ಎಲ್ಲ ವಯೋಮಿತಿಯವರಿಗೆ ಕುಟುಂಬ ಸಂತೋಷ ಪುಸ್ತಕವನ್ನು ನೀಡಿರಿ
1 ಕ್ಯಾಲಿಫೋನಿರ್ಯದಲ್ಲಿರುವ 11 ವರ್ಷ ಪ್ರಾಯದ ಹುಡುಗನೊಬ್ಬ ಕುಟುಂಬ ಸಂತೋಷದ ರಹಸ್ಯ ಪುಸ್ತಕಕ್ಕಾಗಿ ತನ್ನ ಗಣ್ಯತೆಯನ್ನು ವ್ಯಕ್ತಪಡಿಸಿದನು. ಅವನು ಬರೆದುದು: “ಈ ಪುಸ್ತಕಕ್ಕಾಗಿ ನಾನು ತುಂಬ ಆಭಾರಿಯಾಗಿದ್ದೇನೆ. ಈ ಪುಸ್ತಕವನ್ನು ಇತರ ಕುಟುಂಬಗಳು ಸಹ ಓದುವಂತೆ ನಾನು ಉತ್ತೇಜಿಸುತ್ತೇನೆ, ಏಕೆಂದರೆ ಇದು ಅತ್ಯುತ್ಕೃಷ್ಟವಾದ ಪುಸ್ತಕವಾಗಿದೆ. ನಮ್ಮ ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷವು ನೆಲೆಸುವಂತೆ ಇದು . . . ನಮಗೆ ಸಹಾಯಮಾಡಿದೆ.” ಈ ಯುವಕನ ಅನುಭವವು ನಮ್ಮನ್ನು ಎಲ್ಲ ವಯೋಮಿತಿಯವರಿಗೆ ಕುಟುಂಬ ಸಂತೋಷ ಪುಸ್ತಕವನ್ನು ಕೊಡುವಂತೆ ಉತ್ತೇಜಿಸಬೇಕು. ಫೆಬ್ರವರಿ ತಿಂಗಳಿನಲ್ಲಿ ನಿಮ್ಮ ಶುಶ್ರೂಷೆಯಲ್ಲಿ ಪ್ರಯತ್ನಿಸಲು ಇಷ್ಟಪಡಬಹುದಾದ ಕೆಲವೊಂದು ಸಲಹೆಗಳು ಇಲ್ಲಿವೆ.
2 ಯುವ ವ್ಯಕ್ತಿಯನ್ನು ಭೇಟಿಯಾಗುವಾಗ ನೀವು ಹೀಗೆ ಹೇಳಸಾಧ್ಯವಿದೆ:
◼ “ನಿಮ್ಮ ವಯಸ್ಸಿನವರೇ ಆದ ಅನೇಕರು ವಿವಾಹದ ಕುರಿತಾಗಿ ಆಲೋಚಿಸುತ್ತಿದ್ದಾರೆ. ಈ ವಿಷಯದ ಕುರಿತಾಗಿ ಹೆಚ್ಚು ವಿಶ್ವಾಸಾರ್ಹ ಮಾಹಿತಿಯನ್ನು ನೀವು ಇನ್ನೆಲ್ಲಿ ಕಂಡುಕೊಳ್ಳಸಾಧ್ಯವಿದೆ? [ಉತ್ತರಕ್ಕಾಗಿ ಕಾಯಿರಿ.] ತಾವು ವಿವಾಹವಾಗಲು ಸಿದ್ಧರಿದ್ದೇವೋ ಇಲ್ಲವೋ ಎಂಬುದರ ಕುರಿತಾಗಿ ಇನ್ನೂ ಸರಿಯಾಗಿ ತಿಳಿದಿಲ್ಲ ಎಂದು ಅನೇಕ ವೇಳೆ ಯುವ ಜನರು ಹೇಳುವರು. ಈ ವಿಷಯದ ಕುರಿತು ಈ ಪುಸ್ತಕವು ಏನು ಹೇಳುತ್ತದೋ ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.” ಕುಟುಂಬ ಸಂತೋಷ ಪುಸ್ತಕದ ಪುಟ 14ರ ಪ್ಯಾರಗ್ರಾಫ್ 3ನ್ನು ಓದಿರಿ. ಅನಂತರ ಆ ಅಧ್ಯಾಯದ ಪ್ರತಿಯೊಂದು ಉಪಶೀರ್ಷಿಕೆಗೆ ಗಮನವನ್ನು ಸೆಳೆಯಿರಿ. ಅನಂತರ ಪುಸ್ತಕವನ್ನು ನೀಡಿರಿ ಮತ್ತು ಹಿಂದಿರುಗಿಹೋಗಲು ಏರ್ಪಾಡನ್ನು ಮಾಡಿರಿ.
