ನಾವು ಕುಟುಂಬ ಸಂತೋಷ ಪುಸ್ತಕವನ್ನು ಅಭ್ಯಾಸಿಸುವೆವು
ಅಕ್ಟೋಬರ್ 6, 1997ರ ವಾರದಿಂದ ಆರಂಭಿಸಿ, ಸಭಾ ಪುಸ್ತಕ ಅಭ್ಯಾಸದಲ್ಲಿ ನಾವು ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕವನ್ನು ಪರಿಗಣಿಸಲಿರುವೆವು ಎಂಬುದನ್ನು ತಿಳಿಯಲು ನೀವು ಸಂತೋಷಿಸುವಿರಿ. ಒಂದು ಸಂತೋಷದ ಕುಟುಂಬ ಜೀವಿತಕ್ಕಾಗಿರುವ ಈ ವ್ಯಾವಹಾರಿಕ ಶಾಸ್ತ್ರೀಯ ಮಾರ್ಗದರ್ಶಿಪುಸ್ತಕದ ಈ ಗುಂಪು ಅಭ್ಯಾಸವನ್ನು ಯಾರೊಬ್ಬರೂ ತಪ್ಪಿಸಿಕೊಳ್ಳಲು ಬಯಸದಿರುವರು. ಅಭ್ಯಾಸದ ಶೆಡ್ಯೂಲ್, ಪುಸ್ತಕದಲ್ಲಿರುವ ಪ್ರತಿಯೊಂದು ಪ್ಯಾರಗ್ರಾಫ್ ಮತ್ತು ಬೈಬಲ್ ವಚನದ ಕೂಲಂಕಷ ಪರೀಕ್ಷಣೆಗೆ ಅವಕಾಶವನ್ನು ಕೊಡುವುದು.
ಮೊದಲನೆಯ ಇಡೀ ಅಧ್ಯಾಯವು ಅಭ್ಯಾಸದ ಪ್ರಥಮ ವಾರದಲ್ಲಿ ಪರಿಗಣಿಸಲ್ಪಡುವುದು, ಯಾಕಂದರೆ ಅದರಲ್ಲಿ ಉದ್ಧರಿಸಲ್ಪಟ್ಟಿರದ ಶಾಸ್ತ್ರವಚನಗಳು ಕೆಲವೇ ಇವೆ. ಇದೇ ಕಾರಣಕ್ಕಾಗಿ, ಅಧ್ಯಾಯ 15ನ್ನು ಒಂದೇ ಅಭ್ಯಾಸಾವಧಿಯಲ್ಲಿ ಪರಿಗಣಿಸಲಾಗುವುದು. ಆದಾಗಲೂ, ಇತರ ಎಲ್ಲ ಅಧ್ಯಾಯಗಳು ಎರಡು ಭಾಗಗಳಾಗಿ ವಿಭಜಿಸಲ್ಪಡುವವು. ಪ್ರತಿ ವಾರ ಒಂದು ಅಧ್ಯಾಯದ ಸುಮಾರು ಅರ್ಧದಷ್ಟು ಭಾಗವು ಪರಿಗಣಿಸಲ್ಪಡುವುದು. ಹೀಗೆ, ಪ್ರತಿಯೊಂದು ಪ್ಯಾರಗ್ರಾಫ್ನಲ್ಲಿ ಉಲ್ಲೇಖಿಸಲ್ಪಟ್ಟಿರುವ ಎಲ್ಲ ವಚನಗಳನ್ನು ಓದಿ, ಚರ್ಚಿಸಲು ಹಾಗೂ ಉದ್ಧರಿಸಲ್ಪಟ್ಟಿರುವ ಎಲ್ಲ ಶಾಸ್ತ್ರವಚನಗಳ ಅನ್ವಯವನ್ನು ಜಾಗರೂಕತೆಯಿಂದ ಪರೀಕ್ಷಿಸಲು ಸಾಕಷ್ಟು ಸಮಯವಿರುವುದು.
ಅಭ್ಯಾಸದ ಒಂದು ಪ್ರಾಮುಖ್ಯ ವೈಶಿಷ್ಟ್ಯವು, ಪ್ರತಿಯೊಂದು ಅಧ್ಯಾಯದ ಸಮಾಪ್ತಿಯಲ್ಲಿರುವ ಕಲಿಸುವಿಕೆಯ ರೇಖಾಚೌಕದಲ್ಲಿರುವ ವಸ್ತುವಿಷಯದ ಚರ್ಚೆಯಾಗಿರುವುದು. ಹೀಗಿರುವುದರಿಂದ, ರೇಖಾಚೌಕದಲ್ಲಿರುವ ಪ್ರಶ್ನೆಗಳನ್ನು ಮತ್ತು ಉಲ್ಲೇಖಿಸಲ್ಪಟ್ಟಿರುವ ವಚನಗಳನ್ನು ಪರಿಗಣಿಸಲಿಕ್ಕಾಗಿ ಬೇಕಾದಷ್ಟು ಸಮಯವು ನಿಗದಿಪಡಿಸಲ್ಪಡಬೇಕು.
ಸಭಾ ಪುಸ್ತಕ ಅಭ್ಯಾಸ ನಿರ್ವಾಹಕರು, ಅಭ್ಯಾಸದ ತಮ್ಮ ತಯಾರಿಗೆ ವಿಶೇಷ ಗಮನವನ್ನು ಕೊಡಲು ಮತ್ತು ತಮ್ಮ ಗುಂಪಿಗೆ ನೇಮಿಸಲ್ಪಟ್ಟವರೆಲ್ಲರನ್ನೂ—ಹೊಸಬರನ್ನು ಸೇರಿಸಿ—ಚೆನ್ನಾಗಿ ತಯಾರಿಸಿ, ಕ್ರಮವಾಗಿ ಹಾಜರಾಗಿ, ಭಾಗವಹಿಸಲು ಉತ್ತೇಜಿಸುವಂತೆ ಪ್ರೇರೇಪಿಸಲಾಗಿದೆ.—om 74-6.