕ್ಕದ್ದು.” ಜ್ಞಾನ ಪುಸ್ತಕದ ಅಧ್ಯಾಯ 5ನ್ನು ತೆರೆದು, ಶೀರ್ಷಿಕೆಯನ್ನು ಓದಿರಿ, ಮತ್ತು ಕೆಲವೊಂದು ಉಪಶೀರ್ಷಿಕೆಗಳನ್ನು ತೋರಿಸಿರಿ. ಈ ಮಾಹಿತಿಯು ದೇವರನ್ನು ಪ್ರಸನ್ನಗೊಳಿಸುವುದು ಹೇಗೆ ಎಂಬುದನ್ನು ಕಲಿಯಲು ಒಬ್ಬನಿಗೆ ಸಹಾಯಮಾಡುವುದು ಎಂಬುದನ್ನು ವಿವರಿಸಿರಿ. ರೂ. 15ರ ಕಾಣಿಕೆಗೆ ಪುಸ್ತಕವನ್ನು ನೀಡಿರಿ.
5 ಇಷ್ಟೊಂದು ಧರ್ಮಗಳಿರುವ ಕಾರಣದಿಂದ ಗಲಿಬಿಲಿಗೊಂಡಿರುವ ಜನರು, ನಿಮ್ಮ ಪುನರ್ಭೇಟಿಯಲ್ಲಿ ಈ ಪ್ರಶ್ನೆಗೆ ಉತ್ತರವನ್ನು ಗಣ್ಯಮಾಡಬಹುದು:
◼ “ಇಂದು ಅಸ್ತಿತ್ವದಲ್ಲಿರುವ ಇಷ್ಟೊಂದು ಅನೇಕ ವಿಭಿನ್ನ ಧರ್ಮಗಳೊಂದಿಗೆ, ಯಾವುದು ಸರಿಯಾದ ಒಂದು ಧರ್ಮವಾಗಿದೆಯೆಂದು ನಾವು ಹೇಗೆ ನಿಷ್ಕರ್ಷಿಸಬಲ್ಲೆವು? ನೀವು ಯಾವ ಧರ್ಮವು ಸರಿಯಾಗಿದೆಯೆಂದು ಹೇಗೆ ನಿಷ್ಕರ್ಷಿಸುವಿರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಯೇಸು ತನ್ನ ನಿಜ ಹಿಂಬಾಲಕರನ್ನು ಹೇಗೆ ಗುರುತಿಸುವುದೆಂದು ನಮಗೆ ಹೇಳಿದನು.” ಯೋಹಾನ 13:35ನ್ನು ಓದಿರಿ. ಜ್ಞಾನ ಪುಸ್ತಕದ ಅಧ್ಯಾಯ 15ರಲ್ಲಿರುವ 18 ಮತ್ತು 19ನೇ ಪ್ಯಾರಗ್ರಾಫ್ಗಳನ್ನು ಪರಿಗಣಿಸಿರಿ. ಈ ಶಾಸ್ತ್ರೀಯ ಮಾರ್ಗದರ್ಶನಗಳನ್ನು ಮತ್ತು ಪ್ರತ್ಯೇಕಿಸುವ ಕಾರ್ಯಗತಿಯನ್ನು ಉಪಯೋಗಿಸುವ ಮೂಲಕ ಒಬ್ಬ ವ್ಯಕ್ತಿಯು ಸತ್ಯ ಧರ್ಮವನ್ನು ಗ್ರಹಿಸಬಲ್ಲನೆಂಬುದನ್ನು ಹೇಳಿರಿ. ತಮ್ಮ ಯಥಾರ್ಥ ಪ್ರೀತಿ ಮತ್ತು ಉಚ್ಚ ನೈತಿಕ ಮಟ್ಟಗಳಿಗಾಗಿ ಯೆಹೋವನ ಸಾಕ್ಷಿಗಳು ಲೋಕದಾದ್ಯಂತವಾಗಿ ಹೇಗೆ ಪ್ರಖ್ಯಾತರಾಗಿದ್ದಾರೆಂಬುದನ್ನು ತಿಳಿಸಿರಿ. ಜ್ಞಾನ ಪುಸ್ತಕವನ್ನು ಉಪಯೋಗಿಸುತ್ತಾ, ಮಾಡಲ್ಪಡುವ ಒಂದು ಬೈಬಲ್ ಅಭ್ಯಾಸವು, ದೇವರು ಅನುಮೋದಿಸುವ ಆರಾಧನಾ ವಿಧವನ್ನು ಹೇಗೆ ಸ್ಪಷ್ಟವಾಗಿ ಗುರುತಿಸುವುದೆಂಬುದನ್ನು ವಿವರಿಸಿರಿ.
