ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 8/02 ಪು. 1
  • ಆತ್ಮಿಕ ಗುರಿಗಳನ್ನಿಡಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆತ್ಮಿಕ ಗುರಿಗಳನ್ನಿಡಿರಿ
  • 2002 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಯುವ ಜನರೇ—ನಿಮ್ಮ ಆತ್ಮಿಕ ಗುರಿಗಳು ಏನಾಗಿವೆ?
    1997 ನಮ್ಮ ರಾಜ್ಯದ ಸೇವೆ
  • ನೀವು ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ಹೇಗೆ ತಲಪಬಲ್ಲಿರಿ?
    2006 ನಮ್ಮ ರಾಜ್ಯದ ಸೇವೆ
  • ಆತ್ಮಿಕ ಗುರಿಗಳ ಕಡೆಗೆ ನೀವು ಕುಟುಂಬವಾಗಿ ಕಾರ್ಯನಡಿಸುತ್ತೀರೋ?
    1991 ನಮ್ಮ ರಾಜ್ಯದ ಸೇವೆ
  • ನಿಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಆಧ್ಯಾತ್ಮಿಕ ಗುರಿಗಳನ್ನು ಉಪಯೋಗಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
2002 ನಮ್ಮ ರಾಜ್ಯದ ಸೇವೆ
km 8/02 ಪು. 1

ಆತ್ಮಿಕ ಗುರಿಗಳನ್ನಿಡಿರಿ

1 ಯೆಹೋವನನ್ನು ನಿತ್ಯಕ್ಕೂ ಸ್ತುತಿಸುವುದು ಎಂತಹ ಸುಯೋಗವಾಗಿರುವುದು! ಆ ಗುರಿಯನ್ನು ಸಾಧಿಸುವಂತೆ ನಮಗೆ ಸಹಾಯಮಾಡಲಿಕ್ಕಾಗಿ, ನಾವು ಸದ್ಯದಲ್ಲಿ ಆತ್ಮಿಕ ಗುರಿಗಳನ್ನು ಇಟ್ಟುಕೊಂಡು, ಅವುಗಳನ್ನು ಸಾಧಿಸಲಿಕ್ಕಾಗಿ ಶ್ರಮಿಸಬಲ್ಲೆವು. ಇದು ನಾವು ನಮ್ಮ ಶಕ್ತಿಗಳನ್ನು ವಿವೇಕಪ್ರದವಾಗಿ ಉಪಯೋಗಿಸುವಂತೆ ಮಾಡುತ್ತದೆ. (1 ಕೊರಿಂ. 9:26) ಯಾವ ಗುರಿಗಳು ನಿಮಗೆ ಸಾಧಿಸಲು ಸಾಧ್ಯವಾದವುಗಳಾಗಿರಬಹುದು?

