ಪತ್ರಿಕಾ ನಿರೂಪಣೆಯನ್ನು ತಯಾರಿಸುವುದು ಹೇಗೆ?
1. ನಮ್ಮ ರಾಜ್ಯದ ಸೇವೆಯಲ್ಲಿರುವ ಮಾದರಿ ನಿರೂಪಣೆಗಳನ್ನು ಬಾಯಿಪಾಠಮಾಡಿ ಹೇಳುವುದಕ್ಕಿಂತಲೂ ಅವನ್ನು ನಮ್ಮ ಸ್ವಂತ ಮಾತುಗಳಲ್ಲಿ ಹೇಳಲು ತಯಾರಿಸುವುದು ಒಳ್ಳೆಯದೇಕೆ?
1 ಒಂದುವೇಳೆ ನೀವು ಹೀಗೆ ಯೋಚಿಸಬಹುದು: ‘ನಾವೇಕೆ ಪತ್ರಿಕಾ ನಿರೂಪಣೆಯನ್ನು ತಯಾರಿಸಬೇಕು? ಅದು ಪ್ರತಿ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿ ಕೊಡಲ್ಪಟ್ಟಿರುತ್ತದಲ್ಲಾ?’ ಅನೇಕರು ಆ ಮಾದರಿ ನಿರೂಪಣೆಗಳನ್ನು ಸಹಾಯಕಾರಿಯಾಗಿ ಕಂಡುಕೊಂಡಿದ್ದಾರಾದರೂ, ವೈಯಕ್ತಿಕ ತಯಾರಿಯು ಆವಶ್ಯಕ. ಏಕೆಂದರೆ ಒಂದು ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿರುವ ನಿರೂಪಣೆಯು ಬಹುಶಃ ಮತ್ತೊಂದು ಟೆರಿಟೊರಿಯಲ್ಲಿ ಪ್ರಾಯೋಗಿಕವಾಗಿರಲಿಕ್ಕಿಲ್ಲ. ಆದುದರಿಂದ, ಒಂದುವೇಳೆ ನಾವು ಮಾದರಿ ನಿರೂಪಣೆಗಳನ್ನು ಬಳಸುವುದಾದರೂ, ಅವುಗಳಲ್ಲಿರುವ ವಾಕ್ಯರಚನೆಯನ್ನು ಅಲ್ಲಿದ್ದ ಹಾಗೆಯೇ ಬಳಸುತ್ತಾ ಪತ್ರಿಕೆಗಳನ್ನು ನೀಡಬೇಕೆಂದು ಎಣಿಸಬಾರದು. ಬದಲಿಗೆ ಆ ವಿಚಾರವನ್ನು ನಮ್ಮ ಸ್ವಂತ ವಾಕ್ಯಗಳಲ್ಲಿ ಹೇಳುವುದು ಒಳ್ಳೆಯದು.
2. ಯಾವ ಲೇಖನವನ್ನು ನೀವು ಬಳಸಬೇಕೆಂದು ನಿರ್ಧರಿಸಲು ಏನು ಮಾಡಬೇಕು?
2 ಒಂದು ಲೇಖನವನ್ನು ಆರಿಸಿಕೊಳ್ಳಿ: ಮೊದಲಾಗಿ ಪತ್ರಿಕೆಯನ್ನು ಓದಿದ ನಂತರ, ನಿಮ್ಮ ಟೆರಿಟೊರಿಗೆ ಉಪಯುಕ್ತವಾಗಿರುವ ಮತ್ತು ನಿಮಗೆ ವಿಶೇಷವಾಗಿ ಆಸಕ್ತಿದಾಯಕವಾಗಿರುವ ಒಂದು ಲೇಖನವನ್ನು ಆರಿಸಿಕೊಳ್ಳಿ. ಲೇಖನವನ್ನು ಮನೆಯವರಿಗೆ ಪ್ರಸ್ತುತಪಡಿಸುವಾಗ ನೀವು ತೋರಿಸುವ ನಿಶ್ಚಿತಾಭಿಪ್ರಾಯ ಮತ್ತು ಉತ್ಸುಕತೆಯು ಅವರು ಸಹ ಅದನ್ನು ಓದುವಂತೆ ಪ್ರಚೋದಿಸುವುದು. ನಿಮ್ಮ ಟೆರಿಟೊರಿಯಲ್ಲಿರುವ ಜನರಿಗೆ ಹಿಡಿಸುವಂಥ ಒಂದೇ ಒಂದು ಲೇಖನವನ್ನು ನೀವು ಪತ್ರಿಕೆಯಿಂದ ತೋರಿಸುವುದಾದರೂ, ಪತ್ರಿಕೆಯಲ್ಲಿರುವ ಇನ್ನಿತರ ಲೇಖನಗಳ ಕುರಿತು ಸಹ ಚೆನ್ನಾಗಿ ತಿಳಿದವರಾಗಿರ್ರಿ. ಇದರಿಂದಾಗಿ ನೀವು ಭೇಟಿಯಾಗುವ ಜನರಿಗೆ ಬೇರೆ ವಿಷಯದ ಬಗ್ಗೆ ಆಸಕ್ತಿಯಿರುವಲ್ಲಿ ನಿಮ್ಮ ನಿರೂಪಣೆಯನ್ನು ಅದಕ್ಕನುಗುಣವಾಗಿ ಸರಿಹೊಂದಿಸಿಕೊಳ್ಳಲು ಸಹಾಯಕಾರಿಯಾಗಿರುವುದು.
