ಬೈಬಲು—ಸಕಲ ಜನರಿಗಾಗಿರುವ ದೇವರ ಮಾರ್ಗದರ್ಶಿ
1 ದೇವರ ವಾಕ್ಯವನ್ನು ಭೂಮಿಯ ಜನಸಂಖ್ಯೆಯಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚಿನವರಿಗೆ ಲಭ್ಯಗೊಳಿಸುತ್ತಾ, ಸುಮಾರು 400 ಕೋಟಿ ಬೈಬಲುಗಳು, 2,100ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಮತ್ತು ಉಪಭಾಷೆಗಳಲ್ಲಿ ಮುದ್ರಿಸಲ್ಪಟ್ಟಿವೆ. ಆದರೂ, ಈ ಲೋಕದಲ್ಲಿ “ಯೆಹೋವನ ಮಾತುಗಳ ಆಲಿಸುವಿಕೆಗೆ” (NW) ಕ್ಷಾಮವಿದೆ. (ಆಮೋಸ 8:11) ಬೈಬಲಿನ ಒಂದು ಪ್ರತಿಯಿರುವ ಅನೇಕ ಜನರು, ಅದನ್ನು ಓದುವುದಿಲ್ಲ ಇಲ್ಲವೆ ಅದರಲ್ಲಿ ಅಡಕವಾಗಿರುವ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಬೈಬಲನ್ನು ತಮ್ಮ ಜೀವನದಲ್ಲಿ ಒಂದು ಪ್ರಾಯೋಗಿಕ ಮಾರ್ಗದರ್ಶಿಯಾಗಿ ಉಪಯೋಗಿಸುವಂತೆ ನಾವು ಅವರನ್ನು ಹೇಗೆ ಪ್ರೇರಿಸಸಾಧ್ಯವಿದೆ?
2 ಡಿಸೆಂಬರ್ ತಿಂಗಳಿನಲ್ಲಿ ನಾವು, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ, ಬೈಬಲ್ ಕಥೆಗಳ ನನ್ನ ಪುಸ್ತಕ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕಗಳು, ಇಲ್ಲವೆ ಜುಲೈ ತಿಂಗಳಿನ ನಮ್ಮ ರಾಜ್ಯದ ಸೇವೆಯಲ್ಲಿ ಪಟ್ಟಿಮಾಡಲಾಗಿರುವ ವಿಶೇಷ ದರದ ಪುಸ್ತಕಗಳಲ್ಲಿ ಯಾವುದಾದರೊಂದನ್ನು ನೀಡುವೆವು. ಆಸಕ್ತಿಯು ಕಂಡುಕೊಳ್ಳಲ್ಪಡುವಲ್ಲಿ, ಕಳೆದ 47 ವರ್ಷಗಳಿಂದ ನಮಗೆ ಪ್ರಯೋಜನ ತಂದಿರುವ ಬೈಬಲ್ ಭಾಷಾಂತರ—ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್—ವನ್ನೂ ನಾವು ನೀಡಬಹುದು. ಅದರ ಸ್ಪಷ್ಟ, ಆಧುನಿಕ ಭಾಷೆಯನ್ನು ಉದಾಹರಣೆಗಳಿಂದ ಸ್ಪಷ್ಟಪಡಿಸುವ ಮೂಲಕ ಇದನ್ನು ಮಾಡಸಾಧ್ಯವಿದೆ. (“ಆಲ್ ಸ್ಕ್ರಿಪ್ಚರ್” ಪುಸ್ತಕ, ಪುಟ 328, ಪ್ಯಾರಗ್ರಾಫ್ 6ನ್ನು ನೋಡಿರಿ.) ಬೈಬಲನ್ನು ಸಕಲ ಜನರಿಗಾಗಿರುವ ದೇವರ ಮಾರ್ಗದರ್ಶಿಯಾಗಿ ಸ್ವೀಕರಿಸುವಂತೆ ಇತರರಿಗೆ ಅತ್ಯುತ್ಸಾಹದಿಂದ ಸಹಾಯಮಾಡುವ ಮೂಲಕ, ಯೆಹೋವನಿಂದ ಬಂದಿರುವ ಈ ಕೊಡುಗೆಗಾಗಿ ನಾವು ನಮ್ಮ ಆಳವಾದ ಗಣ್ಯತೆಯನ್ನು ಪ್ರದರ್ಶಿಸುವೆವು.
