ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವ ಪತ್ರಿಕೆಗಳನ್ನು ನೀಡಿರಿ
1. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪಾತ್ರವೇನು?
1 ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂಬ ಪತ್ರಿಕೆ ಹಾಗೂ ಜೊತೆ ಪತ್ರಿಕೆ ಎಚ್ಚರ! ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಮಹತ್ತ್ವದ ಪಾತ್ರ ವಹಿಸುತ್ತವೆ. (ಮತ್ತಾ. 24:14; 28:19, 20) ನಾವು ರಾಜ್ಯದ ಸೇವೆಯ ವಿವಿಧ ವೈಶಿಷ್ಟ್ಯಗಳಲ್ಲಿ ಭಾಗವಹಿಸುವಾಗ ಈ ಎರಡು ಸಮಯೋಚಿತ ಪತ್ರಿಕೆಗಳನ್ನು ಕ್ರಮವಾಗಿ ನೀಡುವುದರಲ್ಲಿ ಆನಂದವನ್ನು ಕಂಡುಕೊಳ್ಳುತ್ತೇವೆ.
2. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಯಾವ ಬದಲಾವಣೆಗಳನ್ನು ಮಾಡಲಾಯಿತು, ಮತ್ತು ಏಕೆ?
2 ವರ್ಷಗಳು ಕಳೆದಂತೆ ಈ ಪತ್ರಿಕೆಗಳ ಗಾತ್ರ, ಅವುಗಳ ವಿಷಯಗಳು ಹಾಗೂ ಅವನ್ನು ಹಂಚಲು ಉಪಯೋಗಿಸುವ ವಿಧಾನಗಳು ಕೂಡಾ ಬದಲಾಗಿವೆ. ಈ ಪತ್ರಿಕೆಗಳನ್ನು ಹೆಚ್ಚು ಆಕರ್ಷಣೀಯ ಮತ್ತು ಪರಿಣಾಮಕಾರಿಯನ್ನಾಗಿ ಮಾಡಲಿಕ್ಕಾಗಿ ಈ ಬದಲಾವಣೆಗಳನ್ನು ಮಾಡಲಾಯಿತು. ಹೀಗೆ ರಾಜ್ಯ ಸಂದೇಶವು “ಎಲ್ಲಾ ಮನುಷ್ಯರ” ಹೃದಯವನ್ನು ತಲಪಿ ಅವರು ‘ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಲು’ ಸಾಧ್ಯವಾಗುತ್ತದೆ.—1 ತಿಮೊ. 2:4.
3. ಶುಶ್ರೂಷೆಯಲ್ಲಿ ಪತ್ರಿಕೆಗಳನ್ನು ಹೇಗೆ ಉಪಯೋಗಿಸಬಹುದು?
3 ಎಚ್ಚರ! ಪತ್ರಿಕೆಯ ತ್ರೈಮಾಸಿಕ ಸಂಚಿಕೆಯನ್ನು ನೀಡಲಿಕ್ಕಾಗಿ ವಿವಿಧ ನಿರೂಪಣೆಗಳನ್ನು ಉಪಯೋಗಿಸುವುದರಲ್ಲಿ ನಾವು ನಿಪುಣರಾಗಿದ್ದೇವೆ. ಈಗ ನಾವು ತದ್ರೀತಿಯ ವಿಧಾನವನ್ನು ಅನುಸರಿಸಿ ಸಾರ್ವಜನಿಕ ಶುಶ್ರೂಷೆಯಲ್ಲಿ ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಪತ್ರಿಕೆಯ ತ್ರೈಮಾಸಿಕ ಸಂಚಿಕೆಯನ್ನು ನೀಡಲಿದ್ದೇವೆ. ಪ್ರತಿ ಪತ್ರಿಕೆಗಾಗಿರುವ ಮಾದರಿ ನಿರೂಪಣೆಯು ನಮ್ಮ ರಾಜ್ಯದ ಸೇವೆಯ ಕೊನೆಯ ಪುಟದಲ್ಲಿ ಕಂಡುಬರುವುದು. ಇದು ಹೆಚ್ಚಾಗಿ ಆರಂಭದ ಲೇಖನಗಳಲ್ಲಿ ಒಂದನ್ನು ಎತ್ತಿತೋರಿಸುವುದಾದರೂ ಅದೇ ಸಮಯದಲ್ಲಿ ಅನೇಕ ಜನರಿಗೆ ಆಸಕ್ತಿಕರವಾದ ಇತರ ಲೇಖನಗಳನ್ನೂ ಒಳಗೊಂಡಿರುವುದು. ಮಾದರಿ ನಿರೂಪಣೆಗಳಲ್ಲಿ ತೋರಿಸಲ್ಪಟ್ಟ ಲೇಖನದೊಂದಿಗೆ ಪರಿಚಿತರಾಗಿರುವಲ್ಲಿ ಮತ್ತು ನಿರೂಪಣೆಯನ್ನು ನಮ್ಮ ಟೆರಿಟೊರಿಗೆ ಸರಿಹೊಂದಿಸಿ ನಮ್ಮ ಸ್ವಂತ ಮಾತುಗಳಲ್ಲಿ ಹೇಳುವಲ್ಲಿ ಈ ಸೂಚಿತ ನಿರೂಪಣೆಗಳು ಅತ್ಯಂತ ಪರಿಣಾಮಕಾರಿಯಾಗಬಲ್ಲವು.