2 ಬೈಬಲ್‌ ಅಧ್ಯಯನ: ನೀವು ಪ್ರತಿಯೊಂದು ಸಭಾ ಕೂಟಕ್ಕಾಗಿ ತಯಾರಿಸುತ್ತೀರೋ? ಹೌದಾದರೆ, ನೀವು ಅಧ್ಯಯನ ಮಾಡುವಾಗ ಸಂಶೋಧನೆಗಾಗಿ ಮತ್ತು ಮನನಮಾಡಲಿಕ್ಕಾಗಿ ಸಮಯವನ್ನು ಬದಿಗಿರಿಸುತ್ತೀರೋ? ಉದಾಹರಣೆಗೆ, ಸಾಪ್ತಾಹಿಕ ಕಾವಲಿನಬುರುಜು ಅಧ್ಯಯನ ಮತ್ತು ಸಭಾ ಪುಸ್ತಕ ಅಧ್ಯಯನಕ್ಕಾಗಿ ತಯಾರಿಸುವಾಗ, ನೀವು ಕೇವಲ ಉತ್ತರಗಳಿಗೆ ಅಡಿಗೆರೆ ಹಾಕುತ್ತೀರೋ ಅಥವಾ ಉದ್ಧೃತ ವಚನಗಳನ್ನು ತೆರೆದು ನೋಡಿ, ಕೊಡಲ್ಪಟ್ಟಿರುವ ವಿವರಣೆಗಳಿಗೆ ಕಾರಣಗಳೇನು ಎಂಬುದರ ಕುರಿತೂ ಯೋಚಿಸುತ್ತೀರೊ? ಪ್ರತಿ ವಾರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿ ನೇಮಿಸಲ್ಪಟ್ಟಿರುವ ಬೈಬಲ್‌ ಓದುವಿಕೆಯ ಭಾಗದಿಂದ ತೆಗೆದ ಕೆಲವು ಅಂಶಗಳ ಕುರಿತು ಸಂಶೋಧನೆ ಮಾಡುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಬಲ್ಲಿರೋ? ಇಂತಹ ಆತ್ಮಿಕ ಸಂಶೋಧನೆಯು ಸಮಯ ಮತ್ತು ಪ್ರಯತ್ನವನ್ನು ಕೇಳಿಕೊಳ್ಳುತ್ತದೆ ನಿಜ, ಆದರೆ ಅದು ಹೇರಳವಾದ ಆತ್ಮಿಕ ಪ್ರತಿಫಲಗಳನ್ನು ತರುತ್ತದೆ.​—⁠ಜ್ಞಾನೋ. 2:4, 5.

3 ಸಭಾ ಕೂಟಗಳು: ಮತ್ತೊಂದು ಗುರಿಯು, ಎಲ್ಲಾ ಐದು ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದೇ ಆಗಿದೆ. ಜೊತೆ ವಿಶ್ವಾಸಿಗಳೊಂದಿಗೆ ಸಹವಾಸಮಾಡಲಿಕ್ಕಾಗಿ ಮತ್ತು ಆರಂಭದ ಗೀತೆ ಹಾಗೂ ಪ್ರಾರ್ಥನೆಯಲ್ಲಿ ಭಾಗವಹಿಸಲಿಕ್ಕಾಗಿ ಸಾಕಷ್ಟು ಮುಂಚಿತವಾಗಿ ಬರುವುದು, ಸಭೆಯ ಆತ್ಮವನ್ನು ಬಲಗೊಳಿಸಲು ಸಹಾಯಮಾಡುತ್ತದೆ. ನಾವು ಪ್ರತಿಯೊಂದು ಕೂಟದಲ್ಲಿ ಹೇಳಿಕೆ ನೀಡಲಿಕ್ಕಾಗಿ ಮತ್ತು ನಮ್ಮ ಹೇಳಿಕೆಗಳನ್ನು ಉತ್ತಮಗೊಳಿಸಲು ಪ್ರಯತ್ನಿಸಲಿಕ್ಕಾಗಿಯೂ ಪ್ರಯಾಸಪಡಬಹುದು. ಪ್ರಾಯಶಃ ಪ್ಯಾರಗ್ರಾಫ್‌ನಲ್ಲಿರುವ ಒಂದು ಶಾಸ್ತ್ರವಚನವು ಹೇಗೆ ಚರ್ಚೆಗೆ ಸಂಬಂಧಿಸಿದ್ದಾಗಿದೆ ಎಂಬುದನ್ನು ನಾವು ತೋರಿಸಬಹುದು ಅಥವಾ ವಿಷಯವು ಹೇಗೆ ದೈನಂದಿನ ಜೀವಿತಕ್ಕೆ ಅನ್ವಯಿಸುತ್ತದೆ ಎಂಬುದನ್ನು ಸೂಚಿಸಬಹುದು.​—⁠ಇಬ್ರಿ. 10:24, 25.

