ಪುನರ್ಭೇಟಿಗಳು ಬೈಬಲ್ ಅಧ್ಯಯನಗಳಿಗೆ ನಡೆಸುತ್ತವೆ
1. ಪುನರ್ಭೇಟಿಮಾಡುವ ಕೆಲಸವು ಏಕೆ ಅಷ್ಟು ಪ್ರಾಮುಖ್ಯವಾಗಿದೆ?
1 ಯೇಸು ತನ್ನ ಹಿಂಬಾಲಕರಿಗೆ ಕೇವಲ ಸಾರಲು ಮಾತ್ರವಲ್ಲ, ಬದಲಾಗಿ “ಶಿಷ್ಯರನ್ನಾಗಿ ಮಾಡಿರಿ; . . . ಅವರಿಗೆ ಉಪದೇಶ ಮಾಡಿರಿ” ಎಂಬುದಾಗಿಯೂ ಆಜ್ಞಾಪಿಸಿದನು. (ಮತ್ತಾ. 28:19, 20) ಸಾರುವ ಒಬ್ಬ ವ್ಯಕ್ತಿಯು ಕೇವಲ ಘೋಷಿಸುತ್ತಾನೆ, ಆದರೆ ಶಿಕ್ಷಕನು ಅದಕ್ಕಿಂತಲೂ ಹೆಚ್ಚನ್ನು ಮಾಡುತ್ತಾನೆ. ಅವನು ಬೋಧಿಸಿ, ವಿವರಿಸಿ, ಆಧಾರವನ್ನು ನೀಡುತ್ತಾನೆ. ಬೈಬಲ್ ಅಧ್ಯಯನವನ್ನು ಆರಂಭಿಸುವ ಗುರಿಯೊಂದಿಗೆ ಆಸಕ್ತ ಜನರಿಗೆ ಪುನರ್ಭೇಟಿಗಳನ್ನು ಮಾಡುವುದು, ಇತರರಿಗೆ ಕಲಿಸುವ ಒಂದು ವಿಧವಾಗಿದೆ.
2. ನಾವು ಯಾರನ್ನು ಪುನರ್ಭೇಟಿಮಾಡಬೇಕು?
2 ಯಾರನ್ನು ನೀವು ಪುನರ್ಭೇಟಿಮಾಡಬೇಕು? ಸಾಹಿತ್ಯವನ್ನು ಸ್ವೀಕರಿಸಿದ ಮತ್ತು ಸುವಾರ್ತೆಯಲ್ಲಿ ಸ್ವಲ್ಪ ಆಸಕ್ತಿಯನ್ನು ತೋರಿಸಿದ ಪ್ರತಿಯೊಬ್ಬರನ್ನೂ ಪುನಃ ಭೇಟಿಮಾಡಲು ಮರೆಯಬೇಡಿರಿ. ಸಾರ್ವಜನಿಕ ಸ್ಥಳದಲ್ಲಿ ಸಾಕ್ಷಿ ನೀಡುತ್ತಿರುವಾಗ ಆಸಕ್ತಿಯು ಕಂಡುಬಂದಲ್ಲಿ, ಆ ವ್ಯಕ್ತಿಯ ವಿಳಾಸ ಅಥವಾ ಟೆಲಿಫೋನ್ ನಂಬರ್ ಅನ್ನು ತೆಗೆದುಕೊಳ್ಳಲು ಪ್ರಯತ್ನಿಸಿರಿ. ಹೀಗೆ ಮಾಡುವ ಮೂಲಕ ಕಂಡುಬಂದ ಆಸಕ್ತಿಯನ್ನು ಬೆಳೆಸಸಾಧ್ಯವಿದೆ. ಬೈಬಲ್ ಅಧ್ಯಯನವನ್ನು ಆರಂಭಿಸುವ ವಿಷಯದಲ್ಲಿ ಸಕಾರಾತ್ಮಕ ಭಾವನೆಯುಳ್ಳವರಾಗಿರಿ. ಬೈಬಲ್ ಅಧ್ಯಯನವನ್ನು ಸ್ವೀಕರಿಸುವ ಜನರಿಗಾಗಿ ಹುಡುಕುವುದನ್ನು ಮುಂದುವರಿಸಿರಿ ಮತ್ತು ಹಾಗೆ ಮಾಡುವಲ್ಲಿ ಖಂಡಿತವಾಗಿ ನೀವು ಅಂಥವರನ್ನು ಕಂಡುಕೊಳ್ಳುವಿರಿ.—ಮತ್ತಾ. 10:11.
