“ದೇವರನ್ನು ಘನಪಡಿಸಿರಿ” 2003ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ
1 ಯೆಹೋವನು ತನ್ನ ನಂಬಿಗಸ್ತ ಪ್ರವಾದಿಯಾದ ಯೆಶಾಯನ ಮೂಲಕ ಆಜ್ಞಾಪಿಸಿದ್ದು: “ನನ್ನ ಜನರೇ, ಆಲಿಸಿರಿ! ನನ್ನ ಪ್ರಜೆಗಳೇ, ಕಿವಿಗೊಡಿರಿ!” (ಯೆಶಾ. 51:4) ಈ ಕಡೇ ದಿವಸದ ಕಠಿನಕಾಲದಲ್ಲಿ, ಯೆಹೋವನ ಆಜ್ಞೆಗಳನ್ನು ಆಲಿಸುವುದು ಹಿಂದೆಂದಿಗಿಂತಲೂ ಹೆಚ್ಚು ಪ್ರಾಮುಖ್ಯವಾಗಿದೆ ಎಂದು ನಾವು ಒಪ್ಪಿಕೊಳ್ಳುವುದಿಲ್ಲವೋ? ಯೆಹೋವನಿಗೆ ನಾವು ‘ಕಿವಿಗೊಡುವ’ ಒಂದು ವಿಧವು, ಆರಾಧನೆಗಾಗಿ ಒಟ್ಟುಗೂಡಲು ಆತನು ಕೊಟ್ಟ ಆಜ್ಞೆಗೆ ವಿಧೇಯರಾಗುವ ಮೂಲಕವೇ. ಇದನ್ನು ಮಾಡಲು, ನಮ್ಮ ವಾರ್ಷಿಕ ಜಿಲ್ಲಾ ಅಧಿವೇಶನ ನಮಗೆ ಒದಗಿಸುವ ವಿಶೇಷ ಸಂದರ್ಭಕ್ಕಾಗಿ ನಾವು ಎಂಥ ಕುತೂಹಲದಿಂದ ಎದುರುನೋಡುತ್ತಿದ್ದೇವೆ! ಇಸವಿ 2003ರಲ್ಲಿ, ಭಾರತದ ಬ್ರಾಂಚ್ಗೆ ಸೇರಿದ ಕ್ಷೇತ್ರದಲ್ಲಿ ಅನೇಕ ಜಿಲ್ಲಾ ಅಧಿವೇಶನಗಳು ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯಿಂದ ಪುನಃ ಏರ್ಪಡಿಸಲ್ಪಟ್ಟಿವೆ.
2 ಕಳೆದ ವರುಷ ಭಾರತದಲ್ಲಿ ನಡೆದ, ಆತ್ಮಿಕವಾಗಿ ಚೈತನ್ಯ ನೀಡುವ “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನಕ್ಕೆ 33,372 ಮಂದಿ ಹಾಜರಾಗಿದ್ದರು. ಅಷ್ಟುಮಾತ್ರವಲ್ಲದೆ, ಏರ್ಪಡಿಸಲ್ಪಟ್ಟಿದ್ದ ಒಂಭತ್ತು ಅಧಿವೇಶನಗಳಲ್ಲಿ ಒಟ್ಟು 807 ಮಂದಿ ತಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದರು ಎಂಬುದನ್ನು ತಿಳಿದುಕೊಳ್ಳುವುದು ಹುರಿದುಂಬಿಸುವ ವಿಷಯವಾಗಿದೆ. ಈ ಅಧಿವೇಶಗಳಿಗಾಗಿ ಮಾಡಲಾದ ಏರ್ಪಾಡನ್ನು ನೋಡಿ, ಅಧಿವೇಶನದ ಪ್ರತಿನಿಧಿಗಳು ಆಳವಾಗಿ ಪ್ರಭಾವಿತರಾದರು. ನಾಲ್ಕು ಅಧಿವೇಶನ ನಗರ (ಕೊಚ್ಚಿ, ಚೆನ್ನೈ, ಮುಂಬಯಿ, ಮತ್ತು ಸಿಕಂದರಾಬಾದ್) ವಾಸಿಗಳಾದ ಸಹೋದರ ಸಹೋದರಿಯರು ದೇಶದ ಎಲ್ಲಾ ಕಡೆಗಳಿಂದ ಬಂದ ಸಾವಿರಾರು ಪ್ರತಿನಿಧಿಗಳನ್ನು ಸತ್ಕರಿಸಿದರು. ಇವರಲ್ಲಿ ಹೆಚ್ಚಿನವರು ಇಂಥ ಒಂದು ದೊಡ್ಡ ಕೂಟಕ್ಕೆ ಹಾಜರಾದ್ದದ್ದು, ಅವರ ಜೀವಿತದಲ್ಲಿ ಇದೇ ಪ್ರಥಮ ಬಾರಿಯಾಗಿತ್ತು. ಖಂಡಿತವಾಗಿಯೂ, ಎಲ್ಲಾ ಪ್ರತಿನಿಧಿಗಳು ಆನಂದದಾಯಕ ಸಹವಾಸವನ್ನು ಮತ್ತು ಆತ್ಮಿಕ ಪೋಷಣೆಯನ್ನು ಅನುಭವಿಸಿದರು. ಇಂಥ ಉತ್ತೇಜನದಿಂದ ನಾವು ನಮ್ಮ ಪ್ರೀತಿ ಮತ್ತು ಸತ್ಕಾರ್ಯಗಳಲ್ಲಿ ಹೆಚ್ಚನ್ನು ಮಾಡುವಂತೆ ಪ್ರಚೋದಿಸಲ್ಪಡಲಿಲ್ಲವೋ? ಈ ಪ್ರಸನ್ನತೆಯಕಾಲದಲ್ಲಿ ದೇವರನ್ನು ಘನಪಡಿಸುವಂತೆ ಅನೇಕರಿಗೆ ಸಹಾಯಮಾಡಲು ನಾವೀಗ ಹೆಚ್ಚು ಸಿದ್ಧರೂ ಪ್ರಚೋದಿತರೂ ಆಗಿದ್ದೇವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.—2 ಕೊರಿಂ. 6:1, 2.
3 ಇಸವಿ 2003ರ ಜಿಲ್ಲಾ ಅಧಿವೇಶನಗಳಿಗಾಗಿ ನಾವು ಮುನ್ನೋಡುತ್ತಿದ್ದಂತೆ, ನಮ್ಮ ಅಮೂಲ್ಯವಾದ ಸಹೋದರತ್ವದಲ್ಲಿ ಆನಂದಿಸಲು ಮತ್ತು ಯೆಹೋವನು ನಮ್ಮಲ್ಲಿ ಸಾಧ್ಯಗೊಳಿಸಿರುವ ಐಕ್ಯತೆಗಾಗಿ ಆತನಿಗೆ ಉಪಕಾರಸಲ್ಲಿಸಲು ಹೊಸ ಸಂದರ್ಭಕ್ಕಾಗಿ ಎದುರುನೋಡುವೆವು. ನಮ್ಮ ಅಧಿವೇಶನಕ್ಕಾಗಿ ಈಗ ಮಾಡಲಾಗುತ್ತಿರುವ ಏರ್ಪಾಡಿನಿಂದ ಪೂರ್ಣ ಪ್ರಯೋಜನವನ್ನು ಪಡೆಯಬೇಕಾದರೆ ನಾವೇನು ಮಾಡಸಾಧ್ಯವಿದೆ?
4 ಎಲ್ಲಾ ದಿನಗಳಿಗೆ ಹಾಜರಾಗಿರಿ: ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದಿಂದ ಒದಗಿಸಲ್ಪಡುವ ಬೋಧನೆಗಳಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ಎಲ್ಲಾ ದಿನಗಳ ಕಾರ್ಯಕ್ರಮಕ್ಕೆ ತಪ್ಪದೆ ಹಾಜರಾಗುವಂತೆ ನಾವು ನೋಡಿಕೊಳ್ಳಬೇಕು. (ಮತ್ತಾ. 