3 “ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ” ಎಂಬ ಕಿರುಹೊತ್ತಗೆಯನ್ನು ಉಪಯೋಗಿಸುವ ಮೂಲಕ, ಒಂದು ನಿರೂಪಣೆಯನ್ನು ನೀವು ಪ್ರಾರಂಭಿಸಸಾಧ್ಯವಿದೆ. ನೀವು ಹೀಗೆ ಹೇಳಬಹುದು:
◼ “ಬೈಬಲು ಲೋಕದ ಜನಸಂಖ್ಯೆಯಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚಿನ ಜನರಿಗೆ ಲಭ್ಯವಾಗಿದೆಯಾದರೂ, ಕೊಂಚ ಜನರು ಅದನ್ನು ಕ್ರಮವಾಗಿ ಓದುತ್ತಾರೆ. ಕಾರಣವೇನೆಂದು ನೀವು ನೆನಸುತ್ತೀರಿ?” 2 ತಿಮೊಥೆಯ 3:16ರೊಂದಿಗೆ, ಕಿರುಹೊತ್ತಗೆಯ ಮೊದಲಿನ ಎರಡು ಪ್ಯಾರಗ್ರಾಫ್ಗಳನ್ನು ಓದಿರಿ. ಮೇಲೆ ಉಲ್ಲೇಖಿಸಲ್ಪಟ್ಟ ಪುಸ್ತಕಗಳಲ್ಲಿ ಯಾವುದಾದರೊಂದು ಪುಸ್ತಕದಿಂದ ಒಂದು ಸೂಕ್ತವಾದ ಅಂಶವನ್ನು ಎತ್ತಿತೋರಿಸಿ, ಆ ಪುಸ್ತಕವನ್ನು ನೀಡಿರಿ. ಅದು ನಿರಾಕರಿಸಲ್ಪಟ್ಟಲ್ಲಿ, ಕಿರುಹೊತ್ತಗೆಯ ಉಳಿದ ಭಾಗವನ್ನು ಓದುವಂತೆ ಮನೆಯವನಲ್ಲಿ ಕೇಳಿಕೊಳ್ಳಿ. “ಭವಿಷ್ಯತ್ತನ್ನು ಮುಂತಿಳಿಸುವದು” ಎಂಬ ಕೊನೆಯ ಉಪಶೀರ್ಷಿಕೆಯನ್ನು ಎತ್ತಿತೋರಿಸಿರಿ.
