ಪ್ರಶ್ನಾ ರೇಖಾಚೌಕ
◼ ನಮ್ಮ ಕೂಟಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲಿಕ್ಕಾಗಿ ನಾವೇನನ್ನು ಮಾಡಸಾಧ್ಯವಿದೆ?
ಹಿರಿಯರು ಮತ್ತು ಶುಶ್ರೂಷಾ ಸೇವಕರು ಸಭಾ ಕೂಟಗಳನ್ನು ನಡಿಸುವುದರಿಂದ ಮತ್ತು ಹೆಚ್ಚಿನ ಭಾಗಗಳನ್ನು ನಿರ್ವಹಿಸುವುದರಿಂದ, ಅವುಗಳ ಯಶಸ್ಸಿಗಾಗಿ ಅವರು ಮಾತ್ರ ಜವಾಬ್ದಾರರಾಗಿದ್ದಾರೆಂದು ಕೆಲವರು ನೆನಸುವ ಒಲವುಳ್ಳವರಾಗಿರಬಹುದು. ನಿಜವಾಗಿಯೂ, ನಮ್ಮಲ್ಲಿ ಎಲ್ಲರೂ ಆಸಕ್ತಿಕರ ಮತ್ತು ಉಪಯುಕ್ತವಾದ ಕೂಟಗಳಿಗಾಗಿ ವೈಯಕ್ತಿಕವಾಗಿ ನೆರವನ್ನು ನೀಡಬಲ್ಲೆವು. ಈ ಮುಂದಿನ ಹತ್ತು ವಿಧಗಳಲ್ಲಿ ನಾವು ಕೂಟಗಳನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡಲು ಸಹಾಯಮಾಡಬಲ್ಲೆವು:
ಮುಂಚಿತವಾಗಿ ತಯಾರಿಸಿರಿ. ನಾವು ಚೆನ್ನಾಗಿ ತಯಾರಿಸುವಾಗ, ಕೂಟಗಳು ನಮ್ಮ ಆಸಕ್ತಿಯನ್ನು ಸೆರೆಹಿಡಿಯುತ್ತವೆ. ನಾವೆಲ್ಲರೂ ಇದನ್ನು ಮಾಡುವಾಗ, ಕೂಟಗಳು ಹೆಚ್ಚು ಆಸಕ್ತಿಕರವೂ, ಹೆಚ್ಚು ಭಕ್ತಿವೃದ್ಧಿಯನ್ನು ಉಂಟುಮಾಡುವವುಗಳೂ ಆಗಿರುತ್ತವೆ. ಕ್ರಮವಾಗಿ ಹಾಜರಾಗಿರಿ. ಒಂದು ಉಚ್ಚ ಹಾಜರಿಯು, ಉಪಸ್ಥಿತರಿರುವವರೆಲ್ಲರಿಗೆ ಹೆಚ್ಚು ಉತ್ತೇಜನಕಾರಿಯಾಗಿದ್ದು, ಹಾಜರಾಗುವ ಮಹತ್ವಕ್ಕಾಗಿರುವ ಗಣ್ಯತೆಯನ್ನು ಬಲಪಡಿಸುತ್ತದೆ. ಸಮಯಕ್ಕೆ ಸರಿಯಾಗಿ ಆಗಮಿಸಿರಿ. ಕಾರ್ಯಕ್ರಮವು ಆರಂಭಿಸುವ ಮುಂಚೆ ನಾವು ಆಸನದಲ್ಲಿರುವಲ್ಲಿ, ನಾವು ಆರಂಭದ ಗೀತೆ ಮತ್ತು ಪ್ರಾರ್ಥನೆಯಲ್ಲಿ ಜೊತೆಗೂಡಬಲ್ಲೆವು ಮತ್ತು ಈ ರೀತಿಯಲ್ಲಿ ಕೂಟದಿಂದ ಪೂರ್ಣ ಪ್ರಯೋಜನವನ್ನು ಪಡೆಯಬಲ್ಲೆವು. ಸುಸಜ್ಜಿತರಾಗಿ ಬನ್ನಿ. ನಮ್ಮ ಬೈಬಲನ್ನು ಮತ್ತು ಕೂಟದಲ್ಲಿ ಉಪಯೋಗಿಸಲಾಗುವ ಪ್ರಕಾಶನಗಳನ್ನು ತರುವ ಮೂಲಕ, ಚರ್ಚಿಸಲ್ಪಡುತ್ತಿರುವ ವಿಷಯವನ್ನು ನಾವು ಅನುಸರಿಸಿಕೊಂಡು ಹೋಗಬಹುದು ಮತ್ತು ಹೆಚ್ಚು ಉತ್ತಮವಾಗಿ ಗ್ರಹಿಸಿಕೊಳ್ಳಬಹುದು. ಅಪಕರ್ಷಣೆಗಳನ್ನು ದೂರಮಾಡಿರಿ. ನಾವು ಮುಂದೆ ಕುಳಿತುಕೊಳ್ಳುವಾಗ ಹೆಚ್ಚು ಉತ್ತಮವಾಗಿ ಕಿವಿಗೊಡಬಹುದು. ಪಿಸುಗುಟ್ಟುವುದು ಮತ್ತು ಪದೇ ಪದೇ ಶೌಚಾಲಯಕ್ಕೆ ಹೋಗುವುದು, ನಾವೂ ಇತರರೂ, ಚಿತ್ತಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡಸಾಧ್ಯವಿದೆ. ಭಾಗವಹಿಸುವವರಾಗಿರಿ. ನಮ್ಮಲ್ಲಿ ಹೆಚ್ಚಿನವರು ನಮ್ಮ ಕೈಗಳನ್ನೆತ್ತಿ ಉತ್ತರಗಳನ್ನು ಕೊಡುವಲ್ಲಿ, ಇನ್ನೂ ಹೆಚ್ಚಿನವರು ನಂಬಿಕೆಯ ಅಭಿವ್ಯಕ್ತಿಗಳಿಂದ ಉತ್ತೇಜಿಸಲ್ಪಟ್ಟು, ಭಕ್ತಿವೃದ್ಧಿಯನ್ನು ಪಡೆಯುತ್ತಾರೆ. ಸಂಕ್ಷಿಪ್ತ ಉತ್ತರಗಳನ್ನು ಕೊಡಿರಿ. ಇದು ಸಾಧ್ಯವಿರುವಷ್ಟು ಮಂದಿ ಪಾಲ್ಗೊಳ್ಳುವಂತೆ ಅವಕಾಶವನ್ನು ಕೊಡುತ್ತದೆ. ನಾವು ನಮ್ಮ ಸಂಕ್ಷಿಪ್ತ ಉತ್ತರಗಳನ್ನು, ಅಭ್ಯಾಸಮಾಡಲಾಗುತ್ತಿರುವ ವಿಷಯಕ್ಕೆ ನಿರ್ಬಂಧಿಸಬೇಕು. ನೇಮಕಗಳನ್ನು ಪೂರೈಸಿರಿ. ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿನ ವಿದ್ಯಾರ್ಥಿಗಳೋಪಾದಿ ಅಥವಾ ಸೇವಾ ಕೂಟದಲ್ಲಿ ಭಾಗವಹಿಸುವವರೋಪಾದಿ, ಚೆನ್ನಾಗಿ ತಯಾರಿಸಿರಿ, ಮುಂಚಿತವಾಗಿ ರಿಹರ್ಸ್ ಮಾಡಿ, ಮತ್ತು ನೇಮಕವನ್ನು ರದ್ದುಮಾಡದಂತೆ ಪ್ರಯತ್ನಿಸಿರಿ. ಭಾಗವಹಿಸುವವರನ್ನು ಪ್ರಶಂಸಿಸಿರಿ. ಅವರ ಪ್ರಯತ್ನಗಳನ್ನು ಎಷ್ಟು ಗಣ್ಯಮಾಡಲಾಗುತ್ತದೆಂಬುದನ್ನು ಇತರರಿಗೆ ಹೇಳಿರಿ. ಇದು ಅವರಿಗೆ ಭಕ್ತಿವೃದ್ಧಿಯನ್ನುಂಟುಮಾಡುತ್ತದೆ ಮತ್ತು ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚು ಉತ್ತಮವಾಗಿ ಮಾಡುವಂತೆ ಅವರನ್ನು ಪ್ರಚೋದಿಸುತ್ತದೆ. ಪರಸ್ಪರರನ್ನು ಉತ್ತೇಜಿಸಿರಿ. ಕೂಟಗಳ ಮುಂಚೆ ಮತ್ತು ಅನಂತರ, ದಯಾಪರ ಅಭಿವಂದನೆಗಳು, ಮತ್ತು ಭಕ್ತಿವೃದ್ಧಿಯನ್ನು ಮಾಡುವ ಸಂಭಾಷಣೆಗಳು, ಕೂಟಗಳಿಗೆ ಹಾಜರಾಗುವ ಮೂಲಕ ನಾವು ಗಳಿಸುವ ಆಹ್ಲಾದ ಮತ್ತು ಪ್ರಯೋಜನಗಳಿಗೆ ಕೂಡಿಸುತ್ತವೆ.