ಪತ್ರಿಕೆಗಳು ರಾಜ್ಯವನ್ನು ಘೋಷಿಸುತ್ತವೆ
1 ಯೆಹೋವನ ಸಾಕ್ಷಿಗಳೋಪಾದಿ, ನಾವು ದೇವರ ರಾಜ್ಯದ ಕುರಿತಾದ ನಮ್ಮ ಹುರುಪಿನ ಸಾರುವಿಕೆಗಾಗಿ ಸುಪ್ರಸಿದ್ಧರಾಗಿದ್ದೇವೆ. ಕೋಟಿಗಟ್ಟಲೆ ಜನರು ದೇವರ ಉದ್ದೇಶಗಳ ಕುರಿತಾಗಿ ಕಲಿಯುವಂತೆ ಸಹಾಯಮಾಡುವುದರಲ್ಲಿ ನಾವು ವಿತರಿಸುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಒಂದು ಪ್ರಬಲವಾದ ಪಾತ್ರವನ್ನು ವಹಿಸುತ್ತವೆ. ಅವುಗಳಲ್ಲಿರುವ ಸಂದೇಶವು ನಿಜವಾಗಿಯೂ ಸುವಾರ್ತೆಯಾಗಿದೆ, ಯಾಕಂದರೆ ಅದು ದೇವರ ಸ್ವರ್ಗೀಯ ರಾಜ್ಯವನ್ನು ಮಾನವಕುಲಕ್ಕಾಗಿರುವ ಏಕಮಾತ್ರ ನಿರೀಕ್ಷೆಯೆಂದು ಘೋಷಿಸುತ್ತದೆ.
2 ಆ ಪತ್ರಿಕೆಗಳು ಜನರ ನಿಜವಾದ—ಭಾವನಾತ್ಮಕ, ಸಾಮಾಜಿಕ, ಮತ್ತು ಆತ್ಮಿಕ—ಅಗತ್ಯಗಳೊಂದಿಗೆ ವ್ಯವಹರಿಸುತ್ತವೆ. ಎಲ್ಲೆಡೆಯೂ ನೈತಿಕತೆಗಳು ಮತ್ತು ಕುಟುಂಬ ಮೌಲ್ಯಗಳು ಕುಸಿಯುತ್ತಿರುವುದರಿಂದ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ಬೈಬಲ್ ತತ್ವಗಳನ್ನು ಹೇಗೆ ಅನ್ವಯಿಸುವುದೆಂಬುದನ್ನು ತೋರಿಸುವ ಮೂಲಕ ಜನರು ತಮ್ಮ ಜೀವಿತಗಳ ಗುಣಮಟ್ಟವನ್ನು ಉತ್ತಮಗೊಳಿಸಿಕೊಳ್ಳುವಂತೆ ಸಹಾಯಮಾಡುತ್ತವೆ. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಈ ಪತ್ರಿಕೆಗಳಿಗೆ ಚಂದಾಗಳನ್ನು ನೀಡುವುದು ನಮ್ಮ ಆನಂದವಾಗಿರುವುದು.
3 ಅವುಗಳಿಗೆ ನಿಜವಾದ ಆಕರ್ಷಣೆಯಿದೆ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ಕಾರ್ಯತಃ ಲೋಕದ ಇಡೀ ಜನಸಂಖ್ಯೆಯ ಭಾಷೆಗಳಲ್ಲಿ ಲಭ್ಯವಾಗಿವೆ. ಈ ಕಾರಣದಿಂದಲೇ, ನಮ್ಮ ಪತ್ರಿಕೆಗಳು ಸುಪ್ರಸಿದ್ಧವಾಗಿವೆ. ಜನರು ಅವುಗಳ ಕಡೆಗೆ ಆಕರ್ಷಿತರಾಗಿರಲು ಕೆಲವೊಂದು ಕಾರಣಗಳು ಇಲ್ಲಿ ಕೊಡಲ್ಪಟ್ಟಿವೆ:
◼ ಸಮಗ್ರತೆ ಮತ್ತು ಸತ್ಯದ ಪತ್ರಿಕೆಗಳೋಪಾದಿ, ಅವು ಒಳ್ಳೇದರ ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತವೆ.
◼ ಭೂಮಿಯನ್ನು ದೇವರ ರಾಜ್ಯದಾಳಿಕೆಯ ಅಧೀನಕ್ಕೆ ತರುವ ಆತನ ವಾಗ್ದಾನದ ಮೇಲೆ ಆಧಾರಿತವಾಗಿರುವ, ಬರಲಿರುವ ನೀತಿಭರಿತ ಪ್ರಮೋದವನದ ನಿರೀಕ್ಷೆಯನ್ನು ಅವು ಕೊಡುತ್ತವೆ.