4 ಕ್ಷೇತ್ರ ಸೇವೆ: ನಮ್ಮ ಶುಶ್ರೂಷೆಯು ಹೆಚ್ಚೆಚ್ಚು ಉತ್ತಮಗೊಳ್ಳುವುದು ನಾವು ಗುರಿಗಳನ್ನಿಟ್ಟುಕೊಳ್ಳುವಾಗಲೇ. ನೀವು ಪ್ರತಿ ತಿಂಗಳು ಸೇವೆಯಲ್ಲಿ ವ್ಯಯಿಸಲು ಯೋಜಿಸುವ ತಾಸುಗಳ ವೈಯಕ್ತಿಕ ಗುರಿಯು ನಿಮಗಿದೆಯೋ? ಕೆಲವರು ಅದನ್ನು ಸಹಾಯಕರವಾದದ್ದಾಗಿ ಕಂಡುಕೊಳ್ಳುತ್ತಾರೆ. ಅಥವಾ ಶುಶ್ರೂಷೆಯ ಯಾವುದಾದರೊಂದು ಅಂಶದಲ್ಲಿ, ಅಂದರೆ ಮನೆಯಿಂದ ಮನೆಯ ಚಟುವಟಿಕೆಯಲ್ಲಿ ಬೈಬಲನ್ನು ಉಪಯೋಗಿಸುವುದರಲ್ಲಿ, ಹೆಚ್ಚು ಅರ್ಥಭರಿತವಾದ ಪುನರ್ಭೇಟಿಗಳನ್ನು ಮಾಡುವುದರಲ್ಲಿ, ಒಂದು ಬೈಬಲ್‌ ಅಧ್ಯಯನವನ್ನು ಪ್ರಾರಂಭಿಸಲು ಪ್ರಯಾಸಪಡುವುದರಲ್ಲಿ, ಅಥವಾ ಅಧ್ಯಯನಗಳಲ್ಲಿ ಪರಿಣಾಮಕಾರಿಯಾಗಿ ಬೋಧಿಸುವಂತಹ ವಿಷಯಗಳಲ್ಲಿ ನೀವು ಅಭಿವೃದ್ಧಿಮಾಡಬಹುದೋ?

5 ಹೆತ್ತವರೇ, ನಿಮ್ಮ ಮಕ್ಕಳು ಯೆಹೋವನ ಸೇವೆಯಲ್ಲಿ ಗುರಿಗಳನ್ನು ಇಡುವಂತೆ ನೀವು ಅವರನ್ನು ಉತ್ತೇಜಿಸುತ್ತಿದ್ದೀರೋ? ಒಬ್ಬ ಪಯನೀಯರನಾಗಿಯೋ ಅಥವಾ ಬೆತೆಲ್‌ ಕುಟುಂಬದ ಒಬ್ಬ ಸದಸ್ಯನಾಗಿಯೋ ಸೇವೆಮಾಡುವುದು ಹೇಗೆ ಯೆಹೋವನಿಗಾಗಿರುವ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲಿಕ್ಕಾಗಿರುವ ಒಂದು ಅತ್ಯುತ್ತಮವಾದ ವಿಧವಾಗಿದೆ ಎಂಬುದನ್ನು ನೋಡಲು ಅವರಿಗೆ ಸಹಾಯಮಾಡಿರಿ.​—⁠ಪ್ರಸಂ. 12:⁠1.

6 ನಾವು ನಮ್ಮ ಚಟುವಟಿಕೆಗಳನ್ನು ಪರಿಶೀಲಿಸಿ, ಆತ್ಮಿಕ ಗುರಿಗಳನ್ನಿಟ್ಟು, ಅವುಗಳನ್ನು ಸಾಧಿಸಲು ಪ್ರಯತ್ನಿಸುವಾಗ, ನಾವು ನಮ್ಮ ಸೇವೆಯಲ್ಲಿ ಅತ್ಯಾನಂದವನ್ನು ಕಂಡುಕೊಳ್ಳುವೆವು ಮತ್ತು ಇತರರಿಗೆ ಪ್ರೋತ್ಸಾಹದ ಮೂಲವಾಗಿರುವೆವು.​—⁠ರೋಮಾ. 1:⁠11.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