ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/00 ಪು. 3
  • ಪ್ರಶ್ನಾ ರೇಖಾಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ರೇಖಾಚೌಕ
  • 2000 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು
    2005 ನಮ್ಮ ರಾಜ್ಯದ ಸೇವೆ
  • ನಿಷ್ಠಾವಂತ ಕೈಗಳನ್ನೆತ್ತಿ ಪ್ರಾರ್ಥಿಸಿರಿ
    ಕಾವಲಿನಬುರುಜು—1999
  • ಪ್ರಾರ್ಥನೆ ಒಂದು ಬೆಲೆಕಟ್ಟಲಾಗದ ವರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ನಿಮ್ಮ ಪ್ರಾರ್ಥನೆಗಳು ನಿಮ್ಮ ಕುರಿತು ಏನನ್ನು ತಿಳಿಯಪಡಿಸುತ್ತವೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
2000 ನಮ್ಮ ರಾಜ್ಯದ ಸೇವೆ
km 6/00 ಪು. 3

ಪ್ರಶ್ನಾ ರೇಖಾಚೌಕ

◼ ಸಭಾ ಕೂಟಗಳಲ್ಲಿ ಯಾರು ಪ್ರಾರ್ಥನೆ ಮಾಡಬೇಕು?

ಸಭೆಯಲ್ಲಿ ಮಾಡಲಾಗುವ ಪ್ರಾರ್ಥನೆಯು, ನಮ್ಮ ಆರಾಧನೆಯ ಅತಿ ಮುಖ್ಯ ಭಾಗವಾಗಿದೆ. ಯೆಹೋವನ ಮುಂದೆ ಇತರರನ್ನು ಪ್ರತಿನಿಧಿಸುವುದು ಒಂದು ಅಮೂಲ್ಯವಾದ ಸುಯೋಗವಾಗಿದೆ ಮತ್ತು ಒಂದು ಗಂಭೀರವಾದ ಜವಾಬ್ದಾರಿಯಾಗಿದೆ. ಇಂತಹ ಪ್ರಾರ್ಥನೆಗಳ ಮಹತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು, ಯಾವ ಸಹೋದರರು ಕೂಟಗಳಲ್ಲಿ ಪ್ರಾರ್ಥನೆಯನ್ನು ಮಾಡಲು ಅರ್ಹರಾಗಿದ್ದಾರೆ ಎಂಬುದನ್ನು ನಿರ್ಧರಿಸುವಾಗ ಹಿರಿಯರು ವಿವೇಚನಾಶಕ್ತಿಯನ್ನು ಉಪಯೋಗಿಸುವ ಅಗತ್ಯವಿದೆ. ಸಭೆಯ ಪರವಾಗಿ ಪ್ರಾರ್ಥಿಸುವ ದೀಕ್ಷಾಸ್ನಾನಿತ ಸಹೋದರರು ಪ್ರೌಢ ಕ್ರೈಸ್ತ ಶುಶ್ರೂಷಕರಾಗಿರಬೇಕು. ಸಭೆಯಲ್ಲಿ ಒಳ್ಳೆಯ ಮಾದರಿಯನ್ನಿಟ್ಟವರಾಗಿರಬೇಕು ಮತ್ತು ಸಭೆಯಲ್ಲಿರುವವರ ಗೌರವಕ್ಕೆ ಪಾತ್ರರಾಗಿರುವವರಾಗಿರಬೇಕು. ಭಯಭಕ್ತಿಯಿಂದ ಕೂಡಿದ ಹಾಗೂ ಗೌರವಭರಿತವಾದ ಅವರ ಪ್ರಾರ್ಥನೆಗಳು, ಯೆಹೋವ ದೇವರೊಂದಿಗೆ ಅವರಿಗಿರುವ ಒಳ್ಳೆಯ ಸಂಬಂಧವನ್ನು ಪ್ರತಿಬಿಂಬಿಸಬೇಕು. ಈ ವಿಷಯದಲ್ಲಿ, ಕಾವಲಿನಬುರುಜು ಪತ್ರಿಕೆಯ ಜೂನ್‌ 1, 1987ರ ಸಂಚಿಕೆಯಲ್ಲಿ “ಇತರರ ಮುಂದೆ ದೀನ ಹೃದಯದಿಂದ ಪ್ರಾರ್ಥಿಸುವದು” ಎಂಬ ಲೇಖನವು ಬಂದಿತ್ತು. ಸಭೆಯ ಪರವಾಗಿ ಸಾರ್ವಜನಿಕವಾಗಿ ಪ್ರಾರ್ಥಿಸುವವರಿಗೆ ವಿಶೇಷವಾದ ರೀತಿಯಲ್ಲಿ ಸಹಾಯವನ್ನು ನೀಡುವ ಪ್ರಮುಖ ಸೂಚನೆಗಳನ್ನು ಈ ಲೇಖನವು ಒದಗಿಸುತ್ತದೆ.

ಸಂಶಯಾಸ್ಪದವಾದ ಅಥವಾ ಹುಡುಗಾಟದ ಸ್ವಭಾವವುಳ್ಳ ಒಬ್ಬ ಸಹೋದರನು ಸಭೆಯ ಪರವಾಗಿ ಪ್ರಾರ್ಥಿಸುವಂತೆ ಹಿರಿಯರು ಅನುಮತಿಸಲಾರರು. ಯಾವಾಗಲೂ ಗುಣುಗುಟ್ಟುವ ಅಥವಾ ಸಾರ್ವಜನಿಕವಾದ ಪ್ರಾರ್ಥನೆಯ ಮೂಲಕ ಬೇರೆಯವರೊಂದಿಗೆ ತನಗಿರುವ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಎಲ್ಲರ ಗಮನಕ್ಕೆ ತರುವ ಸ್ವಭಾವದವನಾಗಿರುವ ಒಬ್ಬ ಸಹೋದರನನ್ನು ಹಿರಿಯರು ಆಯ್ಕೆಮಾಡಲಾರರು. (1 ತಿಮೊ. 2:8) ಹದಿಪ್ರಾಯದ ಒಬ್ಬ ಸಹೋದರನು ದೀಕ್ಷಾಸ್ನಾನವನ್ನು ಪಡೆದುಕೊಂಡಿರಬಹುದಾದರೂ, ಸಭೆಯ ಪರವಾಗಿ ಪ್ರಾರ್ಥಿಸಲು ಅಗತ್ಯವಿರುವಂತಹ ಆತ್ಮಿಕ ಪ್ರೌಢತೆ ಅವನಲ್ಲಿದೆಯೋ ಎಂಬುದನ್ನು ಹಿರಿಯರು ನಿರ್ಧರಿಸತಕ್ಕದ್ದು.—ಅ. ಕೃತ್ಯಗಳು 16:1, 2.

ಕೆಲವೊಮ್ಮೆ ಕ್ಷೇತ್ರ ಸೇವೆಗಾಗಿರುವ ಕೂಟಗಳಲ್ಲಿ ಗುಂಪಿನ ಪರವಾಗಿ ಪ್ರಾರ್ಥನೆಯನ್ನು ಮಾಡಲು ಅರ್ಹನಾದ ಸಹೋದರನು ಇರುವುದಿಲ್ಲ ಎಂದಿಟ್ಟುಕೊಳ್ಳಿ. ಆಗ ದೀಕ್ಷಾಸ್ನಾನ ಪಡೆದುಕೊಂಡಿರುವ ಒಬ್ಬ ಸಹೋದರಿಯು ಪ್ರಾರ್ಥನೆಯನ್ನು ಮಾಡಬೇಕಾಗಬಹುದು. ಅಂತಹ ಸಂದರ್ಭದಲ್ಲಿ, ಅವಳು ತಲೆಗೆ ಮುಸುಕನ್ನು (ಹೆಡ್‌ ಕವರಿಂಗ್‌) ಹಾಕಿಕೊಳ್ಳುವ ಅಗತ್ಯವಿದೆ. ಒಂದುವೇಳೆ ಕ್ಷೇತ್ರ ಸೇವೆಗಾಗಿರುವ ಕೂಟಗಳಿಗೆ ಒಬ್ಬ ಅರ್ಹ ಸಹೋದರನು ಬರುವುದಿಲ್ಲ ಎಂಬುದು ಗೊತ್ತಾಗುವಲ್ಲಿ, ಅರ್ಹಳಾದ ಒಬ್ಬ ಸಹೋದರಿಯು ಮುಂದಾಳತ್ವವನ್ನು ತೆಗೆದುಕೊಳ್ಳುವಂತೆ ಹಿರಿಯರು ನೇಮಿಸತಕ್ಕದ್ದು.