3. ಒಳ್ಳೆಯ ಫಲಿತಾಂಶಕ್ಕಾಗಿ ನೀವು ಯಾವ ರೀತಿಯ ಪೀಠಿಕೆಯನ್ನು ಬಳಸುತ್ತೀರಿ?
3 ಒಂದು ಪ್ರಶ್ನೆ ಕೇಳಿ: ಈಗ, ನಿಮ್ಮ ಆರಂಭದ ಮಾತುಗಳನ್ನು ಜಾಗರೂಕತೆಯಿಂದ ತಯಾರಿಸಿರಿ. ನಿಮ್ಮ ಪೀಠಿಕೆಯು ಪ್ರಾಮುಖ್ಯ. ನೀವು ಬಳಸಲು ಆರಿಸಿಕೊಂಡಿರುವ ಲೇಖನದ ಬಗ್ಗೆ ಮನೆಯವನ ಆಸಕ್ತಿಯನ್ನು ಕೆರಳಿಸಲು ಒಂದು ವಿಚಾರ-ಪ್ರೇರಕ ಪ್ರಶ್ನೆಯನ್ನು ಕೇಳುವುದು ಸಹಾಯಕಾರಿಯಾಗಿರಬಹುದು. ಅವರ ಅಭಿಪ್ರಾಯಗಳನ್ನು ತಿಳಿಯುವ ಸಲುವಾಗಿ ದೃಷ್ಟಿಕೋನ ಪ್ರಶ್ನೆಗಳನ್ನು ಕೇಳುವುದು ಪರಿಣಾಮಕಾರಿಯಾಗಿದೆ. ಆದರೆ, ಮನೆಯವರನ್ನು ಪೇಚಾಟಕ್ಕೀಡುಮಾಡುವ ಇಲ್ಲವೆ ಅವರು ತಮ್ಮ ಅಭಿಪ್ರಾಯದ ಕುರಿತು ವಿವಾದಿಸುವಂತೆ ಮಾಡುವ ಪ್ರಶ್ನೆಗಳನ್ನು ಕೇಳಬೇಡಿ.
4. ಸನ್ನಿವೇಶವು ಅನುಮತಿಸುವಾಗ ಒಂದು ವಚನವನ್ನು ಓದಿಹೇಳುವುದರಿಂದ ಯಾವ ಪ್ರಯೋಜನಗಳಿವೆ?