6 ನೀವು ಹೆತ್ತವರಲ್ಲಿ ಒಬ್ಬರನ್ನು ಭೇಟಿಮಾಡುವುದಾದರೆ, ಈ ಸಮೀಪಿಸುವಿಕೆಯು ಪರಿಣಾಮಕಾರಿಯಾಗಿರಬಹುದು:
◼ “ಯಾವುದೇ ನೈತಿಕ ಮೌಲ್ಯಗಳನ್ನು ಪಡೆದಿರದಂತೆ ತೋರುವ ಯುವಕರ ಸ್ವಚ್ಛಂದ ನಡವಳಿಕೆಯ ಕುರಿತಾದ ವರದಿಗಳನ್ನು ನಾವು ಪ್ರತಿ ದಿನ ಕೇಳಿಸಿಕೊಳ್ಳುತ್ತೇವೆ. ಸರಿ ಮತ್ತು ತಪ್ಪುಗಳ ನಡುವೆಯಿರುವ ವ್ಯತ್ಯಾಸವನ್ನು ಮಕ್ಕಳಿಗೆ ಕಲಿಸದೇ ಇರುವುದಕ್ಕಾಗಿ ಕೆಲವು ವಯಸ್ಕರು ಶಾಲಾ ವ್ಯವಸ್ಥೆಯ ಮೇಲೆ ದೋಷಾರೋಪಣೆ ಮಾಡಲು ಬಯಸುತ್ತಾರೆ. ಈ ತರಬೇತಿಯನ್ನು ಯಾರು ಒದಗಿಸಬೇಕೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪ್ರಶ್ನೆಯ ಕುರಿತಾಗಿ ಬೈಬಲ್ ಏನು ಹೇಳುತ್ತದೆಂಬುದನ್ನು ಆಲಿಸಿರಿ. [ಎಫೆಸ 6:4ನ್ನು ಓದಿರಿ.] ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬಿಸುವುದು ಹೆತ್ತವರ ಜವಾಬ್ದಾರಿಯಾಗಿದೆಯೆಂದು ಅದು ನಮಗೆ ಹೇಳುತ್ತದೆ.” ಜ್ಞಾನ ಪುಸ್ತಕದ 145ನೇ ಪುಟವನ್ನು ತೆರೆದು, ಪ್ಯಾರಗ್ರಾಫ್ 16ನ್ನು ಓದಿರಿ, ಮತ್ತು 147ನೇ ಪುಟದಲ್ಲಿರುವ ಚಿತ್ರಗಳ ಮೇಲೆ ಹೇಳಿಕೆಯನ್ನು ನೀಡಿರಿ. ಆ ಪುಸ್ತಕವು ಇಡೀ ಕುಟುಂಬದ ಅಭ್ಯಾಸಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ ಎಂಬುದನ್ನು ವಿವರಿಸಿರಿ. 146ನೇ ಪುಟದಲ್ಲಿರುವ 17 ಮತ್ತು 18ನೇ ಪ್ಯಾರಗ್ರಾಫ್ಗಳನ್ನು ಉಪಯೋಗಿಸುತ್ತಾ, ಅಂಥ ಒಂದು ಅಭ್ಯಾಸವನ್ನು ಕುಟುಂಬಗಳೊಂದಿಗೆ ನಾವು ಹೇಗೆ ನಿರ್ವಹಿಸುತ್ತೇವೆಂಬುದನ್ನು ಪ್ರತ್ಯಕ್ಷಾಭಿನಯಿಸಲು ಸಿದ್ಧರಾಗಿರಿ.