4. ನಮ್ಮ ರಾಜ್ಯದ ಸೇವೆಯಲ್ಲಿರುವ ಸೂಚಿತ ನಿರೂಪಣೆಯಲ್ಲದೆ ಇತರ ನಿರೂಪಣೆಗಳನ್ನು ಉಪಯೋಗಿಸುವುದು ಪ್ರಯೋಜನಕರವಾಗಿರಬಹುದು ಏಕೆ?
4 ನಮ್ಮ ರಾಜ್ಯದ ಸೇವೆಯು ಪ್ರತಿಯೊಂದು ಪತ್ರಿಕೆಗೆ ನಿರೂಪಣೆಗಳನ್ನು ಒದಗಿಸುತ್ತದಾದರೂ ಅವುಗಳಿಗಿಂತ ಭಿನ್ನವಾದ ಒಂದು ನಿರೂಪಣೆಯನ್ನು ನೀವು ಬಳಸಬಹುದು. ನಾವು ಹೀಗೆ ಮಾಡುವುದು ಇತರ ಲೇಖನಗಳಲ್ಲೊಂದು ನಮ್ಮ ಟೆರಿಟೊರಿಯ ಜನರಿಗೆ ಹೆಚ್ಚು ಹಿಡಿಸುವುದರಿಂದಲೇ. ಅಥವಾ ನಿಮಗೆ ಬಹಳ ಆಸಕ್ತಿಕರವಾಗಿ ಕಂಡುಬಂದ ಲೇಖನವನ್ನು ಉಪಯೋಗಿಸುವಲ್ಲಿ ನಿಮ್ಮ ನಿರೂಪಣೆಯು ಇನ್ನೂ ಹೆಚ್ಚು ಪರಿಣಾಮಕಾರಿಯಾಗುವುದೆಂದು ನಿಮಗನಿಸಬಹುದು.
5. ಪತ್ರಿಕಾ ನಿರೂಪಣೆಯನ್ನು ತಯಾರಿಸುವ ಮೊದಲು ನೀವೇನು ಮಾಡಬೇಕು?
5 ನಿಮ್ಮ ನಿರೂಪಣೆಯನ್ನು ತಯಾರಿಸುವ ವಿಧ: ಪ್ರಥಮವಾಗಿ, ನೀವು ಮನೆಯವರಿಗೆ ತೋರಿಸಲು ಆಯ್ಕೆ ಮಾಡುವ ಲೇಖನದೊಂದಿಗೆ ಪೂರ್ಣ ಪರಿಚಿತರಾಗಿರಬೇಕು. ನೀವು ಶುಶ್ರೂಷೆಯಲ್ಲಿ ಪತ್ರಿಕೆಯನ್ನು ಉಪಯೋಗಿಸುವ ಮೊದಲು ಅದರ ಎಲ್ಲಾ ಲೇಖನಗಳೊಂದಿಗೆ ಪರಿಚಿತರಾಗಲು ಯಾವಾಗಲೂ ಸಾಧ್ಯವಿರಲಿಕ್ಕಿಲ್ಲ. ಆದರೂ ನೀವು ತೋರಿಸಲು ಆಯ್ಕೆ ಮಾಡುವ ಲೇಖನದ ಬಗ್ಗೆ ಉತ್ಸಾಹ ಮತ್ತು ಯಥಾರ್ಥತೆಯಿಂದ ಮಾತಾಡಬೇಕು. ನೀವು ಪ್ರಸ್ತುತಪಡಿಸುತ್ತಿರುವ ಮಾಹಿತಿಯೊಂದಿಗೆ ಪರಿಚಿತರಾಗಿರುವಲ್ಲಿ ಮಾತ್ರ ಹಾಗೆ ಮಾಡಬಲ್ಲಿರಿ.