4 ಒಂದು ವಚನವನ್ನು ಓದಿ: ಕೊನೆಯದಾಗಿ, ಮನೆಯವರ ಸನ್ನಿವೇಶವು ಅನುಮತಿಸುವಲ್ಲಿ ನೀವು ಓದುವುದಕ್ಕಾಗಿ ಒಂದು ವಚನವನ್ನು ಆಯ್ಕೆಮಾಡಿರಿ. ಪ್ರಾಯಶಃ ನೀವು ಬಳಸುವ ಲೇಖನದಲ್ಲೇ ಇರುವ ಒಂದು ವಚನವನ್ನು ನೀವು ಆರಿಸಿಕೊಳ್ಳಬಹುದು. ಒಂದು ವಚನವನ್ನು ಓದುವುದು ನಮ್ಮ ಸಂದೇಶವು ದೇವರ ವಾಕ್ಯದಿಂದಾಗಿದೆ ಎಂದು ಮನೆಯವರು ತಿಳಿದುಕೊಳ್ಳುವಂತೆ ಸಹಾಯಮಾಡುವುದು. (1 ಥೆಸ. 2:13) ಒಂದುವೇಳೆ ಅವನು ಪತ್ರಿಕೆಗಳನ್ನು ನಿರಾಕರಿಸುವುದಾದರೂ, ಆ ವಚನವು ಅವನಿಗೆ ಸಾಕ್ಷಿನೀಡುವುದು. ಕೆಲವರು ಒಂದು ನಿರ್ದಿಷ್ಟ ಪ್ರಶ್ನೆಯನ್ನು ಕೇಳುವುದಕ್ಕೆ ಮುಂಚೆಯೇ ವಚನವನ್ನು ಓದುವ ಮೂಲಕ ಮನೆಯವರ ಆಸಕ್ತಿಯನ್ನು ಕೆರಳಿಸಿದ್ದಾರೆ. ನೀವು ಹೀಗೆ ಹೇಳುವ ಮೂಲಕ ವಚನವನ್ನು ಪರಿಚಯಿಸಬಹುದು: “ಈ ಬೈಬಲ್ ವಚನದ ಕುರಿತು ನಿಮ್ಮ ಅಭಿಪ್ರಾಯವೇನೆಂದು ತಿಳಿಯಲು ಬಯಸುತ್ತೇನೆ.” ನಂತರ ನೀವು ನೀಡುತ್ತಿರುವ ಪತ್ರಿಕೆಯಲ್ಲಿ ಆ ವಚನಕ್ಕೆ ಸಂಬಂಧಿಸಿದ ವಿಷಯದ ಕಡೆಗೆ ಆ ವ್ಯಕ್ತಿಯ ಗಮನವನ್ನು ತಿರುಗಿಸಿರಿ, ಮತ್ತು ಸಂಕ್ಷಿಪ್ತ ಹೇಳಿಕೆಯೊಂದಿಗೆ ಅವನ ಆಸಕ್ತಿಯನ್ನು ಕೆರಳಿಸಿ ಪತ್ರಿಕೆಯನ್ನು ನೀಡಿರಿ.
5. ಪತ್ರಿಕಾ ನಿರೂಪಣೆಯನ್ನು ತಯಾರಿಸುವಾಗ ನೀವು ಯಾವ ಮೂಲಭೂತ ನಿರ್ದೇಶನಗಳನ್ನು ಮನಸ್ಸಿನಲ್ಲಿಡಬೇಕು?
5 ಪತ್ರಿಕೆಗಳನ್ನು ನೀಡುವಾಗ ಏನು ಹೇಳಬೇಕೆಂಬ ವಿಷಯದಲ್ಲಿ ಯಾವುದೇ ಕಟ್ಟುನಿಟ್ಟಾದ ನಿಯಮಗಳಿಲ್ಲ. ಸಾಮಾನ್ಯವಾಗಿ, ನಿಮ್ಮ ನಿರೂಪಣೆಗಳನ್ನು ಸರಳ ಮತ್ತು ಸಂಕ್ಷಿಪ್ತವಾಗಿಡುವುದು ಒಳ್ಳೇದು. ನಿಮಗೆ ಸುಲಭವಾಗಿರುವ ಹಾಗೂ ಒಳ್ಳೆಯ ಫಲಿತಾಂಶಗಳನ್ನು ತರುವ ನಿರೂಪಣೆಗಳನ್ನು ಬಳಸಿರಿ. ಪತ್ರಿಕೆಗಳ ಅತ್ಯುತ್ಕೃಷ್ಟ ಮೌಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಿರಿ ಮತ್ತು ಹುರುಪಿನಿಂದಿರ್ರಿ. ನೀವು ಚೆನ್ನಾಗಿ ತಯಾರಿಸುವುದಾದರೆ, ‘ನಿತ್ಯಜೀವಕ್ಕೆ ನೇಮಿಸಲ್ಪಟ್ಟಿರುವವರಿಗೆ’ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವಿರಿ.—ಅ. ಕೃ. 13:48.