ಹೊಸ ಸರ್ಕಿಟ್ ಸಮ್ಮೇಳನದ ಕಾರ್ಯಕ್ರಮ
ಮುಂದಿನ ವರ್ಷದ ಆದಿಭಾಗದಲ್ಲಿ ಪ್ರಾರಂಭವಾಗುವ ಎರಡು ದಿನದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮದ ಮುಖ್ಯಶೀರ್ಷಿಕೆಯು, “ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವುದು” ಎಂದಾಗಿದೆ. (2 ಪೇತ್ರ 3:12) ನಮ್ಮ ತುರ್ತಿನ ಪ್ರಜ್ಞೆಯನ್ನು ಕೆರಳಿಸಲಿಕ್ಕಾಗಿ ಅದು ರಚಿಸಲ್ಪಟ್ಟಿದೆ. ಭೂನಿವಾಸಿಗಳು ಯೆಹೋವನ ನ್ಯಾಯತೀರ್ಪುಗಳನ್ನು ಬೇಗನೆ ಅನುಭವಿಸುವರು. “ಸರ್ವಶಕ್ತನಾದ ದೇವರ ಮಹಾ ದಿನ”ವನ್ನು ಯಾರು ಪಾರಾಗುವರು? ಆತ್ಮಿಕವಾಗಿ ಎಚ್ಚರವಾಗಿ ಉಳಿಯುವವರು ಮತ್ತು “ನಡವಳಿಕೆಯ ಪವಿತ್ರ ಕೃತ್ಯಗಳಲ್ಲಿ ಮತ್ತು ದಿವ್ಯಭಕ್ತಿಯ ಕಾರ್ಯಗಳ” ಜೀವನ ಶೈಲಿಯನ್ನು ಸ್ಥಾಪಿಸಿಕೊಳ್ಳುವವರು ಮಾತ್ರ ಪಾರಾಗುವರು.—ಪ್ರಕ. 16:14; 2 ಪೇತ್ರ 3:11.
ಯೆಹೋವನ ದಿನವನ್ನು ಪಾರಾಗಲು ಒಬ್ಬ ವ್ಯಕ್ತಿಗೆ ದೀಕ್ಷಾಸ್ನಾನವು ಅತ್ಯಾವಶ್ಯಕವಾಗಿದೆ. (1 ಪೇತ್ರ 3:21) ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸುವ ಪ್ರಚಾರಕರು ಅಧ್ಯಕ್ಷ ಮೇಲ್ವಿಚಾರಕನಿಗೆ ತಿಳಿಸಬೇಕು. ಅವನು ಬೇಕಾದ ಏರ್ಪಾಡುಗಳನ್ನು ಮಾಡುವನು.
“ನಾವು ಆಗಿರಬೇಕಾದ ರೀತಿಯ ವ್ಯಕ್ತಿಗಳಾಗಿರುವುದು” ಎಂಬ ನಾಲ್ಕು ಭಾಗದ ಭಾಷಣಮಾಲೆಯು, ಯೆಹೋವನ ದಿನದ ಪ್ರತ್ಯಕ್ಷತೆಯನ್ನು ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವುದರಲ್ಲಿ ಯಾವ ಕ್ರಿಯೆಗಳು ಒಳಗೊಂಡಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುವುದು. “ಯೆಹೋವನ ದಿನವು ಸಮೀಪಿಸಿದಂತೆ ವಿವೇಕಿಗಳಾಗಿ ನಡೆದುಕೊಳ್ಳಿರಿ” ಎಂಬ ಸಾರ್ವಜನಿಕ ಭಾಷಣವು, ಪಾರಾಗಿ ಉಳಿಯಲಿಕ್ಕಾಗಿ ‘ಯೆಹೋವನನ್ನು, ನೀತಿಯನ್ನು, ಮತ್ತು ದೈನ್ಯವನ್ನು ಹುಡುಕುವುದರ’ ಅರ್ಥವೇನೆಂಬುದನ್ನು ವಿವರಿಸುವುದು.—ಚೆಫ. 2:3.
ಸರ್ಕಿಟ್ ಸಮ್ಮೇಳನವು ಸಂಚರಣ ಮೇಲ್ವಿಚಾರಕರಿಂದ ಕೊಡಲ್ಪಡುವ, “ನಿಮ್ಮ ಜೀವನವು ಸತ್ಯದ ಸುತ್ತಲೂ ಕೇಂದ್ರೀಕೃತವಾಗಿರುತ್ತದೊ?” ಮತ್ತು “ಯೆಹೋವನ ದಿನವನ್ನು ಮನಸ್ಸಿನಲ್ಲಿಟ್ಟುಕೊಂಡು ಭವಿಷ್ಯತ್ತಿಗಾಗಿ ಯೋಜಿಸುವುದು” ಎಂಬ ಶೀರ್ಷಿಕೆಯ ಎರಡು ಪ್ರಚೋದಕ ಭಾಷಣಗಳಿಂದ ಕೊನೆಗೊಳ್ಳುವುದು. ಈ ಭಾಷಣಗಳು ನಮ್ಮ ಜೀವಿತವನ್ನು ಪರೀಕ್ಷಿಸಿನೋಡಿ, ಬೇಕಾದ ಯಾವುದೇ ಅಳವಡಿಸುವಿಕೆಗಳನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸುವವು. ಯೆಹೋವನ ದಿನವು ಹತ್ತಿರವಿದೆ ಎಂಬುದನ್ನು ಬೈಬಲ್ ಪ್ರವಾದನೆ ಮತ್ತು ಲೋಕದ ಘಟನೆಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಈ ಸಮ್ಮೇಳನದ ಕಾರ್ಯಕ್ರಮವು, ‘ಸ್ವಸ್ಥಚಿತ್ತರಾಗಿದ್ದು, ಎಚ್ಚರವಾಗಿರು’ವಂತೆ ನಮ್ಮನ್ನು ಉತ್ತೇಜಿಸುವುದು. (1 ಪೇತ್ರ 5:8) ಎರಡೂ ದಿನಗಳಂದು ಹಾಜರಿರಲು ನಿಶ್ಚಿತ ಯೋಜನೆಗಳನ್ನು ಮಾಡಿರಿ.