ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ ಎಂಬ ವಿಡಿಯೋದಿಂದ ಪ್ರಯೋಜನ ಪಡೆಯಿರಿ
ರಕ್ತರಹಿತ ಚಿಕಿತ್ಸೆಯನ್ನೊದಗಿಸುವ ಆರೋಗ್ಯಾರೈಕೆಯಲ್ಲಿ ಯಾವುದೆಲ್ಲಾ ಆಯ್ಕೆಗಳು ಲಭ್ಯವಿವೆ ಎಂಬುದರ ಕುರಿತು ನೀವು ಎಷ್ಟು ತಿಳಿದಿದ್ದೀರಿ? ಲಭ್ಯವಿರುವ ಕೆಲವು ರಕ್ತಪೂರಣ ಬದಲಿಗಳು ಯಾವವು ಮತ್ತು ಅವು ಹೇಗೆ ಕೆಲಸಮಾಡುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರೋ? ಈ ವಿಡಿಯೋವನ್ನು ನೋಡಿರಿ, ಮತ್ತು ಮುಂದಿನ ಪ್ರಶ್ನೆಗಳ ಮೂಲಕ ನಿಮ್ಮ ಜ್ಞಾನವನ್ನು ಪರಿಶೋಧಿಸಿರಿ.—ಗಮನಿಸಿ: ವಿಡಿಯೋವಿನಲ್ಲಿ ಸಂಕ್ಷಿಪ್ತವಾದ ಶಸ್ತ್ರಚಿಕಿತ್ಸಾ ದೃಶ್ಯಗಳಿರುವುದರಿಂದ, ತಮ್ಮ ಎಳೆಯ ಮಕ್ಕಳು ಇದನ್ನು ನೋಡಬಹುದೋ ಎಂಬುದನ್ನು ನಿರ್ಧರಿಸುವುದರಲ್ಲಿ ಹೆತ್ತವರು ವಿವೇಚನೆಯನ್ನು ಉಪಯೋಗಿಸಬೇಕು.
(1) ಯೆಹೋವನ ಸಾಕ್ಷಿಗಳು ರಕ್ತಪೂರಣಗಳನ್ನು ನಿರಾಕರಿಸಲು ಮುಖ್ಯ ಕಾರಣ ಏನಾಗಿದೆ, ಮತ್ತು ಆ ಮೂಲತತ್ತ್ವವನ್ನು ಬೈಬಲಿನಲ್ಲಿ ಎಲ್ಲಿ ಕಂಡುಕೊಳ್ಳಬಹುದು? (2) ಆರೋಗ್ಯಾರೈಕೆಯ ವಿಷಯದಲ್ಲಿ ನಾವೇನನ್ನು ಬಯಸುತ್ತೇವೆ? (3) ರೋಗಿಗಳಿಗೆ ಯಾವ ಮೂಲಭೂತ ಹಕ್ಕಿದೆ? (4) ರಕ್ತಪೂರಣಗಳನ್ನು ನಿರಾಕರಿಸುವುದು ಏಕೆ ನ್ಯಾಯಸಮ್ಮತವೂ ವಿವೇಕಪ್ರದವೂ ಆಗಿದೆ? (5) ರಕ್ತವು ತೀವ್ರವಾಗಿ ನಷ್ಟವಾಗುವಾಗ, ವೈದ್ಯರ ಬಳಿ ಯಾವ ಎರಡು ಆದ್ಯತೆಗಳಿರುತ್ತವೆ? (6) ರಕ್ತಪೂರಣಗಳೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಯಾವ ಅಪಾಯಗಳಿವೆ? (7) ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿರುವಾಗ ರಕ್ತದ ನಷ್ಟವನ್ನು ಕಡಿಮೆಮಾಡಲಿಕ್ಕಾಗಿ ಶಸ್ತ್ರಚಿಕಿತ್ಸಕರ ಬಳಿ ಯಾವ ಕೆಲವು ಉಪಕರಣಗಳು ಲಭ್ಯವಿವೆ? (8) ರಕ್ತಪೂರಣ ಬದಲಿಗಳ ವಿಷಯದಲ್ಲಿ ನೀವು ಯಾವ ಮಾಹಿತಿಯನ್ನು ಪಡೆದುಕೊಳ್ಳುವ ಆವಶ್ಯಕತೆಯಿದೆ? (9) ರಕ್ತಪೂರಣಗಳನ್ನು ಉಪಯೋಗಿಸದೆ ಗಂಭೀರವಾದ ಮತ್ತು ಜಟಿಲವಾದ ಶಸ್ತ್ರಚಿಕಿತ್ಸೆಗಳನ್ನು ನಡೆಸಸಾಧ್ಯವಿದೆಯೋ? (10) ಅಧಿಕಾಧಿಕ ಸಂಖ್ಯೆಯ ವೈದ್ಯರು ಯೆಹೋವನ ಸಾಕ್ಷಿಗಳಿಗಾಗಿ ಏನನ್ನು ಮಾಡಲು ಮನಃಪೂರ್ವಕವಾಗಿ ಸಿದ್ಧರಿದ್ದಾರೆ, ಮತ್ತು ಕಾಲಕ್ರಮೇಣ ಎಲ್ಲಾ ರೋಗಿಗಳಿಗೂ ಯಾವುದು ಆರೈಕೆಯ ಆದರ್ಶ ಪ್ರಮಾಣವಾಗಿ ಪರಿಣಮಿಸಬಹುದು?
ವಿಡಿಯೋವಿನಲ್ಲಿ ಪ್ರಸ್ತುತಪಡಿಸಲ್ಪಟ್ಟ ಯಾವುದೇ ಚಿಕಿತ್ಸೆಯನ್ನು ಅಂಗೀಕರಿಸುವುದು ವೈಯಕ್ತಿಕವಾದ ಪ್ರಜ್ಞಾಪೂರ್ವಕ ನಿರ್ಧಾರವಾಗಿರುತ್ತದೆ.—ಜೂನ್ 15, 2004ರ ಕಾವಲಿನಬುರುಜುವಿನ 22-4, 29-31ನೇ ಪುಟಗಳನ್ನು ಮತ್ತು ಅಕ್ಟೋಬರ್ 15, 2000ದ ಕಾವಲಿನಬುರುಜುವಿನ 30-1ನೇ ಪುಟಗಳನ್ನು ನೋಡಿರಿ.