ಕಾವಲಿನಬುರುಜು ಮತ್ತು ಎಚ್ಚರ! ದ ಉತ್ತಮ ಉಪಯೋಗವನ್ನು ಮಾಡುವುದು
1 ಇಂದು ಜನರು ಓದಬಲ್ಲ ಅತಿ ಬೆಲೆಯುಳ್ಳ ಮತ್ತು ಅತಿ ಲಾಭದಾಯಕ ಪತ್ರಿಕೆಗಳು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಾಗಿವೆ. ಯಾಕೆ? ಯಾಕೆಂದರೆ ಅವುಗಳಲ್ಲಿರುವ ಆತ್ಮಿಕ ಸತ್ಯಗಳು ಜನರ ಜೀವಿತಗಳ ಮೇಲೆ ಒಳ್ಳೆಯದಕ್ಕಾಗಿ ಅನಂತ ಪ್ರಭಾವವನ್ನು ಬೀರಬಲ್ಲವು. ಹಾಗಿದ್ದರೂ, ಅನೇಕರಿಗೆ ತಮ್ಮ ಆತ್ಮಿಕ ಅಗತ್ಯದ ಪೂರ್ಣ ಅರಿವು ಇರುವದಿಲ್ಲ, ಯಾ ಅದನ್ನು ಪೂರೈಸಲು ಎಲ್ಲಿ ನೋಡಬೇಕೆಂದು ಅವರಿಗೆ ಗೊತ್ತಿರುವದಿಲ್ಲ. ಆತ್ಮಿಕವಾಗಿ ಅವರ ಕಣ್ಣುಗಳನ್ನು ತೆರೆಯಲು ಸಹಾಯ ಮಾಡುವ ಮೂಲಕ ಅಪೊಸ್ತಲ ಪೌಲನನ್ನು ಅನುಸರಿಸುವುದು ನಮ್ಮ ಸುಯೋಗವಾಗಿದೆ.—ಮತ್ತಾ. 5:3; ಅ. ಕೃತ್ಯಗಳು 26:18.
2 ಸಕಾರಾತ್ಮಕವಾಗಿರಿ ಮತ್ತು ಚೆನ್ನಾಗಿ ತಯಾರಿಸಿರಿ: ಬಹುಶಃ ನಿಮ್ಮ ಟೆರಿಟೊರಿಯಲ್ಲಿ ಸತ್ಯಕ್ಕೆ ಪ್ರತಿಕ್ರಿಯೆ ತೋರಿಸುವ ಕುರಿಗಳಂತಹ ಜನರು ಇರುವುದು ಸಂಭವನೀಯ. ಕೆಲವರಿಗೆ ಪತ್ರಿಕೆಗಳನ್ನು ಓದಲು ಕೇವಲ ದಯಾಪರ ಪ್ರೋತ್ಸಾಹದ ಅಗತ್ಯವಿರಬಹುದು. ಆದುದರಿಂದ, ನೀವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡುವಾಗ ಸಕಾರಾತ್ಮಕರಾಗಿಯೂ ಪ್ರೇರಿಸುವಂಥವರಾಗಿಯೂ ಇರ್ರಿ. ಪತ್ರಿಕೆಗಳ ಒಂದು ಸಂಗ್ರಹವನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಳ್ಳಿ ಮತ್ತು ಬೇರೆ ಪ್ರಕಾಶನಗಳನ್ನು ತೋರಿಸುವಾಗ ಕೂಡ, ಅವುಗಳನ್ನು ಹಂಚುವ ಪ್ರತಿಯೊಂದು ಅವಕಾಶದ ಲಾಭವನ್ನು ಪಡೆಯಿರಿ.