24:45) ಅಧಿವೇಶನಕ್ಕೆ ಪ್ರಯಾಣಿಸಿ ಎಲ್ಲಾ ದಿನಗಳಿಗೆ ಹಾಜರಾಗುವಂತೆ ನೀವು ನಿಮ್ಮ ಧಣಿಯಿಂದ ಬಿಡುವನ್ನು ಕೇಳಬೇಕಾಗಿದೆಯೋ? ನೆಹೆಮೀಯನು, ಪೌಳಿಗೋಡೆಯ ಪುನಃನಿರ್ಮಾಣಕ್ಕಾಗಿ ಯೆರೂಸಲೇಮಿಗೆ ಹೋಗಲು ಅರಸನಾದ ಅರ್ತಷಸ್ತನಲ್ಲಿ ಅಪ್ಪಣೆಯನ್ನು ಕೇಳುವ ಮೊದಲು, “ಪರಲೋಕದ ದೇವರನ್ನು ಪ್ರಾರ್ಥಿಸಿ”ದನು (ನೆಹೆ. 2:4) ಅದೇ ರೀತಿಯಲ್ಲಿ, ನೀವು ಸಹ ಅಧಿವೇಶನದ ಎಲ್ಲಾ ಮೂರು ದಿನಗಳಿಗೆ ಹಾಜರಾಗುವಂತೆ ನಿಮ್ಮ ಧಣಿಯಿಂದ ಬಿಡುವನ್ನು ಕೇಳಲು ಬೇಕಾಗಿರುವ ಧೈರ್ಯಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸಬೇಕು. ನಿಮಗೆ ಬಿಡುವನ್ನು ನೀಡಲು ನಿಮ್ಮ ಧಣಿಗೆ ಇಷ್ಟವಿಲ್ಲದಿರುವಲ್ಲಿ ಆಗೇನು? ಅಧಿವೇಶನದಲ್ಲಿ ನಾವು ಪಡೆದುಕೊಳ್ಳಲಿರುವ ಶಿಕ್ಷಣವು, ಒಬ್ಬ ಪ್ರಾಮಾಣಿಕ, ಶ್ರದ್ಧೆಯ, ಮತ್ತು ನಂಬಿಗಸ್ತ ಕೆಲಸದವರಾಗಿರಲು ನಮಗೆ ಸಹಾಯಮಾಡುತ್ತದೆ ಎಂಬುದನ್ನು ಅವನಿಗೆ ವಿವರಿಸಿದರೆ ಒಂದುವೇಳೆ ಅವನು ಯೋಗ್ಯ ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಅದಕ್ಕೆ ಕೂಡಿಕೆಯಾಗಿ, ನಮಗೆ ಅವಿಶ್ವಾಸಿಗಳಾದ ಕುಟುಂಬ ಸದಸ್ಯರಿರುವುದಾದರೆ ಅವರಿಗೆ ಆದಷ್ಟು ಮುಂಚಿತವಾಗಿ ನಮ್ಮ ಅಧಿವೇಶನ ಯೋಜನೆಗಳನ್ನು ತಿಳಿಸುವುದು ಯೋಗ್ಯವಾಗಿದೆ.
5 ವಸತಿಸೌಕರ್ಯಕ್ಕಾಗಿ ಹೊಸ ಏರ್ಪಾಡು: ದೊಡ್ಡ ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವವರಿಗೆ ವಸತಿಸೌಕರ್ಯಗಳನ್ನು ಏರ್ಪಡಿಸುವುದು ಯಾವಾಗಲೂ ಒಂದು ಪ್ರಧಾನ ಜವಾಬ್ದಾರಿಯಾಗಿದೆ. ಇಂದು ಹೆಚ್ಚಿನವರು ಹೋಟೆಲುಗಳಲ್ಲಿ ಅಥವಾ ಡಾರ್ಮಿಟರಿಗಳಲ್ಲಿ ತಂಗಲು ಬಯಸುತ್ತಾರೆ. ಅಧಿವೇಶನದ ರೂಮಿಂಗ್ ವಿಭಾಗದಲ್ಲಿರುವವರು, ಸಹೋದರರನ್ನು ಹೋಟೆಲುಗಳಲ್ಲಿ, ಅದರಲ್ಲೂ ಕೆಲವು ಸಂದರ್ಭಗಳಲ್ಲಿ ಕಡಿಮೆ ದರದಲ್ಲಿ ತಂಗುವಂತೆ ಸಹಾಯಮಾಡಲು ಸಂತೋಷಿಸುತ್ತಾರಾದರೂ, ಹೆಚ್ಚಿನ ಸಹೋದರರು ತಮಗೆ ಬೇಕಾದ ಏರ್ಪಾಡುಗಳನ್ನು ಸ್ವತಃ ಮಾಡಿಕೊಳ್ಳಲು ಬಯಸುತ್ತಾರೆ.
6 ಪ್ರತಿಯೊಬ್ಬರಿಗೂ ನೆರವು ನೀಡುವ ಸಲುವಾಗಿ ಮತ್ತು ವಸತಿಸೌಕರ್ಯದ ಏರ್ಪಾಡನ್ನು ಸರಳೀಕರಿಸಲು, ಈ ವರುಷ “ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನವನ್ನು ಹಾಜರಾಗುವವರಿಗೆ ವಸತಿಸೌಕರ್ಯಕ್ಕಾಗಿ ಹೊಸ ಏರ್ಪಾಡನ್ನು ಮಾಡಲು ಬ್ರಾಂಚ್ ಆಫೀಸ್ ನಿರ್ಣಯಿಸಿದೆ. ರೂಮಿಂಗ್ ವಿಭಾಗವು ಹೋಟೆಲಿನ ರೂಮಿಗಾಗಿ ಯಾವುದೇ ಮುಂಚಿತವಾದ ಬುಕಿಂಗನ್ನು ಮಾಡುವುದಿಲ್ಲ. ಆದರೆ ಅದಕ್ಕೆ ಬದಲಾಗಿ, ಆಸಕ್ತ ಸಹೋದರ ಸಹೋದರಿಯರು ತಮ್ಮ ಸ್ವಂತ ಏರ್ಪಾಡನ್ನು ನೇರವಾಗಿ ಹೋಟೆಲುಗಳನ್ನು ಸಂಪರ್ಕಿಸುವ ಮೂಲಕ ಮಾಡಿಕೊಳ್ಳಲು ಸಾಧ್ಯವಾಗುವಂತೆ, ಶಿಫಾರಸುಮಾಡಿದ ಹೋಟೆಲುಗಳ ಪಟ್ಟಿಗಳನ್ನು ಮತ್ತು ಅದರ ದರಪಟ್ಟಿಯನ್ನು ಒದಗಿಸುತ್ತದೆ. ಇದು ಡಾರ್ಮಿಟರಿಗಳ ವಸತಿಯನ್ನು ಕೇಳಿಕೊಳ್ಳುವವರಿಗೆ ಅನ್ವಯಿಸುವುದಿಲ್ಲ. ಅವರು ಈಗಲೂ ಅಧಿವೇಶನದ ರೂಮಿಂಗ್ ವಿಭಾಗದವರ ಮೂಲಕ ಇದನ್ನು ಬುಕ್ ಮಾಡಬಹುದು.
7 ಡಾರ್ಮಿಟರಿಗಳು: ಹೆಚ್ಚಿನ ಸಂದರ್ಭಗಳಲ್ಲಿ, ಹೋಟೆಲುಗಳ ಮೊದಲ ಪಟ್ಟಿಯನ್ನು ಕಳುಹಿಸಿದ ಒಂದು ತಿಂಗಳ ನಂತರ ಡಾರ್ಮಿಟರಿಗಳ ಕುರಿತು ಸಭೆಗಳು ಮಾಹಿತಿಯನ್ನು ಪಡೆಯುತ್ತದೆ. ಈ ರೀತಿಯ ವಸತಿಯನ್ನು ಬಯಸುವವರು, ಅಧಿವೇಶನದ ರೂಮಿಂಗ್ ವಿಭಾಗದಿಂದ ಸಭೆಗಳಿಗೆ ಕಳುಹಿಸಲಾದ ಪಟ್ಟಿಯಲ್ಲಿರುವ ಮಾಹಿತಿಗಳನ್ನು ಅನುಸರಿಸಬೇಕು.
8 ವಿಶೇಷ ಅಗತ್ಯತೆಗಳು: ವಿಶೇಷ ಅಗತ್ಯತೆಗಳಿರುವವರನ್ನು ಪರಾಮರಿಸಲು ಬೇಕಾದ ಹೆಚ್ಚಿನ ಏರ್ಪಾಡುಗಳನ್ನು, ಸಾಮಾನ್ಯವಾಗಿ ಅವರು ಹಾಜರಾಗುವ ಸ್ಥಳಿಕ ಸಭೆಗಳು ಮಾಡುತ್ತವೆ. ಅವರ ಪರಿಸ್ಥಿತಿಯನ್ನು ತಿಳಿದಿರುವ ಹಿರಿಯರು ಮತ್ತು ಇತರರು ಪ್ರೀತಿಪೂರ್ವಕವಾಗಿ ಸಹಾಯವನ್ನು ಮಾಡಿದ್ದಾರೆ. ಇದಕ್ಕಾಗಿ ಅವರನ್ನು ಪ್ರಶಂಸಿಸಲಾಗುತ್ತದೆ. ಪೂರ್ಣ ಸಮಯದ ಸೇವೆಯಲ್ಲಿರುವ ವೃದ್ಧರು, ಶಾರೀರಿಕವಾಗಿ ಬಲಹೀನರು ಅಥವಾ ಅಗತ್ಯದಲ್ಲಿರುವವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಈ ಸಹಾಯದಲ್ಲಿ ಒಳಗೊಂಡಿದೆ. ಅಷ್ಟುಮಾತ್ರವಲ್ಲದೆ ಇನ್ನಿತರ ರೀತಿಗಳಲ್ಲಿಯೂ ಅಂದರೆ, ಬೇಕಾಗಿರುವ ಏರ್ಪಾಡುಗಳನ್ನು ಮಾಡುವುದರಲ್ಲಿ ಅವರಿಗೆ ಸಹಾಯಮಾಡುವುದು ಅಥವಾ ಸಾಧ್ಯವಿರುವಲ್ಲಿ ಮತ್ತು ಎಲ್ಲಿ ಅಗತ್ಯವೋ ಅಲ್ಲಿ ಹಣಕಾಸಿನ ಸಹಾಯವನ್ನು ನೀಡುವುದು ಮುಂತಾದ ರೀತಿಗಳಲ್ಲಿಯೂ ಅವರ ಅಗತ್ಯತೆಗಳನ್ನು ನೋಡಿಕೊಂಡಿದ್ದಾರೆ. (ಯಾಕೋ. 2:15-17; 1 ಯೋಹಾ. 3:18) ಅಂಥ ಪ್ರೀತಿಪರ ಕಾಳಜಿಯು ಮುಂದಕ್ಕೂ ತೋರಿಸಲ್ಪಡುವುದೆಂದು ನಾವು ಖಾತ್ರಿಯಿಂದಿದ್ದೇವೆ. (ಯೋಹಾ. 13:35) ಹಾಗಿದ್ದರೂ, ಯಾರಿಗೆ ತಮ್ಮ ಸ್ವಂತ ಏರ್ಪಾಡನ್ನು ಮಾಡಲು ಸಾಧ್ಯವಿಲ್ಲವೋ ಮತ್ತು ಅವರು ಸಹವಾಸಿಸುವ ಸಭೆಯೂ ಅವರಿಗೆ ಸಹಾಯಮಾಡಸಾಧ್ಯವಿಲ್ಲವೋ ಅಂಥ ವಿಶೇಷ ಅಗತ್ಯತೆಗಳಿರುವವರ ವಸತಿಸೌಕರ್ಯಗಳನ್ನು ಅಧಿವೇಶನದ ರೂಮಿಂಗ್ ವಿಭಾಗವು ಏರ್ಪಡಿಸುತ್ತದೆ. ಅಂಥವರು ಅವರ ಸಭೆಯಲ್ಲಿರುವ ಅಧಿವೇಶನ ಸಂಘಟಕನಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ, ಸ್ಪೆಷಲ್ ನೀಡ್ಸ್ ರೂಮ್ ರಿಕ್ವೆಷ್ಟ್ ಫಾರ್ಮ್ ಅನ್ನು ಕೇಳಿ ಪಡೆದುಕೊಳ್ಳಬಹುದು.
9 ವಿಶೇಷ ಅಗತ್ಯದಲ್ಲಿರುವವರು ಮಾತ್ರ ಈ ಫಾರ್ಮ್ ಅನ್ನು ಉಪಯೋಗಿಸಬೇಕು. ಅವರು ಆ ಫಾರ್ಮ್ ಅನ್ನು ಭರ್ತಿಮಾಡಿ, ಅದನ್ನು ತಮ್ಮ ಸಭೆಯ ಅಧಿವೇಶನ ಸಂಘಟಕನಿಗೆ ಕೊಡಬೇಕು. ಅವನು, ಅದು ಪೂರ್ಣವಾಗಿ ಮತ್ತು ಸರಿಯಾಗಿ ಭರ್ತಿಮಾಡಲ್ಪಟ್ಟಿದೆಯೆ ಹಾಗೂ ಅದರಲ್ಲಿ ತಿಳಿಸಲ್ಪಟ್ಟಿರುವ ಪರಿಸ್ಥಿತಿಯು ನಿಜವೋ ಎಂಬುದನ್ನು ಖಚಿತಪಡಿಸಿಕೊಳ್ಳುವನು. ಈ ಫಾರ್ಮ್ ಅನ್ನು ಸಭೆಯ ಅಧಿವೇಶನ ಸಂಘಟಕನು ಅಧಿವೇಶನದ ರೂಮಿಂಗ್ ವಿಭಾಗಕ್ಕೆ ಕಳುಹಿಸಿಕೊಡುತ್ತಾನಾದರೂ, ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಅವರ ವಸತಿಯ ಕುರಿತು ನೇರವಾಗಿ ರೂಮಿಂಗ್ ವಿಭಾಗದಿಂದಲೇ ತಿಳಿಸಲ್ಪಡುವುದು. ಖಾಸಗಿ ಮನೆಗಳು ಮತ್ತು ಹೋಟೆಲುಗಳು, ವಿಶೇಷ ಅಗತ್ಯವಿರುವವರ ಪ್ರಯೋಜನಾರ್ಥವಾಗಿ, ಅವರವರ ಪರಿಸ್ಥಿತಿಗನುಸಾರ ಉಪಯೋಗಿಸಲ್ಪಡುವವು. ನೆನಪಿನಲ್ಲಿಡಬೇಕಾದ ವಿಷಯವೇನೆಂದರೆ, ಖಾಸಗಿ ಮನೆಗಳ ವಸತಿಯನ್ನು, ಯಾರಿಗೆ ಅಂತಹ ವಸತಿ ದೊರಕದಿದ್ದಲ್ಲಿ ನಿಜವಾದ ಕಠಿನ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರಬಹುದೋ ಅಂಥವರಿಗೆ ಅಂದರೆ ಹಣಕಾಸಿನ ಸಮಸ್ಯೆಯಿರುವವರಿಗೆ ಮಾತ್ರ ನೀಡಲಾಗುವುದು. ತಿರುಗಾಡಲಿಕ್ಕಾಗಿ ಮತ್ತು ಇತರ ವಿಷಯಕ್ಕಾಗಿ ಹಣವನ್ನು ಉಳಿತಾಯ ಮಾಡುವ ಸಲುವಾಗಿ, ಉಚಿತವಾದ ಅಥವಾ ಕಡಿಮೆ ಖರ್ಚಿನ ವಸತಿಯನ್ನು ಬಯಸುವವರಿಗೆ ಇಂತಹ ವಸತಿಯನ್ನು ನೀಡಲಾಗುವುದಿಲ್ಲ. ಮಾತ್ರವಲ್ಲದೆ, ಖಾಸಗಿ ಮನೆಯ ವಸತಿಯು ಕೇವಲ ಅಧಿವೇಶನದ ಸಮಯಾವಧಿಯ ವರೆಗೆ ಮಾತ್ರ ಲಭ್ಯವಿರುವುದು. ಅಧಿವೇಶನದ ಮುಂಚೆ ಅಥವಾ ನಂತರ, ಅಲ್ಲಿರುವ ಪ್ರವಾಸಿ ಸ್ಥಳಗಳನ್ನು ಭೇಟಿನೀಡುವುದಕ್ಕಾಗಿ, ಪ್ರತಿನಿಧಿಗಳಿಗೆ ಹೆಚ್ಚು ದಿನಗಳ ತನಕ ವಸತಿಯನ್ನು ನೀಡಬೇಕಾಗಿ ಸಹೋದರರಿಂದ ನಿರೀಕ್ಷಿಸುವುದು ಸರಿಯಾದ ವಿಷಯವಾಗಿರುವುದಿಲ್ಲ.
10 ಬೇರೊಂದು ಅಧಿವೇಶನಕ್ಕೆ ಹಾಜರಾಗುವುದು: ಪರಿಸ್ಥಿತಿಯ ಕಾರಣ ನಿಮಗೆ ನೇಮಿತವಾದ ಅಧಿವೇಶನಕ್ಕೆ ಬದಲಾಗಿ ಬೇರೊಂದು ಅಧಿವೇಶನಕ್ಕೆ ಹಾಜರಾಗಬೇಕಾದ್ದಲ್ಲಿ ಮತ್ತು ಹೋಟೆಲಿನ ರೂಮ್ ಸಹ ನಿಮಗೆ ಅವಶ್ಯವಿದ್ದಲ್ಲಿ, ದಯಮಾಡಿ ನಿಮ್ಮ ಸಭೆಯ ಸೆಕ್ರಟರಿಗೆ ತಿಳಿಸಿರಿ. ಅವರು ನೀವು ಹೋಗಬಯಸುವ ಆ ಅಧಿವೇಶನದ ಮುಖ್ಯಕಾರ್ಯಲಯದ ವಿಳಾಸವನ್ನು ನಿಮಗೆ ಒದಗಿಸುವರು. ನಿಮ್ಮ ವಿನಂತಿಯನ್ನು, ಒಂದು ಸ್ವ-ವಿಳಾಸವಿರುವ, ಮತ್ತು ಅಂಚೆಚೀಟಿಯಿರುವ ಲಕೋಟೆಯೊಂದಿಗೆ ಸೂಕ್ತವಾದ ವಿಳಾಸಕ್ಕೆ ಕಳುಹಿಸಿರಿ. ಆ ನಗರದಲ್ಲಿರುವ ರೂಮಿಂಗ್ ವಿಭಾಗವು ಶಿಫಾರಸುಮಾಡಲಾದ ಹೋಟೆಲುಗಳ ಇತ್ತೀಚಿನ ಪಟ್ಟಿಯನ್ನು ಮತ್ತು ಅದರ ದರಪಟ್ಟಿಯನ್ನು ನಿಮಗೆ ಕಳುಹಿಸಿಕೊಡುವುದು.
