“ಕಿವಿಗೊಡಲ್ಪಟ್ಟ ವಿಷಯವನ್ನು ನಂಬಿಕೆಯು ಹಿಂಬಾಲಿಸುತ್ತದೆ”
1 “ನಿತ್ಯಜೀವಕ್ಕಾಗಿ ಯುಕ್ತವಾದ ಮನಃಪ್ರವೃತ್ತಿ”ಯುಳ್ಳ ಯಾರಾದರೊಬ್ಬರನ್ನು ನಾವು ಕಂಡುಕೊಳ್ಳುವಾಗ, ಅವನು ಏನನ್ನು ಕೇಳಿಸಿಕೊಂಡಿದ್ದಾನೋ ಅದರಲ್ಲಿ ಆ ವ್ಯಕ್ತಿಯ ನಂಬಿಕೆಯನ್ನು ಬಲಪಡಿಸುವ ಅಗತ್ಯವಿದೆ. (ಅ. ಕೃ. 13:48, NW; ರೋಮಾ. 10:17) ಅದನ್ನು ಪೂರೈಸಲು, ಹೆಚ್ಚಿನ ಸಂಭಾಷಣೆಯನ್ನು ಮಾಡಲಿಕ್ಕೆ ಹಿಂದಿರುಗಿ ಹೋಗುವ ಮೂಲಕ, ನಾವು ಪತ್ರಿಕೆ ಮತ್ತು ಚಂದಾ ಕೊಡುಗೆಗಳನ್ನು ಅನುಸರಿಸಿಕೊಂಡು ಹೋಗಬೇಕು. ಪ್ರಥಮ ಭೇಟಿಯಲ್ಲಿ ಪತ್ರಿಕೆಗಳು ಮಾತ್ರ ಸ್ವೀಕರಿಸಲ್ಪಟ್ಟಲ್ಲಿ, ಪುನರ್ಭೇಟಿಯಲ್ಲಿ ಒಂದು ಚಂದಾವನ್ನು ನೀಡಸಾಧ್ಯವಿದೆ. ಹಾಗಿದ್ದರೂ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಲ್ಲಿ ಒಂದು ಅಭ್ಯಾಸವನ್ನು ಪ್ರಾರಂಭಿಸುವ ಗುರಿಯನ್ನು ಮನಸ್ಸಿನಲ್ಲಿಡಿರಿ. ಸಹಾಯಕರವಾಗಿ ಇರಬಹುದಾದ ಕೆಲವು ಸೂಚನೆಗಳು ಇಲ್ಲಿವೆ:
2 “ನಿತ್ಯತೆಯ ಅರಸನನ್ನು ಸ್ತುತಿಸಿರಿ!” ಎಂಬ ಲೇಖನವನ್ನು ನೀವು ಎಲ್ಲಿ ಚರ್ಚಿಸಿದಿರೋ ಅಲ್ಲಿ ಒಂದು ಪುನರ್ಭೇಟಿಯನ್ನು ಮಾಡುವಾಗ, ಈ ರೀತಿಯಲ್ಲಿ ನೀವು ಪ್ರಾರಂಭಿಸಸಾಧ್ಯವಿದೆ:
◼ “ಕಳೆದ ಬಾರಿ ನಾವು ಮಾತಾಡಿದಾಗ, ಸರ್ವಶಕ್ತನಾದ ದೇವರೊಬ್ಬನು ಇದ್ದಾನೆಂದು ರುಜುಪಡಿಸುವ ಕೆಲವೊಂದು ಭಾವಪರವಶಗೊಳಿಸುವ ಸಾಕ್ಷ್ಯವನ್ನು ನಾವು ಪುನರ್ವಿಮರ್ಶಿಸಿದೆವು. ಹಾಗಿದ್ದರೂ, ಕೇವಲ ಆತನ ಅಸ್ತಿತ್ವದ ಕುರಿತು ಅರಿವುಳ್ಳವರಾಗಿರುವುದು ಮಾತ್ರ ಸಾಕಾಗಿರುವುದಿಲ್ಲ. ಆತನ ಹೆಸರನ್ನು ತಿಳಿಯುವ ಅಗತ್ಯ ನಮಗಿದೆ. ನೀವು ದೇವರನ್ನು ಯಾವ ಹೆಸರಿನಿಂದ ಕರೆಯುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅನೇಕ ಜನರು ಆತನನ್ನು ಕೇವಲ ‘ಕರ್ತನು’ ಅಥವಾ ‘ದೇವರು’ ಎಂದು ಕರೆಯುತ್ತಾರೆ; ಇವು ವ್ಯಕ್ತಿಸಂಬಂಧವಿಲ್ಲದ ಬಿರುದುಗಳಾಗಿವೆ. ಇತರರು ಹೆಸರುಗಳ ವ್ಯಾಪಕವಾದ ವಿವಿಧತೆಯನ್ನು ಉಪಯೋಗಿಸುತ್ತಾರೆ. ಆತನು ಬೈಬಲಿನಲ್ಲಿ ಸ್ವತಃ ತನಗೆ ಯಾವ ಹೆಸರನ್ನು ನೀಡಿಕೊಂಡಿದ್ದಾನೆಂಬುದನ್ನು ಗಮನಿಸಿರಿ. [ಕೀರ್ತನೆ 83:18ನ್ನು ಓದಿರಿ.] ಈ ಪುಸ್ತಕದಲ್ಲಿ ವಿವರಿಸಲ್ಪಟ್ಟಿರುವಂತೆ, ಯೆಹೋವ ದೇವರ ಕುರಿತಾಗಿ ಇನ್ನೂ ಹೆಚ್ಚು ವಿಷಯವನ್ನು ನಮಗೆ ಬೈಬಲ್ ಹೇಳುತ್ತದೆ.” ಜ್ಞಾನ ಪುಸ್ತಕದ, ಪುಟ 29ರಲ್ಲಿರುವ ಚಿತ್ರವನ್ನು ತೋರಿಸಿ, ವಿವರಣೆಯ ಬರಹವನ್ನು ಓದಿರಿ. ಅಧ್ಯಾಯ 3ರಲ್ಲಿರುವ ಮೊದಲನೆಯ ಮೂರು ಪ್ಯಾರಗ್ರಾಫ್ಗಳನ್ನು ನೀವು ಚರ್ಚಿಸಿದ ನಂತರ, ನೀವು ಒಂದು ಅಭ್ಯಾಸವನ್ನು ಆರಂಭಿಸಿರುವಿರಿ!
3 “ಲೌಕಿಕ ಧರ್ಮವು ಅಂತ್ಯಗೊಳ್ಳುವುದಕ್ಕೆ ಕಾರಣ” ಎಂಬ ಲೇಖನವನ್ನು ನೀವು ಪರಿಗಣಿಸಿದವರಿಗಾಗಿ, ಹೀಗೆ ಹೇಳುವ ಮೂಲಕ ನೀವು ಆಸಕ್ತಿಯನ್ನು ಅನುಸರಿಸಿಕೊಂಡು ಹೋಗಲು ಬಯಸಬಹುದು:
◼ “ಲೇಖನವನ್ನು ಓದಿದ ಅನಂತರ, ಎಲ್ಲ ಧರ್ಮಗಳನ್ನು ನಾವು ಒಂದೇ ವಿಧದಲ್ಲಿ ವೀಕ್ಷಿಸಸಾಧ್ಯವಿಲ್ಲ ಎಂಬ ವಾಸ್ತವಾಂಶದಿಂದ ನೀವು ಪ್ರಭಾವಿತರಾಗಿರಬಹುದು. ಸತ್ಯ ಧರ್ಮ ಮತ್ತು ಸುಳ್ಳು ಧರ್ಮಗಳು—ಎರಡೂ—ಅಸ್ತಿತ್ವದಲ್ಲಿವೆ. ಇದು, ದೇವರು ಯಾರ ಆರಾಧನೆಯನ್ನು ಸ್ವೀಕರಿಸುತ್ತಾನೆ? ಎಂಬ ತರ್ಕಬದ್ಧವಾದ ಪ್ರಶ್ನೆಯನ್ನು ಎಬ್ಬಿಸುತ್ತದೆ. ಉತ್ತರವು ಯೇಸುವಿನಿಂದ ಒದಗಿಸಲ್ಪಟ್ಟಿತು ಮತ್ತು ಅದು ಈ ಪುಸ್ತಕದಲ್ಲಿ ಎತ್ತಿತೋರಿಸಲ್ಪಟ್ಟಿದೆ.” ಜ್ಞಾನ ಪುಸ್ತಕದಲ್ಲಿ 5ನೇ ಅಧ್ಯಾಯಕ್ಕೆ ತಿರುಗಿಸಿರಿ ಮತ್ತು ಯೋಹಾನ 4:23, 24ನ್ನು ಒಳಗೊಂಡು, ಪ್ಯಾರಗ್ರಾಫ್ 4ನ್ನು ಓದಿರಿ. ನಂತರ “ಒಂದು ಉಚಿತ ಮನೆ ಬೈಬಲ್ ಅಭ್ಯಾಸವನ್ನು ಸ್ವೀಕರಿಸಲು ನೀವು ಸಿದ್ಧಮನಸ್ಕರಾಗಿರುವಿರೋ?” ಎಂದು ಕೇಳಿರಿ. ಪ್ರತಿಕ್ರಿಯೆಯು ಸಕಾರಾತ್ಮಕವಾಗಿರುವುದಾದರೆ, 1ನೇ ಅಧ್ಯಾಯಕ್ಕೆ ತಿರುಗಿಸಿರಿ ಮತ್ತು ಅಭ್ಯಾಸವನ್ನು ಪ್ರಾರಂಭಿಸಿರಿ.
4 ಮೇ 8ರ “ಎಚ್ಚರ!” ಪತ್ರಿಕೆಯಲ್ಲಿ ಆಸಕ್ತಿಯು ತೋರಿಸಲ್ಪಟ್ಟಿರುವಲ್ಲಿ, ನೀವು ಹಿಂದಿರುಗಿ ಹೋಗುವಾಗ “ಜ್ಞಾನ” ಪುಸ್ತಕದಲ್ಲಿ ಒಂದು ಅಭ್ಯಾಸವನ್ನು ಪ್ರಾರಂಭಿಸಲು ಈ ಪ್ರಸ್ತಾವವನ್ನು ಪ್ರಯತ್ನಿಸಬಹುದು:
◼ “ಕಟ್ಟಕಡೆಗೆ ಯುದ್ಧರಹಿತವಾದ ಒಂದು ಲೋಕವನ್ನು ನೋಡುವುದಕ್ಕಾಗಿರುವ ನಮ್ಮ ಪ್ರತೀಕ್ಷೆಗಳ ಕುರಿತು ನಾವು ಸಂಭಾಷಿಸಿದ್ದೆವೆಂಬುದನ್ನು ನೀವು ಜ್ಞಾಪಿಸಿಕೊಳ್ಳಬಹುದು. ಅದು ನಿಜವಾಗಿಯೂ ಯಾವ ರೀತಿಯಲ್ಲಿ ಇರುವುದೆಂಬುದನ್ನು ಕಲ್ಪಿಸಿಕೊಳ್ಳುವುದು ಕಷ್ಟಕರ. ಅದರ ಕುರಿತಾದ ಒಬ್ಬ ಕಲಾವಿದನ ಕಲ್ಪನೆಯು ಇಲ್ಲಿದೆ. [ಜ್ಞಾನ ಪುಸ್ತಕದಲ್ಲಿನ 188-9 ಪುಟಗಳಲ್ಲಿರುವ ಚಿತ್ರವನ್ನು ತೋರಿಸಿರಿ.] ಈ ಪರಿಸರಗಳನ್ನು ಅನುಭವಿಸಲು ಶಕ್ತರಾಗಿರುವುದು ಸಂತೋಷಕರವಾಗಿರುವುದಿಲ್ಲವೋ? [4-5ನೆಯ ಪುಟಗಳಿಗೆ ತಿರುಗಿಸಿ, ಚಿತ್ರವನ್ನು ತೋರಿಸಿರಿ, ಮತ್ತು ರೇಖಾಚೌಕವನ್ನು ಓದಿರಿ.] ಈ ಪುಸ್ತಕದ ಶಿರೋನಾಮವು ಯೋಹಾನ 17:3ರಲ್ಲಿ ಕಂಡುಬರುವ ಯೇಸುವಿನ ಮಾತುಗಳಿಗೆ ತದ್ರೀತಿಯದ್ದಾಗಿದೆ. [ಓದಿರಿ.] ನೀವು ನನಗೆ ಅನುಮತಿಸುವುದಾದರೆ, ಆ ಜೀವರಕ್ಷಕ ಜ್ಞಾನವನ್ನು ಕಂಡುಕೊಳ್ಳಲಿಕ್ಕಾಗಿ ಈ ಪುಸ್ತಕವನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ನಾನು ಪ್ರತ್ಯಕ್ಷಾಭಿನಯಿಸಲು ಇಚ್ಛಿಸುತ್ತೇನೆ.” ಮನೆಯವನು ಸಿದ್ಧಮನಸ್ಕನಾಗಿರುವುದಾದರೆ, ಪ್ರಥಮ ಅಧ್ಯಾಯದಲ್ಲಿ ಅಭ್ಯಾಸವನ್ನು ಪ್ರಾರಂಭಿಸಿರಿ.