4 “ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ” ಎಂಬ ಕಿರುಹೊತ್ತಗೆಯನ್ನು ನೀವು ಬಿಟ್ಟುಬಂದ ಜನರಲ್ಲಿಗೆ ಹಿಂದಿರುಗುವಾಗ, ಇದನ್ನು ನೀವು ಪ್ರಯತ್ನಿಸಬಹುದು:
◼ ನಿಮ್ಮ ಪರಿಚಯವನ್ನು ಮತ್ತೆ ಮಾಡಿಕೊಂಡ ಬಳಿಕ, ಕಿರುಹೊತ್ತಗೆಯ ಕೊನೆಯ ಎರಡು ಪ್ಯಾರಗ್ರಾಫ್ಗಳನ್ನು ಓದಿರಿ. ಭೂಮಿಯ ಮೇಲೆ ಸದಾಕಾಲ ಜೀವಿಸುವ ಸಾಧ್ಯತೆಯ ಕುರಿತು ಮನೆಯವನು ಎಂದಾದರೂ ಯೋಚಿಸಿದ್ದಾನೊ ಎಂದು ಕೇಳಿರಿ. ಅವನು ಪ್ರತ್ಯುತ್ತರಿಸಿದ ಮೇಲೆ, ಹೀಗೆ ಹೇಳಿ: “ಬೈಬಲಿನಲ್ಲಿರುವ ಎಲ್ಲ ಪ್ರವಾದನೆಗಳು—ದೇವರ ಆವಶ್ಯಕತೆಗಳಿಗೆ ಹೊಂದಿಕೊಳ್ಳುವ ಸಕಲ ಜನರಿಗಾಗಿರುವ ಒಂದು ಅದ್ಭುತಕರ ಭವಿಷ್ಯತ್ತನ್ನು ಮುಂತಿಳಿಸುವ ಪ್ರವಾದನೆಗಳನ್ನೂ ಸೇರಿಸಿ—ನೆರವೇರುವವು ಎಂಬ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ಖಚಿತರಾಗಿದ್ದಾರೆ.” ಅಪೇಕ್ಷಿಸು ಬ್ರೋಷರಿನಲ್ಲಿ 13ನೆಯ ಪುಟದಲ್ಲಿರುವ ದೃಷ್ಟಾಂತವನ್ನು ತೋರಿಸಿ, 5ನೆಯ ಪಾಠಕ್ಕೆ ತಿರುಗಿಸಿ, ದಾಖಲಿತ ಪ್ರಶ್ನೆಗಳಿಗೆ ನೀಡಲ್ಪಟ್ಟ ಉತ್ತರಗಳನ್ನು ಚರ್ಚಿಸಲು ನೀವು ಸಿದ್ಧರಾಗಿದ್ದೀರೆಂದು ಹೇಳಿ, ಹೀಗೆ ಒಂದು ಅಧ್ಯಯನವನ್ನು ಆರಂಭಿಸಿರಿ.
5 ಧಾರ್ಮಿಕ ಪ್ರವೃತ್ತಿಯುಳ್ಳ ಜನರಿರುವ ಟೆರಿಟೊರಿಗಳಲ್ಲಿ, ನೀವು ಈ ಆರಂಭಿಕ ಪ್ರಸ್ತಾವವನ್ನು ಪ್ರಯತ್ನಿಸಬಹುದು:
◼ “ಜನರು ಬೈಬಲಿಗಾಗಿ ಹೆಚ್ಚಿನ ಗೌರವವನ್ನು ತೋರಿಸುವಂತೆ ನಾವು ಉತ್ತೇಜಿಸುತ್ತಾ ಇದ್ದೇವೆ. ಅನೇಕ ಕುಟುಂಬಗಳಲ್ಲಿ ಒಂದು ಬೈಬಲಿದೆಯಾದರೂ, ಅವರು ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಅದನ್ನು ಪರಾಮರ್ಶಿಸುವುದೇ ವಿರಳ. ನೀವು ಇದನ್ನು ಗಮನಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲು ಹಳೆಯಕಾಲದ್ದೆಂದು ಅವರು ಬಹುಶಃ ನಂಬುತ್ತಾರೆ. ಈ ಪುಸ್ತಕವು, (ತಿಂಗಳಿಗಾಗಿರುವ ನೀಡಿಕೆಯಲ್ಲಿ ಯಾವುದಾದರೊಂದು) ಬೈಬಲು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದೆ ಮತ್ತು ಅದು ಇಂದಿನ ಜರೂರಿಯ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಒದಗಿಸುತ್ತದೆ ಎಂಬುದಕ್ಕೆ ಮನಗಾಣಿಸುವ ಪುರಾವೆಯನ್ನು ನೀಡುತ್ತದೆ.” ಪುಸ್ತಕದಿಂದ ಕೆಲವೊಂದು ಅಂಶಗಳನ್ನು ಎತ್ತಿತೋರಿಸಿ, ಅನಂತರ ಅದನ್ನು ನೀಡಿರಿ.