11 ನಾವು ನೋಟವಾಗಿದ್ದೇವೆ: ಯೆಹೋವನ ಸಾಕ್ಷಿಗಳ ಮತ್ತು ಈ ಲೋಕದವರ ಮಧ್ಯವಿರುವ ವ್ಯತ್ಯಾಸವನ್ನು ಜನರು ನೋಡುತ್ತಾರೋ? ನಿಶ್ಚಯವಾಗಿಯೂ! ಹಾಗಿದ್ದರೂ, ಕೆಲವೊಮ್ಮೆ ಹೋಟೆಲು ಮೇಲಧಿಕಾರಿಗಳಿಂದ ನಮ್ಮ ಕುರಿತು ನಕಾರಾತ್ಮಕ ಹೇಳಿಕೆಗಳು ಸಹ ಬಂದಿವೆ. ಕೆಲವು ಪ್ರತಿನಿಧಿಗಳು ಅವರಿಗಾಗಿ ಮಾಡಲಾದ ಬುಕಿಂಗ್ಗಳನ್ನು ಗೌರವಿಸುವುದಿಲ್ಲ ಅಥವಾ ಅವರು ನೀಡುವ ಹಣದಲ್ಲಿ ಸೇರಿರುವ ಸೌಕರ್ಯಗಳಿಗಿಂತ ಹೆಚ್ಚಿನ ಸೌಕರ್ಯಗಳನ್ನು ತಗಾದೆಮಾಡುತ್ತಾರೆ. ನಮ್ಮ ಹೋಟೆಲಿನಲ್ಲಿ ಯೆಹೋವನ ಸಾಕ್ಷಿಗಳು ಪ್ರತಿನಿಧಿಗಳಾಗಿ ಮುಂದಿನ ಅಧಿವೇಶನಕ್ಕೆ ಬರುವುದು ಬೇಡವೆಂದು ಕೆಲವರು ತಿಳಿಸಿದ್ದಾರೆ. ತಾವು ಯೆಹೋವನ ಹೆಸರನ್ನು ಪ್ರತಿನಿಧಿಸುತ್ತೇವೆ ಮತ್ತು ಈ ಕಾರಣಕ್ಕಾಗಿ ಜನರ ಸೂಕ್ಷ ಗಮನಕ್ಕೆ ಬೀಳುತ್ತೇವೆ ಎಂದು ಪ್ರತಿಯೊಬ್ಬರು ಗ್ರಹಿಸುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ.