5 ನೀವು ಪ್ರಥಮವಾಗಿ ಭೇಟಿ ನೀಡಿದಾಗ ಕಾರ್ಯಮಗ್ನನಾಗಿದ್ದ ಒಬ್ಬ ವ್ಯಕ್ತಿಯನ್ನು ನೀವು ಸಂಪರ್ಕಿಸಿದ್ದಲ್ಲಿ, ನೀವು ಹಿಂದಿರುಗಿ ಹೋದಾಗ ಇದನ್ನು ಹೇಳಬಹುದು:
◼ “ನಾನು ಇತ್ತೀಚೆಗೆ ನಿಮ್ಮನ್ನು ಸಂದರ್ಶಿಸಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಗಳನ್ನು ಬಿಟ್ಟುಹೋಗಿದ್ದೆ. ಈ ನಿಯತಕಾಲಿಕ ಪತ್ರಿಕೆಗಳು ಜೀವದಾಯಕ ಜ್ಞಾನವನ್ನು ಒದಗಿಸುತ್ತವೆ, ಆದುದರಿಂದ ಅವುಗಳನ್ನು ನೀವು ಕ್ರಮವಾಗಿ ಪಡೆಯುವಂತೆ ನಾನು ಇಚ್ಛಿಸುತ್ತೇನೆ.” ನಂತರ ಒಂದು ಚಂದಾವನ್ನು ನೀಡಿರಿ. ಅಥವಾ, “ಬೈಬಲನ್ನು ಅರ್ಥಮಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯವಶ್ಯಕವೆಂದು ನನಗೆ ಅನಿಸುವುದರಿಂದ, ಅದನ್ನು ಮಾಡಲು ನಿಮಗೆ ಸಹಾಯಮಾಡುವ ಯಾವುದೋ ಒಂದು ವಿಷಯವನ್ನು ನಿಮಗೆ ತೋರಿಸಲು ನಾನು ಹಿಂದಿರುಗಿ ಬಂದೆ.” ಜ್ಞಾನ ಪುಸ್ತಕವನ್ನು ತೋರಿಸಿರಿ, ಮತ್ತು ಪುಟ 3ರಲ್ಲಿರುವ ಪರಿವಿಡಿಗೆ ಸೂಚಿಸಿರಿ. ಯಾವ ಅಧ್ಯಾಯವು ಅತ್ಯಂತ ಆಸಕ್ತಿಕರವಾದದ್ದಾಗಿ ತೋರುತ್ತದೆ ಎಂಬುದನ್ನು ಕೇಳಿ, ಅದಕ್ಕೆ ತಿರುಗಿಸಿರಿ ಮತ್ತು ಅಭ್ಯಾಸವನ್ನು ಪ್ರಾರಂಭಿಸಿರಿ.
6 ನಾವು ನಿತ್ಯಜೀವಕ್ಕೆ ನಡೆಸುವ ‘ನಂಬಿಕೆಯ ಬಾಗಿಲನ್ನು ಇತರರಿಗೆ ತೆರೆಯಲು’ ಸಮರ್ಥರಾಗಿರುವುದಾದರೆ, ನಮ್ಮ ಹರ್ಷವು ಮಹತ್ತರವಾಗಿರುವುದು.—ಅ. ಕೃ. 14:27, NW; ಯೋಹಾ. 17:3.