ಪ್ರಶ್ನಾ ರೇಖಾಚೌಕ
◼ ದೇವಪ್ರಭುತ್ವ ಶುಶ್ರೂಷಾ ಶಾಲೆಯ ಪುಸ್ತಕ ಭಂಡಾರದಲ್ಲಿ ಯಾವ ಪ್ರಕಾಶನಗಳನ್ನು ಇಡತಕ್ಕದ್ದು?
ದೇವರ ಜನರ ಪ್ರಯೋಜನಕ್ಕಾಗಿ ಹೇರಳವಾದ ಆತ್ಮಿಕ ಪ್ರಕಾಶನಗಳು ಒದಗಿಸಲ್ಪಟ್ಟಿವೆ. ಅನೇಕ ಪ್ರಚಾರಕರು ಈ ಎಲ್ಲಾ ಪ್ರಕಾಶನಗಳನ್ನು ವೈಯಕ್ತಿಕವಾಗಿ ಹೊಂದಿರದಿರುವುದರಿಂದ, ರಾಜ್ಯ ಸಭಾಗೃಹದಲ್ಲಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆಯ ಪುಸ್ತಕ ಭಂಡಾರವು, ಬೇರೆ ರೀತಿಯಲ್ಲಿ ಲಭ್ಯವಿಲ್ಲದೆ ಇರಬಹುದಾದ ಪ್ರಕಾಶನಗಳಲ್ಲಿ ಸಂಶೋಧನೆಯನ್ನು ಮಾಡಲು ಮಾಧ್ಯಮವನ್ನು ಒದಗಿಸುತ್ತದೆ. ಹೀಗಿರುವುದರಿಂದ, ಅದು ವಿವಿಧ ಬೈಬಲ್ ಭಾಷಾಂತರಗಳು, ಸೊಸೈಟಿಯ ಪ್ರಚಲಿತ ಪ್ರಕಾಶನಗಳು, ನಮ್ಮ ರಾಜ್ಯದ ಸೇವೆಯ ಪ್ರತಿಗಳು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬೌಂಡ್ ವಾಲ್ಯೂಮ್‌ಗಳು, ಮತ್ತು ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸಸ್‌ಗಳೊಂದಿಗೆ ಚೆನ್ನಾಗಿ ಸಜ್ಜಿತವಾಗಿರತಕ್ಕದ್ದು. ಇನ್ನೂ ಹೆಚ್ಚಾಗಿ, ಒಂದು ಒಳ್ಳೆಯ ಆಧುನಿಕ ಶಬ್ದಕೋಶವು ಕೂಡಿಸಲ್ಪಡಬೇಕು. ಲಭ್ಯವಿರುವಲ್ಲಿ, ವಿಶ್ವಕೋಶಗಳು, ಭೂಪಟಗಳ ಪುಸ್ತಕಗಳು, ಅಥವಾ ವ್ಯಾಕರಣ ಮತ್ತು ಇತಿಹಾಸದ ಕುರಿತಾದ ರೆಫೆರನ್ಸ್ ಪುಸ್ತಕಗಳು ಉಪಯುಕ್ತವಾಗಿರಬಹುದು. ಆದಾಗಲೂ, ನಮ್ಮ ಮುಖ್ಯ ಗಮನವು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನಿಂದ ಒದಗಿಸಲ್ಪಟ್ಟ ಪ್ರಕಾಶನಗಳ ಮೇಲಿರಬೇಕು.—ಮತ್ತಾ. 24:45.
ಕೆಲವೊಂದು ವಿದ್ಯಮಾನಗಳಲ್ಲಿ, ಸಂದೇಹಾಸ್ಪದ ಪ್ರಕೃತಿಯ ಪುಸ್ತಕಗಳು ದೇವಪ್ರಭುತ್ವ ಶುಶ್ರೂಷಾ ಶಾಲೆಯ ಪುಸ್ತಕ ಭಂಡಾರದಲ್ಲಿ ಇಡಲ್ಪಟ್ಟಿವೆಯೆಂಬುದು ವರದಿಸಲ್ಪಟ್ಟಿದೆ. ಕಾಲ್ಪನಿಕ ವಿಷಯ, ಉಚ್ಚ ಟೀಕೆಯನ್ನು ಎತ್ತಿಹೇಳುವ ಬೈಬಲ್ ವ್ಯಾಖ್ಯಾನಗಳು, ಅಥವಾ ತತ್ತ್ವಜ್ಞಾನ ಇಲ್ಲವೇ ಪ್ರೇತವ್ಯವಹಾರದ ಕುರಿತಾದ ಪುಸ್ತಕಗಳನ್ನು ಸೇರಿಸುವುದು ಸೂಕ್ತವಲ್ಲ. ದೇವಪ್ರಭುತ್ವ ಶುಶ್ರೂಷಾ ಶಾಲೆಯ ಪುಸ್ತಕ ಭಂಡಾರದಲ್ಲಿ, ಅದನ್ನು ಉಪಯೋಗಿಸುವವರು ನಿರಂತರ ಆತ್ಮಿಕ ಪ್ರಗತಿಯನ್ನು ಮಾಡುವಂತೆ ಶಕ್ತಗೊಳಿಸುವ ವಿಷಯ ಮಾತ್ರವೇ ಒಳಗೊಂಡಿರಬೇಕು.—1 ತಿಮೊ. 4:15.