6 ಪುಸ್ತಕ ನೀಡಿದ್ದಲ್ಲಿ ಪುನಃ ಸಂದರ್ಶಿಸುವಾಗ, ನೀವು ಹೀಗೆ ಹೇಳಬಹುದು:
◼ “ನಾನು ಕಳೆದ ಸಲ ನಿಮ್ಮನ್ನು ಸಂದರ್ಶಿಸಿದಾಗ, ಬೈಬಲು ಇಂದಿನ ಜಟಿಲ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಸಹಾಯಮಾಡುತ್ತದೆ ಎಂಬುದನ್ನು ನಾವು ಚರ್ಚಿಸಿದೆವು. ಯಾರು ಅದನ್ನು ದೇವರ ವಾಕ್ಯವೆಂದು ಸ್ವೀಕರಿಸಿದ್ದಾರೊ, ಅವರು ಹೆಚ್ಚು ಸಂತುಷ್ಟವೂ ಸಂತೃಪ್ತಿಕರವೂ ಆದ ಜೀವಿತಗಳನ್ನು ನಡೆಸುವಂತೆ ಸಹಾಯ ಮಾಡಲ್ಪಟ್ಟಿದ್ದಾರೆ. ನಾನು ನಿಮ್ಮಲ್ಲಿ ಬಿಟ್ಟುಹೋದ ಪುಸ್ತಕದಲ್ಲಿ ವಿವರಿಸಲ್ಪಟ್ಟಿರುವ ಪ್ರಾಯೋಗಿಕ ಬೈಬಲ್ ಮೂಲತತ್ವಗಳಲ್ಲಿ ಒಂದನ್ನು ನಿಮಗೆ ತೋರಿಸಲು ಇಷ್ಟಪಡುತ್ತೇನೆ.” ನೀವು ನೀಡಿರುವ ಪುಸ್ತಕದಲ್ಲಿ ಕಂಡುಕೊಳ್ಳಲ್ಪಡುವ ಶಾಸ್ತ್ರೀಯ ಮೂಲತತ್ವಗಳಲ್ಲಿ ಒಂದನ್ನು ಚರ್ಚಿಸಿರಿ. ಆಸಕ್ತಿಯು ತೋರಿಸಲ್ಪಟ್ಟಲ್ಲಿ, ಜ್ಞಾನ ಪುಸ್ತಕದಿಂದಾಗಲಿ ಅಪೇಕ್ಷಿಸು ಬ್ರೋಷರಿಂದಾಗಲಿ ಒಂದು ಅಧ್ಯಯನದ ನೀಡಿಕೆಯನ್ನು ಮಾಡಿರಿ.
7 ಈ ಮುಂದಿನ ನಿರೂಪಣೆಯು ವೃದ್ಧ ಜನರಿಗೆ ಇಷ್ಟವಾಗಬಹುದು:
◼ “ಬೈಬಲು ಹೆಚ್ಚಿನ ಮನೆಗಳಲ್ಲಿ ಓದಲಾಗುತ್ತಿದ್ದ ಮತ್ತು ಕುಟುಂಬಗಳು ಅದರ ಮೂಲತತ್ವಗಳಿಗನುಸಾರ ಜೀವಿಸುತ್ತಿದ್ದ ಒಂದು ಸಮಯವಿತ್ತು. ನಿಮ್ಮ ಕುಟುಂಬದಲ್ಲಿಯೂ ಅದೇ ರೀತಿಯದ್ದಾಗಿತ್ತೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇಂದು, ಬೈಬಲ್ ವಾಚನಕ್ಕಾಗಿ ಸಮಯವನ್ನು ಬದಿಗಿರಿಸಲು ಅನೇಕರು ತೀರ ಕಾರ್ಯಮಗ್ನರೆಂದು ಇಲ್ಲವೆ ಅದರ ನೈತಿಕ ಮೂಲತತ್ವಗಳು ಹಳೆಯಕಾಲದವುಗಳೆಂದು