ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳು ದೇವರನ್ನು ಘನಪಡಿಸುವಂತೆ ನಮ್ಮನ್ನು ಪ್ರೇರಿಸುತ್ತವೆ!
ಇಂದಿನ ವರೆಗೆ ನಡೆಸಲ್ಪಟ್ಟಿರುವ “ದೇವರನ್ನು ಘನಪಡಿಸಿರಿ” ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳು ಮಹತ್ತರವಾದ ಸಾಕ್ಷಿಯನ್ನು ಕೊಟ್ಟಿವೆ. ಈ ಗಮನಾರ್ಹವಾದ ದೇವಪ್ರಭುತ್ವಾತ್ಮಕ ಘಟನೆಗಳು ಯೆಹೋವನ ನಾಮವನ್ನು ಉನ್ನತಕ್ಕೇರಿಸುವ ಮತ್ತು ‘ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸುವ’ ಉದ್ದೇಶವನ್ನು ಪೂರೈಸಿವೆ. (ಕೀರ್ತ. 96:8) ನಿಜವಾಗಿಯೂ, ಆತನ ವಿಸ್ಮಯಕರ ಗುಣಲಕ್ಷಣಗಳನ್ನು ಪ್ರತಿಬಿಂಬಿಸುವ ಅದ್ಭುತಕರ ಸೃಷ್ಟಿಕ್ರಿಯೆಗಳಿಗಾಗಿ ಆತನು ಘನಪಡಿಸಲ್ಪಡಲು ಯೋಗ್ಯನಾಗಿದ್ದಾನೆ.—ಯೋಬ 37:14; ಪ್ರಕ. 4:11.
ಕೆಳಗೆ ಕೊಡಲ್ಪಟ್ಟಿರುವ ಪ್ರಶ್ನೆಗಳು, ಜನವರಿ 19ರ ವಾರದಲ್ಲಿ ನಡೆಸಲ್ಪಡುವ ಅಧಿವೇಶನ ಕಾರ್ಯಕ್ರಮದ ಪುನರ್ವಿಮರ್ಶೆಗಾಗಿವೆ. ಇವುಗಳಿಗಾಗಿ ತಯಾರಿಯನ್ನು ಮಾಡಲು ನಿಮ್ಮ ವೈಯಕ್ತಿಕ ಟಿಪ್ಪಣಿಗಳನ್ನು ಉಪಯೋಗಿಸಿರಿ ಮತ್ತು ಪುನರ್ವಿಮರ್ಶೆಯಲ್ಲಿ ಭಾಗವಹಿಸಿರಿ.
1. ನಿರ್ಜೀವ ಸೃಷ್ಟಿಯು ದೇವರ ಘನವನ್ನು ಹೇಗೆ ಪ್ರಕಟಪಡಿಸುತ್ತದೆ, ಮತ್ತು ಇದು ಮನುಷ್ಯರು ಆತನನ್ನು ಸ್ತುತಿಸುವ ವಿಧಕ್ಕಿಂತ ಹೇಗೆ ಭಿನ್ನವಾಗಿದೆ? (ಕೀರ್ತ. 19:1-3; “ಸೃಷ್ಟಿಯು ದೇವರ ಘನವನ್ನು ಪ್ರಚುರಪಡಿಸುತ್ತದೆ”)
2. ಸದ್ಯದ ಯಾವ ವಾಸ್ತವಿಕತೆಯನ್ನು ರೂಪಾಂತರವು ಮುನ್ಚಿತ್ರಿಸುತ್ತದೆ, ಮತ್ತು ಈ ವಾಸ್ತವಿಕತೆಯಿಂದ ಇಂದು ಕ್ರೈಸ್ತರು ಹೇಗೆ ಹುರಿದುಂಬಿಸಲ್ಪಟ್ಟಿದ್ದಾರೆ? (ಮುಖ್ಯ ಭಾಷಣ, ಮಹಿಮಾಭರಿತ ಪ್ರವಾದನಾತ್ಮಕ ದರ್ಶನಗಳು ನಮ್ಮನ್ನು ಹುರಿದುಂಬಿಸುತ್ತವೆ!)