3 ಪತ್ರಿಕೆಗಳನ್ನು ಹಂಚುವುದರಲ್ಲಿ ನಾವು ಹೆಚ್ಚು ಪರಿಣಾಮಕಾರಿಗಳಾಗುವಂತೆ ಯಾವುದು ಮಾಡಬಹುದು? ಪ್ರಥಮವಾಗಿ, ನಾವೇ ಅದರ ಮೌಲ್ಯವನ್ನು ನಿಜವಾಗಿಯೂ ಗಣ್ಯಮಾಡಬೇಕು. ನಾವು ನೀಡುವಂತಹ ಪತ್ರಿಕೆಗಳಲ್ಲಿರುವ ಲೇಖನಗಳ ಪರಿಚಯ ನಮಗಿರಬೇಕು, ಮತ್ತು ಇದು ಅವುಗಳನ್ನು ಸಾದರಪಡಿಸಲು ಇರುವ ನಮ್ಮ ಭರವಸೆಯನ್ನು ಮತ್ತು ಆತುರತೆಯನ್ನು ಅಧಿಕಗೊಳಿಸುವುದು. ನೀವು ಅವುಗಳನ್ನು ಮೊದಲಾಗಿ ಓದುವಾಗ, ಈ ಆಲೋಚನೆಯನ್ನು ಮನಸ್ಸಿನಲ್ಲಿಡಿರಿ. ಶುಶ್ರೂಷೆಯಲ್ಲಿ ಉಲ್ಲೇಖಿಸುವಂತೆ ಅಂಶಗಳನ್ನು ಆರಿಸಿಕೊಳ್ಳಲು ಎಚ್ಚರವುಳ್ಳವರಾಗಿರಿ. ನಿಮ್ಮನ್ನೇ ಕೇಳಿಕೊಳ್ಳಿ: ‘ಈ ಲೇಖನವು ಪ್ರತ್ಯೇಕವಾಗಿ ಯಾರಿಗೆ ಇಷ್ಟವಾಗಬಹುದು? ಒಬ್ಬಾಕೆ ಗೃಹಿಣಿ, ಯೌವನಸ್ಥನು, ಯಾ ಬಹುಶಃ ಒಬ್ಬ ವ್ಯಾಪಾರಿಯು ಇದನ್ನು ಗಣ್ಯಮಾಡುವನೊ? ಈ ಅಂಶವು ಒಬ್ಬ ವಿದ್ಯಾರ್ಥಿಯಲ್ಲಿ, ಮದುವೆಯಾದ ವ್ಯಕ್ತಿಯಲ್ಲಿ, ಪರಿಸರದ ಬಗ್ಗೆ ಚಿಂತಿತನಾದ ಯಾವನಲ್ಲಿಯೂ ಆಸಕ್ತಿಯನ್ನು ಕೆರಳಿಸಬಹುದೊ?’ ನಿಜವಾಗಿಯೂ ಪರಿಣಾಮಕಾರಿಯಾಗಿರಲು, ನಮ್ಮ ವೈಯಕ್ತಿಕ ಜ್ಞಾನ ಮತ್ತು ಅವುಗಳ ಸಮಯೋಚಿತ ಲೇಖನಗಳಲ್ಲಿ ನಮಗೆ ದೊರೆತ ಆನಂದವನ್ನು ಆಧಾರಿಸಿ, ಪತ್ರಿಕೆಗಳನ್ನು ಶಿಫಾರಸು ಮಾಡಲು ನಾವು ಶಕ್ತರಾಗಿರಬೇಕು.
4 ಹಳೆಯ ಸಂಚಿಕೆಗಳ ಒಳ್ಳೆಯ ಉಪಯೋಗವನ್ನು ಮಾಡಿರಿ: ಅವುಗಳ ಸಂಚಿಕೆಯ ತಾರೀಖಿನ ಒಂದು ಯಾ ಎರಡು ತಿಂಗಳೊಳಗೆ ಅವುಗಳನ್ನೆಲ್ಲ ನೀಡದಿದ್ದರೂ ಕೂಡ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಅವು ಹೊಂದಿರುವ ಮಾಹಿತಿಯು, ಸಮಯದ ಗತಿಸುವಿಕೆಯೊಂದಿಗೆ ಕಡಿಮೆ ಪ್ರಾಮುಖ್ಯವಾಗುವುದಿಲ್ಲ, ಮತ್ತು ಅವು ಉತ್ತಮ ಪರಿಸ್ಥಿತಿಯಲ್ಲಿರುವುದಾದರೆ ಹಳೆಯ ಪ್ರತಿಗಳನ್ನು ನೀಡಲು ನಾವು ಹಿಂಜರಿಯಬಾರದು. ಹಳೆಯ ಪತ್ರಿಕೆಗಳು ಶೇಖರಿಸುವಂತೆ ಬಿಡುವುದು ಮತ್ತ ಅವುಗಳನ್ನು