◼ ಎಲ್ಲ ಹಿನ್ನೆಲೆಗಳ ಮತ್ತು ಸಂಸ್ಕೃತಿಗಳ ಜನರನ್ನು ಆಕರ್ಷಿಸುತ್ತಾ, ಸಮಯೋಚಿತವಾದ ವಿಷಯಗಳ ಒಂದು ವಿಸ್ತೃತವಾದ ವೈವಿಧ್ಯವು ಪ್ರಸ್ತುತಪಡಿಸಲ್ಪಟ್ಟಿದೆ.
◼ ಲೇಖನಗಳು ಸಂಕ್ಷಿಪ್ತವೂ, ಶೈಕ್ಷಣಿಕವೂ, ವಾಸ್ತವಿಕವೂ ಆಗಿದ್ದು, ಪೂರ್ವಾಗ್ರಹ ಹಾಗೂ ರಾಜಿಮಾಡಿಕೊಳ್ಳುವಿಕೆಯಿಂದ ಮುಕ್ತವಾಗಿವೆ.
◼ ಕಣ್ಸೆಳೆಯುವಂತಹ ಚಿತ್ರಗಳು ತತ್ಕ್ಷಣವೇ ಆಸಕ್ತಿಯನ್ನುಂಟುಮಾಡುತ್ತವೆ, ಮತ್ತು ಸ್ಪಷ್ಟವಾದ ಬರಹ ಶೈಲಿಯು, ಪತ್ರಿಕೆಗಳನ್ನು ಸುಲಭವಾಗಿ ಓದುವುದನ್ನು ಸಾಧ್ಯಮಾಡುತ್ತದೆ.
4 ಅವುಗಳನ್ನು ವ್ಯಾಪಕವಾಗಿ ವಿತರಿಸಿರಿ: ಪರಿಣಾಮಕಾರಿಯಾದ ಪತ್ರಿಕಾ ವಿತರಣೆಯು, ನಮ್ಮ ನಿರೂಪಣೆಗಳನ್ನು ತಯಾರಿಸುವುದರಲ್ಲಿನ ನಮ್ಮ ಶ್ರದ್ಧೆ, ನಮ್ಮ ಸಮಯವನ್ನು ಶೆಡ್ಯೂಲ್ ಮಾಡುವುದು, ಮತ್ತು ನಮ್ಮ ಸಾರುವ ಚಟುವಟಿಕೆಯನ್ನು ವ್ಯವಸ್ಥಿತಗೊಳಿಸುವುದರ ಮೇಲೆ ತುಂಬ ಅವಲಂಬಿಸುತ್ತದೆ. ನಮ್ಮ ರಾಜ್ಯದ ಸೇವೆಯ 1996ರ ಜನವರಿ ಮತ್ತು ಅಕ್ಟೋಬರ್ ತಿಂಗಳುಗಳ ಸಂಚಿಕೆಗಳಲ್ಲಿ ಪ್ರಾಯೋಗಿಕ ಸಲಹೆಗಳು ನೀಡಲ್ಪಟ್ಟಿದ್ದವು. ಇವುಗಳನ್ನು ಪುನರ್ವಿಮರ್ಶಿಸಿ ಅನ್ವಯಿಸಿಕೊಳ್ಳುವುದು ಉತ್ತಮವಾಗಿರುವುದು.
5 ಸ್ವತಃ ಪತ್ರಿಕೆಗಳೊಂದಿಗೆ ಪರಿಚಿತರಾಗಿರಿ: ನೀವು ಪ್ರತಿಯೊಂದು ಸಂಚಿಕೆಯನ್ನು ಓದಿದಂತೆ, ಆ ಪ್ರತಿಯಿಂದ ಯಾರ ಆಸಕ್ತಿಯನ್ನು ಕೆರಳಿಸಸಾಧ್ಯವಿದೆಯೊ ಅಂತಹ ಒಬ್ಬ ವ್ಯಕ್ತಿಯ ಕುರಿತಾಗಿ ಯೋಚಿಸಿರಿ. ನಿಮ್ಮ ನಿರೂಪಣೆಯಲ್ಲಿ ನೀವು ಉಲ್ಲೇಖಿಸಬಹುದಾದ ನಿರ್ದಿಷ್ಟ ಅಂಶಗಳು ಅಥವಾ ಶಾಸ್ತ್ರವಚನಗಳಿಗಾಗಿ ಹುಡುಕಿರಿ. ಒಂದು ಸಂಭಾಷಣೆಯನ್ನು ಆರಂಭಿಸಲು ಮತ್ತು ಆ ವಿಷಯದಲ್ಲಿ ಆಸಕ್ತಿಯನ್ನು ಪ್ರಚೋದಿಸಲು ನೀವು ಕೇಳಬಹುದಾದ ಒಂದು ಪ್ರಶ್ನೆಯ ಕುರಿತಾಗಿ ಯೋಚಿಸಿರಿ.