3. ಪ್ರವಾದಿಯಾದ ದಾನಿಯೇಲನು ಪ್ರದರ್ಶಿಸಿದಂಥ ದೀನತೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು, ಮತ್ತು ಹೀಗೆ ಮಾಡುವುದರಿಂದ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳುವೆವು? (ದಾನಿ. 9:2, 5; 10:11, 12; “ಯೆಹೋವನ ಘನತೆ ದೀನರಿಗೆ ಪ್ರಕಟಪಡಿಲ್ಪಡುತ್ತದೆ”)
4. (ಎ) ಆಮೋಸನ ಪ್ರವಾದನೆಯಿಂದ ದೈವಿಕ ತೀರ್ಪಿನ ಕುರಿತು ಯಾವ ಮೂರು ವಿಷಯಗಳನ್ನು ನಾವು ಕಲಿಯಸಾಧ್ಯವಿದೆ? (ಆಮೋ. 1:3, 11, 13; 9:2-4, 8, 14) (ಬಿ) ಆಮೋಸ 2:12ರಲ್ಲಿ ಕಂಡುಬರುವ ಎಚ್ಚರಿಕೆಯ ಮಾದರಿಯಿಂದ ಯೆಹೋವನ ಸಾಕ್ಷಿಗಳು ಇಂದು ಯಾವ ಪ್ರಾಯೋಗಿಕ ಪಾಠವನ್ನು ಕಲಿಯಬಲ್ಲರು? (“ಆಮೋಸನ ಪ್ರವಾದನೆ—ಅದರಲ್ಲಿ ನಮ್ಮ ದಿನಗಳಿಗಾಗಿರುವ ಸಂದೇಶ”)
5. (ಎ) ಒಬ್ಬನು ಕುಡಿದು ಮತ್ತನಾಗದಿದ್ದರೂ, ಅತಿಯಾದ ಮದ್ಯಪಾನ ಮಾಡುವುದರಿಂದ ಬರುವ ಅಪಾಯಗಳಾವುವು? (ಬಿ) ಅತಿರೇಕತೆಯ ಸಮಸ್ಯೆಯನ್ನು ಹೇಗೆ ಸರಿಪಡಿಸಸಾಧ್ಯವಿದೆ? (ಮಾರ್ಕ 9:43; ಎಫೆ. 5:18; “ಮದ್ಯದ ದುರುಪಯೋಗವೆಂಬ ಪಾಶದಿಂದ ತಪ್ಪಿಸಿಕೊಳ್ಳಿರಿ”)
6. “ಒಳ್ಳೆಯ ದೇಶವನ್ನು ನೋಡಿ” ಎಂಬ ಹೊಸ ಪ್ರಕಾಶನದಿಂದ ನೀವು ಹೇಗೆ ಪ್ರಯೋಜನ ಹೊಂದುತ್ತಿದ್ದೀರಿ? (“‘ಒಳ್ಳೆಯ ದೇಶ’—ಪರದೈಸಿನ ಮುನ್ನೋಟ”)
7. ಯಾವ ಮೂರು ವಿಧಗಳಲ್ಲಿ ನಾವು ‘ಯೆಹೋವನ ಘನತೆಯನ್ನು ದರ್ಪಣಗಳಂತೆ ಪ್ರತಿಬಿಂಬಿಸ’ಬಹುದು? (2 ಕೊರಿಂ. 3:18; “ಯೆಹೋವನ ಘನತೆಯನ್ನು ದರ್ಪಣಗಳಂತೆ ಪ್ರತಿಬಿಂಬಿಸಿರಿ”)
8. ಅನ್ಯಾಯವಾದ ದ್ವೇಷದ ಮೂಲ ಯಾವುದು, ಮತ್ತು ಈ ರೀತಿಯ ದ್ವೇಷವನ್ನು ಎದುರಿಸುವುದಾದರೂ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ನಮಗೆ ಯಾವುದು ಸಹಾಯಮಾಡುವುದು? (ಕೀರ್ತ. 109:1-3; “ನಿಷ್ಕಾರಣವಾಗಿ ದ್ವೇಷಿಸಲ್ಪಟ್ಟವರು”)
9. ಹಿರಿಮೆಯ ವಿಷಯದಲ್ಲಿ ಕ್ರಿಸ್ತನಂಥ ನೋಟವು ಯಾವುದು, ಮತ್ತು ವ್ಯಕ್ತಿಯೊಬ್ಬನು, ತಾನು ಈ ನೋಟವನ್ನು ಹೆಚ್ಚು ಪೂರ್ಣವಾಗಿ ಬೆಳೆಸಿಕೊಳ್ಳಬೇಕಾಗಿದೆ ಎಂಬುದನ್ನು ಹೇಗೆ ನಿರ್ಧರಿಸಬಹುದು? (ಮತ್ತಾ. 20:20-26; “ಹಿರಿಮೆಯ ವಿಷಯದಲ್ಲಿ ಕ್ರಿಸ್ತನಂಥ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು”)
