ನಿಮ್ಮ ಶುಶ್ರೂಷೆಯಲ್ಲಿ ಪತ್ರಿಕೆಗಳನ್ನು ಕೊಡುವುದಕ್ಕೆ ಪ್ರಾಧಾನ್ಯ ನೀಡಿರಿ
1, 2. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಜನರ ಜೀವಿತಗಳ ಮೇಲೆ ಹೇಗೆ ಪ್ರಭಾವ ಬೀರಿವೆ?
1 “ಕುತೂಹಲಕರವೂ, ಕಾಲೋಚಿತವೂ ಬಲವರ್ಧಕವೂ ಆಗಿದ್ದವು.” “ನಾನು ಇಂದಿನ ವರೆಗೆ ಓದಿರುವ ಪತ್ರಿಕೆಗಳಲ್ಲಿಯೇ ಅತ್ಯಂತ ಉತ್ತೇಜನಕಾರಿ ಪತ್ರಿಕೆಗಳು.” ಲೋಕಾದ್ಯಂತವಿರುವ ಓದುಗರಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಗ್ಗೆ ಹೇಗನಿಸುತ್ತದೆ ಎಂಬುದನ್ನು ಈ ಹೇಳಿಕೆಗಳು ಸ್ಪಷ್ಟವಾಗಿ ವರ್ಣಿಸುತ್ತವೆ. ವಾಸ್ತವದಲ್ಲಿ, ‘ಎಲ್ಲಾ ಮನುಷ್ಯರನ್ನು’ ಸುವಾರ್ತೆಯೊಂದಿಗೆ ತಲಪುವುದರಲ್ಲಿ ನಮ್ಮ ಪತ್ರಿಕೆಗಳು ಅತ್ಯಮೂಲ್ಯವಾದ ಸಾಧನಗಳಾಗಿ ರುಜುವಾಗಿವೆ.—1 ತಿಮೊ. 2:4.
2 ಒಬ್ಬ ವ್ಯಾಪಾರಸ್ಥನು, ತನಗೆ ಆಸಕ್ತಯಿದ್ದ ಒಂದು ವಿಷಯದ ಕುರಿತಾಗಿ ಚರ್ಚಿಸಿದ ಎಚ್ಚರ! ಪತ್ರಿಕೆಯೊಂದನ್ನು ಪಡೆದುಕೊಂಡನು. ಅನಂತರ, ಅದರ ಜೊತೆಯಲ್ಲಿ ಪ್ರಕಟಿಸಲ್ಪಟ್ಟಿದ್ದ ಕಾವಲಿನಬುರುಜು ಸಂಚಿಕೆಯನ್ನೂ ಓದಿದನು. ಅದರಲ್ಲಿ ಅವನು ಜೀವನದುದ್ದಕ್ಕೂ ನಂಬಿದ್ದ ತ್ರಯೈಕ್ಯ ಬೋಧನೆಯನ್ನು ಪರಿಶೀಲಿಸುವಂತೆ ಅವನನ್ನು ಪ್ರೇರಿಸಿದ ಒಂದು ಲೇಖನವಿತ್ತು. ಇದು ಅವನ ಆಸಕ್ತಿಯನ್ನು ಕೆರಳಿಸಿತು. ಆರು ತಿಂಗಳುಗಳ ತರುವಾಯ ಅವನು ದೀಕ್ಷಾಸ್ನಾನವನ್ನು ಪಡೆದುಕೊಂಡನು. ಮತ್ತೊಬ್ಬ ಮನುಷ್ಯನು ಕ್ರಮವಾಗಿ ನಮ್ಮ ಪತ್ರಿಕೆಗಳನ್ನು ಪಡೆದುಕೊಳ್ಳುತ್ತಿದ್ದನು, ಆದರೆ ಅದನ್ನು ಎಂದೂ ಓದುತ್ತಿರಲಿಲ್ಲ. ಅವನ ಹೆಂಡತಿಯಾದರೋ ಸಾಕ್ಷಿಗಳನ್ನು ದೂರವಿಡುತ್ತಿದ್ದಳು, ಆದರೆ ತನ್ನ ಗಂಡನಿಗೆ ಕೊಡಲ್ಪಡುತ್ತಿದ್ದ ಪತ್ರಿಕೆಗಳನ್ನು ಓದುತ್ತಿದ್ದಳು. ನೀತಿಯುತ ಜನರಿಂದ ತುಂಬಿರುವ ಭೂಪರದೈಸಿನ ಕುರಿತಾದ ಬೈಬಲಿನ ವಾಗ್ದಾನವು ಅವಳ ಹೃದಯವನ್ನು ಸ್ಪರ್ಶಿಸಿತು. ಸಕಾಲದಲ್ಲಿ, ಅವಳು, ಅವಳ ಮಗ ಮತ್ತು ಅವಳ ತಂಗಿಯು ಯೆಹೋವನ ಸೇವಕರಾದರು.
3. ಪತ್ರಿಕೆಗಳನ್ನು ಒಟ್ಟಿಗೆ ನೀಡುವುದರ ಲಾಭವೇನು?
3 ಅವನ್ನು ಒಟ್ಟಿಗೆ ನೀಡಿರಿ: ಈ ಮೇಲಿನ ಉದಾಹರಣೆಗಳು ತೋರಿಸುವಂತೆ, ನಮ್ಮ ಪತ್ರಿಕೆಗಳನ್ನು ಯಾರು ಓದುವರು ಅಥವಾ ಅವರ ಆಸಕ್ತಿಯನ್ನು ಯಾವುದು ಕೆರಳಿಸಬಹುದು ಎಂಬುದು ನಮಗೆ ತಿಳಿದಿಲ್ಲ. (ಪ್ರಸಂ. 11:6) ಆದುದರಿಂದ, ನಾವು ನಮ್ಮ ಪ್ರಸ್ತುತಪಡಿಸುವಿಕೆಯಲ್ಲಿ ಸಾಮಾನ್ಯವಾಗಿ ಕೇವಲ ಒಂದು ಪತ್ರಿಕೆಯ ಕುರಿತು ಮಾತಾಡುವುದಾದರೂ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಒಟ್ಟಿಗೆ ನೀಡುವುದು ಹೆಚ್ಚು ಪ್ರಯೋಜನಕಾರಿ. ಕೆಲವು ವಿದ್ಯಮಾನಗಳಲ್ಲಿ, ಒಂದೇ ಭೇಟಿಯಲ್ಲಿ ನಮ್ಮ ಪತ್ರಿಕೆಗಳ ವಿಭಿನ್ನ ಸಂಚಿಕೆಗಳನ್ನು ನೀಡುವುದು ಉತ್ತಮವಾಗಿರಬಹುದು.
4. ನಾವು ಪತ್ರಿಕಾ ಸೇವೆಯನ್ನು ಹೇಗೆ ಶೆಡ್ಯೂಲ್ ಮಾಡಬಹುದು?
4 ಪ್ರತಿ ವಾರದಲ್ಲಿ ಒಂದು ದಿನವನ್ನು ಪತ್ರಿಕಾ ದಿನವೆಂದು ಶೆಡ್ಯೂಲ್ ಮಾಡುವುದು ಪ್ರಯೋಜನಕಾರಿ. ಯೆಹೋವನ ಸಾಕ್ಷಿಗಳ 2005ರ ಕ್ಯಾಲೆಂಡರ್ (ಇಂಗ್ಲಿಷ್)ನಲ್ಲಿ ಪ್ರತಿ ಶನಿವಾರವನ್ನು “ಪತ್ರಿಕಾ ದಿನ”ವೆಂದು ಸೂಚಿಸಲಾಗಿದೆ. ಆದರೂ ಸ್ಥಳಿಕ ಮತ್ತು ವೈಯಕ್ತಿಕ ಪರಿಸ್ಥಿತಿಗಳು ಭಿನ್ನಭಿನ್ನವಾಗಿರುವುದರಿಂದ, ಕೆಲವರು ನಮ್ಮ ಪತ್ರಿಕೆಗಳನ್ನು ನೀಡಲು ಮತ್ತೊಂದು ದಿನವನ್ನು ಆರಿಸಿಕೊಳ್ಳಬಹುದು. ಪತ್ರಿಕಾ ಸೇವೆಯಲ್ಲಿ ಪಾಲ್ಗೊಳ್ಳುವುದು ನಿಮ್ಮ ಸಾಪ್ತಾಹಿಕ ಶೆಡ್ಯೂಲಿನ ಭಾಗವಾಗಿದೆಯೋ?
5. ಪತ್ರಿಕೆಗಳನ್ನು ನೀಡಲು ಯಾವ ಅವಕಾಶಗಳಿಗಾಗಿ ನಾವು ಎಚ್ಚರದಿಂದಿರಬೇಕು, ಮತ್ತು ಹೀಗೆ ಮಾಡಲು ನಮಗೆ ಯಾವುದು ಸಹಾಯಮಾಡಸಾಧ್ಯವಿದೆ?