6 ನಿರೂಪಣೆಯನ್ನು ವ್ಯಕ್ತಿಗೆ ಸರಿಹೊಂದಿಸಿರಿ: ಪರಿಚಿತರಾಗಿರಲಿ ಅಪರಿಚಿತರಾಗಿರಲಿ, ಒಬ್ಬ ಪುರುಷ, ಒಬ್ಬ ಸ್ತ್ರೀ, ಒಬ್ಬ ವೃದ್ಧ ವ್ಯಕ್ತಿ ಅಥವಾ ಒಬ್ಬ ಯುವ ವ್ಯಕ್ತಿಗೆ ಅಳವಡಿಸಿಕೊಳ್ಳಬಹುದಾದ, ಒಂದು ಸರಳ, ಹೊಂದಿಕೊಳ್ಳುವಂತಹ ನಿರೂಪಣೆಯನ್ನು ತಯಾರಿಸಿರಿ.
7 ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರಜ್ಞೆಯುಳ್ಳವರಾಗಿರ್ರಿ: ಪತ್ರಿಕೆಗಳನ್ನು ಸುಲಭವಾಗಿ ಒಂದು ಬ್ರೀಫ್ಕೇಸ್, ಹ್ಯಾಂಡ್ಬ್ಯಾಗ್, ಅಥವಾ ಕೋಟ್ನ ಜೇಬಿನೊಳಗೂ ಸೇರಿಸಿಕೊಳ್ಳಬಹುದಾದುದರಿಂದ, ನಾವು ಪ್ರಯಾಣಿಸುವಾಗ ಅಥವಾ ಶಾಪಿಂಗ್ ಮಾಡುವಾಗ ಅವುಗಳ ಪ್ರತಿಗಳನ್ನು ನಮ್ಮೊಂದಿಗೊಯ್ಯಸಾಧ್ಯವಿದೆ. ಸಂಬಂಧಿಕರು, ನೆರೆಯವರು, ಸಹಕರ್ಮಿಗಳು, ಸಹಪಾಠಿಗಳು, ಅಥವಾ ಶಿಕ್ಷಕರೊಂದಿಗೆ ಮಾತಾಡುವಾಗ ಅವುಗಳನ್ನು ನೀಡಿರಿ. ಪ್ರತಿ ವಾರ ಒಂದು ದಿನವನ್ನು ಪತ್ರಿಕಾ ಸಾಕ್ಷಿಕಾರ್ಯಕ್ಕಾಗಿ ಬದಿಗಿರಿಸಿರಿ.
8 ಪತ್ರಿಕೆಗಳಿಗಾಗಿ ಗಣ್ಯತೆಯನ್ನು ತೋರಿಸಿರಿ: ಅವು ಎಂದೂ ತಮ್ಮ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಸಮಯವು ಗತಿಸಿದಂತೆ, ಅವುಗಳಲ್ಲಿರುವ ಸಂದೇಶದ ಪ್ರಾಮುಖ್ಯವು ಕಡಿಮೆಯಾಗುವುದಿಲ್ಲ. ನಾವು ಪಡೆದುಕೊಳ್ಳುವಂತಹ ಎಲ್ಲ ಪತ್ರಿಕೆಗಳನ್ನು ನೀಡಲು ನಾವು ವಿಶೇಷವಾದ ಪ್ರಯತ್ನವನ್ನು ಮಾಡುವಲ್ಲಿ, ಖಂಡಿತವಾಗಿಯೂ ಹಳೆಯ ಪತ್ರಿಕೆಗಳು ನಮ್ಮ ಶೆಲ್ಫ್ಗಳಲ್ಲಿ ರಾಶಿಗೂಡಲಿಕ್ಕಿಲ್ಲ.
9 ಬೀದಿ ಸಾಕ್ಷಿಕಾರ್ಯವು ಪರಿಣಾಮಕಾರಿಯಾಗಿದೆ: ಹಲವಾರು ಜನರಿಗೆ ಪತ್ರಿಕೆಗಳನ್ನು ನೀಡುವ ಅತ್ಯುತ್ತಮ ವಿಧಗಳಲ್ಲಿ ಇದು ಒಂದಾಗಿದೆ. ಕೆಲವು ಪ್ರಚಾರಕರು, ಶಾಪಿಂಗ್ ದಿನಗಳಂದು, ಒಂದೇ ರೀತಿಯ ಅಂತರವನ್ನು ಬಿಟ್ಟು ಅಲ್ಲಲ್ಲಿ ನಿಂತುಕೊಂಡು, ನಿಬಿಡವಾದ ಬೀದಿಗಳಲ್ಲಿ ಸಾಕ್ಷಿಕಾರ್ಯವನ್ನು ಮಾಡುತ್ತಾರೆ.
