ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ ಎಂಬ ವಿಡಿಯೋವನ್ನು ನೀವು ಖಂಡಿತವಾಗಿಯೂ ನೋಡಬೇಕು
ರಕ್ತರಹಿತ ವೈದ್ಯಶಾಸ್ತ್ರದ ಕ್ಷೇತ್ರದಲ್ಲಿ ಲಭ್ಯವಿರುವ ಆಯ್ಕೆಗಳ ಕುರಿತು ನಿಮಗೆ ಎಷ್ಟರ ಮಟ್ಟಿಗೆ ತಿಳಿದಿದೆ? ರಕ್ತಪೂರಣ ಬದಲಿಗಳಲ್ಲಿ ಕೆಲವು ಯಾವುವು ಮತ್ತು ಅವು ಹೇಗೆ ಕಾರ್ಯನಡಿಸುತ್ತವೆ ಎಂಬುದು ನಿಮಗೆ ಅರ್ಥವಾಗುತ್ತದೊ? ಈ ವಿಡಿಯೋವನ್ನು ನೋಡಿ, ಈ ಮುಂದಿನ ಪ್ರಶ್ನೆಗಳಿಂದ ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ.—ಸೂಚನೆ: ಈ ವಿಡಿಯೋದಲ್ಲಿ ಶಸ್ತ್ರಚಿಕಿತ್ಸೆಯ ಸಂಕ್ಷಿಪ್ತವಾದ ದೃಶ್ಯಗಳಿರುವುದರಿಂದ, ಚಿಕ್ಕ ಮಕ್ಕಳೊಂದಿಗೆ ಈ ವಿಡಿಯೋವನ್ನು ನೋಡುವ ವಿಷಯದಲ್ಲಿ ಹೆತ್ತವರು ವಿವೇಚನೆಯನ್ನು ಉಪಯೋಗಿಸಬೇಕು.
(1) ಯೆಹೋವನ ಸಾಕ್ಷಿಗಳು ರಕ್ತಪೂರಣಗಳನ್ನು ಏಕೆ ನಿರಾಕರಿಸುತ್ತಾರೆ ಎಂಬುದಕ್ಕಿರುವ ಮೂಲ ಕಾರಣವೇನು, ಮತ್ತು ಆ ಮೂಲತತ್ತ್ವವು ಬೈಬಲಿನಲ್ಲಿ ಎಲ್ಲಿ ಕಂಡುಬರುತ್ತದೆ? (2) ವೈದ್ಯಕೀಯ ಆರೈಕೆಯ ವಿಷಯದಲ್ಲಿ ನಾವೇನನ್ನು ಬಯಸುತ್ತೇವೆ? (3) ಯಾವ ಮೂಲಭೂತ ಹಕ್ಕು ರೋಗಿಗಳಿಗಿದೆ? (4) ರಕ್ತಪೂರಣಗಳನ್ನು ನಿರಾಕರಿಸುವುದು ಏಕೆ ತರ್ಕಸಮ್ಮತವಾಗಿದೆ ಮತ್ತು ಜವಾಬ್ದಾರಿಯುತವಾಗಿದೆ? (5) ತೀವ್ರವಾದ ರಕ್ತ ನಷ್ಟವಾದಾಗ, ವೈದ್ಯರಿಗೆ ಯಾವ ಎರಡು ಆದ್ಯತೆಗಳು ಇವೆ? (6) ರಕ್ತಪೂರಣಗಳೊಂದಿಗೆ ಯಾವ ಆರೋಗ್ಯಾಪಾಯಗಳು ಒಳಗೂಡಿವೆ? (7) ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತದ ನಷ್ಟವನ್ನು ಕಡಿಮೆಮಾಡಲಿಕ್ಕಾಗಿ ಶಸ್ತ್ರಚಿಕಿತ್ಸಕರಿಗೆ ಲಭ್ಯವಿರುವ ಉಪಕರಣಗಳಲ್ಲಿ ಕೆಲವು ಯಾವುವು? (8) ರಕ್ತಪೂರಣದ ಯಾವುದೇ ಬದಲಿಯ ಕುರಿತು ನಿಮಗೆ ಯಾವ ವಿಚಾರಗಳು ತಿಳಿದಿರಬೇಕೆಂದು ನೀವು ಬಯಸುತ್ತೀರಿ? (9) ರಕ್ತಪೂರಣಗಳ ಉಪಯೋಗವಿಲ್ಲದೆ ಗಂಭೀರವಾದ ಹಾಗೂ ಜಟಿಲವಾದ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಸಾಧ್ಯವಿದೆಯೋ? (10) ಅಧಿಕಾಧಿಕ ಸಂಖ್ಯೆಯ ವೈದ್ಯರು ಯೆಹೋವನ ಸಾಕ್ಷಿಗಳಿಗಾಗಿ ಏನನ್ನು ಮಾಡಲು ಮನಃಪೂರ್ವಕವಾಗಿ ಸಿದ್ಧರಿದ್ದಾರೆ, ಮತ್ತು ಕಾಲಕ್ರಮೇಣ ಎಲ್ಲಾ ರೋಗಿಗಳಿಗೂ ಯಾವುದು ಆರೈಕೆಯ ಆದರ್ಶ ಪ್ರಮಾಣವಾಗಿ ಪರಿಣಮಿಸಬಹುದು?
ರಕ್ತದ ಕುರಿತಾದ ನಮ್ಮ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಬಹುದಾದ ಯಾವುದೇ ಬೈಬಲ್ ವಿದ್ಯಾರ್ಥಿಗಳು, ಸಾಕ್ಷ್ಯೇತರ ಸಂಗಾತಿಗಳು ಅಥವಾ ಸಂಬಂಧಿಕರು, ಜೊತೆ ಕೆಲಸಗಾರರು, ಶಿಕ್ಷಕರು, ಮತ್ತು ಸಹಪಾಠಿಗಳೊಂದಿಗೆ ರಕ್ತರಹಿತ ಚಿಕಿತ್ಸೆ ವಿಡಿಯೋವನ್ನು ನೋಡುವುದು ಸಹಾಯಕರವಾದದ್ದಾಗಿರುವುದು ಎಂಬುದರಲ್ಲಿ ಸಂದೇಹವಿಲ್ಲ. ವಿಡಿಯೋದಲ್ಲಿ ತೋರಿಸಲ್ಪಟ್ಟ ಯಾವುದೇ ಚಿಕಿತ್ಸೆಗಳನ್ನು ಅಂಗೀಕರಿಸುವುದು ಒಂದು ವೈಯಕ್ತಿಕ, ಆತ್ಮಸಾಕ್ಷಿಗೆ ಸಂಬಂಧಿಸಿದ ನಿರ್ಧಾರವಾಗಿದೆ.—ಕಾವಲಿನಬುರುಜು ಪತ್ರಿಕೆಯ 2000, ಜೂನ್ 15 ಮತ್ತು ಅಕ್ಟೋಬರ್ 15ರ ಸಂಚಿಕೆಗಳಲ್ಲಿರುವ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನಗಳನ್ನು ನೋಡಿರಿ.