5 ವೈಯಕ್ತಿಕ ಗುರಿಯನ್ನು ಇಡಿರಿ: ಪ್ರತಿ ತಿಂಗಳು ಇಷ್ಟು ಪತ್ರಿಕೆಗಳನ್ನು ನೀಡಬೇಕು ಎಂಬ ವೈಯಕ್ತಿಕ ಗುರಿಯನ್ನು ಇಡುವುದು ಹೆಚ್ಚು ಪತ್ರಿಕಾ ಪ್ರಜ್ಞೆಯುಳ್ಳವರಾಗಿರುವಂತೆ ನಮ್ಮನ್ನು ಪ್ರೇರಿಸುವುದು. ನಿಮಗೆ ಒಂದು ಪತ್ರಿಕಾ ಮಾರ್ಗವಿದೆಯೋ? ನೀವು ಶುಶ್ರೂಷೆಯಲ್ಲಿ ಭೇಟಿಮಾಡುವವರಿಗೆ ಪತ್ರಿಕೆಗಳನ್ನು ನೀಡುತ್ತೀರೋ? ನೀವು ಬೀದಿ ಸಾಕ್ಷಿಕಾರ್ಯದಲ್ಲಿ, ವ್ಯಾಪಾರದ ಟೆರಿಟೊರಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪತ್ರಿಕೆಗಳನ್ನು ನೀಡಸಾಧ್ಯವಿದೆಯೋ? ನೀವು ಪ್ರಯಾಣಿಸುವಾಗ, ಶಾಪಿಂಗ್ಗೆ ಹೋಗುವಾಗ ಮತ್ತು ಭೇಟಿನಿಶ್ಚಯಗಳಿಗಾಗಿ ಹೋಗುವಾಗ ಪತ್ರಿಕೆಗಳನ್ನು ಕೊಂಡೊಯ್ಯುತ್ತೀರೋ? ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಂದ ಪ್ರಯೋಜನವನ್ನು ಹೊಂದುವಂತೆ ಇತರರಿಗೆ ಸಹಾಯಮಾಡಲು ಪ್ರತಿಯೊಂದು ಯೋಗ್ಯವಾದ ಅವಕಾಶವನ್ನು ಸದುಪಯೋಗಿಸಿಕೊಳ್ಳಿರಿ.
6. ಪತ್ರಿಕೆಗಳ ಹಳೆಯ ಸಂಚಿಕೆಗಳನ್ನು ನಾವು ಹೇಗೆ ಸದುಪಯೋಗಿಸಸಾಧ್ಯವಿದೆ?
6 ನಮ್ಮ ಬಳಿಯಿರುವ ಹಳೆಯ ಸಂಚಿಕೆಗಳನ್ನು ನೀಡುವ ಗುರಿಯನ್ನು ಸಹ ನಾವು ಇಡಬಹುದು. ಮುದ್ರಿತ ತಾರೀಖಿನಿಂದ ಒಂದು ಅಥವಾ ಎರಡು ತಿಂಗಳುಗಳಲ್ಲಿ ಪತ್ರಿಕೆಗಳನ್ನು ನೀಡಲು ಸಾಧ್ಯವಾಗದೆ ಹೋಗುವುದಾದರೂ, ಅದರಲ್ಲಿನ ಮಾಹಿತಿಯ ಮೌಲ್ಯವು ಮಾಸಿಹೋಗುವುದಿಲ್ಲ. ಆಸಕ್ತ ಜನರ ಕೈಗಳಿಗೆ ಅವನ್ನು ತಲಪಿಸಿರಿ. ಲಕ್ಷಾಂತರ ಮಂದಿಗೆ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ‘ಸರಿಸಮಯಕ್ಕೆ [ಸಿಕ್ಕಿದ] ಒಳ್ಳೆಯ’ ಮಾತಾಗಿ ಪರಿಣಮಿಸಿವೆ. (ಜ್ಞಾನೋ. 25:11, ಪರಿಶುದ್ಧ ಬೈಬಲ್) ಯೆಹೋವನ ಕುರಿತು ತಿಳಿದುಕೊಂಡು ಆತನನ್ನು ಸೇವಿಸುವಂತೆ ಲಕ್ಷಾಂತರ ಮಂದಿಗೆ ಸಹಾಯಮಾಡುವುದರಲ್ಲಿ ನಾವು ನಮ್ಮ ಪತ್ರಿಕೆಗಳನ್ನು ಉಪಯೋಗಿಸೋಣ.