10. ನಾವು ಶಾರೀರಿಕವಾಗಿ ದಣಿದಿರುವುದಾದರೂ ಆತ್ಮಿಕವಾಗಿ ಹುರುಪುಳ್ಳವರಾಗಿರಲು ಯಾವುದು ಸಹಾಯಮಾಡುವುದು? (“ಶಾರೀರಿಕವಾಗಿ ದಣಿದಿದ್ದರೂ ಆತ್ಮಿಕವಾಗಿ ಸೋತುಹೋಗದಿರುವುದು”)
11. ಸುಳ್ಳನ್ನು ಪ್ರವರ್ಧಿಸಲು ಸೈತಾನನು ಉಪಯೋಗಿಸುವ ಕೆಲವು ಮಾಧ್ಯಮಗಳಾವುವು, ಮತ್ತು ನಮ್ಮ ನಂಬಿಕೆಯನ್ನು ಉರುಳಿಸುವ ಯತ್ನಗಳಿಗೆ ತೋರಿಸಲ್ಪಡುವ ತಕ್ಕದಾದ ಶಾಸ್ತ್ರೀಯ ಪ್ರತಿಕ್ರಿಯೆ ಯಾವುದು? (ಯೋಹಾ. 10:5; “‘ಅನ್ಯರ ಸ್ವರದ’ ವಿಷಯದಲ್ಲಿ ಎಚ್ಚರಿಕೆಯಿಂದಿರಿ”)
12. (ಎ) ಮಾರ್ಕ 10:14, 16ರಲ್ಲಿ ದಾಖಲಿಸಲ್ಪಟ್ಟಿರುವ ಪ್ರಕಾರ ಹೆತ್ತವರು ಯೇಸುವಿನ ಮಾದರಿಯನ್ನು ಹೇಗೆ ಅನುಸರಿಸಬಲ್ಲರು? (ಬಿ) ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್) ಎಂಬ ಪುಸ್ತಕದ ವಿಷಯದಲ್ಲಿ ನಿಮಗೆ ಇಷ್ಟವಾದ ಸಂಗತಿ ಯಾವುದು? (“ನಮ್ಮ ಮಕ್ಕಳು—ಅಮೂಲ್ಯವಾದ ಸ್ವಾಸ್ಥ್ಯ”)
13. ಯುವ ಜನರು ಹೇಗೆ ಯೆಹೋವನನ್ನು ಸ್ತುತಿಸುತ್ತಿದ್ದಾರೆ? (1 ತಿಮೊ. 4:12; “ಯುವ ಜನರು ಯೆಹೋವನನ್ನು ಸ್ತುತಿಸುತ್ತಿರುವ ವಿಧ”)
14. “ವಿರೋಧದ ಮಧ್ಯೆಯೂ ಧೈರ್ಯದಿಂದ ಸಾರುವುದು” ಡ್ರಾಮದ ಯಾವ ದೃಶ್ಯಗಳು ನಿಮ್ಮ ನೆನಪಿನಲ್ಲಿ ಈಗಲೂ ಉಳಿದಿವೆ?
15. (ಎ) ಪೇತ್ರ ಮತ್ತು ಯೋಹಾನರಿಂದ (ಅ. ಕೃ. 4:10), (ಬಿ) ಸ್ತೆಫನನಿಂದ (ಅ. ಕೃ. 7:2, 52, 53), (ಸಿ) ಪ್ರಥಮ ಶತಮಾನದ ಕ್ರೈಸ್ತ ಸಭೆಯಿಂದ (ಅ. ಕೃ. 9:31) ಇಡಲ್ಪಟ್ಟ ಮಾದರಿಯನ್ನು ನಾವು ಹೇಗೆ ಅನುಕರಿಸಬಲ್ಲೆವು? (ಡ್ರಾಮ ಮತ್ತು ಭಾಷಣ “ಸುವಾರ್ತೆಯನ್ನು ‘ಎಡೆಬಿಡದೆ’ ಸಾರುವುದು”)
16. (ಎ) ನಾವು ಯಾವ ವಿಧಗಳಲ್ಲಿ ದೇವರನ್ನು ಘನಪಡಿಸುವೆವೆಂಬ ಠರಾವನ್ನು ಅಂಗೀಕರಿಸಿದೆವು? (ಬಿ) “ದೇವರನ್ನು ಘನಪಡಿಸಿರಿ” ಅಧಿವೇಶನಗಳಿಂದ ನಾವು ಕಲಿತುಕೊಂಡ ವಿಷಯಗಳನ್ನು ಅನ್ವಯಿಸುತ್ತಿರುವಾಗ ಯಾವುದರ ಖಾತ್ರಿ ನಮಗಿರಬಲ್ಲದು? (ಯೋಹಾ. 15:9, 10, 16; “ಯೆಹೋವನ ಘನತೆಗಾಗಿ ‘ಬಹಳ ಫಲ ಕೊಡುತ್ತಾ ಇರಿ’”)
[ಪುಟ 7 ರಲ್ಲಿರುವ ಚೌಕ]
ಅಧಿವೇಶನದಲ್ಲಿ ಪ್ರಸ್ತುತಪಡಿಸಲ್ಪಟ್ಟ ಉತ್ತಮವಾದ ಆತ್ಮಿಕ ಉಪದೇಶದ ಕುರಿತು ಮನನ ಮಾಡುವ ಮೂಲಕ, ಕಲಿತ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುವಂತೆ ನಾವು ಪ್ರೇರೇಪಿಸಲ್ಪಡುವೆವು. (ಫಿಲಿ. 4:8, 9) ಇದು, ‘ಎಲ್ಲವನ್ನೂ ದೇವರ ಘನತೆಗಾಗಿ ಮಾಡುವ’ ನಮ್ಮ ದೃಢತೀರ್ಮಾನವನ್ನು ಬಲಪಡಿಸುವುದು.—1 ಕೊರಿಂ. 10:31.