3 ಹೆತ್ತವರಲ್ಲಿ ಒಬ್ಬರೊಂದಿಗೆ ಮಾತಾಡುವಾಗ ನೀವು ಈ ರೀತಿಯಲ್ಲಿ ಹೇಳಸಾಧ್ಯವಿದೆ:
◼“ಮಕ್ಕಳನ್ನು ಬೆಳೆಸುವುದಕ್ಕೆ ನಿಜವಾಗಿಯೂ ಸಹಾಯಮಾಡುವ ಕೆಲವೊಂದು ಪ್ರಾಯೋಗಿಕ ಮಾರ್ಗದರ್ಶನ ಸೂತ್ರಗಳನ್ನು ಹೆತ್ತವರೊಂದಿಗೆ ನಾವು ಹಂಚಿಕೊಳ್ಳುತ್ತಿದ್ದೇವೆ. ಕುಟುಂಬ ಸಂತೋಷದ ರಹಸ್ಯ ಎಂಬ ಈ ಕೈಪಿಡಿಯಲ್ಲಿ ಇವುಗಳು ಸಂಗ್ರಹಿಸಲ್ಪಟ್ಟಿವೆ.” ಅನಂತರ ಪುಟ 55ಕ್ಕೆ ತಿರುಗಿಸಿರಿ. ಪ್ಯಾರಗ್ರಾಫ್ 10ನ್ನು ಓದಿರಿ, ಮತ್ತು ಅನಂತರ ಪ್ಯಾರಗ್ರಾಫ್ನಲ್ಲಿರುವ ಧರ್ಮೋಪದೇಶಕಾಂಡ 6:6, 7ನ್ನು ಓದಿರಿ. ಆಮೇಲೆ 12ರಿಂದ 16ರ ವರೆಗಿನ ಪ್ಯಾರಗ್ರಾಫ್ಗಳಲ್ಲಿ ಓರೆ ಅಕ್ಷರಗಳಲ್ಲಿ ಮುದ್ರಿಸಲ್ಪಟ್ಟಿರುವ ವಾಕ್ಯಗಳಿಗೆ ಗಮನವನ್ನು ಸೆಳೆಯಿರಿ. ಆಮೇಲೆ ಹೀಗೆ ಮುಂದುವರಿಸಿರಿ: “ಹೆತ್ತವರೋಪಾದಿ ಹೆಚ್ಚಿನ ಯಶಸ್ಸನ್ನು ಗಳಿಸಲು ಈ ಪುಸ್ತಕವು ಅನೇಕರಿಗೆ ಸಹಾಯಮಾಡಿದೆ. ನೀವು ಇದನ್ನು ಓದಲು ಇಷ್ಟಪಡುವಿರಾದರೆ, ಈ ಪ್ರತಿಯನ್ನು ನಿಮಗೆ ನೀಡಲು ನಾನು ಸಂತೋಷಿಸುತ್ತೇನೆ.”
4 ಒಬ್ಬ ವಯಸ್ಸಾದ ವ್ಯಕ್ತಿಯೊಂದಿಗೆ ಮಾತಾಡುವಾಗ ನೀವು ಹೀಗೆ ಹೇಳಬಹುದು:
◼“ನಾನು ಈ ಚುಟುಕಾದ ಹೇಳಿಕೆಯನ್ನು ಓದಿದ ಅನಂತರ, ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿರಿ.” ಕುಟುಂಬ ಸಂತೋಷ ಪುಸ್ತಕದ 169ನೇ ಪುಟದಲ್ಲಿರುವ ಪ್ಯಾರಗ್ರಾಫ್ 17ರ ಮೊದಲ ಎರಡು ವಾಕ್ಯಗಳನ್ನು ಓದಿರಿ. ಅನಂತರ ಅವರ ಅಭಿಪ್ರಾಯವನ್ನು ಕೇಳಿರಿ. ಅವರ ಉತ್ತರದ ಮೇಲಾಧಾರಿಸಿ, ಪುಸ್ತಕವನ್ನು ನೀಡುವ ಮೊದಲು ಅದರಿಂದ ಇನ್ನೂ ಹೆಚ್ಚಿನ ವಿಷಯಗಳನ್ನು ನೀವು ಅವರಿಗೆ ಓದಿ ಹೇಳಸಾಧ್ಯವಿದೆ.
5 ಕುಟುಂಬ ಸಂತೋಷ ಪುಸ್ತಕವನ್ನು ನೀಡಿದ ಅನಂತರ ಪುನಃ ಭೇಟಿಯಾಗುವಾಗ, ಒಂದು ಬೈಬಲ್ ಅಭ್ಯಾಸವನ್ನು ಪ್ರಾರಂಭಿಸುವ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಅಪೇಕ್ಷಿಸು ಬ್ರೋಷರಿನ ಪಾಠ 8 ಅಥವಾ ಜ್ಞಾನ ಪುಸ್ತಕದ ಅಧ್ಯಾಯ 15ರಿಂದ ಅಭ್ಯಾಸವನ್ನು ಪ್ರಾರಂಭಿಸುವುದು ಯೋಗ್ಯವಾಗಿರುತ್ತದೆ. ಅದೇ ಸಮಯದಲ್ಲಿ, ಒಂದು ಕ್ರೈಸ್ತ ಕುಟುಂಬ ಜೀವಿತವನ್ನು ಕಟ್ಟುವಂತೆ ಎಲ್ಲ ವಯೋಮಿತಿಯವರಿಗೆ ಸಹಾಯಮಾಡುವುದರಲ್ಲಿ ನಾವು ಶ್ರಮಿಸೋಣ.