12 ಸಂತೋಷಕರವಾಗಿ, ಹೋಟೆಲು ಅಧಿಕಾರಿಗಳಿಂದ ಬರುವ ಹೆಚ್ಚಿನ ಹೇಳಿಕೆಗಳು ಸಕಾರಾತ್ಮಕವಾಗಿರುತ್ತವೆ. ಒಂದು ನಗರದಲ್ಲಿ ಹೋಟೆಲು ಅಧಿಕಾರಿಯೊಬ್ಬನು ತಿಳಿಸಿದ್ದು: “ಅಧಿವೇಶನದ ಸಮಯದಲ್ಲಿ ನಮ್ಮ ಹೋಟೆಲಿನಲ್ಲಿ ಯಾವಾಗಲೂ ನಿಮ್ಮ ಜನರು ತಂಗುತ್ತಾರೆ. ನಾವು ಗಮನಿಸಿದ ವಿಷಯವೇನೆಂದರೆ ನೀವು ಅತಿ ಸಹಕಾರಿ ಮತ್ತು ದಯಾಪರ ಜನರಾಗಿದ್ದೀರಿ.” “ಕಳೆದ ವಾರ ನಮ್ಮಲ್ಲಿ ಬೇರೊಂದು ಧರ್ಮದ ಗುಂಪಿನವರು ತಂಗಿದ್ದರು. ನಿಮ್ಮ ಮತ್ತು ಅವರ ನಡುವಣ ವ್ಯತ್ಯಾಸವು ಸ್ಪಷ್ಟವಾಗಿ ತಿಳಿದುಬಂದಿದೆ.” “ನಿಮ್ಮ ಸಹಾಯ ಮತ್ತು ಸಹಕಾರವನ್ನು ನಾವು ಖಂಡಿತ ಎದುರುನೋಡಸಾಧ್ಯವಿದೆ ಎಂಬುದು ನಮಗೆ ತಿಳಿದಿದೆ.” ನಮ್ಮ ವ್ಯಕ್ತಿತ್ವದ ಮೇಲೆ, “ಮೇಲಣಿಂದ ಬರುವ ಜ್ಞಾನವು” ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ ಎಂಬುದನ್ನು ನಾವು ಗಣ್ಯಮಾಡುವಂತೆ ಈ ರೀತಿಯ ಹೇಳಿಕೆಗಳು ಸಹಾಯಮಾಡುವುದಿಲ್ಲವೋ? (ಯಾಕೋ. 3:17) ನಾವು “ಜಗತ್ತಿಗೆಲ್ಲಾ ನೋಟ”ವಾಗಿರುವದರಿಂದ, ನಮ್ಮ ನಡತೆಯು ಎಲ್ಲಾ ಸಮಯಗಳಲ್ಲಿ ನಮ್ಮ ದೇವರಾದ ಯೆಹೋವನ ಘನತೆ ಮತ್ತು ತೇಜಸ್ಸನ್ನು ಪ್ರತಿಬಿಂಬಿಸಲಿ.—1 ಕೊರಿಂ. 4:9.
13 “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ” ಇರುವುದರಿಂದ, ಆತ್ಮಿಕ ವಿಷಯಗಳಲ್ಲಿ ನಮ್ಮ ಗಮನವನ್ನು ಕೇಂದ್ರಿಕರಿಸುವಂತೆ ಸಹಾಯಮಾಡಲು ಜಿಲ್ಲಾ ಅಧಿವೇಶನಗಳು ನಮಗೆ ಅಗತ್ಯವಾಗಿವೆ. (1 ಕೊರಿಂ. 7:31) ಪ್ರತಿದಿನ ತಪ್ಪದೆ ಹಾಜರಾಗಲು ಏರ್ಪಾಡುಗಳನ್ನು ಮಾಡುವುದು ಪ್ರಯತ್ನವನ್ನು ಅಗತ್ಯಪಡಿಸುತ್ತದೆ, ಆದರೆ ಅದು ವ್ಯರ್ಥವಲ್ಲ. ಸೈತಾನನ ಲೋಕದ ಮೇಲೆ ಯೆಹೋವನ ನ್ಯಾಯತೀರ್ಪಿನ ಜಾರಿಯಾಗುವಿಕೆಗಾಗಿ ಕಾಯುತ್ತಿರುವ ನಾವು ಸ್ಥಿರಚಿತ್ತರಾಗಿ ಉಳಿಯಲು ಸಹಾಯಮಾಡುವಂಥ ರೀತಿಯಲ್ಲಿ ಈ ವರುಷದ “ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನವು ತಯಾರಿಸಲ್ಪಟ್ಟಿದೆ. ಯೆಹೋವನು ನಮಗಾಗಿ ತಯಾರಿಸಿಟ್ಟಿರುವ ಬೋಧನೆಯನ್ನು ಪಡೆದುಕೊಳ್ಳುವುದನ್ನು ಯಾವ ವಿಷಯವೂ ತಡೆಯುವಂತೆ ನಾವು ಬಿಡದಿರೋಣ.—ಯೆಶಾ. 51:4, 5.
[ಪುಟ 3 ರಲ್ಲಿರುವ ಚೌಕ]
ಕಾರ್ಯಕ್ರಮದ ಸಮಯಗಳು
ಶುಕ್ರವಾರ ಮತ್ತು ಶನಿವಾರ
ಬೆಳಿಗ್ಗೆ 9:30 - ಮಧ್ಯಾಹ್ನ 5:00
ಭಾನುವಾರ
ಬೆಳಿಗ್ಗೆ 9:30 - ಮಧ್ಯಾಹ್ನ 4:05