ಯಾರು ಬಹಿರಂಗ ಭಾಷಣಕ್ಕೆ ಅಧ್ಯಕ್ಷರಾಗಿರುತ್ತಾರೋ ಅವರು ಆರಂಭದ ಪ್ರಾರ್ಥನೆಯನ್ನು ಮಾಡುವುದು ಒಂದು ವಾಡಿಕೆಯಾಗಿದೆ. ಆದರೆ, ಬೇರೆ ಸಭಾ ಕೂಟಗಳಲ್ಲಿ, ಬಹಳಷ್ಟು ಅರ್ಹ ಸಹೋದರರು ಲಭ್ಯವಿರುವಾಗ ಸನ್ನಿವೇಶವು ಬೇರೆಯಾಗಿರುತ್ತದೆ. ಅಂದರೆ, ಕೂಟವನ್ನು ಆರಂಭಿಸುವ ಸಹೋದರನಿಗೆ ಬದಲಾಗಿ ಬೇರೊಬ್ಬ ಸಹೋದರನು ಅಥವಾ ಅಂದಿನ ಕೂಟದಲ್ಲಿ ಕೊನೆಯ ಭಾಗವನ್ನು ಕೊಡಲಿರುವ ಸಹೋದರನು ಆರಂಭದ ಇಲ್ಲವೆ ಸಮಾಪ್ತಿಯ ಪ್ರಾರ್ಥನೆಗಳನ್ನು ಮಾಡಬಹುದು. ಏನೇ ಆಗಲಿ, ಒಬ್ಬ ಸಹೋದರನಿಗೆ ಸಭಾ ಕೂಟಗಳಲ್ಲಿ ಪ್ರಾರ್ಥಿಸುವ ನೇಮಕವನ್ನು ಕೊಡುವಾಗ, ಮುಂಚಿತವಾಗಿಯೇ ಅವನಿಗೆ ಇದರ ಬಗ್ಗೆ ತಿಳಿಸಬೇಕು. ಹೀಗೆ ಮಾಡಿದರೆ, ಪ್ರಾರ್ಥನೆಯಲ್ಲಿ ಏನೇನು ಹೇಳಬೇಕೆಂಬುದರ ಕುರಿತು ಅವನು ಮುಂಚಿತವಾಗಿಯೇ ಯೋಚಿಸಲು ಸಾಧ್ಯವಾಗುತ್ತದೆ. ಮತ್ತು ಆಗ ನಿರ್ದಿಷ್ಟವಾಗಿ ಆ ಕೂಟಕ್ಕೆ ಸರಿಹೊಂದುವಂತಹ, ಸಮರ್ಪಕವಾದ ಹಾಗೂ ಮನಃಪೂರ್ವಕವಾದ ಪ್ರಾರ್ಥನೆಯನ್ನು ಅವನು ಮಾಡಸಾಧ್ಯವಿದೆ.

ಇಂತಹ ಪ್ರಾರ್ಥನೆಗಳು ಉದ್ದವಾಗಿರಬೇಕಾಗಿಲ್ಲ. ಒಬ್ಬ ಸಹೋದರನು ಸಾರ್ವಜನಿಕವಾಗಿ ಪ್ರಾರ್ಥಿಸುವಾಗ, ಅವನು ಎದ್ದುನಿಂತುಕೊಂಡು, ಎಲ್ಲರಿಗೂ ಕೇಳಿಸುವಷ್ಟು ಗಟ್ಟಿಯಾದ ಧ್ವನಿಯಲ್ಲಿ, ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸುವಲ್ಲಿ ಎಲ್ಲರೂ ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿದೆ. ಮತ್ತು ಆಗ ಅಲ್ಲಿ ಕೂಡಿಬಂದಿರುವವರೆಲ್ಲರೂ ಪ್ರಾರ್ಥನೆಯನ್ನು ಸರಿಯಾಗಿ ಕೇಳಿಸಿಕೊಂಡು, ಕೊನೆಯಲ್ಲಿ ಹೃದಯದಾಳದಿಂದ “ಆಮೆನ್‌” ಎಂದು ಹೇಳಸಾಧ್ಯವಿದೆ.—1 ಪೂರ್ವ. 16:36; 1 ಕೊರಿಂ. 14:16.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