6. ನಮ್ಮ ಸ್ವಂತ ನಿರೂಪಣೆಗಳನ್ನು ಹೇಗೆ ತಯಾರಿಸಬಹುದು?
6 ನಂತರ, ಪರಿಸ್ಥಿತಿಗೆ ತಕ್ಕಂತೆ ಹೊಂದಿಸಿಕೊಳ್ಳಬಹುದಾದ ಆರಂಭದ ಮಾತುಗಳನ್ನು ತಯಾರಿಸಿರಿ. ಲೇಖನಕ್ಕೆ ಸಂಬಂಧಿಸಿದ ಆದರೆ ಆಸಕ್ತಿಯನ್ನೆಬ್ಬಿಸುವ ಪ್ರಶ್ನೆಯನ್ನು ಕೇಳುವ ಮೂಲಕ ಸಂಭಾಷಣೆಯನ್ನು ಆರಂಭಿಸಬಹುದು. ಜನರ ಹೃದಯವನ್ನು ಸ್ಪರ್ಶಿಸಲು ಯಾವಾಗಲೂ ದೇವರ ವಾಕ್ಯದ ಬಲವನ್ನು ಅವಲಂಬಿಸಿ. (ಇಬ್ರಿ. 4:12) ನೀವು ಪರಿಚಯಿಸಲಿರುವ ವಿಷಯಕ್ಕೆ ಸಂಬಂಧಿಸುವ ಸೂಕ್ತ ವಚನವೊಂದನ್ನು ಆರಿಸಿಕೊಳ್ಳಿ. ಆ ಲೇಖನದಲ್ಲಿ ಉಲ್ಲೇಖಿಸಲಾದ ಅಥವಾ ಉದ್ಧರಿಸಲಾದ ವಚನವು ಅದಾಗಿರುವುದು ಒಳ್ಳೇದು. ಈ ವಚನವನ್ನು ಲೇಖನದೊಂದಿಗೆ ಹೇಗೆ ಜೋಡಿಸುವುದೆಂಬುದನ್ನು ಪರಿಗಣಿಸಿ.
7. ನಮ್ಮ ನಿರೂಪಣೆಗಳನ್ನು ನಾವು ಹೇಗೆ ಇನ್ನೂ ಉತ್ತಮಗೊಳಿಸಬಹುದು?
7 ಪ್ರತಿಯೊಂದು ಸಂದರ್ಭದಲ್ಲಿ: ನಿರೂಪಣೆಯು ನಿಜವಾಗಿಯೂ ಪರಿಣಾಮಕಾರಿಯಾಗಿರಬೇಕಾದರೆ ಅದನ್ನು ಉಪಯೋಗಕ್ಕೆ ಹಾಕಬೇಕು. ಶನಿವಾರದಂದು ಪತ್ರಿಕಾ ಸೇವೆಯಲ್ಲಿ ಸಭೆಯೊಂದಿಗೆ ಜೊತೆಗೂಡಿರಿ. ಈ ಮುಂಚೆ ಇತರ ಸಾಹಿತ್ಯಗಳನ್ನು ಸ್ವೀಕರಿಸಿರುವ ಜನರಿಗೆ ಪತ್ರಿಕೆಗಳನ್ನು ನೀಡಿರಿ. ನಿಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಮತ್ತು ಪುನರ್ಭೇಟಿ ಮಾಡುವಾಗ ಸಿಗುವ ಇತರರಿಗೆ ಪತ್ರಿಕೆಗಳನ್ನು ಯಾವಾಗಲೂ ನೀಡಿರಿ. ಶಾಪಿಂಗ್ಗೆ ಹೋಗುವಾಗ, ಪ್ರಯಾಣಿಸುತ್ತಿರುವಾಗ, ಅಥವಾ ವೈದ್ಯರಿಗಾಗಿ ಕಾಯುತ್ತಿರುವಾಗ ಸಿಗುವ ಜನರಿಗೆ ನೀವು ಪತ್ರಿಕೆಗಳನ್ನು ನೀಡಬಹುದು. ನಿಮ್ಮ ನಿರೂಪಣೆಗಳನ್ನು ತಿಂಗಳಾದ್ಯಂತ ಉಪಯೋಗಿಸುತ್ತಿರುವಾಗ ಅದನ್ನು ಉತ್ತಮಗೊಳಿಸುತ್ತಾ ಇರ್ರಿ.