ಶಾಲಾ ಮೇಲ್ವಿಚಾರಕನು ಪುಸ್ತಕ ಭಂಡಾರವನ್ನು ನೋಡಿಕೊಳ್ಳಲು ಜವಾಬ್ದಾರನಾಗಿದ್ದಾನಾದರೂ, ಅದನ್ನು ನೋಡಿಕೊಳ್ಳಲು ಇನ್ನೊಬ್ಬ ಸಹೋದರನು ನೇಮಿಸಲ್ಪಡಸಾಧ್ಯವಿದೆ. ಹೊಸ ಪ್ರಕಾಶನಗಳು ಲಭ್ಯವಾದ ಕೂಡಲೇ ಅವುಗಳನ್ನು ಕೂಡಿಸುತ್ತಾ, ಪುಸ್ತಕ ಭಂಡಾರವು ಪ್ರಚಲಿತವಾಗಿ ಇಡಲ್ಪಟ್ಟಿರುವಂತೆ ಅವನು ನೋಡಿಕೊಳ್ಳಬೇಕು. ಒಳಆವರಣದ ಮೇಲೆ ಪ್ರತಿಯೊಂದು ಪುಸ್ತಕವು, ಅದು ಯಾವ ಸಭೆಗೆ ಸೇರಿದೆಯೊ ಆ ಸಭೆಯ ಹೆಸರಿನೊಂದಿಗೆ ಸ್ಪಷ್ಟವಾಗಿ ಗುರುತಿಸಲ್ಪಡಬೇಕು. ಯಾವುದೇ ಪುಸ್ತಕಗಳಿಗೆ ದುರಸ್ತಿ ಮಾಡುವ ಅಥವಾ ಅವುಗಳನ್ನು ಬದಲಿ ಮಾಡುವ ಅಗತ್ಯವಿದೆಯೊ ಎಂಬುದನ್ನು ನೋಡಲು ವಾರ್ಷಿಕವಾಗಿ ಪುಸ್ತಕಗಳನ್ನು ಪರಿಶೀಲಿಸಬೇಕು.
ಪುಸ್ತಕ ಭಂಡಾರವನ್ನು ನೋಡಿಕೊಳ್ಳುವುದರಲ್ಲಿ ಎಲ್ಲರೂ ಸಹಕರಿಸಸಾಧ್ಯವಿದೆ. ಪುಸ್ತಕಗಳನ್ನು ನಿರ್ವಹಿಸುವಾಗ ಮತ್ತು ಉಪಯೋಗಿಸುವಾಗ ಜಾಗ್ರತೆಯು ವಹಿಸಲ್ಪಡಬೇಕು. ಮಕ್ಕಳಿಗೆ ಅವುಗಳೊಂದಿಗೆ ಆಡುವಂತೆ ಬಿಡಬಾರದು, ಮತ್ತು ಯಾರೂ ಅವುಗಳಲ್ಲಿ ಬರೆಯಬಾರದು ಅಥವಾ ಅಡಿಗೆರೆ ಹಾಕಬಾರದು. ಪುಸ್ತಕಗಳನ್ನು ರಾಜ್ಯ ಸಭಾಗೃಹದಿಂದ ಕೊಂಡೊಯ್ಯಬಾರದೆಂಬ ಒಂದು ಜ್ಞಾಪಕದೋಪಾದಿ ಒಂದು ಚೊಕ್ಕಟ್ಟವಾದ ಸೂಚನೆಯು ಪ್ರದರ್ಶಿಸಲ್ಪಡಬಹುದು.
ಹೊಸ ಸಭೆಗಳು ಸತತವಾಗಿ ರಚಿಸಲ್ಪಡುವುದರಿಂದ, ಅನೇಕ ಪುಸ್ತಕ ಭಂಡಾರಗಳು ಸೀಮಿತ ಗಾತ್ರದ್ದಾಗಿರುವುದು ಸಂಭಾವ್ಯ. ನಮ್ಮ ಹೆಚ್ಚು ಹಳೆಯ ಪ್ರಕಾಶನಗಳಿರುವ ಕೆಲವು ಪ್ರಚಾರಕರು ಅವುಗಳನ್ನು ಸಭೆಗೆ ದಾನಮಾಡುವುದನ್ನು ಪರಿಗಣಿಸಬಹುದು. ಕಾವಲಿನಬುರುಜು ಪತ್ರಿಕೆಯ ಬೌಂಡ್ ವಾಲ್ಯೂಮ್‌ಗಳ ಪುರ್ನಮುದ್ರಣಗಳು ಲಭ್ಯವಿರುವಲ್ಲಿ ಮತ್ತು ಲಭ್ಯವಿರುವ ಸಮಯದಲ್ಲಿ ಹಿರಿಯರು ಅವುಗಳನ್ನು ಆರ್ಡರ್ ಮಾಡಲು ಬಯಸಬಹುದು. ಈ ರೀತಿಗಳಲ್ಲಿ, ದೇವಪ್ರಭುತ್ವ ಶುಶ್ರೂಷಾ ಶಾಲೆಯ ಪುಸ್ತಕ ಭಂಡಾರವು, ಜ್ಞಾನ, ವಿವೇಕ ಮತ್ತು ತಿಳಿವಳಿಕೆಯನ್ನು ಕೊಡುವ ದೇವರ ವಾಕ್ಯದ ಗುಪ್ತ ನಿಧಿಗಳನ್ನು ಅನಾವರಣಗೊಳಿಸಲು ಎಲ್ಲರಿಗೆ ಸಹಾಯ ಮಾಡುವುದರಲ್ಲಿ ತೀರ ಉಪಯುಕ್ತವಾಗಿ ಪರಿಣಮಿಸುವುದು.—ಜ್ಞಾನೋ. 2:4-6.