3, 4. ಒಂದು ಪರಿಣಾಮಕಾರಿಯಾದ ಪುನರ್ಭೇಟಿಯನ್ನು ಮಾಡುವುದರಲ್ಲಿ ಏನು ಒಳಗೊಂಡಿದೆ?
3 ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ: ಮೊದಲನೆಯ ಭೇಟಿಯಲ್ಲಿಯೇ ಪರಿಣಾಮಕಾರಿ ಪುನರ್ಭೇಟಿಗಾಗಿ ಸಿದ್ಧತೆಯು ಆರಂಭಗೊಳ್ಳುತ್ತದೆ. ಒಬ್ಬ ಯಶಸ್ವಿಕರವಾದ ಸುವಾರ್ತಿಕನು, ಮನೆಯವನಿಗೆ ಯಾವ ವಿಷಯವು ಆಸಕ್ತಿದಾಯಕವಾಗಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳುತ್ತಾನೆ ಮತ್ತು ಅದನ್ನು ಮುಂದಿನ ಚರ್ಚೆಗೆ ಆಧಾರವಾಗಿ ಉಪಯೋಗಿಸುತ್ತಾನೆ. ಮನೆಯನ್ನು ಬಿಟ್ಟು ಹೋಗುವುದಕ್ಕೆ ಮುಂಚೆ, ನಿಮ್ಮ ಮುಂದಿನ ಭೇಟಿಗಾಗಿ ಮನೆಯವನಲ್ಲಿ ಆಸಕ್ತಿಯನ್ನು ಕೆರಳಿಸಬಹುದಾದ ಒಂದು ಪ್ರಶ್ನೆಯನ್ನು ಎಬ್ಬಿಸಿ ಬನ್ನಿರಿ. ಜನರ ಕಡೆಗಿರುವ ನಮ್ಮ ನಿಜವಾದ ಆಸಕ್ತಿಯು, ಅವರನ್ನು ಬಿಟ್ಟು ಹೋದ ಬಳಿಕವೂ ನಾವು ಅವರ ಕುರಿತು ಚಿಂತಿಸುತ್ತಿರುವಂತೆ ಮಾಡುತ್ತದೆ ಮತ್ತು ಆದಷ್ಟು ಬೇಗನೆ ಪುನಃ ಅವರನ್ನು ಭೇಟಿಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ. ಸಾಧ್ಯವಾದಲ್ಲಿ, ಒಂದು ಅಥವಾ ಎರಡು ದಿವನದಲ್ಲಿಯೇ, ಅಂದರೆ ಆಸಕ್ತಿಯು ಇನ್ನೂ ನಂದಿಹೋಗದಿರುವಾಗಲೇ ಪುನಃ ಭೇಟಿನೀಡಲು ಪ್ರಯತ್ನಿಸಿರಿ.
4 ನೀವು ಪುನರ್ಭೇಟಿಮಾಡುವಾಗ, ಈ ಹಿಂದೆ ಮಾಡಿದ ಚರ್ಚೆಯ ವಿಷಯದಲ್ಲಿಯೇ ಪುನಃ ಮುಂದುವರಿಸಲು ಪ್ರಯತ್ನಿಸಿರಿ. ಪ್ರತಿಬಾರಿ ಭೇಟಿನೀಡುವಾಗ ಕಡಿಮೆಪಕ್ಷ ಒಂದು ಶಾಸ್ತ್ರೀಯ ಅಂಶವನ್ನು ಮನೆಯವನೊಂದಿಗೆ ಹಂಚಿಕೊಳ್ಳುವ ಗುರಿಯನ್ನು ಇಡಿರಿ. ಆಲಿಸಲು ಸಿದ್ಧರಾಗಿರಿ. ಮನೆಯವನ ಕುರಿತು ಚೆನ್ನಾಗಿ ತಿಳಿದುಕೊಳ್ಳಿರಿ. ನಂತರ, ಮುಂದಿನ ಭೇಟಿಗಳಲ್ಲಿ, ಅವನಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ದೇವರ ವಾಕ್ಯದ ಸತ್ಯತೆಗಳನ್ನು ನೇರವಾಗಿ ತಿಳಿಸಿರಿ.