ಎಂದೂ ಉಪಯೋಗಿಸದೆ ಇರುವುದು, ಈ ಬೆಲೆಯುಳ್ಳ ಉಪಕರಣಗಳಿಗೆ ಗಣ್ಯತೆಯ ಕೊರತೆಯನ್ನು ತೋರಿಸುತ್ತದೆ. ಸತ್ಯಗಳನ್ನು ಹೊಂದಿರುವ ಪ್ರತಿಯೊಂದು ಪತ್ರಿಕೆಗೆ ಆತ್ಮಿಕ ಹಸಿವನ್ನು ಕೆರಳಿಸುವ ಮತ್ತು ಪೂರೈಸುವ ಸಾಮರ್ಥ್ಯವು ಇದೆ. ಹಳೆಯ ಸಂಚಿಕೆಗಳನ್ನು ಬದಿಗಿಟ್ಟು, ಅವುಗಳ ಕುರಿತು ಮರೆತುಬಿಡುವುದರ ಬದಲು, ಆಸಕ್ತಿಯುಳ್ಳ ಜನರ ಕೈಯಲ್ಲಿ ಅವುಗಳನ್ನು ನೀಡಲು ಯಾ ಕಡಮೆ ಪಕ್ಷ ಜನರು ಮನೆಯಲ್ಲಿ ಇಲ್ಲದೆ ಇರುವಾಗ ಗಮನವನ್ನು ಸೆಳೆಯದೆ ಇರುವ ಸ್ಥಳದಲ್ಲಿ ಅವುಗಳನ್ನು ಬಿಡುವ ವಿಶೇಷ ಪ್ರಯತ್ನವನ್ನು ಮಾಡುವುದು ಒಳ್ಳೆಯದಾಗಿರಲಿಕ್ಕಿಲ್ಲವೆ?
5 ಆರಂಭದಲ್ಲಿ ಆತ್ಮಿಕ ಪ್ರವೃತ್ತಿಯುಳ್ಳ ವ್ಯಕ್ತಿಗಳಾಗಿರದವರಿಗೆ ತಮ್ಮ ಆತ್ಮಿಕ ಅಗತ್ಯದ ಅರಿವನ್ನು ಪಡೆಯಲು, ಎಚ್ಚರ! ಪತ್ರಿಕೆಯು ಅನೇಕರಿಗೆ ಸಹಾಯ ಮಾಡಿದೆ. ಯೆಹೋವನ ಜನರ ಆತ್ಮಿಕ ಉಣಿಸುವಿಕೆಯ ಕಾರ್ಯಕ್ರಮದಲ್ಲಿ ಕಾವಲಿನಬುರುಜು ಒಂದು ಮುಖ್ಯ ಉಪಕರಣವಾಗಿದೆ. ಈ ಪತ್ರಿಕೆಗಳು ಪರಸ್ಪರವಾಗಿ ಒಳ್ಳೆಯ ಪೂರಕಗಳಾಗಿವೆ, ಮತ್ತು ಸುಸಮಾಚಾರವು ಸಾರಲ್ಪಡುವಲ್ಲಿ ಇವು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತವೆ.
6 ಪತ್ರಿಕೆಗಳನ್ನು ನೀಡುವ ಪ್ರತಿಯೊಂದು ಅವಕಾಶದ ಪ್ರಯೋಜನವನ್ನು ನಾವು ತೆಗೆದುಕೊಳ್ಳುವಾಗ, ಕುರಿಗಳಂತಹವರ ಆತ್ಮಿಕ ಆವಶ್ಯಕತೆಗಳನ್ನು ತಲಪುವಲ್ಲಿ ಅವುಗಳ ಪರಿಣಾಮಕಾರಿತ್ವದಲ್ಲಿ ನಾವು ಪೂರ್ಣ ಭರವಸೆಯನ್ನಿಡಬಲ್ಲೆವು. ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು, ಚೆನ್ನಾಗಿ ತಯಾರಿಸಲು, ಮತ್ತು ಶುಶ್ರೂಷೆಯಲ್ಲಿ ಕ್ರಮವಾಗಿರಲು ನಾವು ಬಯಸಬೇಕು. ಸುಸಮಾಚಾರದ ಪ್ರಚಾರಕರೋಪಾದಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಉತ್ತಮ ಉಪಯೋಗವನ್ನು ನಾವೆಲ್ಲರೂ ಕ್ರಮವಾಗಿ ಮಾಡುವಂತಾಗಲಿ.