8. ಯಾವ ವಿಧಗಳಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಅದ್ವಿತೀಯವಾಗಿವೆ?
8 ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಅದ್ವಿತೀಯವಾಗಿವೆ. ಅವು ಯೆಹೋವನನ್ನು ವಿಶ್ವದ ಪರಮಾಧಿಕಾರಿಯಾಗಿ ಘನಪಡಿಸುತ್ತವೆ. (ಅ. ಕೃ. 4:24) ದೇವರ ರಾಜ್ಯದ ಸುವಾರ್ತೆಯ ಮೂಲಕ ಅವು ಜನರನ್ನು ಸಂತೈಸುತ್ತವೆ ಮತ್ತು ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವಂತೆ ಪ್ರೋತ್ಸಾಹಿಸುತ್ತವೆ. (ಮತ್ತಾ. 24:14; ಅ. ಕೃ. 10:43) ಇದಕ್ಕೆ ಕೂಡಿಸುತ್ತಾ ಲೋಕದ ಘಟನೆಗಳು ಬೈಬಲ್ ಪ್ರವಾದನೆಗಳನ್ನು ಹೇಗೆ ನೆರವೇರಿಸುತ್ತವೆಂಬುದರ ಕುರಿತು ಅವು ನಮ್ಮನ್ನು ಎಚ್ಚರಿಸುತ್ತವೆ. (ಮತ್ತಾ. 25:13) ಪ್ರತಿಯೊಂದು ಅವಕಾಶದಲ್ಲಿ ಪತ್ರಿಕೆಗಳನ್ನು ನೀಡಲು ತಯಾರಿ ಮಾಡುವ ಮೂಲಕ ನಿಮ್ಮ ಟೆರಿಟೊರಿಯಲ್ಲಿರುವ ಪ್ರತಿಯೊಬ್ಬರೂ ಅವುಗಳಿಂದ ಪ್ರಯೋಜನ ಪಡೆಯುವಂತೆ ಸಹಾಯಮಾಡಿರಿ.
9. ಪುನರ್ಭೇಟಿಗೆ ನಾವು ಹೇಗೆ ತಳಪಾಯ ಹಾಕಬಹುದು?
9 ನೀವೊಂದು ಪತ್ರಿಕೆಯನ್ನು ನೀಡಲು ಶಕ್ತರಾಗುವಾಗ, ಅಥವಾ ಒಬ್ಬನೊಂದಿಗೆ ಕೇವಲ ಸ್ನೇಹಪೂರ್ವಕ ಆಧ್ಯಾತ್ಮಿಕ ಸಂಭಾಷಣೆಯನ್ನು ಮಾಡಿರುವುದಾದರೂ ಒಂದು ಪ್ರಶ್ನೆ ಅಥವಾ ವಿಚಾರ-ಪ್ರೇರಕ ಹೇಳಿಕೆಯೊಂದಿಗೆ ತಯಾರಾಗಿರ್ರಿ. ಇದು ಪುನರ್ಭೇಟಿಗೆ ಮತ್ತು ಇನ್ನೊಂದು ಆಧ್ಯಾತ್ಮಿಕ ಸಂಭಾಷಣೆಗೆ ಅವಕಾಶವನ್ನು ತೆರೆಯುವುದು. ನಾವು ಹುರುಪಿನಿಂದ ಸತ್ಯದ ಬೀಜಗಳನ್ನು ಬಿತ್ತುವಲ್ಲಿ, ಯೆಹೋವನು ತನ್ನ ಬಗ್ಗೆ ತಿಳಿಯಲು ಮತ್ತು ಆರಾಧಿಸಲು ಪ್ರಾಮಾಣಿಕವಾಗಿ ಬಯಸುವ ಜನರ ಹೃದಯಗಳನ್ನು ತೆರೆಯುವನೆಂಬ ನಿಶ್ಚಯ ನಮಗಿರಬಲ್ಲದು.—1 ಕೊರಿಂ. 3:6.