5. ಬೈಬಲ್ ಅಧ್ಯಯನವನ್ನು ಆರಂಭಿಸಲು ಯಾವ ಸರಳವಾದ ವಿಧಾನವನ್ನು ಉಪಯೋಗಿಸಸಾಧ್ಯವಿದೆ?
5 ಬೈಬಲ್ ಅಧ್ಯಯನದ ಪ್ರಜ್ಞೆವುಳ್ಳವರಾಗಿರಿ: ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವ ಉದ್ದೇಶದಿಂದ ಪುನರ್ಭೇಟಿಗಳನ್ನು ಮಾಡಿರಿ. ಇದನ್ನು ಹೇಗೆ ಮಾಡಸಾಧ್ಯವಿದೆ? ನೀವೊಂದು ಆಸಕ್ತಿಕರ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೀರೆಂದು ತಿಳಿಸಿರಿ, ನಂತರ ಜ್ಞಾನ ಪುಸ್ತಕ ಅಥವಾ ಅಪೇಕ್ಷಿಸು ಬ್ರೋಷರಿನಿಂದ ಆ ವ್ಯಕ್ತಿಗೆ ಆಸಕ್ತಿಯನ್ನು ಉಂಟುಮಾಡಬಹುದೆಂದು ನಿಮಗನಿಸುವ ಪ್ಯಾರಗ್ರಾಫ್ನ ಕಡೆಗೆ ತಿರುಗಿಸಿರಿ. ಪ್ಯಾರಗ್ರಾಫನ್ನು ಓದಿರಿ, ಪ್ರಶ್ನೆಯನ್ನು ಪರಿಗಣಿಸಿರಿ, ಮತ್ತು ಒಂದು ಅಥವಾ ಎರಡು ಉದ್ಧೃತ ಶಾಸ್ತ್ರವಚನಗಳನ್ನು ಚರ್ಚಿಸಿರಿ. ಇದನ್ನು ಮೊದಲನೆಯ ಭೇಟಿಯಲ್ಲಿಯೇ ಐದು ಅಥವಾ ಹತ್ತು ನಿಮಿಷದಲ್ಲಿ ಮಾಡಸಾಧ್ಯವಿದೆ. ಮುಂದಿನ ಪ್ರಶ್ನೆಯನ್ನು ಕೇಳುವ ಮೂಲಕ ಮುಕ್ತಾಯಗೊಳಿಸಿರಿ ಮತ್ತು ಮುಂದಿನ ಸಲ ಚರ್ಚೆಯನ್ನು ಮುಂದುವರಿಸಲು ಏರ್ಪಾಡನ್ನು ಮಾಡಿರಿ.
6. ಪುನರ್ಭೇಟಿಗಳನ್ನು ಮಾಡುವ ಪ್ರಾಮುಖ್ಯತೆಯನ್ನು ನಾವು ಗಣ್ಯಮಾಡುತ್ತೇವೆಂದು ಹೇಗೆ ತೋರಿಸಸಾಧ್ಯವಿದೆ?
6 ಕಂಡುಬರುವ ಎಲ್ಲಾ ಆಸಕ್ತಿಯನ್ನು ಬೆಳೆಸುವುದು ನಮ್ಮ ಶುಶ್ರೂಷೆಯ ಮುಖ್ಯ ಅಂಶವಾಗಿದೆ. ಆದುದರಿಂದ, ಪುನರ್ಭೇಟಿಯನ್ನು ಮಾಡಲು ನಿಮ್ಮ ವಾರದ ಕಾರ್ಯತಖ್ತೆಯಲ್ಲಿ ಸಮಯವನ್ನು ಬದಿಗಿರಿಸಿರಿ. ಹಾಗೆ ಮಾಡುವುದು ನಿಮ್ಮ ಶುಶ್ರೂಷೆಯನ್ನು ಫಲಪ್ರದವಾಗಿ ಮಾಡುತ್ತದೆ ಮತ್ತು ನಿಜವಾದ ಆನಂದವನ್ನು ಒದಗಿಸುತ್ತದೆ.