ಅವರಿಗೆ ಅನಿಸುವಂತೆ ತೋರುತ್ತದೆ. ಆದರೆ, ಬೈಬಲನ್ನು ಅಭ್ಯಸಿಸಿದ ಬಳಿಕ, ಯಾರ ಜೀವಿತಗಳು ಉತ್ತಮ ಸ್ಥಿತಿಗೆ ಬದಲಾಗಿವೆಯೊ ಅಂತಹ ಅನೇಕ ವ್ಯಕ್ತಿಗಳು ಇಲ್ಲಿದ್ದಾರೆ. ದೇವರ ವಾಕ್ಯದ ಬಲವು ಅವರಿಗೆ ಹೇಗೆ ಸಹಾಯಮಾಡಿತೆಂಬುದನ್ನು ನೀವು ಓದಲು ಬಯಸುವುದಾದರೆ, ಈ ಪುಸ್ತಕವನ್ನು ನಿಮ್ಮಲ್ಲಿ ಬಿಟ್ಟುಹೋಗಲು ನಾನು ಸಂತೋಷಿಸುವೆ.” ತಿಂಗಳಿಗಾಗಿ ಗೊತ್ತುಪಡಿಸಲಾದ ಪುಸ್ತಕಗಳಲ್ಲಿ ಯಾವುದಾದರೊಂದನ್ನು ನೀಡಿರಿ.
8 ಪುನರ್ಭೇಟಿಯಲ್ಲಿ ನೀವು ಹೀಗೆ ಹೇಳಸಾಧ್ಯವಿದೆ:
◼ “ನಾವು ಕಳೆದ ಸಲ ಮಾತಾಡಿದಾಗ, ಇಂದಿನ ಸಮಾಜದಲ್ಲಿ ಬೈಬಲಿನ ನೈತಿಕ ಮೂಲತತ್ವಗಳು ಅಲಕ್ಷಿಸಲ್ಪಡುತ್ತಿವೆ ಎಂಬುದನ್ನು ನಾವು ಒಪ್ಪಿಕೊಂಡೆವು. ಆ ಉಪೇಕ್ಷೆಯು ನಮಗೆ ಚಿಂತೆಯನ್ನುಂಟುಮಾಡಬೇಕೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲ್ ಜ್ಞಾನವನ್ನು ಪಡೆದುಕೊಳ್ಳುವ ವಿಷಯಕ್ಕೆ ಯೇಸು ಕ್ರಿಸ್ತನು ಹೆಚ್ಚಿನ ಮಹತ್ವವನ್ನು ನೀಡಿದನು.” ಯೋಹಾನ 17:3ನ್ನು ಓದಿ. ಆಮೇಲೆ ಜ್ಞಾನ ಪುಸ್ತಕದಲ್ಲಿನ 1ನೆಯ ಅಧ್ಯಾಯದ 5ನೆಯ ಪ್ಯಾರಗ್ರಾಫ್ನಲ್ಲಿರುವ ವಿಷಯವನ್ನು ಹಂಚಿಕೊಳ್ಳಿರಿ. ನಮ್ಮ ಉಚಿತ ಬೈಬಲ್ ಅಧ್ಯಯನ ಕಾರ್ಯಕ್ರಮವನ್ನು ವಿವರಿಸಿ, ಅದನ್ನು ಪ್ರತ್ಯಕ್ಷಾಭಿನಯಿಸಲು ನೀವು ಸಿದ್ಧರಿದ್ದೀರೆಂದು ಹೇಳಿರಿ.
9 ಸಕಲ ಜನರಿಗಾಗಿರುವ ದೇವರ ಮಾರ್ಗದರ್ಶಿಯಾದ ಬೈಬಲಿನ ಕಡೆಗೆ ಗಮನವನ್ನು ತಿರುಗಿಸಲಿಕ್ಕಾಗಿರುವ ನಿಮ್ಮೆಲ್ಲ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.