10 ವ್ಯಾಪಾರ ಟೆರಿಟೊರಿಯು ಫಲಪ್ರದವಾಗಿದೆ: ಅಂಗಡಿಯಿಂದ ಅಂಗಡಿಗೆ ಸಾಕ್ಷಿನೀಡುವಾಗ, ಅಂಗಡಿಯಲ್ಲಿ ಯಾರೂ ಇಲ್ಲವೆಂಬ ಸಮಸ್ಯೆಯು ಕಡಿಮೆ. ಹೆಚ್ಚಿನ ವ್ಯಾಪಾರಸ್ಥರು ವಿನಮ್ರರಾಗಿರುತ್ತಾರೆ, ಮತ್ತು ಅನೇಕರು ಸಂತೋಷದಿಂದ ಪತ್ರಿಕೆಗಳನ್ನು ಮತ್ತು ಚಂದಾಗಳನ್ನು ಸ್ವೀಕರಿಸುತ್ತಾರೆ. ಸಂಪರ್ಕಿಸಲಾಗುತ್ತಿರುವ ವ್ಯಾಪಾರ ಸಂಸ್ಥೆಗೆ ಯುಕ್ತವಾಗಿರುವ ಲೇಖನಗಳನ್ನು ತೋರಿಸಿರಿ.
11 ಪತ್ರಿಕಾ ಮಾರ್ಗಗಳಿಂದ ಬೈಬಲ್ ಅಭ್ಯಾಸಗಳನ್ನು ಆರಂಭಿಸುವ ಸಂಭಾವ್ಯತೆಯಿದೆ: ಒಬ್ಬ ವ್ಯಕ್ತಿಯು ಒಂದು ಚಂದಾವನ್ನು ಸ್ವೀಕರಿಸದಿದ್ದರೂ, ಪತ್ರಿಕೆಗಳ ಬಿಡಿ ಪ್ರತಿಗಳನ್ನು ಅತ್ಯಾಸಕ್ತಿಯಿಂದ ಸ್ವೀಕರಿಸುವಲ್ಲಿ, ಮುಂದಿನ ಸಂಚಿಕೆಗಳನ್ನು ನೀಡಲು ಪುನಃ ಅವನನ್ನು ಸಂದರ್ಶಿಸುವುದು ಸೂಕ್ತ. ನಾವು ಕ್ರಮವಾದ ಪುನರ್ಭೇಟಿಗಳನ್ನು, ಕೇವಲ ಪತ್ರಿಕೆಗಳನ್ನು ಕೊಡಲಿಕ್ಕಾಗಿ ಅಲ್ಲ, ಬದಲಾಗಿ ಬೈಬಲಿನಲ್ಲಿ ಆ ವ್ಯಕ್ತಿಯ ಆಸಕ್ತಿಯನ್ನು ವಿಕಸಿಸಲಿಕ್ಕಾಗಿಯೂ ಮಾಡಬೇಕು. ಪತ್ರಿಕಾ ಮಾರ್ಗಗಳು ಸಂಭಾವ್ಯ ಬೈಬಲ್ ಅಭ್ಯಾಸಗಳ ಉತ್ಕೃಷ್ಟ ಮೂಲವಾಗಿವೆ.
12 ಏಪ್ರಿಲ್ ಮತ್ತು ಮೇ ತಿಂಗಳುಗಳ ಅತ್ಯಧಿಕ ಲಾಭವನ್ನು ಪಡೆದುಕೊಳ್ಳಿರಿ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ಗಣ್ಯತಾಭಾವದ ಕೋಟಿಗಟ್ಟಲೆ ವಾಚಕರ ಭರವಸೆಯನ್ನು ಗಳಿಸಿವೆ. ರಾಜ್ಯವನ್ನು ಘೋಷಿಸುವುದರಲ್ಲಿ ಅವು ಎಷ್ಟೊಂದು ಪರಿಣಾಮಕಾರಿಯಾಗಿವೆಯೆಂದರೆ, ಅವುಗಳನ್ನು ನಮ್ಮೊಂದಿಗೆ ಒಯ್ಯಲು ಮತ್ತು ಪ್ರತಿಯೊಂದು ಸಂದರ್ಭದಲ್ಲಿ ಅವುಗಳನ್ನು ನೀಡಲು ನಾವು ಪ್ರಾಮುಖ್ಯವನ್ನು ಕೊಡಬೇಕು. ಏಪ್ರಿಲ್ ಮತ್ತು ಮೇ ತಿಂಗಳುಗಳು, ಚಂದಾ ನೀಡಿಕೆ ಮತ್ತು ಪತ್ರಿಕಾ ವಿತರಣೆಗಾಗಿ ಎದ್ದುಕಾಣುವಂತಹ ತಿಂಗಳುಗಳಾಗಿ ಪರಿಣಮಿಸಲಿ!