7 ಒಬ್ಬ ಆಸ್ಥೆಯುಳ್ಳ ಹೆತ್ತವರೊಂದಿಗೆ ಪ್ರಥಮ ಭೇಟಿಯಲ್ಲಿ ನೀವು ಅಭ್ಯಾಸವೊಂದನ್ನು ಪ್ರಾರಂಭಿಸಿದ್ದಲ್ಲಿ, ಹೀಗೆ ಹೇಳುವ ಮೂಲಕ ಪುನರ್ಭೇಟಿಯಲ್ಲಿ ಅಭ್ಯಾಸವನ್ನು ನೀವು ಮುಂದುವರಿಸಬಹುದು:
◼ “ಇಂದಿನ ಲೋಕವು ನಮ್ಮ ಎಳೆಯ ಮಕ್ಕಳ ಮುಂದೆ ಅನೇಕ ಪ್ರಲೋಭನೆಗಳನ್ನು ಇಡುತ್ತದೆ. ಇದು ಅವರು ಬೆಳೆದ ಹಾಗೆ ದೇವಭಯವುಳ್ಳವರಾಗಿ ಪರಿಣಮಿಸುವುದನ್ನೇ ಅವರಿಗೆ ಬಹಳ ಕಷ್ಟಕರವನ್ನಾಗಿ ಮಾಡುತ್ತದೆ. ನಮ್ಮ ಹಿಂದಿನ ಚರ್ಚೆಯಲ್ಲಿ, ನಾವು ಎರಡು ತತ್ತ್ವಗಳನ್ನು ಪ್ರತ್ಯೇಕಿಸಿದ್ದನ್ನು ನೀವು ಜ್ಞಾಪಿಸಿಕೊಳ್ಳಬಹುದು. ದೇವಭಕ್ತ ಹೆತ್ತವರೋಪಾದಿ, ನಾವು ನಮ್ಮ ಮಕ್ಕಳಿಗಾಗಿ ಉತ್ತಮ ಮಾದರಿಗಳನ್ನು ಇಡುವ ಅಗತ್ಯವಿದೆ ಮತ್ತು ಅವರಿಗಾಗಿ ನಾವು ನಮ್ಮ ಪ್ರೀತಿಯ ನಿರಂತರ ವ್ಯಕ್ತಪಡಿಸುವಿಕೆಗಳನ್ನು ಒದಗಿಸಬೇಕು. ಮಕ್ಕಳಿಗೆ ತಮ್ಮ ಹೆತ್ತವರಿಂದ ಅಗತ್ಯವಾಗಿರುವ ಮತ್ತೊಂದು ವಿಷಯದ ಕುರಿತು ಬೈಬಲು ಹೇಳುತ್ತದೆ.” ಜ್ಞಾನೋಕ್ತಿ 1:8ನ್ನು ಓದಿರಿ. ಜ್ಞಾನ ಪುಸ್ತಕದಲ್ಲಿನ 148ನೇ ಪುಟವನ್ನು ತಿರುಗಿಸಿ, 19-23 ಪ್ಯಾರಗ್ರಾಫ್ಗಳನ್ನು ಆವರಿಸುತ್ತಾ, ಅಭ್ಯಾಸವನ್ನು ಮುಂದುವರಿಸಿರಿ. ಅಧ್ಯಾಯ 1ರಿಂದ ಆರಂಭಿಸುತ್ತಾ, ಇಡೀ ಕುಟುಂಬದೊಂದಿಗೆ ಅಭ್ಯಾಸವನ್ನು ಮಾಡಲು ನೀವು ಪುನಃ ಹಿಂದಿರುಗುವಿರೆಂಬುದನ್ನು ಸೂಚಿಸಿರಿ.